ಸರ್ಕಾರಿ ಸಂಬಳ ಬೇಡ, ತಿಂಗಳಿಗಾಗುವಷ್ಟು ದಿನಸಿ ಕೊಡಿ ಸಾಕು: ಅತಿಥಿ ಉಪನ್ಯಾಸಕರ ಮನವಿ

By Sathish Kumar KH  |  First Published Aug 3, 2023, 11:29 AM IST

ಸರ್ಕಾರದಿಂದ ಮಾಸಿಕವಾಗಿ ಕೊಡುವ ಕಡಿಮೆ ಸಂಬಳ ಕೊಡುವ ಬದಲು ಒಂದು ತಿಂಗಳಿಗೆ ಆಗುವಷ್ಟು ದಿನಬಳಕೆ (ದಿನಸಿ) ವಸ್ತುಗಳನ್ನು ಕೊಟ್ಟರೆ ಸಾಕು ಎಂದು ಅತಿಥಿ ಉಪನ್ಯಾಸಕರು ಮನವಿ ಮಾಡಿದ್ದಾರೆ.


ಶಿವಮೊಗ್ಗ (ಆ.03): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉಚಿತ ಗ್ಯಾರಂಟಿಗಳ ನಡುವೆಯೂ ದಿನಬಳಕೆ ಹಾಗೂ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದ ಸರ್ಕಾರ ನಮಗೆ ಕಡಿಮೆ ಸಂಬಳ ಕೊಟ್ಟು ಸಂಕಷ್ಟಕ್ಕೆ ದೂಡುವ ಬದಲು, ಮನೆಗೆ ಒಂದು ತಿಂಗಳಿಗೆ ಅಗತ್ಯವಿರುವ ದಿನಸಿಯನ್ನು ಕೊಟ್ಟರೆ ಸಾಕು ಎಂದು ಅತಿಥಿ ಉಪನ್ಯಾಸಕರು ಮನವಿ ಮಾಡಿದ್ದಾರೆ. 

25 ಕೆಜಿ ಅಕ್ಕಿ, 5 ಕೆಜಿ ಟೊಮೆಟೊ 10 ಕೆಜಿ ಈರುಳ್ಳಿ ,ಒಂದು ಎಲ್.ಪಿ.ಜಿ ಸಿಲಿಂಡರ್ ಸೇರಿ ಹಲವು ದುನಬಳಕೆ ವಸ್ತುಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ. ಸಂಬಳ ಕೊಡಿ ಇಲ್ದಿದ್ರೆ ಇವನ್ನೆಲ್ಲ ಪೂರೈಸಿ ಎಂದು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಂಬಳ ಸಿಗದವರು ಇಂತಹದೊಂದು ಅಪರೂಪದ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟು ಗೊಂದಲಕ್ಕೆ ಸಿಲುಕಿಸಿದ್ದಾರೆ. ಅಷ್ಟಕ್ಕೂ ಇಂತಹದೊಂದು ಬೇಡಿಕೆ ಇಡಲು ಕಾರಣ ನಮಗೆಲ್ಲರಿಗೂ ತಿಳಿದಿರುವಂತೆ ಅತಿಥಿ ಉಪನ್ಯಾಸಕರಿಗೆ ಮೂರು ತಿಂಗಳಿಂದ ಸಂಬಳ ಇಲ್ಲಿದಿರುವುದು ಒಂದಾದರೆ, ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದೇ ಇದಕ್ಕೆ ಕಾರಣವಾಗಿದೆ.

Latest Videos

undefined

ಬೆಳಗಾವಿ: 20 ದಿನಗಳಿಂದ ಟೊಮೆಟೋ ಕದಿಯುತ್ತಿದ್ದವ ಸಿಕ್ಕಿಬಿದ್ದ..!

12,460 ಉಪನ್ಯಾಸಕರಿಗೆ ವೇತನ ನೀಡದ ಸರ್ಕಾರ: ರಾಜ್ಯಾದ್ಯಂತ ಪದವಿ ಕಾಲೇಜುಗಳ 12,464 ಅತಿಥಿ ಉಪನ್ಯಾಸಕರಿಗೆ ಮೂರು ತಿಂಗಳಿನಿಂದ ಸಂಬಳ ಆಗಿಲ್ಲ. ಇದನ್ನು ಖಂಡಿಸಿ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ಬರೆದಿದ್ದಾರೆ ವಿಭಿನ್ನವಾದ ಮನವಿ ಪತ್ರವನ್ನು ಸರ್ಕಾರಕ್ಕೆ ಬರೆದಿದ್ದಾರೆ. ಕಳೆದಮೂರು ತಿಂಗಳಿನಿಂದ ಸಂಬಳ ಇಲ್ಲ, ಜೀವನ ನಡೆಸುವುದು ಕಷ್ಟವಾಗುತ್ತಿದೆ. ಸಂಬಳ ಕೊಡುವವರೆಗೂ ಪ್ರತಿ ತಿಂಗಳ ರೇಷನ್ ಕೊಡುವಂತೆ ಪಟ್ಟಿ ಮಾಡಿ ಪ್ರಾಂಶುಪಾಲರ ಮೂಲಕ ಶಿಕ್ಷಣ ಇಲಾಖೆಗೆ ಬೇಡಿಕೆ ಸಲ್ಲಿಸಿದ್ದಾರೆ.

ಇಷ್ಟಕ್ಕೂ ಪತ್ರದಲ್ಲಿ ಏನಿದೆ ಗೊತ್ತಾ?: ಮಾನ್ಯ ಘನ ಸರ್ಕಾರ ಕಳೆದ ಮೂರು ತಿಂಗಳಿನಿಂದ ಬಡ, ನಿರ್ಗತಿಕ ಅತಿಥಿ ಉಪನ್ಯಾಸಕರಿಗೆ ಬರಬೇಕಾದ ಗೌರವ ಧನ ತಡೆ ಹಿಡಿದಿದೆ. ಇದರಿಂದ ನಮ್ಮನ್ನು ನಂಬಿಕೊಂಡಿರುವ ಕುಟುಂಬ ಉಪವಾಸದಿಂದ ನರಳುವಂತಾಗಿದೆ. ಸರ್ಕಾರ ನಮ್ಮ ಗೌರವ ಧನ ಬಿಡುಗಡೆ ಮಾಡುವವರೆಗೂ ನಮಗೆ ಅಗತ್ಯವಿರುವ ಈ ಕೆಳಕಂಡ ದಿನಸಿ ವಸ್ತು ಪೂರೈಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಪತ್ರವನ್ನು ಬರೆದು, ಅಗತ್ಯವಿರುವ ವಸ್ತುಗಳ ಪಟ್ಟಿ ಹಾಕಿದ್ದಾರೆ.

  • ಅತಿಥಿ ಉಪನ್ಯಾಸಕರ ದಿನಸಿಯ ಪಟ್ಟಿ ಹೀಗಿದೆ.
  • 25 ಕೆ.ಜಿಯ ಅಕ್ಕಿ, 
  • 5 ಕೆ.ಜಿ ಟೊಮೆಟೊ, 
  • 10 ಕೆ.ಜಿ ಈರುಳ್ಳಿ, 
  • 1 ಕೆ.ಜಿ. ಒಣಮೆಣಸು,
  • 2 ಕೆ.ಜಿ. ಹಸಿ ಮೆಣಸು, 
  • 2 ಕೆ.ಜಿ ತೊಗರಿಬೇಳೆ, 
  • ಅರ್ಧ ಕೆ.ಜಿ ಬೆಳ್ಳುಳ್ಳಿ, 
  • ಕಾಲು ಕೆ.ಜಿ ಶುಂಠಿ, 
  • 1 ಎಲ್‌ಪಿಜಿ ಸಿಲಿಂಡರ್
  • ಹಾಲು, ಮೊಸರು, 

ಗ್ರಾಹಕರ ಕೈಗೆ ಎಟುಕದ ಟೊಮೆಟೋ: ಹುಣಸೆ ಹಣ್ಣು ಕೂಡಾ ದುಬಾರಿ

ಹೀಗೆ ನಾವು ಬೇಡಿಕೆ ಇಟ್ಟಿರುವ ದಿನಗಳನ್ನು ಪೂರೈಕೆ ಮಾಡಿ, ನಂತರ ಇದರ ಹಣವನ್ನು ಹಿಡಿದುಕೊಂಡು ಬಾಕಿ ಸಂಬಳವನ್ನು ನೀಡಬೇಕು ಎಂದು ಕಾಲೇಜಿನ ಮೂಲಕ ಸರಕಾರಕ್ಕೆ ಮನವಿ ಮಾಡಿದ್ದಾರೆ. ರಾಜ್ಯದ ಜನತೆಗೆ ಗ್ಯಾರಂಟಿಗಳನ್ನು ಪೂರೈಕೆ ಮಾಡುತ್ತಿರುವ ಸರ್ಕಾರಕ್ಕೆ ಸೇವೆ ಸಲ್ಲಿಸುವವರನ್ನೇ ಕಡೆಗಣಿಸಿದ್ದು, ಈಗ ಬೀದಿಗಿಳಿದು ಪ್ರತಿಭಟನೆ ಮಾಡುವಂತಾಗಿದೆ.

click me!