51 ಲಕ್ಷ ರೂ. ವಿದ್ಯಾರ್ಥಿ ವೇತನ; ಶ್ರೀನಗರದ ವಿದ್ಯಾರ್ಥಿನಿಗೆ ಬಂಪರ್

By Suvarna NewsFirst Published May 9, 2021, 4:52 PM IST
Highlights

ಇದೊಂದು ಸ್ಫೂರ್ತಿದಾಯಕ ಸಾಧನೆ. ಕಾಶ್ಮೀರ ಕಣಿವೆಯ ಶ್ರೀನಗರದ ವಿದ್ಯಾರ್ಥಿನಿಯೊಬ್ಬಳು 70 ಸಾವಿರ ಡಾಲರ್(ಅಂದಾಜು 51 ಲಕ್ಷ ರೂ) ಮೊತ್ತದ ವಿದ್ಯಾರ್ಥಿ ವೇತನವನ್ನು ಕತಾರ್ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದಾಳೆ. ಮಲೀಹಾ ಜೆಹ್ರಾ ಈ ಸಾಧನೆ ಮಾಡಿದ ವಿದ್ಯಾರ್ಥಿನಿ. ಅವರು ಕತಾರ್‌ನ ಜಾರ್ಜ್‌ಟೌನ್ ವಾಷಿಂಗ್ಟನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಫಾರಿನ್ ಸರ್ವಿಸ್‌ ಕಾಲೇಜ್‌ನಲ್ಲಿ ಓದಲಿದ್ದಾರೆ.

ಕಾಶ್ಮೀರದ ಶ್ರೀನಗರ ಮೂಲದ ವಿದ್ಯಾರ್ಥಿನಿಗೆ ಬಂಪರ್ ಆಫರ್‌ವೊಂದು ಸಿಕ್ಕಿದೆ. 12ನೇ ತರಗತಿ ಮಲೀಹಾ ಜೆಹ್ರಾಗೆ ಕತಾರ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಸ್ಕಾಲರ್‌ಶಿಪ್ ಬಂದಿದೆ. ಆದರೆ ಅದರ ಮೊತ್ತ ಕೇಳಿದ್ರೆ ನೀವೇ ಒಂದು ಕ್ಷಣ ದಂಗಾಗಿ ಹೋಗ್ತಿರಾ. ಯಾಕಂದ್ರೆ ಒಂದು ಲಕ್ಷ.. ೨ ಲಕ್ಷ.. ೫ ಲಕ್ಷ ರೂ. ಮೊತ್ತ ಅಲ್ಲ, ಬರೋಬ್ಬರಿ ೭೦ ಸಾವಿರ ಅಮೆರಿಕನ್ ಡಾಲರ್. ಅಂದ್ರೆ ಭಾರತೀಯ ಕರೆನ್ಸಿಯಲ್ಲಿ ಬರೋಬ್ಬರಿ 51 ಲಕ್ಷ ರೂಪಾಯಿ. ಹೌದು.. ಮಲೀಹಾ ಜೆಹ್ರಾ ಅವರು,ಕತಾರ್‌ನ ಜಾರ್ಜ್‌ಟೌನ್ ವಾಷಿಂಗ್ಟನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಫಾರಿನ್ ಸರ್ವಿಸ್‌ನಲ್ಲಿ 70,000 ಅಮೆರಿಕನ್ ಡಾಲರ್ ಮೌಲ್ಯದ (೫೧ ಲಕ್ಷ ರೂಪಾಯಿ) ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ.  

ಅಂದಹಾಗೇ ಮಲೀಹಾ ಜೆಹ್ರಾ, ಶ್ರೀನಗರದ ಡೆಲ್ಲಿ ಪಬ್ಲಿಕ್ಶಾಲೆಯಲ್ಲಿ ೧೨ನೇ ತರಗತಿ ಓದುತ್ತಿದ್ದಾಳೆ. ಇದೀಗ ಕತಾರ್‌ನ ವಿಶ್ವವಿದ್ಯಾಲಯದಿಂದ ಪೂರ್ತಿ ವಿದ್ಯಾರ್ಥಿವೇತನ ಪಡೆದಿದ್ದಾಳೆ. ಈ ಮೂಲಕ ವಿದೇಶದಲ್ಲಿ ಓದಬೇಕೆಂಬ ತಮ್ಮ ಕನಸ್ಸನ್ನ ಸಾಕಾರಗೊಳಿಸಿಕೊಂಡಿದ್ದಾರೆ. ವಿದೇಶಿ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಂಬಂಧಗಳನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದ್ದಾರೆ ಮಲೀಹಾ. ಮಲೀಹಾಳ ಈ ಸಾಧನೆಯ ಬಗ್ಗೆ ಹಲವು ವೆಬ್ ತಾಣಗಳು ವರದಿ ಮಾಡಿವೆ.

ಕೋವಿಡ್‌ನಿಂದ ಪೋಷಕರ ಕಳೆದುಕೊಂಡ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸೋನು ಸೂದ್ ಮನವಿ

ಜಾರ್ಜ್‌ಟೌನ್ ಯೂನಿರ್ವಸಿಟಿ ಅಮೆರಿಕಾದ ವಾಷಿಂಗ್ಟನ್ ಡಿ.ಸಿ.ಯ ಚಾರ್ಜ್‌ಟೌನ್‌ನಲ್ಲಿರೋ ಖಾಸಗಿ ಸಂಶೋಧನಾ ವಿಶ್ವವಿದ್ಯಾಲಯವಾಗಿದೆ. ಈ ವಿಶ್ವವಿದ್ಯಾಲಯವು, ೧೭೮೯ರಲ್ಲಿ ಬಿಷಪ್ ಜಾನ್ ಕ್ಯಾರಲ್‌ರಿಂದ ಜಾರ್ಜ್‌ಟೌನ್ ಕಾಲೇಜು ಆಗಿ ಆರಂಭಗೊಂಡಿತ್ತು. ಇದೀಗ  ಸ್ಕೂಲ್ ಆಫ್ ಫಾರಿನ್ ಸರ್ವಿಸ್, ಸ್ಕೂಲ್ ಆಫ್ ಬ್ಯುಸಿನೆಸ್, ಮೆಡಿಕಲ್ ಸ್ಕೂಲ್, ಲಾ ಸ್ಕೂಲ್ ಹಾಗೂ ಕತಾರ್‌ನಲ್ಲಿರೋ ಕ್ಯಾಂಪಸ್ ಸೇರಿದಂತೆ ೧೦ ಪದವಿಪೂರ್ ಹಾಗೂ ಪದವಿ ಶಾಲೆಗಳನ್ನ ಒಳಗೊಂಡಿದೆ.

"ನಾನು ರಾಜಕೀಯದಲ್ಲಿ ಬಹಳ ಆಸಕ್ತಿ ಹೊಂದಿದ್ದೆ. ಕಾಶ್ಮೀರದ ಪರಿಸ್ಥಿತಿಯನ್ನು ಗಮನಿಸಿದರೆ, ನಾನು ಈ ವಿಷಯದ ಬಗ್ಗೆ ಆಳವಾದ ಅಧ್ಯಯನವನ್ನು ಮಾಡಲು ಬಯಸುತ್ತೇನೆ ”ಎಂದು ವಿದ್ಯಾರ್ಥಿ ಮಲೀಹಾ ಹೇಳಿದ್ದಾರೆ.

ರೈಲ್ವೆಯಲ್ಲಿ ಗ್ರೂಪ್ ಸಿ ಹುದ್ದೆಗೆ ನೇಮಕಾತಿ: ವಾಟ್ಸಾಪ್‌ ಮೂಲಕ ಅಪ್ಲೈ ಮಾಡಿ

ಡಿಪಿಎಸ್ ಶ್ರೀನಗರ ವಿದ್ಯಾರ್ಥಿಯಾದ ಮಲೀಹಾ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿವೇತನಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಳು. ಆದ್ರೆ ಬ್ಯಾಕ್ ಟು ಬ್ಯಾಕ್ ಲಾಕ್‌ಡೌನ್‌ಗಳು ಬಂದಿದ್ರಿಂದ ಯಶಸ್ಸನ್ನು ಸಾಧಿಸುವ ಅವರ ಪ್ರಯತ್ನದಲ್ಲಿ ತೊಡಕುಂಟಾಗಿತ್ತು. ಸಾಂಕ್ರಾಮಿಕ ರೋಗ ಹೆಚ್ಚಾಗಿದ್ರಿಂದ ಶಾಲೆಗಳನ್ನ ಬಂದ್ ಮಾಡಿದ್ದು, ಮಲೀಹಾ ಆಸೆಗೆ ತಣ್ಣೀರೆರಚಿದಂತಾಗಿತ್ತು. ಹೀಗಾಗಿ ಮಲೀಹಾ ತನ್ನ ಶಿಕ್ಷಕರು, ಸ್ಕೂಲ್ ಕೌನ್ಸಿಲರ್ ಹಾಗೂ ವಿದೇಶಗಳಲ್ಲಿ ಓದುತ್ತಿರುವ ತನ್ನ ಸೀನಿಯರ್‌ಗಳನ್ನ ಸಂಪರ್ಕಿಸಲು ನಿರ್ಧರಿಸಿದ್ದಳು. ಹಲವು ವಿಶ್ವವಿದ್ಯಾಲಯಗಳಲ್ಲಿ ಸ್ಕಾಲರ್‌ಶಿಪ್‌ಗಾಗಿ ಮಲೀಹಾ ಸಾಕಷ್ಟು ಪ್ರಯತ್ನಿಸಿದ್ರೂ, ಪ್ರಯೋಜನವಾಗಿರಲಿಲ್ಲ.

ಇದೀಗ ಕತಾರ್‌ನ ಯೂನಿವರ್ಸಿಟಿಯಿಂದ ಸ್ಕಾಲರ್‌ಶಿಪ್ ಸಿಗೋಕೆ ಕಾರಣ ಮಲೀಹಾಳ ಸೀನಿಯರ್ಸ್. ಈಗಾಗಲೇ ಆ ಯೂನಿರ್ವಸಿಟಿಯಲ್ಲಿ ಓದುತ್ತಿರುವ ಆಕೆಯ ಸ್ಕೂಲ್ ಸೀನಿಯರ್ಸ್ ಸ್ಕಾಲರ್‌ಶಿಫ್‌ಗೆ ಅರ್ಜಿ ಸಲ್ಲಿಸಲು ಆಫರ್ ಮಾಡಿದ್ರು. ಅದರಂತೆ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸಿದ್ರು..ಬಳಿಕ ಕಳೆದ ಮಾರ್ಚ್‌ನಲ್ಲಿ ಮಲೀಹಾಗೆ ಯೂನಿರ್ವಸಿಟಿಯಿಂದ ಅರ್ಜಿ ಸ್ವೀಕಾರ ಪತ್ರ ಬಂದಿತ್ತು.. ನಂತರ ಏಪ್ರಿಲ್ ತಿಂಗಳ ಕೊನೆಯಲ್ಲಿ ಸ್ಕಾಲರ್‌ಶಿಪ್ ಅಪ್ರೂವ್ ಆಗಿರೋ ಪತ್ರ ಬಂದಿದೆ.

ಸರ್ಕಾರಿ ಉದ್ಯೋಗ ಬೇಕು ಎನ್ನೋರಿಗೆ ಫ್ರೀ ಕೋಚಿಂಗ್ ಕೊಡ್ತಾರೆ ಇವರು!

ಮಲೀಹಾ, ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿದ ಬಳಿಕ ಸ್ವದೇಶಕ್ಕೆ ಮರಳಿ, ಕಾಶ್ಮೀರದ ಜನರಿಗೆ ಸೇವೆ ಸಲ್ಲಿಸಲು ಆಸೆ ಹೊಂದಿದ್ದಾಳೆ. ಪ್ರಪಂಚದಾದ್ಯಂತದ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಬರೆಯುವ ಆಸಕ್ತಿ ಹೊಂದಿದ್ದಾರೆ. ಪ್ರಪಂಚದಿಂದ ಬಡತನವನ್ನು ಕೊನೆಗೊಳಿಸಬೇಕು ಅನ್ನೋದು ಮಲೀಹಾ ಕನಸು. “ಎಲ್ಲರೂ ಸಮಾನರಾಗಿರುವ ಮತ್ತು ಅಲ್ಪಸಂಖ್ಯಾತ ಜನಸಂಖ್ಯೆಯು ಬೆಳೆಯುತ್ತಿರುವ“ ಬಹುಸಂಖ್ಯಾತತೆ ಮತ್ತು ಧ್ರುವೀಕರಣ ”ದಿಂದ ಬಳಲುತ್ತಿರುವ ಜಗತ್ತನ್ನು ನಾನು ಕನಸು ಕಾಣುತ್ತೇನೆ ಅಂತಾರೆ ಮಲೀಹಾ.

click me!