NGO Renovate HD Kote Rural School: ಬೆಂಗಳೂರಿನ ಎನ್‌ಜಿಒ ನಿಂದ ಮೈಸೂರಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ನವೀಕರಣ!

By Suvarna News  |  First Published Feb 21, 2022, 5:02 PM IST

45 ವರ್ಷಗಳಿಂದ ಶಿಥಿಲ ಸ್ಥಿತಿಯಲ್ಲಿದ್ದ ಎಚ್.ಡಿ.ಕೋಟೆಯಲ್ಲಿನ ಶಾಲೆಯೊಂದನ್ನು ಬೆಂಗಳೂರು ಮೂಲದ 'ಉಪ್ಕೃತಿ' ಎಂಬ ಸ್ವಯಂ ಸೇವಾ ಸಂಸ್ಥೆ ನವೀಕರಣ ಮಾಡಿದೆ.  ಶೌಚಾಲಯ ವ್ಯವಸ್ಥೆಯನ್ನೂ ಕಲ್ಪಿಸಿದೆ.


ಹೆಚ್‌ಡಿ ಕೋಟೆ(ಫೆ21): ಹಲವು ವರ್ಷಗಳಿಂದ ನಿರಂತರವಾಗಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು (Primary school) ಧಾರೆ ಎರೆದ ಶಾಲೆ ಅದು. ಆದರೆ, 45 ವರ್ಷಗಳಿಂದ ಶಿಥಿಲ ಸ್ಥಿತಿಯಲ್ಲಿರುವ ಈ ಜ್ಞಾನ ದೇಗುಲ, ಮಕ್ಕಳು (Students) ಜ್ಞಾನಾರ್ಜನೆ ಮಾಡಲು ಸಾಧ್ಯವಾಗದಂತಹ ದಯನೀಯ ಸ್ಥಿತಿಗೆ ತಲುಪಿತ್ತು. ಅಂತಹ ದೇಗುಲಕ್ಕೆ ಆಸರೆಯಾಗಿ ನಿಂತಿದ್ದು ಬೆಂಗಳೂರು ಮೂಲದ 'ಉಪ್ಕೃತಿ' ( Upkriti)  ಎಂಬ ಸ್ವಯಂ ಸೇವಾ ಸಂಸ್ಥೆ (Non-governmental organizations). ಮೂರು ಕೊಠಡಿಗಳಿರುವ ಈ ಶಾಲೆಯು ಕಳೆದ 45 ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿತ್ತು. ಇದೀಗ ಶಾಲೆಯನ್ನು 'ಉಪ್ಕೃತಿ' ಎಂಬ ಸ್ವಯಂ ಸೇವಾ ಸಂಸ್ಥೆ ನವೀಕರಣಗೊಳಿಸಿದ್ದು, ಶೌಚಾಲಯ ವ್ಯವಸ್ಥೆಯನ್ನೂ ಕಲ್ಪಿಸಿದೆ.

ಬುಡಕಟ್ಟು ಕಲ್ಯಾಣ ಯೋಜನೆಗಳಲ್ಲಿ ಕೆಲಸ ಮಾಡುವ ಬೆಂಗಳೂರು ಮೂಲದ ಎನ್‌ಜಿಒ ಉಪಕೃತಿ ಈ ಕಾರ್ಯವನ್ನು ಮಾಡಿದೆ. ಎನ್'ಜಿಎ ಸಂಸ್ಥೆಯ ಈ ಕಾರ್ಯದಿಂದ ಸರ್ಕಾರದ ಹಲವು ವರ್ಷಗಳ ನಿರ್ಲಕ್ಷ್ಯಯುತ ಕಾರ್ಯ ಬೆಳಕಿಗೆ ಬಂದಿದೆ. 

Tap to resize

Latest Videos

undefined

ಶಾಲೆಗೆ ಬಣ್ಣ ಬಳಿದು ಹಲವು ವರ್ಷಗಳಾಗಿದ್ದು, ಮಳೆಗಾಲದಲ್ಲಿ ಗೋಡೆಗಳ ಮೂಲಕ ನೀರು ನುಗ್ಗಿ ಬಿರುಕು ಬಿಟ್ಟುಕೊಂಡಿರುವುದು ಕಂಡು ಬಂದಿತ್ತು. ಶಾಲೆಯಲ್ಲಿ ಎರಡು ಶೌಚಾಲಯಗಳಿದ್ದು, ಶೌಚಾಲಯದಲ್ಲಿ ಸಾಕಷ್ಟು ಗುಂಡಿಗಳು ಕಂಡು ಬಂದಿತ್ತು. ಇದೀಗ ಗೋಡೆಗಳ ಬಿರುಕುಗಳನ್ನು ಮುಚ್ಚಿ, ಚಿತ್ರಗಳು, ಸಂದೇಶಗಳ ಮೂಲಕ ಆಕರ್ಷಕ ರೀತಿಯಲ್ಲಿ ಬಣ್ಣಗಳನ್ನು ಬಳಿಯಲಾಗಿದ್ದು, ಮತ್ತೊಂದು ಹೊಸ ಶೌಚಾಲಯಯ ನಿರ್ಮಾಣದ ಜೊತೆಗೆ ಇದ್ದ ಶೌಚಾಲಯಗಳನ್ನು ಮರು ನಿರ್ಮಾಣ ಮಾಡಲಾಗಿದೆ ಎಂದು ಉಪ್ಕೃತಿಸಂಸ್ಥಾಪಕ ಚಂದನ್ ಗೌಡ ಅವರು ಹೇಳಿದ್ದಾರೆ. 

50 YEAR OLD SEEKS MBBS COURSE: 50ನೇ ವಯಸ್ಸಿನಲ್ಲಿ ಮೆಡಿಕಲ್ ಓದಬೇಕೆಂದು ಕೋರ್ಟ್‌ಗೆ ಮೊರೆ ಹೋದ!

ಆಟೋಮೇಷನ್ ಎಂಜಿನಿಯರ್‌ಗಳು, ವಕೀಲರು, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ವಿಶ್ಲೇಷಕರು ಸೇರಿದಂತೆ ಸುಮಾರು 17 ಸ್ವಯಂಸೇವಕರನ್ನು ಒಳಗೊಂಡ ಎನ್'ಜಿಒ ತಂಡ ಶಾಲೆಯನ್ನು ನವೀಕರಿಸಿದೆ. ಶಾಲೆಗೆ ವೃತ್ತಿಪರ ವರ್ಣಚಿತ್ರಕಾರರ ಮೂಲಕ ವಾಟರ್ ಪ್ರೂಫ್ ಬಣ್ಣಗಳೊಂದಿಗೆ ವರ್ಣರಂಚಿತ ಭಿತ್ತಿಚಿತ್ರಗಳನ್ನು ರಚಿಸಲಾಗಿದೆ. 

"ನಾವು ಬಹಳಷ್ಟು ಪರಿಸರ ಮತ್ತು ಮಾಲಿನ್ಯ-ಸಂಬಂಧಿತ ಕಲಾಕೃತಿಗಳನ್ನು ಪರಿಚಯಿಸಿದ್ದೇವೆ, ಜೊತೆಗೆ ಮಕ್ಕಳಿಗೆ ಶಿಕ್ಷಣ ನೀಡಲು ಸಹಾಯ ಮಾಡಲು ವಿಜ್ಞಾನ ಮತ್ತು ಇತರ ವಿಷಯಗಳನ್ನು ಪರಿಚಯಿಸಿದ್ದೇವೆ. ವರ್ಣರಂಜಿತ ಕೆಲಸವು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಪ್ರೋತ್ಸಾಹಿಸುತ್ತದೆ ಮತ್ತು ಉತ್ತಮ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಚಂದನ್ ಗೌಡ ಅವರು ಹೇಳಿದ್ದಾರೆ. 

ಶಾಲೆಗೆ ಬಣ್ಣ ಬಳಿದು ಹಲವು ವರ್ಷಗಳಾಗಿದ್ದು, ಮಳೆಗಾಲದಲ್ಲಿ ಗೋಡೆಗಳ ಮೂಲಕ ನೀರು ನುಗ್ಗಿ ಬಿರುಕು ಬಿಟ್ಟುಕೊಂಡಿರುವುದು ಕಂಡು ಬಂದಿತ್ತು. ಶಾಲೆಯಲ್ಲಿ ಎರಡು ಶೌಚಾಲಯಗಳಿದ್ದು, ಶೌಚಾಲಯದಲ್ಲಿ ಸಾಕಷ್ಟು ಗುಂಡಿಗಳು ಕಂಡು ಬಂದಿತ್ತು. ಇದೀಗ ಗೋಡೆಗಳ ಬಿರುಕುಗಳನ್ನು ಮುಚ್ಚಿ, ಚಿತ್ರಗಳು, ಸಂದೇಶಗಳ ಮೂಲಕ ಆಕರ್ಷಕ ರೀತಿಯಲ್ಲಿ ಬಣ್ಣಗಳನ್ನು ಬಳಿಯಲಾಗಿದ್ದು, ಮತ್ತೊಂದು ಹೊಸ ಶೌಚಾಲಯಯ ನಿರ್ಮಾಣದ ಜೊತೆಗೆ ಇದ್ದ ಶೌಚಾಲಯಗಳನ್ನು ಮರು ನಿರ್ಮಾಣ ಮಾಡಲಾಗಿದೆ ಎಂದು ಉಪ್ಕೃತಿ ಸಂಸ್ಥಾಪಕ ಚಂದನ್ ಗೌಡ ಅವರು ಹೇಳಿದ್ದಾರೆ. 

ಆಟೋಮೇಷನ್ ಎಂಜಿನಿಯರ್‌ಗಳು, ವಕೀಲರು, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ವಿಶ್ಲೇಷಕರು ಸೇರಿದಂತೆ ಸುಮಾರು 17 ಸ್ವಯಂಸೇವಕರನ್ನು ಒಳಗೊಂಡ ಎನ್'ಜಿಒ ತಂಡ ಶಾಲೆಯನ್ನು ನವೀಕರಿಸಿದೆ. ಶಾಲೆಗೆ ವೃತ್ತಿಪರ ವರ್ಣಚಿತ್ರಕಾರರ ಮೂಲಕ ವಾಟರ್ ಪ್ರೂಫ್ ಬಣ್ಣಗಳೊಂದಿಗೆ ವರ್ಣರಂಚಿತ ಭಿತ್ತಿಚಿತ್ರಗಳನ್ನು ರಚಿಸಲಾಗಿದೆ. 

"ನಾವು ಬಹಳಷ್ಟು ಪರಿಸರ ಮತ್ತು ಮಾಲಿನ್ಯ-ಸಂಬಂಧಿತ ಕಲಾಕೃತಿಗಳನ್ನು ಪರಿಚಯಿಸಿದ್ದೇವೆ, ಜೊತೆಗೆ ಮಕ್ಕಳಿಗೆ ಶಿಕ್ಷಣ ನೀಡಲು ಸಹಾಯ ಮಾಡಲು ವಿಜ್ಞಾನ ಮತ್ತು ಇತರ ವಿಷಯಗಳನ್ನು ಪರಿಚಯಿಸಿದ್ದೇವೆ. ವರ್ಣರಂಜಿತ ಕೆಲಸವು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಪ್ರೋತ್ಸಾಹಿಸುತ್ತದೆ ಮತ್ತು ಉತ್ತಮ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಚಂದನ್ ಗೌಡ ಅವರು ಹೇಳಿದ್ದಾರೆ. 

ಡಿಜಿಟಲ್ ಲ್ಯಾಬ್ ಮತ್ತು ಡೈನಿಂಗ್ ಹಾಲ್‌ನ ಕಾಮಗಾರಿ ಮಾರ್ಚ್‌ನಲ್ಲಿ ಆರಂಭವಾಗಲಿದೆ. ಲ್ಯಾಬ್ ಗಳಲ್ಲಿ ಕಂಪ್ಯೂಟರ್‌ಗಳನ್ನು ಇಡಲಾಗುತ್ತದೆ. ಇದು ಮಕ್ಕಳ ಹೆಚ್ಚಿನ ಕಲಿಕೆಗೆ ಸಹಾಯ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ. 

Menase School: ಶೃಂಗೇರಿಯ ಮೆಣಸೆಯಲ್ಲಿ ಹೈಟೆಕ್ ಸರಕಾರಿ ಶಾಲೆ

ವಾಟರ್ ಪ್ರೂಫ್ ಪೇಂಟ್ ಹಾಗೂ ಚಿತ್ರಕಲೆಗೆ ಒಟ್ಟು ವೆಚ್ಚ ರೂ.1.2 ಲಕ್ಷ ಆಗಿದೆ. ಶೌಚಾಲಯ ಮರುನಿರ್ಮಾಣಕ್ಕೆ ಶಿಕ್ಷಣ ಇಲಾಖೆ ರೂ.12,000 ಮಂಜೂರು ಮಾಡಿದೆ. ಆದರೆ, ನಾವು ಶೌಚಾಲಯವನ್ನು ಕಮೋಡ್, ವಾಷ್ ಬೇಸಿನ್, ಟೈಲ್ಸ್ ಗಳನ್ನು ಅಳವಡಿಸಲಾಗಿರುವ ಹಿನ್ನೆಲೆಯಲ್ಲಿ ವೆಚ್ಚ ಹೆಚ್ಚಾಗಿದೆ. ಶೌಚಾಲಯದ ಸಂಪೂರ್ಣ ನಿರ್ಮಾಣದ ವೆಚ್ಚವನ್ನು ಪ್ರಾಯೋಜಿಸುವುದಾಗಿ ಮೈಸೂರು ಮೂಲದ ದಂಪತಿಗಳು ಹೇಳಿದ್ದಾರೆ. ಸಂಪೂರ್ಣ ನವೀಕೃತ ಶೌಚಾಲಯವನ್ನು ಒದಗಿಸುತ್ತಿದ್ದೇವೆಂದು ತಿಳಿಸಿದ್ದಾರೆ. 

ಈ ವರ್ಷ ಕನಿಷ್ಠ 10 ಇತರ ಗ್ರಾಮೀಣ ಶಾಲೆಗಳನ್ನು ನವೀಕರಿಸಲು ಗುರಿ ಹೊಂದಲಾಗಿದೆ. ಪಡುಕೋಟೆಯಲ್ಲಿರುವ ಶಾಲೆಯು ಸಮೂಹದ ಭಾಗವಾಗಿ ಕಾರ್ಯನಿರ್ವಹಿಸುತ್ತದೆ, ಇದರ ಅಡಿಯಲ್ಲಿ ಇತರ ಏಳು ಶಾಲೆಗಳಲ್ಲಿ ಕಾರ್ಯನಿರ್ವಹಿಸಲಾಗುತ್ತದೆ. ಈ ಶಾಲೆಯ ಮರು ನಿರ್ಮಾಣ ಕಾರ್ಯ ಆರಂಭವಾಗುತ್ತಿದ್ದಂತೆಯೇ ಇತರೆ ಶಾಲೆಗಳೂ ಕೂಡ ನಮ್ಮನ್ನು ಸಂಪರ್ಕಿಸಿವೆ. ಶಾಲೆಯಲ್ಲಿ ಮೂಲಭೂತ ಸೌಕರ್ಯ ಸಮಸ್ಯೆಗಳಿರುವುದಾಗಿ ತಿಳಿಸಿವೆ. 

“ಇತರ ಶಾಲೆಗಳಲ್ಲಿನ ಶೌಚಾಲಯಗಳು ತುಂಬಾ ಕೆಟ್ಟದಾಗಿದೆ, ಎಲ್ಲರೂ ಒಂದೇ ಶೌಚಾಲಯವನ್ನು ಬಳಸುವಂತಾಗಿದೆ. ಕೆಲವು ಶಾಲೆಗಳಲ್ಲಿ ಮೇಲ್ಛಾವಣಿಯಿಲ್ಲದೆ ಗೋಡೆಗಳು ತಗ್ಗಿದ್ದು ಶೌಚಾಲಯ ಬಳಕೆ ಮಾಡುವ ವೇಳೆ ಇತರರಿಗೆ ಕಾಣುವಂತಾಗಿದೆ. ಇಂತಹ ಪರಿಸ್ಥಿತಿ ಯುವತಿಯರಿಗೆ ಸಂಕಷ್ಟವನ್ನು ಎದುರು ಮಾಡಿದೆ. ಪಡುಕೋಟೆ ಶಾಲೆಯ ಕಾಮಗಾರಿಯು ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದ್ದು, ಭಾರೀ ಮಳೆಯಿಂದಾಗಿ ಶಾಲೆಯ ಕಟ್ಟಡಕ್ಕೆ ದೊಡ್ಡ ಪ್ರಮಾಣದಲ್ಲಿಯೇ ಹಾನಿಯಾಗಿತ್ತು. 

ವನಸಿರಿ ನಾಡು’ ಎಂದೇ ಜನಪ್ರಿಯವಾಗಿರುವ ಎಚ್.ಡಿ.ಕೋಟೆ (HD Kote) ಹಿಂದುಳಿದ ತಾಲ್ಲೂಕಾಗಿದ್ದು, ಇಲ್ಲಿ ಬುಡಕಟ್ಟು ಮತ್ತು ಹಿಂದುಳಿದ ಸಮುದಾಯಗಳ ಜನಸಂಖ್ಯೆ ಹೆಚ್ಚಾಗಿದೆ. ಮತ್ತು ಮೂಲಸೌಕರ್ಯಗಳ ಕೊರತೆಯೂ ಹೆಚ್ಚಾಗಿದೆ. "ಈ ಗ್ರಾಮದಲ್ಲಿ ಸುಮಾರು 800 ಜನರು ನೆಲೆಸಿದ್ದು, ಶಾಲೆಯ ನವೀಕರಣದ ವೆಚ್ಚವನ್ನು ಭರಿಸಲು ಅವರಿಗೆ ಸಾಧ್ಯವಿಲ್ಲ. ಹೀಗಾಗಿ ಇಂತಹ ಗ್ರಾಮಗಳಲ್ಲಿರುವ ಸಮಸ್ಯೆಗಳ ಬಗ್ಗೆ ದೊಡ್ಡ ನಗರಗಳಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ. ಗ್ರಾಮೀಣ ಶಾಲೆಗಳು ಕಳಪೆ ಸ್ಥಿತಿಯಲ್ಲಿರುವುದು ಅವರಿಗೆ ತಿಳಿಸಿ, ಸಹಾಯಕ್ಕೆ ಮುಂದಾಗುವಂತೆ ಮಾಡಬೇಕು.

ಪಡುಕೋಟೆ (Padukote) ಶಾಲೆಯಲ್ಲಿ ಒಟ್ಟು 80 ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. 1ರಿಂದ 3ನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಒಂದು ತರಗತಿಯಲ್ಲಿ, 4-5ನೇ ತರಗತಿಯವರನ್ನು ಇನ್ನೊಂದು ತರಗತಿಯಲ್ಲಿ ಹಾಗೂ 6-7ನೇ ತರಗತಿ ಮತ್ತೊಂದು ಕೊಠಡಿಯಲ್ಲಿ ಕುಳ್ಳಿರಿಸಿ ವಿದ್ಯೆ ಕಲಿಸಲಾಗುತ್ತಿದೆ. ಶಾಲೆಯಲ್ಲಿ ಕೇವಲ ಮೂರು ಮಂದಿ ಪೂರ್ಣ ಸಮಯದ ಶಿಕ್ಷಕರಿದ್ದಾರೆ, ಎಲ್ಲಾ ಮಕ್ಕಳಿಗೂ ಒಂದೇ ಪಠ್ಯಕ್ರಮವನ್ನು ಕಲಿಸಲಾಗುತ್ತದೆ. ಶಾಲೆಗಳ ವರೆಗೂ ಬಸ್ ಸೌಕರ್ಯ ಇಲ್ಲದ ಕಾರಣ ಶಿಕ್ಷಕರು ಸ್ವಂತ ಖರ್ಚಿನಲ್ಲಿ ಪ್ರಯಾಣಿಸಬೇಕಾಗಿದೆ. ಶಾಲೆ ಅತ್ಯಂತ ಒಳಗಿರುವುದರಿಂದ ಹೊರಗಿನವರಿಗೆ ಶಾಲೆಯ ಬಗ್ಗೆ ತಿಳಿದೇ ಇಲ್ಲದಂತಾಗಿದೆ. ನಮ್ಮ ಈ ಉಪಕ್ರಮವು ಗ್ರಾಮೀಣ ಪ್ರದೇಶಗಳಲ್ಲಿನ ಶಾಲೆಗಳ ಸ್ಥಿತಿಯ ಬಗ್ಗೆ ಜಾಗೃತಿಯನ್ನು ಮೂಡಿಸುತ್ತದೆ ಮತ್ತು ಹೆಚ್ಚಿನ ಜನರು ಸಹಾಯಕ್ಕೆ ಮುಂದಾಗುತ್ತಾರೆಂದು ನಾವು ಭಾವಿಸುತ್ತೇವೆಂದು ಚಂದನ್ ಗೌಡ ಅವರು ಹೇಳಿದ್ದಾರೆ.

click me!