Karnataka 2nd PUC Result 2025: 2015ರಿಂದ ಕೊಟ್ಟೂರಿನ ‘ಇಂದು ಕಾಲೇಜು’ ರಾಜ್ಯಕ್ಕೆ ಪ್ರಥಮ ಸ್ಥಾನ

Published : Apr 09, 2025, 09:37 AM ISTUpdated : Apr 09, 2025, 09:38 AM IST
Karnataka 2nd PUC Result 2025: 2015ರಿಂದ ಕೊಟ್ಟೂರಿನ ‘ಇಂದು ಕಾಲೇಜು’ ರಾಜ್ಯಕ್ಕೆ ಪ್ರಥಮ ಸ್ಥಾನ

ಸಾರಾಂಶ

ಇಲ್ಲಿಯ ‘ಇಂದು ಪದವಿಪೂರ್ವ ಕಾಲೇಜು’ ವಿದ್ಯಾರ್ಥಿನಿ ಸಂಜನಾ ಬಾಯಿ 600ಕ್ಕೆ 597 ಅಂಕ ಗಳಿಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೇ ಟಾಪರ್‌ ಆಗಿದ್ದಾರೆ. ಇಂದು ಕಾಲೇಜು ಕಲಾ ವಿಭಾಗದಲ್ಲಿ 2015ರಿಂದ ಸತತವಾಗಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುತ್ತಿದ್ದು, ಆ ಪರಂಪರೆಯನ್ನು ಈ ವರ್ಷವೂ ಮುಂದುವರಿಸಿದೆ.

ಕೊಟ್ಟೂರು (ಏ.09): ಇಲ್ಲಿಯ ‘ಇಂದು ಪದವಿಪೂರ್ವ ಕಾಲೇಜು’ ವಿದ್ಯಾರ್ಥಿನಿ ಸಂಜನಾ ಬಾಯಿ 600ಕ್ಕೆ 597 ಅಂಕ ಗಳಿಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೇ ಟಾಪರ್‌ ಆಗಿದ್ದಾರೆ. ಇಂದು ಕಾಲೇಜು ಕಲಾ ವಿಭಾಗದಲ್ಲಿ 2015ರಿಂದ ಸತತವಾಗಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುತ್ತಿದ್ದು, ಆ ಪರಂಪರೆಯನ್ನು ಈ ವರ್ಷವೂ ಮುಂದುವರಿಸಿದೆ.

ಈ ಬಾರಿ ‘ಇಂದು ಮಹಾವಿದ್ಯಾಲಯ’ದ 13 ವಿದ್ಯಾರ್ಥಿಗಳು ಮೊದಲ 10 ರ್‍ಯಾಂಕ್‌ ಪಟ್ಟಿಯಲ್ಲಿದ್ದಾರೆ. ಸಂಜನಾ ಬಾಯಿ ರಾಜ್ಯಕ್ಕೇ ಟಾಪರ್‌ ಆಗಿದ್ದಾರೆ. 7ನೇ ರ‍್ಯಾಂಕ್‌ನಲ್ಲಿ ಗೌತಮಿ ಬಿ.( 591 ಅಂಕ), ಜಡೆಲಾಲಿ ಯಾದವ್, ನಾಗಲಕ್ಷ್ಮಿ ಒಡೆಯರ ಮತ್ತು ಯಲ್ಲಮ್ಮ 590 ಅಂಕ ಪಡೆದು 8ನೇ ಟಾಪರ್ ಆಗಿದ್ದಾರೆ. ಲಕ್ಷ್ಮಿ ಮತ್ತು ರಘುಪತಿ ಗೌಡ 588 ಅಂಕ ಪಡೆದು 9ನೇ ಟಾಪರ್‌ ಆಗಿದ್ದಾರೆ. ಅರುಣ, ಈ.ರಾಜೇಶ್ವರ, ಗುರುರಾಜ್ ಕುರಿಯವರ, ಜ್ಯೋತಿ ಸಂಕಲ್ಪ, ಪಿ.ಲತಾ ಮತ್ತು ಪ್ರವೀಣ 586 ಅಂಕ ಪಡೆದು 10ನೇ ರ್‍ಯಾಂಕ್‌ ಗಳಿಸಿದ್ದಾರೆ.

2nd PUC Result 2025: ವೈದ್ಯ ದಂಪತಿಯ ಪುತ್ರಿ, ವಿಜ್ಞಾನ ಟಾಪರ್‌ ಅಮೂಲ್ಯಗೆ ಎಂಜಿನಿಯರ್‌ ಆಗುವಾಸೆ!

ಇಂದು ಪದವಿ ಪೂರ್ವ ಮಹಾವಿದ್ಯಾಲಯ ಕಳೆದ 10 ವರ್ಷಗಳಿಂದ ರಾಜ್ಯದ ಟಾಪರ್ ಸ್ಥಾನವನ್ನು ದ್ವಿತೀಯ ಪಿಯುಸಿಯಲ್ಲಿ (ಕಲಾ ವಿಭಾಗ) ಪಡೆದುಕೊಂಡು ಬರುತ್ತಿರುವುದು ನಮಗೆ ಮತ್ತಷ್ಟು ಉತ್ತೇಜನ ತಂದಿದೆ. ಈ ವರ್ಷವೂ ನಿರೀಕ್ಷೆ ಇಟ್ಟುಕೊಂಡಿದ್ದೆವು. ಅದರಂತೆ ಫಲಿತಾಂಶ ಬಂದಿರುವುದು ಹೆಮ್ಮೆ ಎನಿಸಿದೆ. ಇದಕ್ಕೆ ಕಾಲೇಜಿನಲ್ಲಿನ ಅಧ್ಯಾಪಕ ವರ್ಗದವರ ಟೀಮ್ ವರ್ಕ್‌ ಕಾರಣ.
- ಎಚ್.ಎನ್. ವೀರಭದ್ರಪ್ಪ, ಪ್ರಾಚಾರ್ಯರು, ಆಡಳಿತಾಧಿಕಾರಿ ಇಂದು ಪದವಿ ಪೂರ್ವ ಕಾಲೇಜು ಕೊಟ್ಟೂರು.

ಎಸ್ಡಿಎಂ ಕಾಲೇಜು ವಿದ್ಯಾರ್ಥಿಗಳ ಸಾಧನೆ: ಪಟ್ಟಣದ ಎಂಪಿಇ ಸೊಸೈಟಿಯ ಎಸ್ಡಿಎಂ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಶೇ.90.30, ವಾಣಿಜ್ಯ ವಿಭಾಗದಲ್ಲಿ ಶೇ.83.33 ಹಾಗೂ ಕಲಾ ವಿಭಾಗದಲ್ಲಿ ಶೇ.75 ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ ಎಂ.ಜಿ. ಕಾವ್ಯ, ರಿತಿಕಾ ಅಶೋಕ ನಾಯ್ಕ, ವರ್ಷಾ ಪ್ರವೀಣ ಪ್ರಭು ಶೇ.97 (ಪ್ರಥಮ ಸ್ಥಾನ), ಸ್ಮೃತಿ ಸೂರ್ಯಕಾಂತ ದಿವಳಿ ಶೇ.93.83 (ದ್ವಿತೀಯ ಸ್ಥಾನ), ರಮ್ಯಾ ನಾರಾಯಣ ಹೆಗಡೆ ಶೇ.93.67 (ತೃತೀಯ ಸ್ಥಾನ)

ಕಿತ್ತುತಿನ್ನುವ ಬಡತನದಲ್ಲೂ ಪಾರ್ಟ್‌ಟೈಮ್ ಕೆಲಸ ಮಾಡಿ ಪಿಯುಸಿಯಲ್ಲಿ 6ನೇ ರ್ಯಾಂಕ್‌ ಗಳಿಸಿದ ನಾಗವೇಣಿ!

ವಾಣಿಜ್ಯ ವಿಭಾಗದಲ್ಲಿ ಜೆಸ್ವಿಟಾ ಜುವಾಂವ್ ಮಿರಾಂಡ ಶೇ.95.83 (ಪ್ರಥಮ ಸ್ಥಾನ), ರಚನಾ ವೆಂಕಟ್ರಮಣ ಹೆಗಡೆ ಶೇ.95.17 (ದ್ವಿತೀಯ ಸ್ಥಾನ), ಇಂಚರಾ ಗೋಪಾಲ ನಾಯ್ಕ ಶೇ.94.33 (ತೃತೀಯ ಸ್ಥಾನ) ಕಲಾ ವಿಭಾಗದಲ್ಲಿ ಉಷಾ ಕೃಷ್ಣ ನಾಯ್ಕ ಶೇ.94.50 (ಪ್ರಥಮ ಸ್ಥಾನ), ವಿನಯ ಶ್ರೀಧರ ಗೌಡ ಶೇ.87 (ದ್ವಿತೀಯ ಸ್ಥಾನ), ಹರೀಶ ಗೋವಿಂದ ನಾಯ್ಕ ಶೇ.82.33 (ತೃತೀಯ ಸ್ಥಾನ) ಪಡೆದಿರುತ್ತಾರೆ. ತಾಲೂಕು ಮಟ್ಟದಲ್ಲಿ ಎಸ್.ಡಿ.ಎಂ.ಕಾಲೇಜು ಗಮನಾರ್ಹ ಸಾಧನೆ ಮಾಡಿದೆ. ವಿಜ್ಞಾನ ವಿಭಾಗದಲ್ಲಿ ತಾಲೂಕು ಮಟ್ಟದಲ್ಲಿ ಮೊದಲ ಮೂರು ರ್‍ಯಾಂಕ್‌ ಹಾಗೂ ವಾಣಿಜ್ಯ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ