ಅಸ್ತಿತ್ವದಲ್ಲಿಲ್ಲದ ನರ್ಸಿಂಗ್ ಕಾಲೇಜಿಗೆ ಸೀಟು ಹಂಚಿದ ರಾಜ್ಯ ನರ್ಸಿಂಗ್ ಡಿಪ್ಲೊಮಾ ಪರೀಕ್ಷಾ ಮಂಡಳಿ!

By Suvarna News  |  First Published Feb 21, 2022, 8:54 PM IST

ಕರ್ನಾಟಕ ರಾಜ್ಯ ನರ್ಸಿಂಗ್ ಡಿಪ್ಲೊಮಾ ಪರೀಕ್ಷಾ ಮಂಡಳಿ ಎಡವಟ್ಟು ಮಾಡಿದೆ. ಅಸ್ತಿತ್ವದಲ್ಲಿಲ್ಲದ ನರ್ಸಿಂಗ್ ಕಾಲೇಜಿಗೆ ಸೀಟು ಹಂಚಿಕೆ ಮಾಡಿ, ವಿದ್ಯಾರ್ಥಿ-ಪೋಷಕರಲ್ಲಿ ಗೊಂದಲ ಮೂಡಿಸಿದೆ.


ಕಾರವಾರ(ಫೆ.21): ಆರು ವರ್ಷಗಳ ಹಿಂದೆಯೇ ಸ್ಥಳಾಂತರಗೊಂಡ ಕಾಲೇಜಿಗೆ ವಿದ್ಯಾರ್ಥಿನಿಯೊಬ್ಬರಿಗೆ ಸೀಟು ಹಂಚಿಕೆ ಮಾಡುವ ಮೂಲಕ ಕರ್ನಾಟಕ ರಾಜ್ಯ ನರ್ಸಿಂಗ್ ಡಿಪ್ಲೊಮಾ ಪರೀಕ್ಷಾ ಮಂಡಳಿ (Karnataka State Nursing and Paramedical Science Education - KSNC) ಗೊಂದಲ ಸೃಷ್ಟಿಸಿದೆ. CETಯಲ್ಲಿ ಸೀಟು ಗಿಟ್ಟಿಸಿಕೊಂಡ ಜೋಯಿಡಾದ ಪ್ರವೀಣಾ ಶಶಿಕಾಂತ ಗಾವಡಾ ಅವರಿಗೆ ಕಾರವಾರದ ಅರ್ಪಿತಾ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ (Arpita School of Nursing) ಸೀಟು ನಿಗದಿಪಡಿಸಿದ್ದಾಗಿ ಮಂಡಳಿಯು ಪತ್ರ ನೀಡಿದೆ. ಈ ಪತ್ರದೊಂದಿಗೆ ಬಂದ ವಿದ್ಯಾರ್ಥಿನಿ ನಗರದಲ್ಲಿ ಹುಡುಕಾಟ ನಡೆಸಿದಾಗ ಆ ಹೆಸರಿನ ಸಂಸ್ಥೆಯೇ ಇಲ್ಲದಿರುವುದು ಬೆಳಕಿಗೆ ಬಂದಿದೆ. ಇದರಿಂದ ವಿದ್ಯಾರ್ಥಿನಿ ಮತ್ತು ಆಕೆಯ ಪಾಲಕರು ಕಂಗಾಲಾಗಿದ್ದಾರೆ.

ಇದು ಈ ಹಿಂದೆಯೂ ನಡೆದಿದ್ದು, ಯಾವಾಗಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಇಲ್ಲಿನ ಸಾಮಾಜಿಕ ಕಾರ್ಯಕರ್ತ ಮಾಧವ್‌ ನಾಯ್ಕ್‌ ಪ್ರಶ್ನಿಸಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಂಗಳೂರಿಗೆ ಹೋಗಿ ಕೌನ್ಸೆಲಿಂಗ್ ಮುಗಿಸಿ ಬಂದಿದ್ದೇವೆ. ಇಲ್ಲದ ಕಾಲೇಜಿಗೆ ಸೀಟು ಹಂಚಿಕೆ ಮಾಡಿದ್ದರಿಂದ ಸಮಸ್ಯೆ ಆಗಿದೆ’ ಎಂದು ವಿದ್ಯಾರ್ಥಿನಿಯ ಪೋಷಕರು ಹೇಳಿದ್ದಾರೆ. 

Tap to resize

Latest Videos

ಏಳು ವರ್ಷಗಳ ಹಿಂದೆಯೇ ಸಂಸ್ಥೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಿದ್ದೇವೆ. ಈ ಬಗ್ಗೆ ಮಂಡಳಿಗೆ ಪತ್ರವನ್ನೂ ನೀಡಿದ್ದೇವೆ. ನಿರ್ದೇಶಕರಿಗೂ ಮಾಹಿತಿ ನೀಡಲಾಗಿದೆ. ಪಟ್ಟಿಯಿಂದ ಕೈಬಿಡದಿರುವುದು ಮಂಡಳಿಯವರ ತಪ್ಪು’ ಎಂದು ಅರ್ಪಿತಾ ನರ್ಸಿಂಗ್ ಕಾಲೇಜ್ ಅಧ್ಯಕ್ಷ  ಎಸ್.ಆರ್.ದೇಸಾಯಿ (SR Desai) ಹೇಳಿದ್ದಾರೆ.

DAVANAGERE CHILD MARRIAGE: ದಾವಣಗೆರೆಯಲ್ಲಿ ಬಾಲ್ಯ ವಿವಾಹದಿಂದ 5ನೇ ತರಗತಿ ವಿದ್ಯಾರ್ಥಿಯನ್ನು ಕಾಪಾಡಿದ ಶಿಕ್ಷಕರು

ಬೆಂಗಳೂರಿನ ಎನ್‌ಜಿಒ ನಿಂದ ಮೈಸೂರಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ನವೀಕರಣ!: ಹಲವು ವರ್ಷಗಳಿಂದ ನಿರಂತರವಾಗಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು (Primary school) ಧಾರೆ ಎರೆದ ಶಾಲೆ ಅದು. ಆದರೆ, 45 ವರ್ಷಗಳಿಂದ ಶಿಥಿಲ ಸ್ಥಿತಿಯಲ್ಲಿರುವ ಈ ಜ್ಞಾನ ದೇಗುಲ, ಮಕ್ಕಳು (Students) ಜ್ಞಾನಾರ್ಜನೆ ಮಾಡಲು ಸಾಧ್ಯವಾಗದಂತಹ ದಯನೀಯ ಸ್ಥಿತಿಗೆ ತಲುಪಿತ್ತು. ಅಂತಹ ದೇಗುಲಕ್ಕೆ ಆಸರೆಯಾಗಿ ನಿಂತಿದ್ದು ಬೆಂಗಳೂರು ಮೂಲದ 'ಉಪ್ಕೃತಿ' ( Upkriti)  ಎಂಬ ಸ್ವಯಂ ಸೇವಾ ಸಂಸ್ಥೆ (Non-governmental organizations). ಮೂರು ಕೊಠಡಿಗಳಿರುವ ಈ ಶಾಲೆಯು ಕಳೆದ 45 ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿತ್ತು. ಇದೀಗ ಶಾಲೆಯನ್ನು 'ಉಪ್ಕೃತಿ' ಎಂಬ ಸ್ವಯಂ ಸೇವಾ ಸಂಸ್ಥೆ ನವೀಕರಣಗೊಳಿಸಿದ್ದು, ಶೌಚಾಲಯ ವ್ಯವಸ್ಥೆಯನ್ನೂ ಕಲ್ಪಿಸಿದೆ.

ಬುಡಕಟ್ಟು ಕಲ್ಯಾಣ ಯೋಜನೆಗಳಲ್ಲಿ ಕೆಲಸ ಮಾಡುವ ಬೆಂಗಳೂರು ಮೂಲದ ಎನ್‌ಜಿಒ ಉಪಕೃತಿ ಈ ಕಾರ್ಯವನ್ನು ಮಾಡಿದೆ. ಎನ್'ಜಿಎ ಸಂಸ್ಥೆಯ ಈ ಕಾರ್ಯದಿಂದ ಸರ್ಕಾರದ ಹಲವು ವರ್ಷಗಳ ನಿರ್ಲಕ್ಷ್ಯಯುತ ಕಾರ್ಯ ಬೆಳಕಿಗೆ ಬಂದಿದೆ. 

IRCON RECRUITMENT 2022: ಇಂಜಿನಿಯರಿಂಗ್ ಪದವೀಧರರಿಗೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಅವಕಾಶ

ಶಾಲೆಗೆ ಬಣ್ಣ ಬಳಿದು ಹಲವು ವರ್ಷಗಳಾಗಿದ್ದು, ಮಳೆಗಾಲದಲ್ಲಿ ಗೋಡೆಗಳ ಮೂಲಕ ನೀರು ನುಗ್ಗಿ ಬಿರುಕು ಬಿಟ್ಟುಕೊಂಡಿರುವುದು ಕಂಡು ಬಂದಿತ್ತು. ಶಾಲೆಯಲ್ಲಿ ಎರಡು ಶೌಚಾಲಯಗಳಿದ್ದು, ಶೌಚಾಲಯದಲ್ಲಿ ಸಾಕಷ್ಟು ಗುಂಡಿಗಳು ಕಂಡು ಬಂದಿತ್ತು. ಇದೀಗ ಗೋಡೆಗಳ ಬಿರುಕುಗಳನ್ನು ಮುಚ್ಚಿ, ಚಿತ್ರಗಳು, ಸಂದೇಶಗಳ ಮೂಲಕ ಆಕರ್ಷಕ ರೀತಿಯಲ್ಲಿ ಬಣ್ಣಗಳನ್ನು ಬಳಿಯಲಾಗಿದ್ದು, ಮತ್ತೊಂದು ಹೊಸ ಶೌಚಾಲಯಯ ನಿರ್ಮಾಣದ ಜೊತೆಗೆ ಇದ್ದ ಶೌಚಾಲಯಗಳನ್ನು ಮರು ನಿರ್ಮಾಣ ಮಾಡಲಾಗಿದೆ ಎಂದು ಉಪ್ಕೃತಿಸಂಸ್ಥಾಪಕ ಚಂದನ್ ಗೌಡ ಅವರು ಹೇಳಿದ್ದಾರೆ.

ಆಟೋಮೇಷನ್ ಎಂಜಿನಿಯರ್‌ಗಳು, ವಕೀಲರು, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ವಿಶ್ಲೇಷಕರು ಸೇರಿದಂತೆ ಸುಮಾರು 17 ಸ್ವಯಂಸೇವಕರನ್ನು ಒಳಗೊಂಡ ಎನ್'ಜಿಒ ತಂಡ ಶಾಲೆಯನ್ನು ನವೀಕರಿಸಿದೆ. ಶಾಲೆಗೆ ವೃತ್ತಿಪರ ವರ್ಣಚಿತ್ರಕಾರರ ಮೂಲಕ ವಾಟರ್ ಪ್ರೂಫ್ ಬಣ್ಣಗಳೊಂದಿಗೆ ವರ್ಣರಂಚಿತ ಭಿತ್ತಿಚಿತ್ರಗಳನ್ನು ರಚಿಸಲಾಗಿದೆ. 

click me!