50 Year Old Seeks MBBS Course: 50ನೇ ವಯಸ್ಸಿನಲ್ಲಿ ಮೆಡಿಕಲ್ ಓದಬೇಕೆಂದು ಕೋರ್ಟ್‌ಗೆ ಮೊರೆ ಹೋದ!

Suvarna News   | Asianet News
Published : Feb 21, 2022, 04:12 PM ISTUpdated : Feb 21, 2022, 04:13 PM IST
50 Year Old Seeks MBBS Course: 50ನೇ ವಯಸ್ಸಿನಲ್ಲಿ ಮೆಡಿಕಲ್ ಓದಬೇಕೆಂದು ಕೋರ್ಟ್‌ಗೆ ಮೊರೆ ಹೋದ!

ಸಾರಾಂಶ

*1988ರಲ್ಲಿ ಅರ್ಧಕ್ಕೆ ಮೊಟಕುಗೊಂಡಿದ್ದ ವೈದ್ಯಕೀಯ ಶಿಕ್ಷಣ ಮುಂದುವರಿಸಲು ಮುಂದಾದ ಕಂದೀಪ್ ಜೋಶಿ *ಬಾಕಿ ಉಳಿದಿರುವ ಒಂದು ವರ್ಷದ ಎಂಬಿಬಿಎಸ್ ಕೋರ್ಸ್ ಪೂರ್ತಿಗೊಳಿಸಲು ಅವಕಾಶ ಕೇಳಿದ 50 ವರ್ಷದ ವ್ಯಕ್ತಿ *ಈ ವಯಸ್ಸಿನಲ್ಲಿ ವೈದ್ಯಕೀಯ ಶಿಕ್ಷಣಗೆ ಅವಕಾಶವಿಲ್ಲ ಎಂದು ಹೇಳಿದ ಗುಜರಾತ್ ಹೈಕೋರ್ಟ್

ಗುಜರಾತ್‌(ಫೆ.21): ವಿದ್ಯೆ(Education)ಗೆ ವಯಸ್ಸಿನ ಬೇಧ ಭಾವ ಇಲ್ಲ. ಓದುವ ಹಂಬಲವಿದ್ದರೆ ಸಾಕು, ಯಾವುದೇ ವಯಸ್ಸಿನಲ್ಲಿ ಬೇಕಾದ್ರೂ ವಿದ್ಯಾಭ್ಯಾಸ ಮಾಡಬಹುದು. ಇಳಿ ವಯಸ್ಸಿನಲ್ಲಿ ಓದಿದವರ ಬಗ್ಗೆ, ನೂರು ವರ್ಷ ತುಂಬಿದ ಶತಾಯುಷಿ ಪರೀಕ್ಷೆ ಬರೆದಂತಹ ಸುದ್ದಿಗಳನ್ನು ಆಗಾಗ ಕೇಳ್ತಾನೆ ಇರ್ತೀವಿ. ಅಂಥದ್ದೇ  ವಿಚಿತ್ರ ಪ್ರಕರಣವೊಂದು ಈಗ ಕೋರ್ಟ್ ಮೆಟ್ಟಿಲೇರಿದೆ. ಹೌದು, 50 ವರ್ಷದ ವ್ಯಕ್ತಿಯೊಬ್ಬರು ಮೆಡಿಕಲ್ (Medical Education) ಓದಬೇಕೆಂಬ ಮಹದಾಸೆಯಿಂದ ಕೋರ್ಟ್ ಮೊರೆ ಹೋಗಿದ್ದಾರೆ.

ಗುಜರಾತಿನ (Gujarat) ವ್ಯಕ್ತಿ 30 ವರ್ಷಗಳ ನಂತರ MBBS ಕೋರ್ಸ್‌ ಸೇರಲು ಬಯಸುತ್ತಿದ್ದಾರೆ. ಬರೋಬ್ಬರಿ ಮೂರು ದಶಕಗಳ ನಂತರ 50 ವರ್ಷದ ಈ ವ್ಯಕ್ತಿ, ಎಂಬಿಬಿಎಸ್ ಕೋರ್ಸ್‌ಗೆ ಮರುಪ್ರವೇಶ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮೊನ್ನೆ ಬುಧವಾರ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಗುಜರಾತ್ ಹೈಕೋರ್ಟ್ ಅರ್ಜಿದಾರರಿಗೆ ತನ್ನ ಇಚ್ಛೆಯಂತೆ ವರ್ತಿಸಲು ಮತ್ತು ಜನರ ಜೀವನದ ಜೊತೆ ಆಟವಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿದೆ.

1988 ರಲ್ಲಿ ಬರೋಡಾ ವೈದ್ಯಕೀಯ ಕಾಲೇಜಿ (Baroda Medical Collage) ನಲ್ಲಿ ಕಂದೀಪ್ ಜೋಶಿ (Kandip Joshi) ಎರಡನೇ ವರ್ಷದ ಎಂಬಿಬಿಎಸ್ (MBBS) ಪರೀಕ್ಷೆಗೆ ಹಾಜರಾಗಿದ್ದರು. ನಂತರ ವೈಯಕ್ತಿಕ ಕಾರಣಗಳಿಂದ ಹೊರಗುಳಿದಿದ್ದ ಕಂದೀಪ್ ಜೋಶಿ ಎಂಬುವರು ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿ ಭಾರ್ಗವ್ ಡಿ ಕರಿಯಾ ಅವರ ನೇತೃತ್ವದ ಪೀಠ ವಿಚಾರಣೆ ನಡೆಸುತ್ತಿದೆ.

Karnataka Admin Reforms Panel: ನಾನ್‌ ಗೆಜೆಟೆಡ್‌ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವಂತೆ ಶಿಫಾರಸು

ಪ್ರಸ್ತುತ ಕೆಲವು ವ್ಯವಹಾರದಲ್ಲಿ ತೊಡಗಿರುವ ಅರ್ಜಿದಾರರು ತಮ್ಮ ಮೂರನೇ ವರ್ಷದ ಎಂಬಿಬಿಎಸ್ ಕೋರ್ಸ್ ಅನ್ನು ಮುಂದುವರಿಸಲು ಬಯಸಿದ್ದರು. 30 ವರ್ಷಗಳ ನಂತರ ಅದೇ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾಗಲು ಬಯಸಿದ್ದರು ಎಂದು ಅವರ ಪರ ವಕೀಲ ಶ್ರೀಜೋಶಿ ನ್ಯಾಯಾಲಯಕ್ಕೆ ತಿಳಿಸಿದ್ರು. ಈ ವೇಳೆ ಪ್ರತಿಕ್ರಿಯಿಸಿದ ಕೋರ್ಟ್,  ಅವರ ಜೀವನದಲ್ಲಿ ಈ ಹಂತದಲ್ಲಿ ಎಂಬಿಬಿಎಸ್ ಕೋರ್ಸ್ ಅನ್ನು ಏಕೆ ಮುಂದುವರಿಸಬೇಕು ಎಂದು ಪ್ರಶ್ನಿಸಿದೆ.

 ಅಷ್ಟೇ ಅಲ್ಲ, ಅವರು ಇಷ್ಟು ವರ್ಷ ಯಾಕೆ ಸಮಯ ವ್ಯರ್ಥ ಮಾಡಿದ್ದಾರೆ..  ಅವರು 50 ನೇ ವಯಸ್ಸಿನಲ್ಲಿ ಇಂಟರ್ನ್‌ಶಿಪ್ ಮಾಡಬಹುದೇ? ಅದು ಸಾಧ್ಯವಿಲ್ಲ. ಎಷ್ಟು ಮಕ್ಕಳಿದ್ದಾರೆ ಅವರಿಗೆ? 50 ನೇ ವಯಸ್ಸಿನಲ್ಲಿ, ಅವರು ಮಕ್ಕಳನ್ನು ಎಂಬಿಬಿಎಸ್ ಕೋರ್ಸ್ ಗೆ ಸೇರಿಸುವ  ವಯಸ್ಸು. ಅವರು ತಮ್ಮ ಮಕ್ಕಳೊಂದಿಗೆ ಕೋರ್ಸ್‌ಗಾಗಿ ಓದುತ್ತಾನೆಯೇ?" ಎಂದು ನ್ಯಾಯಮೂರ್ತಿ ಕರಿಯಾ ಪ್ರಶ್ನಿಸಿದ್ದಾರೆ. ಒಂದು ವೇಳೆ ಅರ್ಜಿದಾರರು ಪರೀಕ್ಷೆಗೆ ಹಾಜರಾಗಿದ್ದರೆ ಅನುತ್ತೀರ್ಣರಾಗುತ್ತಾರೆ ಎಂದು ಕೋರ್ಟ್ (Court) ಹೇಳಿದೆ. ಈ ವೇಳೆ ಅರ್ಜಿದಾರರ ಪರ ವಕೀಲರು (Lawyer), ಅರ್ಜಿದಾರರು ಪರೀಕ್ಷೆಯನ್ನು ತೆಗೆದುಕೊಳ್ಳುವ ಮೊದಲು ಮೂರನೇ ವರ್ಷದ ಕೋರ್ಸ್ ಅನ್ನು ಅಧ್ಯಯನ ಮಾಡಲು ಕೋರಿದ್ದಾರೆ ಎಂದು ವಾದಿಸಿದ್ರು. ಆಗ ಅಂತಹ ಅನುಮತಿಯನ್ನು ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಕಳೆದ ಮೂರು ದಶಕಗಳಲ್ಲಿ ವೈದ್ಯಕೀಯ ವಿಜ್ಞಾನದ ಪ್ರಗತಿಯೊಂದಿಗೆ ಪಠ್ಯಕ್ರಮವು ಹಲವಾರು ಬಾರಿ ಬದಲಾಗಿದೆ ಅನ್ನೋದನ್ನ ಕೋರ್ಟ್  ಗಮನಿಸಿದೆ. "ನೀವು ಮೊದಲ ಮತ್ತು ಎರಡನೇ ವರ್ಷದ ಎಂಬಿಬಿಎಸ್ ಪರೀಕ್ಷೆಗಳಿಗೆ ಹಾಜರಾದ ಕೋರ್ಸ್ ಅಸ್ತಿತ್ವದಲ್ಲಿಲ್ಲ. ಹೀಗಾಗಿ ಮೂರನೇ ವರ್ಷಕ್ಕೆ ನಿಮಗೆ ಅನುಮತಿ ನೀಡುವ ಪ್ರಶ್ನೆ ಎಲ್ಲಿದೆ?" ಎಂದು ನ್ಯಾಯಮೂರ್ತಿ ಕರಿಯಾ ಪ್ರಶ್ನಿಸಿದ್ದಾರೆ.

 IRCON RECRUITMENT 2022: ಇಂಜಿನಿಯರಿಂಗ್ ಪದವೀಧರರಿಗೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಅವಕಾಶ

 2013 ರಲ್ಲೇ ಅರ್ಜಿದಾರರು ಮೂರನೇ ವರ್ಷದ ಅಡ್ಮಿಷನ್ ಕೋರಿ ವಡೋದರಾದ ವೈದ್ಯಕೀಯ ಕಾಲೇಜಿನ ಡೀನ್ ಅನ್ನು ಸಂಪರ್ಕಿಸಿದ್ದರು. ಆದ್ರೆ ಈಗಾಗಲೇ 31 ವರ್ಷಗಳು ಕಳೆದಿವೆ ಎಂದು  ಹೇಳಿ ಪ್ರವೇಶ ನಿರಾಕರಿಸಿತ್ತು. ನಂತರ ಅವರು ನ್ಯಾಯಾಲಯವನ್ನು ಸಂಪರ್ಕಿಸಿದರು. 2019 ರಲ್ಲಿ ಕೋರ್ಟ್,ಅವರ ಮನವಿಯನ್ನು ವಜಾಗೊಳಿಸಿತು. ಆದ್ರೆ ಭಾರತೀಯ ವೈದ್ಯಕೀಯ ಮಂಡಳಿಯನ್ನು (MCI) ಸಂಪರ್ಕಿಸಲು ಸ್ವಾತಂತ್ರ್ಯವನ್ನು ನೀಡಿತು.  ಆನಂತರ ಅರ್ಜಿದಾರರು, ಭಾರತೀಯ ವೈದ್ಯಕೀಯ ಮಂಡಳಿಯನ್ನು ಸಂಪರ್ಕಿಸಿದಾಗ, " ಸ್ಥಗಿತಗೊಂಡ ಅವಧಿಯಿಂದ ಐದು ವರ್ಷಗಳವರೆಗೆ ಮಾತ್ರ ಅನುಮತಿಗೆ ಅವಕಾಶ ಇರುತ್ತದೆ ಎಂದು ಹೇಳಿ ಅವರ ವಿನಂತಿಯನ್ನು ತಿರಸ್ಕರಿಸಿತು ಎಂದು ಕೋರ್ಟ್ ಗೆ ವಕೀಲರು ವಿವರಣೆ ನೀಡಿದರು.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ