ಶೈಕ್ಷಣಿಕ ಒಪ್ಪಂದಕ್ಕೆ ಹ್ಯಾರಿಸ್‌ಬರ್ಗ್‌ ಜತೆ ಕರ್ನಾಟಕ ವಿವಿ ಒಪ್ಪಂದ

By Kannadaprabha News  |  First Published May 9, 2021, 7:35 AM IST

* ಜಂಟಿಯಾಗಿ ಶೈಕ್ಷಣಿಕ ಮತ್ತು ಸಂಶೋಧನೆಗೆ ಹೆಚ್ಚು ಒತ್ತು ನೀಡುವುದು
* ಶಿಕ್ಷಕರಿಗೆ ನವೀನ ಬೋಧನಾ ವಿಧಾನದ ಕುರಿತು ತರಬೇತಿ ಆಯೋಜನೆ
* ವರ್ಚುವಲ್‌ ಮೂಲಕ ಒಪ್ಪಂದಕ್ಕೆ ಸಹಿ 


ಧಾರವಾಡ(ಮೇ.09): ಶೈಕ್ಷಣಿಕ, ಸಂಶೋಧನೆ, ಶಿಕ್ಷಕರ ವಿನಿಮಯ ಸೇರಿದಂತೆ ಜಂಟಿಯಾಗಿ ಶೈಕ್ಷಣಿಕ ಚಟುವಟಿಕೆ ಒಪ್ಪಂದಕ್ಕೆ ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಜಂಟಿಯಾಗಿ ಅಮೆರಿಕಾದ ಹ್ಯಾರಿಸ್‌ ಬರ್ಗನ್‌ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದೊಂದಿಗೆ ಸಹಿ ಹಾಕಿದವು.

ವರ್ಚುವಲ್‌ ಮೂಲಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದದ ಅನ್ವಯ ಜೈವಿಕ ತಂತ್ರಜ್ಞಾನ ಸೇರಿದಂತೆ ವಿವಿಧ ವಿಷಯಗಳ ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗೆ ಉತ್ತೇಜನ ನೀಡುವದು. ಜಂಟಿಯಾಗಿ ಶೈಕ್ಷಣಿಕ ಮತ್ತು ಸಂಶೋಧನೆಗೆ ಹೆಚ್ಚು ಒತ್ತು ನೀಡುವುದು. ವಿಜ್ಞಾನ ಮತ್ತು ತಂತ್ರಜ್ಞಾನ, ಸಾಮಾಜಿಕ ವಿಜ್ಞಾನ ಮತ್ತು ವಿವಿಧ ವಿಷಯಗಳ ಅಧ್ಯಯನಕ್ಕಾಗಿ ಶಿಕ್ಷಕರ, ವಿದ್ಯಾರ್ಥಿಗಳ ವಿನಿಮಯ ಸೇರಿದಂತೆ ಈ ಸಂಸ್ಥೆಗಳ ಜೊತೆ ಜಂಟಿಯಾಗಿ ಶೈಕ್ಷಣಿಕವಾಗಿ ವಿಚಾರ ಸಂಕಿರಣ, ಕಾರ್ಯಾಗಾರ, ವಿಚಾರಗೋಷ್ಠಿ ಆಯೋಜಿಸುವುದು. ಶಿಕ್ಷಕರಿಗೆ ನವೀನ ಬೋಧನಾ ವಿಧಾನದ ಕುರಿತು ತರಬೇತಿ ಆಯೋಜಿಸುವದು, ಶೈಕ್ಷಣಿಕ ವಲಯದಲ್ಲಿ ಪರಸ್ಪರ ಸಹಕಾರ ನೀಡುವದರ ಜೊತೆಗೆ ಇತರೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳವುದು.

Tap to resize

Latest Videos

undefined

ಧಾರವಾಡ: ಕರ್ನಾಟಕ ವಿಶ್ವದ್ಯಾಲಯ ಕುಲಪತಿ ನೇಮಕಕ್ಕೆ ಜಾತಿಯ ಸೋಂಕು?

ಯೋಜನಾ ಬದ್ಧವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವದರ ಜೊತೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸಂಶೋಧನೆಗೆ ಹೆಚ್ಚು ಒತ್ತು ನೀಡುವದು ಈ ಒಪ್ಪಂದದ ಮುಖ್ಯ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್‌ ನಾರಾಯಣ, ಪಿನ್ಸಿಲ್ವಿನಿಯಾ ಉನ್ನತ ಶಿಕ್ಷಣ ಇಲಾಖೆಯ ಕಾರ್ಯನಿರ್ವಾಹಕ ಕುಲಪತಿ ಡಾ. ಪೀಟರ್‌ ಗಾರ್‌ಲ್ಯಾಂಡ್‌, ಹ್ಯಾರಿಸ್‌ ಬರ್ಗನ್‌ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಲಹಾ ಮಂಡಳಿಯ ಅಧ್ಯಕ್ಷ ಏರಿಕ್‌ ಡಾರ್‌, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪೊ›. ಕೆ.ಬಿ. ಗುಡಸಿ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಕಾರ್ಯ ನಿರ್ವಾಹಕ ನಿರ್ದೇಶಕ ಗೋಪಾಲ ಕೃಷ್ಣ ಜೋಶಿ, ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜಿ.ಕುಮಾರ ನಾಯಕ್‌ ಮತ್ತು ಕವಿವಿಯ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ವೇದಮೂರ್ತಿ ವರ್ಚುವಲ್‌ ಒಪ್ಪಂದದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 

click me!