Davanagere: ಪಠ್ಯಪುಸ್ತಕ ಲೋಪದ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಕನಕ ಸ್ವಾಮೀಜಿ

By Govindaraj S  |  First Published Jun 27, 2022, 10:43 PM IST

ಕನಕದಾಸರ ಬಗ್ಗೆ ಒಂಭತ್ತನೆ ತರಗತಿ ಪಠ್ಯದಲ್ಲಿ ವಿಷಯಗಳನ್ನು ಕಡಿತ ಮಾಡಿರುವ ಬಗ್ಗೆ ಕಾಗಿನೆಲೆ ಶ್ರೀ ತೀವ್ರ ಅಸಮಾಧಾನಗೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸರ್ಕಾರಕ್ಕೆ ಪಠ್ಯ ಪರಿಷ್ಕರಣೆಗೆ ಒತ್ತಾಯಿಸಿದ್ದ ಸ್ವಾಮಿಜೀಗಳು ಉದ್ದಟತನವನ್ನು ಕೈಬಿಡುವಂತೆ ಎಚ್ಚರಿಸಿದ್ದರು.


ದಾವಣಗೆರೆ (ಜೂ.27): ಕನಕದಾಸರ ಬಗ್ಗೆ ಒಂಭತ್ತನೆ ತರಗತಿ ಪಠ್ಯದಲ್ಲಿ ವಿಷಯಗಳನ್ನು ಕಡಿತ ಮಾಡಿರುವ ಬಗ್ಗೆ ಕಾಗಿನೆಲೆ ಶ್ರೀ ತೀವ್ರ ಅಸಮಾಧಾನಗೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸರ್ಕಾರಕ್ಕೆ ಪಠ್ಯ ಪರಿಷ್ಕರಣೆಗೆ ಒತ್ತಾಯಿಸಿದ್ದ ಸ್ವಾಮಿಜೀಗಳು ಉದ್ದಟತನವನ್ನು ಕೈಬಿಡುವಂತೆ ಎಚ್ಚರಿಸಿದ್ದರು. ದಾರ್ಶನಿಕರ ಬಗ್ಗೆ ಸತ್ಯವಾದ ವಿಚಾರಗಳನ್ನು ಮಾತ್ರ ಹೇಳಬೇಕು ಎಂದಿದ್ದರು.

ಸಿಎಂ ಬೊ‌ಮ್ಮಾಯಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಕಾಗಿನೆಲೆ ಶ್ರೀ: ಸಿಎಂರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ ಶ್ರೀಗಳು ಅವರ ನಿಯೋಗ ಮನವಿ ಪತ್ರ ಸಲ್ಲಿಸಿದೆ. ಆ ಮನವಿಯಲ್ಲಿ ಒಕ್ಕಣೆ ಈ ರೀತಿ ಇದೆ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಕಡೆಗಣಿಸಿರುವ ಬಗ್ಗೆ. ಮೇಲ್ಕಂಡ ಗಂಭೀರ ಮತ್ತು ಗುರುತರ ವಿಷಯಕ್ಕೆ ಸಂಬಂಧಿಸಿದಂತೆ ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ಒಂಭತ್ತನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಒಂದು ಪುಟದಲ್ಲಿದ್ದ ಕನಕದಾಸರ ಜೀವನ ವಿವರಗಳನ್ನೊಳಗೊಂಡ ಪಠ್ಯ ಭಾಗವನ್ನು ಕೇವಲ ಒಂದೇ ಒಂದು ಸಾಲಿಗೆ ತಂದು ಕಡಿತಗೊಳಿಸುವ ಮೂಲಕ ಈ ನಾಡು ಕಂಡ ಅತ್ಯಂತ ಶ್ರೇಷ್ಟ ಸಂತ, ಸಾಹಿತಿ, ತತ್ವಜ್ಞಾನಿ, ಸಮಾಜ ಸುಧಾರಕ. 

Tap to resize

Latest Videos

ಕುವೆಂಪು ಕವನಗಳನ್ನು ನಾಡಗೀತೆ, ರೈತಗೀತೆ ಮಾಡಿದ್ದು ಬಿಜೆಪಿ: ಸದಾನಂದಗೌಡ

ಅಷ್ಟೆ ಅಲ್ಲದೆ ಧಾರ್ಮಿಕ ಅಂಧ ಶ್ರದ್ಧೆ, ಮೌಡ್ಯ ಮತ್ತು ತಳಸಮೂದಾಯಗಳ ಶೋಷಣೆ ವಿರುದ್ಧ ತಾತ್ವಿಕ ಮತ್ತು ಸಾತ್ವಿಕ ಹೋರಾಟ ನಡೆಸುವ ಮೂಲಕ ನೊಂದವರ ಧ್ವನಿಯಾದ ಕನಕದಾಸರ ಆದರ್ಶ ಮತ್ತು ದಾರ್ಶನಿಕ ಸತ್ಯಗಳನ್ನು ಮರೆಮಾಚುವ ದೊಡ್ಡ ಹುನ್ನಾರ ನಡೆಸುವುದು, ಹಿಂದುಳಿದ ಸಮುದಾಯಗಳನ್ನು ಒಳಗೊಂಡಂತೆ ಈ ನೆಲದ ನಾಡು-ನುಡಿಗೆ ಮಾಡಿದ ದ್ರೋಹವಾಗಿದೆ. ಮತ್ತು ಚಾರಿತ್ರಿಕ ಹಾಗೂ ಸಾಂಸ್ಕೃತಿಕ ದ್ರೋಹವಾಗಿದೆ. ಮತ್ತು ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಸತ್ಯಗಳನ್ನು ತಿರುಚುವ ಕುತಂತ್ರವನ್ನು ಖಂಡಿಸುತ್ತೇನೆ. ಪ್ರಯುಕ್ತ ಘನವೆತ್ತ ಮುಖ್ಯಮಂತ್ರಿಗಳಾದ ತಾವು ತಕ್ಷಣವೇ ಮಧ್ಯ ಪ್ರವೇಶಿಸಿ ಕನಕದಾಸ ಜೀವನ ವಿವರಗಳ ವಿಸ್ಮೃತ ನೈಜ ಸಂಗತಿಗಳನ್ನು ಹಿಂದಿನಂತೆ ಅಳವಡಿಸುವ ಲೋಪದೋಷಗಳನ್ನು ಸರಿಪಡಿಸಿ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಕೋರುತ್ತೇವೆ.

ಪಠ್ಯ ವಿವಾದದಲ್ಲಿ ರಾಜಕೀಯಕ್ಕೆ ಯತ್ನ: ಪಠ್ಯ ಪರಿಷ್ಕರಣೆಯಲ್ಲಾಗಿರುವ ಪ್ರಮಾದಗಳ ಬಗ್ಗೆ ಸಮರ್ಪಕ ಮಾಹಿತಿ ಇದ್ದಿದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಲ್ಲವೇ ಶಿಕ್ಷಣ ಸಚಿವರು ಸತ್ಯ ಸಂಗತಿಗಳನ್ನು ವಿವರಿಸಬೇಕಿತ್ತು. ಅದನ್ನು ಬಿಟ್ಟು ಶಿಕ್ಷಣ ಇಲಾಖೆಯ ಬಗ್ಗೆ ಮಾಹಿತಿಯೇ ಇಲ್ಲದ ಕಂದಾಯ ಸಚಿವ ಆರ್‌.ಅಶೋಕ್‌ ಇತರೆ ಮೂವರು ಸಚಿವರಿಂದ ಸುದ್ದಿಗೋಷ್ಠಿ ನಡೆಸಿ ಈ ವಿಚಾರವನ್ನು ರಾಜಕೀಕರಣಗೊಳಿಸುವ ಪ್ರಯತ್ನ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಪಠ್ಯ ಪರಿಷ್ಕರಣೆ ವಿವಾದ: ದೇವೇಗೌಡರ ಮನೆಗೇ ಹೋಗಿ ಪಠ್ಯ ವಿವರಣೆ ಕೊಟ್ಟಿದ್ದೇವೆ, ನಾಗೇಶ್‌

ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಎಳೆಯ ಮಕ್ಕಳ ಮನಸ್ಸುಗಳಿಗೆ ಸರ್ಕಾರ ಮತ್ತು ಸರ್ಕಾರದ ಹಿಂದೆ ಗುಪ್ತವಾಗಿ ಕೆಲಸ ಮಾಡುತ್ತಿರುವ ಸಂಘ ಪರಿವಾರ ವಿಷ ಹಾಕಲು ಹೊರಟಿವೆ. ವಿವಾದ ಪ್ರಾರಂಭವಾಗಿ ತಿಂಗಳುಗಳು ಕಳೆಯುತ್ತಿದ್ದರೂ ತಜ್ಞರ ಸಮಿತಿ ಮಾಡಿ ಸಮಸ್ಯೆಗಳೇನು ಎಂದು ಪರಿಶೀಲಿಸುವ ಬದಲಿಗೆ ರೋಹಿತ್‌ ಚಕ್ರತೀರ್ಥ ಮಾಡಿರುವ ಪ್ರಮಾದಗಳನ್ನು ಸಮರ್ಥಿಸಿಕೊಳ್ಳುವ ಬೇಜವಾಬ್ದಾರಿತನವನ್ನು ಸರ್ಕಾರ ತೋರಿಸುತ್ತಿದೆ. ಈ ವಿಚಾರದಲ್ಲಿ ದುಷ್ಟರಾಜಕಾರಣಕ್ಕೆ ಇಳಿದು ಸಂಘಿ ಫಿಲಾಸಫಿಯನ್ನು ಹೇರಲು ಸರ್ಕಾರ ಹುನ್ನಾರ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!