2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್ 8 ರಂದು ಪ್ರಕಟವಾಗಲಿದೆ. ಫಲಿತಾಂಶವನ್ನು karresults.nic.in ಅಥವಾ kseab.karnataka.gov.in ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ. ಕಳೆದ ವರ್ಷದ ಫಲಿತಾಂಶ ಮತ್ತು ಜಿಲ್ಲಾವಾರು ಫಲಿತಾಂಶದ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರು (ಏ.7): ವಿದ್ಯಾರ್ಥಿಗಳೇ ಹಾಗೂ ಪೋಷಕರೇ 2024-25ನೇ ಸಾಲಿನ ಫಲಿತಾಂಶ ನಾಳೆ ಏಪ್ರಿಲ್ 8ರ ಮಂಗಳವಾರದಂದು ಬಿಡುಗಡೆಯಾಗಲಿದೆ. ಮಾರ್ಚ್ 1ರಿಂದ ಮಾರ್ಚ್ 20 ರ ವರೆಗೆ ನಡೆದಿದ್ದ ಸೆಕೆಂಡ್ ಪಿಯು ಪರೀಕ್ಷೆ ಫಲಿತಾಂಶವನ್ನು ಪತ್ರಿಕಾಗೋಷ್ಠಿ ನಡೆಸಿ ಪ್ರಕಟಿಸಲಾಗುತ್ತದೆ. ಶಾಲಾ ಶಿಕ್ಷಣ & ಸಾಕ್ಷರತಾ ಇಲಾಖೆ ಅಧ್ಯಕ್ಷರ ನೇತೃತ್ವದಲ್ಲಿ ಮಧ್ಯಾಹ್ನ 12.30 ಕ್ಕೆ ಸುದ್ದಿಗೋಷ್ಠಿ ನಡೆಯಲಿದ್ದು, ಮಧ್ಯಾಹ್ನ 1. 30ರ ಬಳಿಕ ಜಾಲತಾಣದಲ್ಲಿ ಫಲಿತಾಂಶ ಲಭ್ಯವಿರಲಿದೆ. karresults.nic.in ಅಥವಾ kseab.karnataka.gov.in ವೆಬ್ ಸೈಟ್ ಅಲ್ಲಿ ಫಲಿತಾಂಶ ಲಭ್ಯವಿರಲಿದ್ದು ಅಂಕಪಟ್ಟಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ವರ್ಷಕ್ಕೆ 3 ಪರೀಕ್ಷೆಯ ಪ್ರಯೋಗ ಎಸ್‌ಎಸ್‌ಎಲ್‌ಸಿಯಲ್ಲಿ ಫೇಲ್: ಪಿಯು ಫಲಿತಾಂಶ ಏರಿಕೆ!
ಆನ್ಲೈನ್ನಲ್ಲಿ ಪರಿಶೀಲಿಸುವುದು ಹೇಗೆ?
-ಅಧಿಕೃತ ವೆಬ್‌ಸೈಟ್‌ಗೆ karresults.nic.in ಅಥವಾ kseab.karnataka.gov.in ಗೆ ಭೇಟಿ ನೀಡಬೇಕು.
-ಹೋಂ ಪೇಜ್ನಲ್ಲಿ, Second PU Results 2025 ಲಿಂಕ್ ಕ್ಲಿಕ್ ಮಾಡಬೇಕು.
-ರಿಜಿಸ್ಟ್ರೇಷನ್ ನಂಬರ್ (ನೋಂದಣಿ ಸಂಖ್ಯೆ) ಮತ್ತು ಪಾಸ್‌ವರ್ಡ್ ನಮೂದಿಸಬೇಕು.
-Second PU Results 2025 ಎಂಬುದು ಸ್ಕ್ರೀನ್ನಲ್ಲಿ ಕಾಣಿಸುತ್ತದೆ.
ಭಾರತದಲ್ಲಿ ಕೃಷಿ ಇಂಜಿನಿಯರಿಂಗ್ ಯಾರು ಮಾಡಬಹುದು? ವೃತ್ತಿ, ಕೋರ್ಸ್, ಉದ್ಯೋಗ ಮತ್ತು ವೇತನ ಮಾಹಿತಿ!
ಹಿಂದಿನ ವರ್ಷದ ಫಲಿತಾಂಶದ ವರದಿ
2023-2024ನೇ ಸಾಲಿನಲ್ಲಿ ರಾಜ್ಯಕ್ಕೆ 81.15% ಫಲಿತಾಂಶ ಬಂದಿತ್ತು. ಕಳೆದ ವರ್ಷ 84.87% ಬಾಲಕಿಯರು ಪಾಸಾಗಿದ್ದರೆ ಬಾಲಕರು 76.98% ಮಂದಿ ಉತ್ತೀರ್ಣರಾಗಿದ್ದರು. ವಿಜ್ಞಾನ ವಿಭಾಗ 89.96% , ವಾಣಿಜ್ಯ ವಿಭಾಗ 80.94%, ಕಲಾ ವಿಭಾಗದಲ್ಲಿ 68.36 % ಫಲಿತಾಂಶ ಬಂದಿತ್ತು. 35 ಕಾಲೇಜುಗಳಿಗೆ ಶೂನ್ಯ ಫಲಿತಾಂಶ ಬಂದಿತ್ತು. ಒಟ್ಟು 463 ಕಾಲೇಜುಗಳಲ್ಲಿ ಶೇ. 100% ಫಲಿತಾಂಶ, ಅದರಲ್ಲಿ 91 ಸರ್ಕಾರಿ ಕಾಲೇಜುಗಳಲ್ಲಿ ಶೇ.100% ಫಲಿತಾಂಶ ಬಂದಿತ್ತು. ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಬಿಬಿಎಂಪಿ ಕಾಲೇಜುಗಳಲ್ಲಿ ಫಲಿತಾಂಶ ಕುಸಿತ ಕಂಡಿತ್ತು.
ದಕ್ಷಿಣ ಕನ್ನಡ (97.37%) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿತ್ತು. ಉಡುಪಿ (96.80%) ಎರಡನೇ ಸ್ಥಾನ ಮತ್ತು ವಿಜಯಪುರ (94.89%) ತೃತೀಯ ಸ್ಥಾನ ಪಡೆದಿತ್ತು. ಗದಗ (72.86%) ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಐಐಟಿ-ಜೆಇಇಯಲ್ಲಿ ಟಾಪರ್ ಆದ ವೇದ್ ಲಹೋಟಿ ಮತ್ತು ಅಂಬಾನಿ ನಂಟಿನ ಕಥೆ!
ಕಳೆದ ವರ್ಷ ಪಡೆದ ಜಿಲ್ಲೆಗಳ ಶೇಕಡಾವಾರು ಫಲಿತಾಂಶ:
1. ದಕ್ಷಿಣ ಕನ್ನಡ 97.37%
2. ಉಡುಪಿ 96.80%
3. ವಿಜಯಪುರ 94.89%
4. ಉತ್ತರ ಕನ್ನಡ 92.51%
5. ಕೊಡಗು 92.13%
6. ಬೆಂಗಳೂರು ದಕ್ಷಿಣ 89.57%
7. ಬೆಂಗಳೂರು ಉತ್ತರ 88.67%
8. ಶಿವಮೊಗ್ಗ 88.58%
9. ಚಿಕ್ಕಮಗಳೂರು 88.20%
10. ಬೆಂಗಳೂರು ಗ್ರಾಮಾಂತರ 87.55%
11. ಬಾಗಲಕೋಟೆ 87.54%
12. ಕೋಲಾರ 86.12%
13. ಹಾಸನ 85.83%
14. ಚಾಮರಾಜನಗರ 84.99%
15. ಚಿಕ್ಕೋಡಿ 84.10%
16. ರಾಮನಗರ 83.58%
17. ಮೈಸೂರು 83.13%
18. ಚಿಕ್ಕಬಳ್ಳಾಪುರ 82.84%
19. ಬೀದರ್ 81.69%
20. ತುಮಕೂರು 81.03%
21. ದಾವಣಗೆರೆ 80.96%
22. ಕೊಪ್ಪಳ 80.83%
23. ಧಾರವಾಡ 80.70%
24. ಮಂಡ್ಯ 80.56%
25. ಹಾವೇರಿ 78.36%
26.ಯಾದಗಿರಿ 77.29%
27. ಬೆಳಗಾವಿ 77.20%
28. ಕಲಬುರಗಿ 75.48%
29. ಬಳ್ಳಾರಿ 74.70%
30. ರಾಯಚೂರು 73.11%
31. ಚಿತ್ರದುರ್ಗ 72.92%
32. ಗದಗ 72.86%