Exam Date: 5, 8ನೇ ತರಗತಿ ಬೋರ್ಡ್‌ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ: ಇಲ್ಲಿದೆ ಪೂರ್ಣ ಮಾಹಿತಿ

By Sathish Kumar KHFirst Published Mar 16, 2023, 7:49 PM IST
Highlights

ರಾಜ್ಯದಲ್ಲಿ 5 ಹಾಗೂ 8ನೇ ತರಗತಿ ಮೌಲ್ಯಂಕನ ಪರೀಕ್ಷಾ (Board exam) ವೇಳಾಪಟ್ಟಿಯನ್ನು ರಾಜ್ಯ ಶಿಕ್ಷಣ ಇಲಾಖೆ ಇಂದು ಬಿಡುಗಡೆ ಮಾಡಿದೆ. ಮಾ.27ರಿಂದ ಪರೀಕ್ಷೆ ಆರಂಭವಾಗಲಿದ್ದು, ಏ.1ರವರೆಗೆ ಪರೀಕ್ಷೆ ನಡೆಯಲಿದೆ.

ಬೆಂಗಳೂರು (ಮಾ.16): ರಾಜ್ಯದಲ್ಲಿ 5 ಹಾಗೂ 8ನೇ ತರಗತಿ ಮೌಲ್ಯಂಕನ ಪರೀಕ್ಷಾ (Board exam) ವೇಳಾಪಟ್ಟಿಯನ್ನು ರಾಜ್ಯ ಶಿಕ್ಷಣ ಇಲಾಖೆ ಇಂದು ಬಿಡುಗಡೆ ಮಾಡಿದೆ. ಮಾ.27ರಿಂದ ಪರೀಕ್ಷೆ ಆರಂಭವಾಗಲಿದ್ದು, ಏ.1ರವರೆಗೆ ಪರೀಕ್ಷೆ ನಡೆಯಲಿದೆ.

5 ಹಾಗೂ 8 ನೇ ತರಗತಿ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ

  • ಮಾ.27- ಸೋಮವಾರ-  ಪ್ರಥಮ ಭಾಷೆ ಕನ್ನಡ
  • ಮಾ.28- ಮಂಗಳವಾರ - ದ್ವಿತೀಯ ಭಾಷೆ ಇಂಗ್ಲೀಷ್ ಅಥವಾ ಕನ್ನಡ
  • ಮಾ.29- ಬುಧವಾರ- ತೃತೀಯ ಭಾಷೆ ಹಿಂದಿ ಅಥವಾ ಪರಿಸರ ಅಧ್ಯಯನ
  • ಮಾ.30- ಗುರುವಾರ - ಗಣಿತ
  • ಮಾ.31- ಶುಕ್ರವಾರ- ವಿಜ್ಞಾನ
  • ಏ.1- ಶನಿವಾರ - ಸಮಾಜ ವಿಜ್ಞಾನ

ಮಾ.27ರಿಂದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್‌ ಪರೀಕ್ಷೆ: ಹೈಕೋರ್ಟ್ ಆದೇಶದಲ್ಲಿ ಖುಷಿ ವಿಚಾರವೂ ಇದೆ

ರಾಜ್ಯ ಪಠ್ಯಕ್ರಮದ ಶಾಲೆಯಲ್ಲಿ ಏ.27ರಿಂದ ಪರೀಕ್ಷೆ:  2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿನ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಮಾ.27ರಿಂದ ಏ.1ರವರೆಗೆ ಮೌಲ್ಯಾಂಕನವನ್ನು ನಡೆಸಲಾಗುತ್ತಿದೆ. ಈಗಾಗಲೇ 2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಮಾ.13ರಿಂದ ಮೌಲ್ಯಾಂಕನವನ್ನು ನಿಗದಿಪಡಿಸಲಾಗಿತ್ತು. ಆದರೆ, ಉಚ್ಛ ನ್ಯಾಯಾಲಯದ ಆದೇಶದಂತೆ ಪರೀಕ್ಷೆಯನ್ನು ಮುಂದೂಡಲಾಗಿತ್ತು.

ಹೈಕೋರ್ಟ್‌ ಆದೇಶದಂತೆ ದಿನಾಂಕ ನಿಗದಿ:  ಈ ಕುರಿತು ಆದೇಶ ನೀಡಿರುವ ಹೈಕೋರ್ಟ್ ಮಾ.27ರಿಂದ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನವನ್ನು ನಡೆಸಲು ಅವಕಾಶ ಕಲ್ಪಿಸಿದೆ.  ಅದರಂತೆ 5 ನೇ ತರಗತಿ ವಿದ್ಯಾರ್ಥಿಗಳಿಗೆ ಮಾ.27ರಿಂದ ಮಾ.30ರವರೆಗೆ ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಮಾ.27ರಿಂದ ಏ.1ರವರೆಗೆ ಮೌಲ್ಯಾಂಕನವನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಆಯಾ ಶಾಲೆಗಳನ್ನೇ ಮೌಲ್ಯಾಂಕನ ಕೇಂದ್ರಗಳಾಗಿ ಪರಿಗಣಿಸಿದೆ. ಈ ಮೌಲ್ಯಾಂಕನವು ವಿದ್ಯಾರ್ಥಿಗಳ ಕಲಿಕಾ ಮಟ್ಟ, ಕಲಿಕಾ ನ್ಯೂನ್ಯತೆಗಳು ಹಾಗೂ ಯಾವ ವಿಷಯದ ತಿಳಿಯುವುದಾಗಿದೆ.

ಯಾವ ವಿದ್ಯಾರ್ಥಿಯನ್ನೂ ಫೇಲ್‌ ಮಾಡುವಂತಿಲ್ಲ: ಕಲಿಕೆಯಲ್ಲಿ ಎಷ್ಟು ಹಿನ್ನಡೆಯುಂಟಾಗಿದೆ ಎಂಬುದನ್ನು ಮೌಲ್ಯಾಂಕನದಲ್ಲಿ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವುದಿಲ್ಲ ಹಾಗೂ ಮುಂದಿನ ತರಗತಿಗೆ ತೇರ್ಗಡೆಗೊಳಿಸಲಾಗುವುದು. ಈ ಮೌಲ್ಯಾಂಕನದ ಫಲಿತಾಂಶವನ್ನು ವಿದ್ಯಾರ್ಥಿಗಳಿಗೆ ಮಾತ್ರ ತಿಳಿಸಲಾಗುವುದು. ಆ ಮೂಲಕ ಫಲಿತಾಂಶದ ಗೌಪ್ಯತೆಯನ್ನು ಕಾಪಾಡಲಾಗುವುದು.

ಪರೀಕ್ಷೆ ಹಿನ್ನೆಲೆ ಮೂರು ತಿಂಗಳು ಲೋಡ್‌ಶೆಡ್ಡಿಂಗ್‌ ಇಲ್ಲ: ಎಸ್ಕಾಂ

ಪ್ರಶ್ನೆಪತ್ರಿಕೆ ಸ್ವರೂಪ

  • 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ ದಿನವೊಂದಕ್ಕೆ ಒಂದು ವಿಷಯದಂತೆ ಮೌಲ್ಯಾಂಕನ ನಡೆಸಲಾಗುತ್ತಿದೆ.
  • ಪ್ರತಿ ವಿಷಯದ ಮೌಲ್ಯಾಂಕನಕ್ಕೆ 2 ಗಂಟೆಗಳ ಅವಧಿಯನ್ನು ನಿಗದಿಪಡಿಸಲಾಗಿದೆ.
  • ತರಗತಿವಾರು ಪ್ರತಿ ವಿಷಯಕ್ಕೆ 40 ಅಂಕಗಳ ಲಿಖಿತ ಮೌಲ್ಯಾಂಕನಕ್ಕೆ 28 ಪ್ರಶ್ನೆಗಳನ್ನೊಳಗೊಂಡ (1 ಅಂಕದ 20 ಬಹುಆಯ್ಕೆ ಪ್ರಶ್ನೆಗಳು, 2 ಅಂಕಗಳ 5, 3 ಅಂಕಗಳ 2 ಹಾಗೂ 4 ಅಂಕಗಳ 1 ವಿವರಣಾತ್ಮಕ ಪ್ರಶ್ನೆಗಳು) ಪ್ರತ್ಯೇಕ ಪ್ರಶೋತ್ತರ ಪತ್ರಿಕೆಯನ್ನು ನೀಡಲಾಗುತ್ತದೆ. 
  • 10 ಅಂಕಗಳ ಮೌಖಿಕ ಮೌಲ್ಯಾಂಕನವನ್ನು ಶಾಲಾ ಹಂತದಲ್ಲಿಯೇ ನಿರ್ವಹಿಸಲು ತಿಳಿಸಲಾಗಿದೆ.
  • 40 ಅಂಕಗಳ ಲಿಖಿತ ಮೌಲ್ಯಾಂಕನ ಮತ್ತು 10 ಅಂಕಗಳ ಮೌಖಿಕ ಮೌಲ್ಯಾಂಕನದಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು 20 ಅಂಕಗಳಿಗೆ ಪರಿವರ್ತಿಸುವುದು,
  • ವಿದ್ಯಾರ್ಥಿಗಳನ್ನು ಮೌಲ್ಯಾಂಕನಕ್ಕೆ ಸಿದ್ಧಗೊಳಿಸಲು ಮಾದರಿ ಪ್ರಶೋತ್ತರ ಪತ್ರಿಕೆಗಳನ್ನು ಮತ್ತು ಮೌಲ್ಯಾಂಕನಕ್ಕೆ ಒಳಪಡಿಸಿರುವ ಪಠ್ಯಪುಸ್ತಕದಲ್ಲಿನ ಘಟಕಗಳ ವಿವರಗಳನ್ನು ಮಂಡಲಿಯ ವೆಬ್‌ಸೈಟ್‌ನಲ್ಲಿ ಈಗಾಗಲೇ ಪ್ರಕಟಿಸಲಾಗಿದೆ.
click me!