ಜಿಯೋ ಇನ್ಸಿಟ್ಯೂಟ್ ಆರಂಭ, ಮೊದಲ ಬ್ಯಾಚ್ ಸ್ವಾಗತಿಸಿದ ಸಂಸ್ಥೆ

By Suvarna NewsFirst Published Jul 26, 2022, 4:32 PM IST
Highlights

*ಪ್ರಖ್ಯಾತ ಕೈಗಾರಿಕಾ ಕಂಪನಿ ರಿಲಯನ್ಸ್‌ನಿಂದ ಜಿಯೋ ಶಿಕ್ಷಣ ಸಂಸ್ಥೆ ಆರಂಭ
*ಉನ್ನತ ಶಿಕ್ಷಣದ ವ್ಯಾಖ್ಯಾನ ಬದಲಿಸಲಿದೆ ಜಿಯೋ ಇನ್ಸಿಟ್ಯೂಟ್- ನೀತಾ ಅಂಬಾನಿ
*ಈಗ ಎಐ ಮತ್ತು ಡೇಟಾ ಸೈನ್ಸ್ ವಿದ್ಯಾರ್ಥಿಗಳ ಪ್ರಥಮ ಬ್ಯಾಚ್‌ಗೆ ಸ್ವಾಗತ ನೀಡಿದ ಸಂಸ್ಥೆ
 

ಟೆಲಿಕಾಂನ ದೈತ್ಯ ದಿಗ್ಗಜ ರಿಲಯನ್ಸ್ ಜಿಯೋ (Reliance Jio), ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ದೇಶ ಹಾಗೂ ವಿದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ರಿಲಯನ್ಸ್ ಜಿಯೋ  'ಜಿಯೋ ಇನ್‌ಸ್ಟಿಟ್ಯೂಟ್' (JIO Institute) ಆರಂಭಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ರಿಲಯನ್ಸ್ ಫೌಂಡೇಶನ್ ಮೂಲಕ ಲೋಕೋಪಕಾರಿ ಉಪಕ್ರಮವಾಗಿ  ಜಿಯೋ ಇನ್ಸ್ಟಿಟ್ಯೂಟ್ ಉನ್ನತ ಶಿಕ್ಷಣ ಸಂಸ್ಥೆಯನ್ನ ಸ್ಥಾಪಿಸಲಾಗಿದೆ.   ಇತ್ತೀಚೆಗಷ್ಟೇ ಜಿಯೋ ಇನ್ಸ್ಟಿಟ್ಯೂಟ್ ಕಾರ್ಯಾರಂಭ ಮಾಡಿದ್ದು,  ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಕೋರ್ಸ್‌ಗಳನ್ನು ನೀಡಲಾಗುತ್ತಿದೆ. ಜಿಯೊ ಸಂಸ್ಥೆಯು ತನ್ನ ಮೊದಲ ಬ್ಯಾಚ್‌ಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಿದ್ದು,  ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್, ಹಾಗೂ ಡಿಜಿಟಲ್ ಮೀಡಿಯಾ ಮತ್ತು ಮಾರ್ಕೆಟಿಂಗ್ ಕಮ್ಯುನಿಕೇಷನ್ಸ್‌ ನ ಸ್ನಾತಕೋತ್ತರ ಕೋರ್ಸ್ನ ತರಗತಿಗಳು ಪ್ರಾರಂಭವಾಗಿವೆ.  ಜಿಯೋ ಇನ್‌ಸ್ಟಿಟ್ಯೂಟ್‌ನ ಮೊದಲ ಬ್ಯಾಚ್  ದೇಶದ 19 ರಾಜ್ಯಗಳು ಮತ್ತು ಭಾರತದ ಹೊರಗಿನ 4 ದೇಶಗಳಾದ ದಕ್ಷಿಣ ಆಫ್ರಿಕಾ, ಭೂತಾನ್, ನೇಪಾಳ ಮತ್ತು ಘಾನಾ ವಿದ್ಯಾರ್ಥಿಗಳನ್ನು ಒಳಗೊಂಡಿದೆ.  ಅಲ್ಲದೆ, ಬ್ಯಾಚ್‌ನಲ್ಲಿ ಎಂಜಿನಿಯರಿಂಗ್, ವಿಜ್ಞಾನ, ಕಲೆ, ವಾಣಿಜ್ಯ, ಸಮೂಹ ಮಾಧ್ಯಮ ಮತ್ತು ನಿರ್ವಹಣಾ ಅಧ್ಯಯನಗಳು, ವ್ಯಾಪಾರ ಆಡಳಿತದಂತಹ ಶೈಕ್ಷಣಿಕವಾಗಿ ವೈವಿಧ್ಯಮಯ ವಿಭಾಗಗಳ ವಿದ್ಯಾರ್ಥಿಗಳು ಸೇರಿದ್ದಾರೆ. ಸಂಸ್ಥಾಪಕ ವರ್ಗವು ಜಾಹೀರಾತು, ಆಟೋಮೋಟಿವ್, ಬ್ಯಾಂಕಿಂಗ್, ನಿರ್ಮಾಣ, ಡಿಜಿಟಲ್ ಮೀಡಿಯಾ, ಎಡ್‌ಟೆಕ್, ಫಿನ್‌ಟೆಕ್, ಹೆಲ್ತ್‌ಕೇರ್, ಮಾಹಿತಿ ತಂತ್ರಜ್ಞಾನ, ಲಾಜಿಸ್ಟಿಕ್ಸ್, ಮೈಕ್ರೋ ಫೈನಾನ್ಸ್, ಆಯಿಲ್ ಮತ್ತು ಗ್ಯಾಸ್, ಫಾರ್ಮಾ, ಟೆಲಿಕಾಂನಂತಹ ವಿವಿಧ ಕ್ಷೇತ್ರಗಳಲ್ಲಿ ಸುಮಾರು 4 ವರ್ಷಗಳ ಕೋರ್ಸ್ ಆಗಿರಲಿದೆ. 

ತಾರಸಿ ತೋಟಕ್ಕೂ ಬಂತು ಕೋರ್ಸ್, ಇದೆ ಫುಲ್ ಡಿಮ್ಯಾಂಡ್

ಜಿಯೋ ಇನ್‌ಸ್ಟಿಟ್ಯೂಟ್‌ನಲ್ಲಿನ ಸ್ನಾತಕೋತ್ತರ ಕೋರ್ಸ್ಗಳಿಗೆ ಉನ್ನತ ಜಾಗತಿಕ ಸಂಸ್ಥೆಗಳು ಮತ್ತು ಉದ್ಯಮದ ಪ್ರಸಿದ್ಧ ಅಧ್ಯಾಪಕರು ಬೋಧನೆ ಮಾಡುತ್ತಾರೆ. JIO ಇನ್‌ಸ್ಟಿಟ್ಯೂಟ್ ಫೌಂಡೇಶನ್ ಕೋರ್ ಮತ್ತು ಚುನಾಯಿತ ಕೋರ್ಸ್‌ಗಳ ಜೊತೆಗೆ ಸಮಗ್ರ ಕಲಿಕೆಯ ಮಾಡ್ಯೂಲ್‌ಗಳ ಮೂಲಕ ಪ್ರಮುಖ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಲಾಗುತ್ತದೆ. ಜಿಯೋ ಇನ್ಸ್ಟಿಟ್ಯೂಟ್ ವಿದೇಶದಲ್ಲಿ ಅಧ್ಯಯನ ಕಾರ್ಯಕ್ರಮವನ್ನು ಆಯೋಜಿಸಲು ಚಿಂತನೆ ನಡೆಸಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಪ್ರಸಿದ್ಧ ಜಾಗತಿಕ ವಿಶ್ವವಿದ್ಯಾಲಯದೊಂದಿಗೆ ಸಂಪರ್ಕ ಸಾಧಿಸಬಹುದು. ಇದರೊಂದಿಗೆ, Jio ಇನ್ಸ್ಟಿಟ್ಯೂಟ್ ಕ್ಯಾಪ್ಸ್ಟೋನ್ ಯೋಜನೆಗಳ ಮೂಲಕ ಅಪ್ಲಿಕೇಶನ್ ಆಧರಿತ ಕಲಿಕೆಗೆ ಒತ್ತು ನೀಡುತ್ತದೆ.  ಜಿಯೋ ಇನ್‌ಸ್ಟಿಟ್ಯೂಟ್‌ನಲ್ಲಿನ ಶೈಕ್ಷಣಿಕ ನಾಯಕತ್ವ, ಪ್ಯಾನಲ್ ಚರ್ಚೆಗಳು, ಕಾರ್ಯಕಾರಿ ಶಿಕ್ಷಣ, ಫೈರ್‌ಸೈಡ್ ಚಾಟ್‌ಗಳು ಮತ್ತು ಡಿಜಿಟಲ್ ಮಾಧ್ಯಮ ಮತ್ತು ಮಾರ್ಕೆಟಿಂಗ್ ಸಂವಹನಗಳ ಕುರಿತು ವಿಶೇಷ ತರಗತಿಗಳು ಇರುತ್ತದೆ.

ಈ ಹಿಂದೆಯೇ ನವಿ ಮುಂಬೈನಲ್ಲಿ ಕ್ಯಾಂಪಸ್ ಹೊಂದಿರುವ ಜಿಯೋ ಇನ್ಸ್ಟಿಟ್ಯೂಟ್, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಕ್ಯಾಲ್ಟೆಕ್) ನಿಂದ ಗುರುಸ್ವಾಮಿ ರವಿಚಂದ್ರನ್ ಅವರನ್ನು ಅದರ ಸ್ಥಾಪಕ ಪ್ರೊವೋಸ್ಟ್ ಮತ್ತು ಪ್ರೊಫೆಸರ್ ಆಫ್ ಇಂಜಿನಿಯರಿಂಗ್ ಆಗಿ ನೇಮಕ ಮಾಡುವುದಾಗಿ ಘೋಷಿಸಿತ್ತು.

ಜಿಯೋ ಇನ್ಸ್ಟಿಟ್ಯೂಟ್ ಬೌದ್ಧಿಕ ಆವಿಷ್ಕಾರ ಮತ್ತು ಅಭಿವೃದ್ಧಿಗೆ ಫಲವತ್ತಾದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ. ಜಿಯೋ ಇನ್‌ಸ್ಟಿಟ್ಯೂಟ್‌ನಲ್ಲಿ, ವಿದ್ಯಾರ್ಥಿಗಳು ಸಂಶೋಧನೆ ಮತ್ತು ನಾವೀನ್ಯತೆಗಳ ಮೇಲೆ ಕೇಂದ್ರೀಕರಿಸುವ ಮೂಲಕ ಅನನ್ಯ ಕಲಿಕೆಯ ವಾತಾವರಣದ ಅನುಭವ ಪಡೆಯುತ್ತಾರೆ.  ಶೈಕ್ಷಣಿಕ ಮತ್ತು ಉದ್ಯಮದ ನಾಯಕರ ಜಾಗತಿಕ ಸಮುದಾಯವನ್ನು ಅನುಭವಿಸುತ್ತಾರೆ ಅನ್ನೋದು ನೀತಾ ಅಂಬಾನಿ ಅಭಿಪ್ರಾಯ. 

ಐಐಟಿ ವಿದ್ಯಾರ್ಥಿಗೆ ಪ್ರತಿಷ್ಠಿತ ಕಾರ್ಗಿಲ್ ಗ್ಲೋಬಲ್ ಸ್ಕಾಲರ್‌ಶಿಪ್    

"ಈ ಕೇಂದ್ರದ ಪ್ರತಿಯೊಬ್ಬರು ದೇಶದ ಭವಿಷ್ಯವನ್ನು ರೂಪಿಸುವ ಸಾಮರ್ಥ್ಯ ಮತ್ತು ಜವಾಬ್ದಾರಿಯನ್ನು ಹೊಂದಬೇಕು. ಆದ್ದರಿಂದ ಪ್ರತಿ ದಿನದ ಪ್ರಯೋಜನ ಪಡೆಯಿರಿ, ಉತ್ಸಾಹದಿಂದ ಕಲಿಯಿರಿ, ಅತ್ಯಾಧುನಿಕ ಲ್ಯಾಬ್‌ಗಳು ಮತ್ತು ಗ್ರಂಥಾಲಯಗಳ ಸೌಲಭ್ಯ ಪಡೆಯಿರಿ, ವಿಶ್ವ ದರ್ಜೆಯ ಕ್ರೀಡಾ ಸೌಲಭ್ಯಗಳನ್ನು ಆನಂದಿಸಿ ಎಂದು ನೀತಾ ಅಂಬಾನಿ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ.

click me!