
ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಶಿವಮೊಗ್ಗದಲ್ಲಿ ಜನಿವಾರ ಕತ್ತರಿಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟ ಪ್ರಕರಣ ಒಂದಾದರೆ ಬೀದರ್ ನಲ್ಲಿ ಜನಿವಾರ ಹಾಕಿ ಬಂದ ವಿದ್ಯಾರ್ಥಿಗೆ ಪರೀಕ್ಷೆಗೆ ಅವಕಾಶವನ್ನೇ ನೀಡಿಲ್ಲ. ಈ ಮೂಲಕ ರಾಜ್ಯದಲ್ಲಿ ಈಗ ಜನಿವಾರ ವಿವಾದ ಜೋರಾಗಿದೆ. ಸರ್ಕಾರದ ನಿಲುವುಗಳು ಮತ್ತು ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಆಟವಾಡುತ್ತಿದೆ ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಸರ್ಕಾರ ಕೂಡ ಎಚ್ದೆತ್ತುಕೊಂಡಿದೆ. ಜನಿವಾರ ವಿವಾದದ ಪ್ರಕರಣದಿಂದ ರಾಜ್ಯ ಸರ್ಕಾರ ಅಲರ್ಟ್ ಆಗಿದ್ದು, ತನಿಖೆ ಮಾಡಿ ಕೂಡಲೇ ವರದಿ ನೀಡುವಂತೆ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಜಿಲ್ಲಾಧಿಕಾರಿ ಡಿಸಿ ಶಿಲ್ಪಾ ಶರ್ಮಾ ಅವರಿಗೆ ಸೂಚನೆ ನೀಡಿದ್ದಾರೆ. ಸಿಬ್ಬಂದಿಗಳು ಮಾಡಿದ ಎಡವಟ್ಟಿನಿಂದ ಇಂದು ವಿದ್ಯಾರ್ಥಿಯ ಭವಿಷ್ಯ ನಾಶವಾಗಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಹೀಗಾಗಿ ಉಪ ವಿಭಾಗಾಧಿಕಾರಿ ದರ್ಜೆಯ ಅಧಿಕಾರಿಯಿಂದ ತನಿಖೆ ನಡೆಸಿ ನಿಯಮಾನುಸಾರ ತಪ್ಪು ಮಾಡಿದವರ ಮೇಲೆ ಶಿಸ್ತು ಕ್ರಮವಹಿಸಿ. 24 ಗಂಟೆಯ ಒಳಗಾಗಿ ವರದಿಯನ್ನು ಸಲ್ಲಿಸಬೇಕು ಎಂದು ಪತ್ರದ ಮೂಲಕ ಸೂಚನೆ ನೀಡಿದ್ದಾರೆ.
CET ಪರೀಕ್ಷೆ ಜನಿವಾರ ವಿವಾದ, ಕ್ಷಮೆ ಕೇಳಿದ ಕೆಇಎ ನಿರ್ದೇಶಕ ಪ್ರಸನ್ನ
ಬುರ್ಖಾ ಬಿಚ್ಚಿ ಬನ್ನಿ ಅಂತ ಅನ್ನೋ ತಾಕತ್ ಇವರಿಗೆ ಇದೆಯಾ?
ಕಲಬುರಗಿಯಲ್ಲಿ ಬಿಜೆಪಿ ಮುಖಂಡ ಎನ್. ರವಿಕುಮಾರ ಹೇಳಿಕೆ ನೀಡಿ. ಬೀದರ್ ವಿದ್ಯಾರ್ಥಿಗೆ ಮರು ಪರೀಕ್ಷೆಗೆ ಅವಕಾಶ ಕೊಡಬೇಕು. ನಿನ್ನೆ ಆ ವಿದ್ಯಾರ್ಥಿ ಗಣಿತ ಪತ್ರಿಕೆ ಬರೆದಿಲ್ಲ. ಕಲ್ಯಾಣ ಕರ್ನಾಟಕದ ಒಬ್ಬ ವಿದ್ಯಾರ್ಥಿಗೆ ಅನ್ಯಾಯ ಆಗಿದೆ. ಈ ಸರಕಾರಕ್ಕೆ ಮನುಷ್ಯತ್ವ ಇದೆಯೋ ಇಲ್ಲವೋ? ನುರಿತ ಸಿಎಂ ಸಿದ್ರಾಮಯ್ಯ ಇದ್ರೂ ಸಹ ಜನಿವಾರ ಬಿಚ್ಚಿ ಬಾ ಅಂದ್ರೆ ಯಾವ ಕಲ್ಚರ್ ಇದು? ಬುರ್ಖಾ ಬಿಚ್ಚಿ ಬನ್ನಿ ಅಂತ ಅನ್ನೋ ತಾಕತ್ ಇವರಿಗೆ ಇದೆಯಾ? ನಾವು ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ಬುರ್ಕಾ ಬಿಚ್ಚಿ ಬನ್ನಿ ಅಂತ ಅಂದಿಲ್ಲ. ಯೂನಿಫಾರ್ಮ ಫಾಲೋ ಮಾಡಿ ಅಂತ ನಾವು ಹೇಳಿದ್ದೆವು.
ಜನಿವಾರ ತೆಗೆಸಿದ ಪ್ರಕರಣ: 'ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ..; ಸಿಎಂ ವಿರುದ್ಧ ವಿಜಯೇಂದ್ರ ಕಿಡಿ
ಬೀದರ ವಿದ್ಯಾರ್ಥಿ ಮಾತ್ರವಲ್ಲ, ಇದೇ ರೀತಿ ಇನ್ನೆಷ್ಟು ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿದೆಯೋ ? ಎಲ್ಲಿ ಯಾವ ಯಾವ ವಿದ್ಯಾರ್ಥಿಗಳಿಗೆ ಪರೀಕ್ಷೆ ತಪ್ಪಿದೆಯೋ ಅಂತಹ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು. ಅವನಿಗೆ ಭವಿಷ್ಯ ಹೋಗುತ್ತೆ. ನಾನು ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಹಿಂದೆ ತಾಳಿ ಬಿಚ್ಚಿ ಬನ್ನಿ ಅಂತಾನೂ ಇವರು ಅಂದಿದ್ರು. ಕಾಲುಂಗರ ಬಿಚ್ಚಿ ಬನ್ನಿ ಅಂದಿದ್ರು, ಅದೆಲ್ಲೇನು ರೆಲಾರ್ಡ ಮಾಡುವ ಮಶೀನ್ ಇಟ್ಟುಕೊಂಡಿರ್ತಾರಾ? ಪರೀಕ್ಷೆ ವಿಚಾರದಲ್ಲಿ ಬಿಗಿ ಕ್ರಮ ಕೈಗೊಳ್ಳಿ ಅದಕ್ಕೆ ಬೆಂಬಲ ಕೊಡುತ್ತೇವೆ. ಕೂಡಲೆ ಸಿಎಂ ಪರೀಕ್ಷೆ ತಪ್ಪಿದ ವಿದ್ಯಾರ್ಥಿಗಳಿಗೆ ಮರ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು. ಇಲ್ಲದಿದ್ದರೆ ಸದನದಲ್ಲಿ ನಾವು ಪ್ರತಿಭಟನೆ ಮಾಡುತ್ತೇವೆ. ಇದು ಈ ಸರಕಾರ ಹಿಂದೂಗಳಿಗೆ ಮಾಡಿದ ದೊಡ್ಡ ಅಪಮಾನ. ಮೈನಾರಿಟಿ ವಿದ್ಯಾರ್ಥಿಗಳಿಗೆ ಏಕೆ ಈ ರೀತಿ ಅಪಮಾನ ಮಾಡಿಲ್ಲ ? ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಚಿಕ್ಕಬಳ್ಳಾಪುರ ದಲ್ಲಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಹೇಳಿಕೆ ನೀಡಿ,ಇದು ಮೂರ್ಖರು ಮಾಡಿರೋ ಕೃತ್ಯ. ಇಂತಹದನ್ನು ಯಾರು ಕೂಡ ಬೆಂಬಲಿಸಬಾರದು. ಅವರವರ ನಂಬಿಕೆ ಅವರದ್ದು, ನಾನು ಹಣೆಗೆ ಕುಂಕುಮ ಇಟ್ಟಿದ್ದೇನೆ ಅದು ನನ್ನ ನಂಬಿಕೆ. ಅವರು ಜನಿವಾರ ಹಾಕುತ್ತಾರೆ, ಅದು ಅವರ ನಂಬಿಕೆ. ಕೂಡಲೇ ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಾನು ಕೂಡ ಉನ್ನತ ಶಿಕ್ಷಣ ಸಚಿವರ ಜೊತೆ ಚರ್ಚಿಸಿದ್ದೇನೆ ಎಂದಿದ್ದಾರೆ.