ಜವಾಹರ ನವೋದಯ ವಿದ್ಯಾಲಯ ಸೆಲೆಕ್ಷನ್ ಟೆಸ್ಟ್ ಮುಂದೂಡಿಕೆ

By Suvarna NewsFirst Published May 10, 2021, 4:57 PM IST
Highlights

2021ರ ಮೇ 16ರಂದು ನಿಗದಿಯಾಗಿದ್ದ ಜವಾಹರ ನವೋದಯ ವಿದ್ಯಾಲಯಗಳ 6ನೇ ತರಗತಿ ಆಯ್ಕೆ ಪರೀಕ್ಷೆಗಳನ್ನು ಆಡಳಿತಾತ್ಮಕ ಕಾರಣಗಳಿಂದ ಮುಂದೂಡಲಾಗಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಈ ಜವಾಹರ ನವೋದಯ ವಿದ್ಯಾಲಯ ವಸತಿ ಶಿಕ್ಷಣ ಸಂಸ್ಥೆಗಳನ್ನುನಡೆಸುತ್ತದೆ. ಈ ಶಾಲೆಗಳಿಗ ಪ್ರವೇಶ ಪಡೆಯಲು ಪರೀಕ್ಷೆ ಕಡ್ಡಾಯವಾಗಿದೆ.

ಗ್ರಾಮೀಣ ಭಾಗದ ಪ್ರತಿಭಾವಂಥ ವಿದ್ಯಾರ್ಥಿಗಳಿಗೆ ಜವಾಹರ ನವೋದಯ ವಿದ್ಯಾಲಯ(ಜೆಎನ್‌ವಿ) ಕೇಂದ್ರಗಳನ್ನು ರೂಪಿಸಲಾಗಿದೆ. ಈ ಶಾಲೆಗಳಿಗೆ ಪ್ರತಿ ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಗಳ ಮೂಲಕ ದಾಖಲು ಮಾಡಿಕೊಳ್ಳಲಾಗುತ್ತದೆ. ಆದರೆ, ಈ ಬಾರಿ ಆಡಿತಾತ್ಮಕ ಕಾರಣಗಳಿಂದಾಗಿ ನವೋದಯ ಸ್ಕೂಲ್‌ ಪ್ರವೇಶಕ್ಕೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಮಿಜೋರಾಂ, ನಾಗಾಲ್ಯಾಂಡ್ ಮತ್ತು ಮೇಘಾಲಯವನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ‘ಆಡಳಿತಾತ್ಮಕ ಕಾರಣಗಳಿಂದಾಗಿ’ 6ನೇ ತರಗತಿ ಪ್ರವೇಶಕ್ಕಾಗಿ ನಡೆಯಬೇಕಿದ್ದ ಜವಾಹರ್ ನವೋದಯ ವಿದ್ಯಾಲಯ ತನ್ನ ಆಯ್ಕೆ ಪರೀಕ್ಷೆಯನ್ನು (ಜೆಎನ್‌ವಿಎಸ್‌ಟಿ) 2021 ಅನ್ನು ಮುಂದೂಡಿದೆ. ನವೋದಯ ವಿದ್ಯಾಲಯ ಸಮಿತಿ (ಎನ್‌ವಿಎಸ್) ಜೆಎನ್‌ವಿಎಸ್‌ಟಿಯನ್ನು 6ನೇ ತರಗತಿ ಪ್ರವೇಶಕ್ಕಾಗಿ 2021ರ ಮೇ 16 ರಂದು ನಿಗದಿಪಡಿಸಿತ್ತು. ಆದರೆ, ಇದೀಗ ಆಡಿತಾತ್ಮಕ ಕಾರಣ ಕೊಟ್ಟು ಈ ಆಯ್ಕೆ ಪ್ರವೇಶ ಪರೀಕ್ಷೆಗಳನ್ನು ನವೋದಯ ವಿದ್ಯಾಲಯ ಸಮಿತಿ ಮುಂದಕ್ಕೆ ಹಾಕಿದೆ.

ಕೋವಿಡ್‌ನಿಂದ ಪೋಷಕರ ಕಳೆದುಕೊಂಡ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸೋನು ಸೂದ್ ಮನವಿ

ಜವಾಹರ ನವೋದಯ ವಿದ್ಯಾಲಯಗಳ 6ನೇ ತರಗತಿ ಪ್ರವೇಶಕ್ಕಾಗಿ ಜವಾಹರ ನವೋದಯ ವಿದ್ಯಾಲಯ ಸೆಲೆಕ್ಷನ್ ಟೆಸ್ಟ್ ಅನ್ನು 2021ರ ಮೇ 16ರಂದು ನಿಗದಿ ಪಡಿಸಲಾಗಿತ್ತು. ಆದರೆ, ಎಲ್ಲ ಕೇಂದ್ರಾಡಳಿತ ಪ್ರದೇಶಗಳು ಮತ್ತು ಮಿಜೋರಾಮ್, ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳನ್ನು ಹೊರತು ಪಡಿಸಿದೆ ಉಳಿದ ಎಲ್ಲ ರಾಜ್ಯಗಳಲ್ಲಿ ಈ ಪರೀಕ್ಷೆಯನ್ನು ಆಡಳಿತಾತ್ಮಕ ಕಾರಣಗಳಿಂದ ಮುಂದೂಡಲಾಗಿದೆ. ಸೆಲೆಕ್ಷನ್ ಟೆಸ್ಟ್ ನಿಗದಿಯಾಗಲಿರುವ ದಿನಾಂಕಕ್ಕಿಂತ ಕನಿಷ್ಠ 15 ದಿನದ ಮುಂಚೆ ಟೆಸ್ಟ್ ನಡೆಯುವ ಮರು ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಜವಾಹರ ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶಕ್ಕೆ ಇಂಗ್ಲಿಷ್, ಹಿಂದಿ ಮತ್ತು ಆಯಾ ರಾಜ್ಯ  ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಈ ಪ್ರವೇಶ ಪರೀಕ್ಷೆಯು ಎರಡು ಗಂಟೆಗಳದ್ದಾಗಿರುತ್ತದೆ ಮತ್ತು ಮೂರು ವಿಭಾಗಗಳಲ್ಲಿ ನಡೆಯುತ್ತದೆ. ಪ್ರಶ್ನೆ ಪತ್ರಿಕೆಯು 80 ಅಂಕಗಳ ಆಬ್ಜಕ್ಟಿವ್ ಟೈಪ್ ಪ್ರಶ್ನೆಗಳನ್ನು ಹೊಂದಿರುತ್ತದೆ ಮತ್ತು ಒಟ್ಟು ನೂರು ಅಂಕಗಳಿರುತ್ತವೆ.

ಇದರ ಜೊತೆಗೆ 50 ಅಂಕಗಳ 40 ಪ್ರಶ್ನೆಗಳನ್ನು ಹೊಂದಿರುವ ಮೆಂಟಲ್ ಎಬಿಲಿಟಿ ಟೆಸ್ಟ್ ಪತ್ರಿಕೆಯೂ ಇರುತ್ತದೆ. ಈ ಪರೀಕ್ಷೆಗೆ ಒಂದು ಗಂಟೆ ಸಮಯ ನಿಗದಿ ಮಾಡಲಾಗಿರುತ್ತದೆ. ಇಷ್ಟು ಮಾತ್ರವಲ್ಲದೇ ಅಂಕಗಣಿತ ಮತ್ತು ಭಾಷಾ ಟೆಸ್ಟ್ ಪರೀಕ್ಷೆಯು ಇರುತ್ತದೆ. ಈ ಎರಡು ಪರೀಕ್ಷೆಗಳು ತಲಾ 20 ಪ್ರಶ್ನೆಗಳನ್ನು ಹೊಂದಿರುತ್ತವೆ ಮತ್ತು 25 ಅಂಕಗಳಿರುತ್ತವೆ. ಅರ್ಧ ಗಂಟೆಯ ಪರೀಕ್ಷೆ ಇದಾಗಿರುತ್ತದೆ.

51 ಲಕ್ಷ ರೂ. ವಿದ್ಯಾರ್ಥಿ ವೇತನ; ಶ್ರೀನಗರದ ವಿದ್ಯಾರ್ಥಿನಿಗೆ ಬಂಪರ್

ಜವಾಹರ್ ನವೋದಯ ವಿದ್ಯಾಲಯದ ಪ್ರವೇಶ ನೀತಿಯ ಪ್ರಕಾರ, ಜಿಲ್ಲೆಯ ಕನಿಷ್ಠ 75 ಪ್ರತಿಶತ ಸ್ಥಾನಗಳನ್ನು ಬ್ಲಾಕ್ ಮಟ್ಟದಲ್ಲಿ ಗ್ರಾಮೀಣ ಪ್ರದೇಶದಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೀಸಲಾಗಿರುತ್ತವೆ. ಮತ್ತು ಉಳಿದ ಸೀಟುಗಳನ್ನು ಜಿಲ್ಲೆಯ ಮುಕ್ತ ಅರ್ಹತೆಯಿಂದ ಭರ್ತಿ ಮಾಡಲಾಗುತ್ತದೆ.

ಜವಾಹರ್ ನವೋದಯ ವಿದ್ಯಾಲಯಗಳು (ಜೆಎನ್‌ವಿಗಳು) ಭಾರತದ ಗ್ರಾಮೀಣ ಪ್ರದೇಶದ ಪ್ರಧಾನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕೇಂದ್ರ ಶಾಲೆಗಳ ವ್ಯವಸ್ಥೆಯಾಗಿದೆ. ನವದೆಹಲಿಯ ನವೋದಯ ವಿದ್ಯಾಲಯ ಸಮಿತಿಯು ಅವುಗಳನ್ನು ನಡೆಸುತ್ತಿದೆ, ಇದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಣ ಸಚಿವಾಲಯ, ಭಾರತ ಸರ್ಕಾರದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿದೆ. ಜೆಎನ್‌ವಿಗಳು ನವದೆಹಲಿಯ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಗೆ ಸಂಯೋಜಿತವಾಗಿರುವ ಸಂಪೂರ್ಣ ವಸತಿ ಮತ್ತು ಸಹ-ಶೈಕ್ಷಣಿಕ ಶಾಲೆಗಳಾಗಿವೆ, 6ರಿಂದ ರಿಂದ 12ನೇ ತರಗತಿಯವರೆಗೆ  ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ.

ಸರ್ಕಾರಿ ಉದ್ಯೋಗ ಬೇಕು ಎನ್ನೋರಿಗೆ ಫ್ರೀ ಕೋಚಿಂಗ್ ಕೊಡ್ತಾರೆ ಇವರು!

ಜೆಎನ್‌ವಿಗಳು ನಿರ್ದಿಷ್ಟವಾಗಿ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭಾವಂತ ಮಕ್ಕಳನ್ನು ಹುಡುಕುವ ಮತ್ತು ಅವರ ಕುಟುಂಬಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಪರಿಗಣಿಸದೆ ಅತ್ಯುತ್ತಮ ವಸತಿ ಶಾಲಾ ವ್ಯವಸ್ಥೆಗೆ ಸಮಾನವಾದ ಶಿಕ್ಷಣವನ್ನು ಒದಗಿಸುವ ಕೆಲಸವನ್ನು ಮಾಡಲಾಗುತ್ತದೆ. ಪ್ರತಿಭಾವಂತ ಬಡಮಕ್ಕಳು ಗುಣಮಟ್ಟದ ಶಿಕ್ಷಣದಿಂದ ಹೊರಗುಳಿಯದಂತೆ ನೋಡಿಕೊಳ್ಳುವಲ್ಲಿ ಈ ಜವಾಹರ ನವೋದಯ ವಿದ್ಯಾ ಸಂಸ್ಥೆಗಳು ಪ್ರಮುಖ ಪಾತ್ರನಿರ್ವಹಿಸುತ್ತಿವೆ.

click me!