ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸದಲಗಾದಲ್ಲಿ ಹೊಸ ಕೇಂದ್ರೀಯ ವಿದ್ಯಾಲಯ

By Suvarna NewsFirst Published Mar 8, 2021, 5:03 PM IST
Highlights

ಕೇಂದ್ರ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಕೇಂದ್ರೀಯ ವಿದ್ಯಾಲಯಗಳಿಗೆ ಜನರಿಂದ ಬೇಡಿಕೆ ಇದ್ದು, ಕರ್ನಾಟಕ ಮತ್ತು ಪಂಜಾಬ್‌ ರಾಜ್ಯಗಳಲ್ಲಿ ತಲಾ ಒಂದು ಹೊಸ ಕೇಂದ್ರೀಯ ವಿದ್ಯಾಲಯಗಳು ಆರಂಭವಾಗಲಿವೆ. ಕರ್ನಾಟಕದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾದಲ್ಲಿ ಹೊಸ ಕೇಂದ್ರೀಯ ವಿದ್ಯಾಲಯ ಶುರುವಾಗಲಿದೆ. ಈ ಎರಡು ಹೊಸ ಶಾಲೆಗಳ ಆರಂಭದೊಂದಿಗೆ ದೇಶದಲ್ಲಿ ಒಟ್ಟು ಕೇಂದ್ರೀಯ ವಿದ್ಯಾಲಯಗಳ ಸಂಖ್ಯೆ 1,237ಕ್ಕೆ ಏರಿಕೆಯಾಗಿದೆ.

ಕೇಂದ್ರ ಸರಕಾರದ ಅಧೀನ ಮಾನವ ಸಂಪನ್ಮೂಲ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಕೇಂದ್ರೀಯ ವಿದ್ಯಾಲಯಗಳಿಗೆ ಬೇಡಿಕೆ ತುಂಬಾ ಇದೆ. ಈ ಕೇಂದ್ರೀಯ ವಿದ್ಯಾಲಗಳ(ಕೆವಿ)ಗಳ ನಿರ್ವಹಣೆಯನ್ನು ಕೇಂದ್ರೀಯ ವಿದ್ಯಾಲಯ ಸಂಘಟನ್ ನೋಡಿಕೊಳ್ಳುತ್ತದೆ.

ಕರ್ನಾಟಕದಲ್ಲಿ ಒಟ್ಟು 50 ಕೇಂದ್ರೀಯ ವಿದ್ಯಾಲಯಗಳಿದ್ದು, ಈ ಪೈಕಿ ಬೆಂಗಳೂರ ಮಹಾನಗರದಲ್ಲೇ 13 ಕೇಂದ್ರೀಯ ವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಈಗ ಕರ್ನಾಟಕ ಹಾಗೂ ಪಂಜಾಬ್‌ ರಾಜ್ಯಗಳಿಗೆ ತಲಾ ಒಂದೊಂದು ಹೊಸ ಕೇಂದ್ರೀಯ ವಿದ್ಯಾಲಯಗಳು ದೊರೆತಿವೆ.

ಅಂದರೆ ಕೇಂದ್ರೀಯ ವಿದ್ಯಾಲಯ ಸಂಘಟನವು ಪಂಜಾಬ್ ಮತ್ತು ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ಕೇಂದ್ರೀಯ ವಿದ್ಯಾಲಯಗಳ ಆರಂಭಕ್ಕೆ ಒಪ್ಪಿಗೆ ನೀಡಿದೆ. ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಸದಲಗಾದಲ್ಲಿ ಹೊಸ ಕೇಂದ್ರೀಯ ವಿದ್ಯಾಲಯ ಆರಂಭವಾಗಲಿದೆ. ಅದೇ ರೀತಿ ಪಂಜಾಬ್‌ನ ಐಐಟಿ ರೂಪರ್‌ನಲ್ಲಿ ಮತ್ತೊಂದು ಕೇಂದ್ರೀಯ ವಿದ್ಯಾಲಯ ಆರಂಭವಾಗಲಿದೆ. ಈ ಎರಡು ಹೊಸ ಕೇಂದ್ರೀಯ ವಿದ್ಯಾಲಯಗಳೊಂದಿಗೆ ದೇಶದಲ್ಲಿ ಒಟ್ಟು ಕೇಂದ್ರೀಯ ವಿದ್ಯಾಲಯಗಳ ಸಖ್ಯೆ 1,247ಕ್ಕೆ ಏರಿಕೆಯಾಗಿದೆ.

ಮೆಗಾ ನೇಮಕಾತಿ: ಶೀಘ್ರವೇ 6,552 ಹುದ್ದೆಗಳಿಗೆ ಇಎಸ್ಐಸಿ ನೇಮ

ಈಗ ಹೊಸದಾಗಿ ಆರಂಭಿಸುತ್ತಿರುವ ಈ ಎರಡೂ ಕೇಂದ್ರೀಯ ವಿದ್ಯಾಲಯಗಳು 2021-22ನೇ ಶೈಕ್ಷಣಿಕ ಸಾಲಿನಿಂದ ಮೊದಲನೆಯ ತರಗತಿಯಿಂದ 5ನೇ ತರಗತಿಯವರೆಗೂ ಕಾರ್ಯರಾರಂಭ ಮಾಡಲಿವೆ.  ಮುಂಬರುವ ಶೈಕ್ಷಣಿಕ ಸೆಷನ್‌ನಲ್ಲಿ ವಿವರಿಸುವಂತೆಯೇ ಕರ್ನಾಟಕ ಮತ್ತು ಪಂಜಾಬ್ ರಾಜ್ಯಗಳಲ್ಲಿ ಶುರುವಾಗುತ್ತಿರುವ ಕೇಂದ್ರೀಯ ವಿದ್ಯಾಲಯಗಳಿಗೆ ದಾಖಲಾತಿ ಪ್ರಕ್ರಿಯೆ ನಡೆಯಲಿದೆ.

ಕರ್ನಾಟಕ ಮತ್ತು ಪಂಜಾಬ್‌ಗಳಲ್ಲ ಆರಂಭವಾಗಲಿರುವ  ನೂತನ ಕೇಂದ್ರೀಯ ವಿದ್ಯಾಲಯಗಳ ಬಗ್ಗೆ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು ತಮ್ಮ ಟ್ವೀಟ್‌ನಲ್ಲಿ, ಕೇಂದ್ರೀಯ ವಿದ್ಯಾಲಯಗಳ ಬೃಹತ್ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಲಿರುವ ಹೆಸರಗಳನ್ನು ಹಂಚಿಕೊಳ್ಳಲು ನನಗೆ ಖುಷಿಯಾಗುತ್ತಿದೆ. ಕೇಂದ್ರೀಯ ವಿದ್ಯಾಲಯ ಸಂಘಟನವು ಕರ್ನಾಟಕ ಮತ್ತು ಪಂಜಾಬ್‌ನಲ್ಲಿ ಎರಡು ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲಿದೆ ಎಂದು ಬರೆದುಕೊಂಡಿದ್ದಾರೆ.

ಈ ಎರಡು ಹೊಸ ಕೇಂದ್ರೀಯ ವಿದ್ಯಾಲಯಗಳ ಆರಂಭದೊಂದಿಗೆ ದೇಶದಲ್ಲಿ ಒಟ್ಟು ಕೇಂದ್ರೀಯ ವಿದ್ಯಾಲಯಗಳ ಸಂಖ್ಯೆ 1247ಕ್ಕೇರಿಕೆಯಾಗಿದೆ ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು ತಮ್ಮ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಗನ್ ಅಷ್ಟೇ ಅಲ್ಲ ಪೆನ್ ಹಿಡಿದು ಕೋಚಿಂಗ್ ಕೊಡುತ್ತದೆ ನಮ್ಮ ಸೇನೆ!

ಸದಲಗಾದಲ್ಲಿ ಆರಂಭವಾಗಲಿರುವ ಕೇಂದ್ರೀಯ ವಿದ್ಯಾಲಯವು ನಾಗರಿಕ ವಲಯದ ವಿದ್ಯಾಲಯವಾಗಿರಲಿದೆ. ಹೊಸ ಕಟ್ಟಡ ನಿರ್ಮಾಣವಾಗೋವರೆಗೂ ಕೇಂದ್ರೀಯ ವಿದ್ಯಾಲಯವು ರಾಜ್ಯ ಸರಕಾರವು ಒದಗಿಸುವ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ. ಐಐಟಿ ರೂಪರ್ ಕೇಂದ್ರೀಯ ವಿದ್ಯಾಲಯವು ಸಂಸ್ಥೆ ಒದಗಿಸುವ ಸ್ವಂತ ಕಟ್ಟಡದಲ್ಲಿ ನಡೆಯಲಿದೆ.

ಸದಲಗಾ ಕೇಂದ್ರೀಯ ವಿದ್ಯಾಲಯವು ಬೆಳಗಾವಿಯ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಇದೇ ವೇಳೆ, ಪಂಜಾಬ್‌ನಲ್ಲಿ ಆರಂಭವಾಗಲಿರುವ ಐಐಟಿ ರೂಪರ ಕೇಂದ್ರೀಯ ವಿದ್ಯಾಲಯವು ಆನಂದಪುರ ಸಾಹೀಬ್ ಸಂಸದೀಯ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಇದು ರೂಪನಗರ್ ಜಿಲ್ಲೆಯ ವ್ಯಾಪ್ತಿಯಲ್ಲಿದೆ .

ಕೇಂದ್ರೀಯ ವಿದ್ಯಾಲಯಗಳು 1963ರಲ್ಲ ಆರಂಭವಾದವು. ಪ್ರಾರಂಭದಲ್ಲಿ ದೇಶಾದ್ಯಂತ 20 ಕೇಂದ್ರೀಯ ವಿದ್ಯಾಲಯಗಳಿದ್ದವು. ಕಾಲಕ್ರಮೇಣ ಬೇಡಿಕೆ ಹೆಚ್ಚಾದಂತೆ ದೇಶದ ವಿವಿಧ ಭಾಗಗಳಲ್ಲಿ ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆಯ ಹೆಚ್ಚಾಯಿತು. ಇದೀಗ ಒಟ್ಟು ಕೇಂದ್ರೀಯ ವಿದ್ಯಾಲಯಗಳ ಸಂಖ್ಯೆ 1247.

ಭಾರತೀಯ ಆಹಾರ ನಿಗಮದಲ್ಲಿ 89 ಹುದ್ದೆ ಖಾಲಿ: ಸಂಬಳ 1.80 ಲಕ್ಷ ರೂಪಾಯಿ!

ಒಟ್ಟು ಕೇಂದ್ರೀಯ ವಿದ್ಯಾಲಯಗಳ ಪೈಕಿ ಮೂರು ಕೇಂದ್ರೀಯ ವಿದ್ಯಾಲಯಗಳು ವಿದೇಶಗಳಲ್ಲೂ ಇವೆ. ರಷ್ಯಾದ ಮಾಸ್ಕೋ, ನೇಪಾಳದ ಕಾಠ್ಮಂಡು ಮತ್ತು ಇರಾನ್ ಟೆಹ್ರಾನ್‌ ನಗರಗಳಲ್ಲೂ ಕೇಂದ್ರೀಯ ವಿದ್ಯಾಲಯಗಳಿವೆ.

ಕರ್ನಾಟಕದಲ್ಲೇ ಒಟ್ಟು 51 ಕೇಂದ್ರೀಯ ವಿದ್ಯಾಲಯಗಳಿದ್ದು, ಈ ಪೈಕಿ 13 ವಿದ್ಯಾಲಯಗಳು ಬೆಂಗಳೂರು ನಗರವೋಂದರಲ್ಲೇ ಇವೆ. ಈಗ ಹೊಸ ಕೇಂದ್ರೀಯ ವಿದ್ಯಾಲಯದೊಂದಿಗೆ ಕರ್ನಾಟಕದ ಒಟ್ಟು ಕೇಂದ್ರೀಯ ವಿದ್ಯಾಲಯಗಳ ಸಂಖ್ಯೆ 51ಕ್ಕೆ ಏರಿಕೆಯಾದಂತಾಗಿದೆ.

click me!