Published : Apr 09, 2026, 12:24 PM ISTUpdated : Apr 09, 2026, 08:17 PM IST

Karnataka PUC result: ಫೇಲ್ ಆದವರಿಗೆ ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಪ್ರಕಟ, ಮರುಮೌಲ್ಯಮಾಪನಕ್ಕೆ ಈ ದಿನದೊಳಗೆ ಅರ್ಜಿ ಸಲ್ಲಿಸಿ

ಸಾರಾಂಶ

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ನಿರೀಕ್ಷಿಸುತ್ತಿದ್ದ ದ್ವಿತೀಯ ಪಿಯುಸಿ (PUC II) ಪರೀಕ್ಷೆಯ ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ಅಧಿಕೃತವಾಗಿ ಪ್ರಕಟವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯನಿರ್ಣಯ ಮಂಡಳಿ (KSEAB) ಈ ಮಹತ್ವದ ಫಲಿತಾಂಶವನ್ನು ಪ್ರಕಟಿಸಲು ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ https://karresults.nic.in ನಲ್ಲಿ ಸುಲಭವಾಗಿ ಪರಿಶೀಲಿಸಬಹುದು. 

ಇದಕ್ಕಾಗಿ ವೆಬ್‌ಸೈಟ್‌ಗೆ ಭೇಟಿ ನೀಡಿ, ತಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ‘Submit’ ಬಟನ್ ಒತ್ತಿದ ತಕ್ಷಣ ಅಂಕಪಟ್ಟಿ ಪರದೆ ಮೇಲೆ ಪ್ರದರ್ಶವಾಗುತ್ತದೆ. ಇದಲ್ಲದೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿವಿಧ ಮಾರ್ಗಗಳಲ್ಲಿ ಫಲಿತಾಂಶ ಲಭ್ಯವಿರುತ್ತದೆ. ಕರ್ನಾಟಕ ಒನ್ ಮೊಬೈಲ್ ಆ್ಯಪ್ ಮೂಲಕವೂ ಫಲಿತಾಂಶ ವೀಕ್ಷಿಸಬಹುದಾಗಿದೆ. ಜೊತೆಗೆ, ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಮೂಲಕವೂ ಫಲಿತಾಂಶ ಮಾಹಿತಿ ರವಾನೆಯಾಗಲಿದೆ.

08:17 PM (IST) Apr 09

ಕರ್ಣ ಧಾರಾವಾಹಿ ನಟಿ ರಿಯಾ ಸಾಧನೆ: ಪಿಯುಸಿಯಲ್ಲಿ ಶೇ.97 ಅಂಕದೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ಪಾಸಾದ ಅಂಕಿತಾ ಜಯರಾಮ್

07:25 PM (IST) Apr 09

ಫೇಲ್ ಆದವರಿಗೆ ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಪ್ರಕಟ, ಮರುಮೌಲ್ಯಮಾಪನಕ್ಕೆ ಈ ದಿನದೊಳಗೆ ಅರ್ಜಿ ಸಲ್ಲಿಸಿ

ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶದ ನಂತರ, ಅಂಕ ಸುಧಾರಿಸಲು ಬಯಸುವ ವಿದ್ಯಾರ್ಥಿಗಳಿಗೆ ಏಪ್ರಿಲ್ 30ರಿಂದ ಎರಡನೇ ಪರೀಕ್ಷೆ ನಡೆಯಲಿದೆ. ಇದರ ಜೊತೆಗೆ, ಉತ್ತರ ಪತ್ರಿಕೆಯ ಛಾಯಾಪ್ರತಿ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದ್ದು, ಈ ವರ್ಷ ಮೂರನೇ ಪರೀಕ್ಷೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
Read Full Story

06:46 PM (IST) Apr 09

ದ್ವಿತೀಯ ಪಿಯುಸಿ ಫಲಿತಾಂಶ - ಉಡುಪಿ ಫಸ್ಟ್, ಯಾದಗಿರಿ ಲಾಸ್ಟ್, ಯಾವ ಜಿಲ್ಲೆಗೆ ಎಷ್ಟು ಬಂತು?

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯವು ಶೇ.86.48ರಷ್ಟು ದಾಖಲೆಯ ಫಲಿತಾಂಶವನ್ನು ಕಂಡಿದೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಮತ್ತು ಅಂಕಪಟ್ಟಿಯನ್ನು ವೆಬ್‌ಸೈಟ್‌, ಮೊಬೈಲ್‌ ಆ್ಯಪ್‌ ಹಾಗೂ ಡಿಜಿಲಾಕರ್ ಮೂಲಕ ಪಡೆಯಬಹುದು.
Read Full Story

06:06 PM (IST) Apr 09

ಪಿಯುಸಿಯಲ್ಲಿ ಇಂದೂ ಕಾಲೇಜಿನ ರೈತನ ಮಗಳ ಸಾಧನೆಗೆ ರಾಜ್ಯವೇ ಬೆರಗು! ಅವಳಿ ಜವಳಿ ತಮ್ಮನಿಗೂ ಶೇ. 94 ಅಂಕ!

ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ರೈತನ ಮಗಳು ಸಂಗೀತಾ ಶೇಖರಗೌಡ ಪೊಲೀಸ್ ಪಾಟೀಲ್, 2026ನೇ ಸಾಲಿನ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 99.66% ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರ ಅವಳಿ ಸಹೋದರ ಕೂಡ 94% ಅಂಕ ಗಳಿಸಿದ್ದು, ಮುಂದೆ ಎಲ್‌ಎಲ್‌ಬಿ ಓದುವ ಕನಸು ಕಂಡಿರುವ ಸಂಗೀತಾ ಅವರ ಸಾಧನೆ ಎಲ್ಲರಿಗೂ ಪ್ರೇರಣೆಯಾಗಿದೆ.
Read Full Story

04:33 PM (IST) Apr 09

ತಾಯಿ ನಿಧನದಲ್ಲೂ ದಿಶಾ ಸಾಧನೆ, ಅಮ್ಮನಿಲ್ಲದೆ 3 ಪರೀಕ್ಷೆ, 600/600 ಪಡೆದು ರಾಜ್ಯಕ್ಕೆ ಟಾಪರ್ ಆಳ್ವಾಸ್ ವಿದ್ಯಾರ್ಥಿನಿ!

2026ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ, ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ, ಪರೀಕ್ಷೆಯ ಸಮಯದಲ್ಲಿ ತಾಯಿಯನ್ನು ಕಳೆದುಕೊಂಡ ದುಃಖದ ನಡುವೆಯೂ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರ ಈ ಸಾಧನೆ ಮನೋಬಲ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದ್ದು, ಅನೇಕರಿಗೆ ಸ್ಪೂರ್ತಿದಾಯಕವಾಗಿದೆ.
Read Full Story

03:45 PM (IST) Apr 09

ಟಾಪರ್ ವಿದ್ಯಾರ್ಥಿಗಳಿವರು

ಜೈನ್​ ಕಾಲೇಜಿನ ಅದಿತಿ ಬಾಪು ಕಾಮರ್ಸ್​​ ವಿಭಾಗದಲ್ಲಿ 600ಕ್ಕೆ 600 ಪಡೆದು ಟಾಪರ್ ಆಗಿದ್ದಾರೆ.

ಅನಿಶ್ ರಾಜುಗೆ ವಿಜ್ಞಾನ ವಿಭಾಗದಲ್ಲಿ 583 ಅಂಕ. 97 ಪರ್ಸೆಂಟೇಜ್ ಪಡೆದು ಉತ್ತೀರ್ಣರಾದ ಅನೀಶ್. ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ.

ಬೆಂಗಳೂರಿನ‌ ಜೀವಿತ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಜೀವಿತ್ ಗೌಡ ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 590 ಅಂಕ ಪಡೆದಿದ್ದಾನೆ.

 

 

03:39 PM (IST) Apr 09

ಈ ಬಾರಿ ಶೇ.86 ಮಕ್ಕಳು ಉತ್ತೀರ್ಣ

ಈ ಬಾರಿ ಶೇ 86% ಮಕ್ಕಳು ಉತ್ತೀರ್ಣರಾಗಿದ್ದಾರೆ. 7,10,363 ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ 6.1 ಲಕ್ಷ ವಿದ್ಯಾರ್ಥಿಗಳು ತೇರ್ಗಡೆ. ಈ ಬಾರಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ದ್ವಿತೀಯ ಪಿಯುಸಿ ಫಲಿತಾಂಶ.

03:07 PM (IST) Apr 09

ಕೊಟ್ಟೂರು ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಗೆ 600ರಲ್ಲಿ 598 ಅಂಕ

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಇಂದು ಪಿಯು ಕಾಲೇಜಿನ ಅರ್ಚನ ಮತ್ತು ಸಂಗೀತ ಎಂಬ ಇಬ್ಬರು ವಿದ್ಯಾರ್ಥಿಗಳು. 600ರಲ್ಲಿ 598 ಅಂಕ ಪಡೆದಿದ್ದಾರೆ.

03:05 PM (IST) Apr 09

ಈ ಬಾರಿ ಒಳ್ಳೆ ಫಲಿತಾಂಶ ನೀರಿಕ್ಷೆ ಇಟ್ಟುಕೊಂಡಿರುವ ಸಚಿವರು

ಈ ಬಾರಿ ಒಳ್ಳೇ ಫಲಿತಾಂಶ ನೀರಿಕ್ಷೆ ಇಟ್ಟುಕೊಂಡಿರುವ ಸಚಿವರು. ಯಾಕಂದ್ರೆ 35 ಇದಿದ್ದ ಪಾಸಿಂಗ್ ಅಂಕ 33ಕ್ಕೆ ಇಳಿಸಿರುವ ಸರ್ಕಾರ. ಹೀಗಾಗಿ ಈ‌ ಬಾರಿ ಉತ್ತಮ ಫಲಿತಾಂಶ ಬರುವ ಸಾಧ್ಯತೆ ಕಳೆದ ವರ್ಷ 7.7% ಫಲಿತಾಂಶ ಕಡಿಮೆ ದಾಖಲಾಗಿತ್ತು. 1 ಲಕ್ಷದ 69 ಸಾವಿರ 366 ವಿದ್ಯಾರ್ಥಿಗಳು ಫೇಲಾಗಿದ್ರು. ಒಟ್ಟು ಶೇಕಡಾ ಫಲಿತಾಂಶ 73.45% ಬಂದಿತ್ತು.

 

03:01 PM (IST) Apr 09

ದ್ವಿತೀಯ ಪಿಯುಸಿ ಫಲಿತಾಂಶ ವೆಬ್‌ಸೈಟ್‌ನಲ್ಲಿ ಪ್ರಕಟ

ದ್ವಿತೀಯ ಪಿಯುಸಿ ಫಲಿತಾಂಶ ವೆಬ್‌ಸೈಟ್‌ನಲ್ಲಿ  ಪ್ರಕಟಗೊಂಡಿದ್ದು, ಎಸ್‌ಎಂಎಸ್ ಮೂಲಕ ಫಲಿತಾಂಶ ವಿದ್ಯಾರ್ಥಿಗಳಿಗೆ ತಲುಪಿದೆ. ರೋಲ್ ನಂಬರ್ , ಜನ್ಮ ದಿನಾಂಕ ನಮೂದಿಸಿದರೆ ಫಲಿತಾಂಶವನ್ನು ವೆಬ್‌ಸೈಟ್‌ ನಲ್ಲಿ ನೋಡಬಹುದು.

12:40 PM (IST) Apr 09

2025ರಲ್ಲಿ ಯಾರು ಫಸ್ಟ್? ಯಾರು ಲಾಸ್ಟ್?

93.90 ಶೇಕಡಾ ಫಲಿತಾಂಶ ಪಡೆದು ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆ 93.57 ಶೇಕಡಾ ಫಲಿತಾಂಶದ ಮೂಲಕ ಎರಡನೇ ಸ್ಥಾನ, ಬೆಂಗಳೂರು ದಕ್ಷಿಣ ಮೂರನೇ ಸ್ಥಾನ ಮತ್ತು ಯಾದಗಿರಿ ಜಿಲ್ಲೆ 48.45 ಶೇಕಡಾ ಫಲಿತಾಂಶದ ಮೂಲಕ ರಾಜ್ಯಕ್ಕೆ ಕೊನೆಯ ಸ್ಥಾನ ಪಡೆದಿತ್ತು.

 

12:40 PM (IST) Apr 09

2025ರಲ್ಲಿ ಸೆಕೆಂಡ್ ಪಿಯುಸಿ ಒಟ್ಟು ಫಲಿತಾಂಶ ಹೀಗೆ ಬಂದಿತ್ತು

ಕಲಾ ವಿಭಾಗ ಶೇ. 53.29

ವಾಣಿಜ್ಯ ವಿಭಾಗ ಶೇ. 76.07

ವಿಜ್ಞಾನ ವಿಭಾಗ ಶೇ. 82.54

12:37 PM (IST) Apr 09

2025ರಲ್ಲಿ ಕಾಲೇಜುವಾರು ಫಲಿತಾಂಶ ಹೀಗಿತ್ತು

ಸರ್ಕಾರಿ ಕಾಲೇಜು: 57 ಪರ್ಸೆಂಟ್, ಅನುದಾನ ರಹಿತ: 82.66, ಅನುದಾನಿತ ಪದವಿ ಪೂರ್ವ ಕಾಲೇಜು: 62.6, ಬಿಬಿಎಂಪಿ ಲಿಮಿಟ್: 68.88 ಪರ್ಸೆಂಟ್, ವಸತಿ ಶಾಲಾ ಕಾಲೇಜು: 86.18, ವಿಭಜಿತ ಕಾಲೇಜು: 78.58 ಪರ್ಸೆಂಟ್ ಫಲಿತಾಂಶ ಬಂದಿತ್ತು.

 

12:27 PM (IST) Apr 09

ರಾಜ್ಯದ 1,217 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆ

ಈ ಬಾರಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ರಾಜ್ಯದಾದ್ಯಂತ ನಡೆದಿದ್ದವು. ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ರಾಜ್ಯದ 1,217 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಸುಗಮವಾಗಿ ನಡೆದಿವೆ. ವಿಜ್ಞಾನ ವಿಷಯದಲ್ಲಿ 2.92 ಲಕ್ಷ, ವಾಣಿಜ್ಯದಲ್ಲಿ 2.11 ಲಕ್ಷ ಹಾಗೂ ಕಲಾ ವಿಭಾಗದಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾವಣೆ ಮಾಡಿಕೊಂಡಿದ್ದರು.

12:26 PM (IST) Apr 09

ಈ ಬಾರಿ ಮೊದಲ ಬಾರಿಗೆ ಡಿಜಿಲಾಕರ್ ಸೌಲಭ್ಯ

ಈ ವರ್ಷ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಮತ್ತೊಂದು ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿದೆ. ಡಿಜಿಲಾಕರ್ https://www.digilocker.govt.in ಮೂಲಕವೂ ಅಂಕಪಟ್ಟಿ ಪಡೆಯಲು ಅವಕಾಶ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಡಿಜಿಟಲ್ ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಕೊಳ್ಳಲು ಸಾಧ್ಯವಾಗುತ್ತದೆ.

12:25 PM (IST) Apr 09

ಸಂಜೆ 6.15 ಗಂಟೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ

ಫಲಿತಾಂಶ ಪ್ರಕಟವಾದ ನಂತರ, ಇಂದು ಸಂಜೆ 6.15 ಗಂಟೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಸುದ್ದಿಗೋಷ್ಠಿ ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯನಿರ್ಣಯ ಮಂಡಳಿ ಕಚೇರಿಯಲ್ಲಿ ನಡೆಯಲಿದ್ದು, ಫಲಿತಾಂಶದ ವಿವರಗಳು, ಪಾಸಿಂಗ್ ಪ್ರಮಾಣ ಹಾಗೂ ಇತರ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ.

 


More Trending News