ಇಂಟಿರೀಯರ್ ಡಿಸೈನ್ ಕೋರ್ಸು ಕಲಿತರೆ ಕೆಲಸ ಗ್ಯಾರಂಟಿ

By Suvarna NewsFirst Published Nov 12, 2020, 4:19 PM IST
Highlights

ಇತ್ತೀಚಿನ ದಿನಗಳಲ್ಲಿ ಇಂಟಿರೀಯರ್ ಡಿಸೈನ್ ಕೋರ್ಸು ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಈ ಕೋರ್ಸು ಮುಗಿಸಿದವರು ಉದ್ಯೋಗವಿಲ್ಲದೇ ಖಾಲಿ ಕುಳಿತುಕೊಳ್ಳುವುದು ತುಂಬಾ ಕಡಿಮೆ. ಸಾಕಷ್ಟು ಉದ್ಯೋಗಾವಕಾಶಗಳ ಲಭ್ಯವಾಗುತ್ತವೆ.
 

ಎಸ್‌ಎಸ್‌ಎಲ್‌ಸಿ ಮುಗಿದ ಕೂಡಲೇ ಎಜ್ಯುಕೇಷನ್ ಅನ್ನೋ ರಸ್ತೆ ಕವಲೊಡೆಯುತ್ತದೆ.ಈ ಸಂದರ್ಭದಲ್ಲಿ ತಮ್ಮಿಷ್ಟದ್ದು ಅನ್ನೋದಕ್ಕಿಂತ ಮುಂದಿನ ಜೀವನದ ಗುರಿ ಸಾಧನೆಗೆ ಅನುಕೂಲವಾಗುವಂಥ ಕೋರ್ಸ್ ಆರಿಸಿಕೊಂಡರೇ ಒಳಿತು. ಹೀಗಾಗಿ ಯಾವಾಗಲೂ ಎಸ್‌ಎಸ್‌ಎಲ್‌ಸಿ ನಂತರ ಮುಂದೇನು? ಅನ್ನೋ ಪ್ರಶ್ನೆ ಉದ್ಭವಿಸುತ್ತದೆ. ಕೆಲವರು ರೋಟಿನ್ ಆಗಿ ಪಿಯುಸಿ ಸೇರುತ್ತಾರೆ. ಆರ್ಟ್, ಕಾಮರ್ಸ್ ಹಾಗೂ ಸೈನ್ಸ್ ಎಂಬ ಮಾರ್ಗಗಳನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಆದ್ರೆ ಎಲ್ಲರೂ ತಮ್ಮ ಜೀವನದ ಬಂಡಿಯನ್ನ ಸಾಗಿಸಲು ಈ ಕೋರ್ಸ್‌ಗಳು ನೆರವಾಗುವುದು ಕಡಿಮೆ. ಅದಕ್ಕಾಗೇ ಇನ್ನು ಅನೇಕರು ವೃತ್ತಿಪರ ಕೋರ್ಸ್‌ಗಳ ಹಿಂದೆ ಬೀಳುತ್ತಾರೆ. ಅಂಥವರಿಗೆ ಇಂಟಿರೀಯರ್ ಡಿಸೈನ್ ಹೇಳಿ ಮಾಡಿಸಿದ್ದು. 

ಈ ಊರು ತುಂಬಾ ಐಐಟಿ ವಿದ್ಯಾರ್ಥಿಗಳೇ! ಹೇಗೆ ಅಂತೀರಾ?

ಇಂಟಿರೀಯರ್ ಕ್ಷೇತ್ರದಲ್ಲಿ ಮೊದಲು ಎಲ್ಲರ ಗಮನ ಸೆಳೆಯುವುದು ಡಿಸೈನ್. ಇನ್ನು ಯಾವುದೇ ಉತ್ಪನ್ನಗಳಾದ್ರೂ ಸರಿಯೇ ಅದರ ಡಿಸೈನ್ ಅದನ್ನ ಹೆಚ್ಚು ಮಾರಾಟವಾಗುವಂತೆ ಮಾಡುತ್ತದೆ. ಹಾಗಾಗಿ ಹೆಚ್ಚಿನ ಕಂಪನಿಗಳು ಯಾರಲ್ಲಿ ಹೆಚ್ಚು ಈ ಡಿಸೈನ್ ಸ್ಕಿಲ್ ಇದೆಯೋ ಅವರನ್ನ ಸಂಸ್ಥೆಗೆ ನೇಮಕ ಮಾಡಿಕೊಳ್ಳುತ್ತದೆ. ಹೌದು ಒಬ್ಬ ಪ್ರಸಿದ್ಧ ಇಂಟಿರೀಯರ್ ಡಿಸೈನರ್ ಆಗಬೇಕು ಅಂದ್ರೆ ತಲೆ ಇರಬೇಕು. ಅರ್ಥಾತ್ ಕ್ರಿಯೇಟಿವಿಟಿ ಅಥವಾ ಯೋಚನಾಲಹರಿ ಇತರರಿಗಿಂತ ಭಿನ್ನವಾಗಿರಬೇಕು. ವೆರೈಟಿ ಡಿಸೈನರ್‌ನಿಂದ ಮನೆ ಅಥವಾ ಕಟ್ಟಡವೊಂದರ ಅಂದ ದುಪ್ಪಾಟ್ಟಾಗುತ್ತದೆ. ನೋಡಿದವರ ಮನಸ್ಸಿಗೆ ಮುದ ನೀಡಿದಂತಾಗುತ್ತದೆ. 

ಯಾವುದೇ ಕಟ್ಟಡವಿರಲಿ, ಸಣ್ಣ ಪುಟ್ಟ ಮನೆಯಿರಲಿ, ಸೆಲಬ್ರಿಟಿಗಳ ಮನೆಗಳಿರಲಿ ಅದರ ಅಂದಲ ಹೆಚ್ಚಿಸುವುದು ಒಬ್ಬ ಡಿಸೈನರ್. ಇಂಟಿರೀಯರ್ ಡಿಸೈನರ್ ಸೃಜನಾತ್ಮಕತೆಯಿಂದ ಮನೆ ಅಥವಾ ಕಟ್ಟಡದೊಳಗಿನ ಚಿತ್ರಣವೇ ಬದಲಾಗುತ್ತದೆ. ಇಂಟಿರೀಯರ್ ಡಿಸೈನರ್ ಆಗಲು ಸಂಪ್ರದಾಯಬದ್ಧ ಕೋರ್ಸ್‌ಗಳ ಅಗತ್ಯವಿಲ್ಲ. ಬದಲಾಗಿ ಅವರ ಅನುಕೂಲ ಹಾಗೂ ಅಗತ್ಯತೆಗೆ ತಕ್ಕಂತೆ ಪಿಯುಸಿ, ಡಿಗ್ರಿ ಬದಲು ಇಂಟಿರೀಯರ್ ಡಿಸೈನ್ ಕೋರ್ಸ್ ಮಾಡಬಹುದು. ಕೋರ್ಸ್ ಮುಗಿಸಿ ಕೊಂಚ ತಲೆ ಓಡಿಸಿದ್ರೆ ಸಾಕು, ಕೈತುಂಬಾ ಹ ಎಣಿಸಬಹುದು. ಪ್ಲಾನಿಂಗ್, ಎಕ್ಸಿಕ್ಯೂಷನ್ ಹಾಗೂ ಡೆವಲಪ್‌ಮೆಂಟ್ ಸ್ಕಿಲ್ ಇದ್ದರೆ, ಆರಾಮಾಗಿ ಇಂಟಿರೀಯರ್ ಡಿಸೈನರ್ ಆಗಬಹುದು.

ಈ ಕಾಲೇಜಿನಲ್ಲಿ ಫೀಸ್‌ ಬದಲಿಗೆ ತೆಂಗಿನಕಾಯಿ ಕೊಟ್ಟರೆ ಸಾಕು!

ಈ ಕ್ಷೇತ್ರದಲ್ಲಿ ಎಸ್‌ಎಸ್‌ಎಲ್‌ಸಿ ಬಳಿಕ ವಿಪುಲ ಅವಕಾಶಗಳು ಇವೆ. ಸಾಂಪ್ರದಾಯಿಕ ಪಿಯುಸಿ ಮಾಡಿ ವೃತ್ತಪರ ಶಿಕ್ಷಣ ಕೈಗೊಳ್ಳಬಹುದು. ಇನ್ನೊಂದು ಆಯ್ಕೆ ಅಂದರೆ ನೇರವಾಗಿ ವೃತ್ತಿಪರ ಕೋರ್ಸ್‌ಗಳಿಗೆ ಜಾಯಿನ್ ಆಗಬಹುದು. ಅದರರಲ್ಲೂ ಈಗ ಹೆಚ್ಚು ಬೇಡಿಕೆಯಲ್ಲಿರುವ ಇಂಟಿರೀಯರ್ ಡಿಸೈನ್ ಕೋರ್ಸ್, ಸ್ವಂತ ಉದ್ಯೋಗವಿರಲಿ, ಪ್ರತಿಷ್ಟಿತ ಕಂಪನಿಗಳಲ್ಲಿ ಕೆಲ್ಸ ನಿರ್ವಹಿಸುವ ಜವಾಬ್ದಾರಿಯನ್ನು ಕೊಡಿಸುತ್ತದೆ, ಉದ್ಯೋಗ ಆಧಾರದಲ್ಲಿ ಈ ಇಂಟಿರೀಯರ್ ಡಿಸೈನ್ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಆರು ತಿಂಗಳಿನಿಂದ ಮೂರು ವರ್ಷದ ವರೆಗಿನ ಡಿಪ್ಲೋಮಾ ಕೋರ್ಸ್ ಇರುತ್ತವೆ. ಇವುಗಳು ಸರಕಾರದಿಂದ ಹಾಗೂ ಸಂಬಂಧಪಟ್ಟ ಇಲಾಖೆಗಳಿಂದ ಅಂಗೀಕಾರ ಪಡೆದಿರುತ್ತವೆ. ಇವುಗಳಿಗೆ ಅಧಿಕೃತ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಈ ಪ್ರಮಾಣ ಪತ್ರಕ್ಕೆ ದೇಶ ವಿದೇಶಗಳಲ್ಲಿ ಮಾನ್ಯತೆ ಇರುತ್ತವೆ. ಪ್ರಸ್ತುತ ಇಂತಹ ಶಿಕ್ಷಣಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ.

೧೦-೧೫ ವರ್ಷ ಕಾಲ ಒಂದು ಮನೆಯ ಡಿಸೈನ್ ಮತ್ತೊಂದು ಟ್ರೆಂಡ್ ನಲ್ಲಿ ಇರುವುದು ಕಷ್ಟ. ಅಪ್ಪ ಕಟ್ಟಿದ ಮನೆ ಮಗನ ಕಾಲಕ್ಕೆ ಹಳೆದಾಗುತ್ತದೆ. ಮೊಮ್ಮಗನ ಕಾಲಕ್ಕೆ ತಂದೆ ಹಾಗೂ ಅಜ್ಜನ ಮನೆಗಳು ಓಲ್ಡ್ ಎನಿಸಿಕೊಳ್ಳುತ್ತದೆ. ಗೆಸ್ಟ್ ರೂಮ್, ಹೋಮ್ ಥಿಯೇಟರ್, ಅಟ್ಯಾಚ್ಡ್ ಬಾತ್ ರೂಮ್...ಇವೆಲ್ಲ ಎಷ್ಟು ವರ್ಷದಿಂದ ಬಂದ ಟ್ರೆಂಡ್? ಇನ್ನು ಐದು ವರ್ಷಕ್ಕೆ ಏನೇನಾಗಬಹುದು? ಓಪನ್ ಕಿಚನ್, ಡೈನಿಂಗ್ ಹಾಲ್ ಇವೆಲ್ಲ ಈಗಿದೆ. ಮುಂದೆ ಹೇಗೋ ಏನೋ? ಬದಲಾವಣೆ ಎಂಬುದು ಅದ್ಯಾವ ವೇಗದಲ್ಲಿ ಆಗುತ್ತಿದೆ ಅಂದರೆ, ಈಗಿನ ಟ್ರೆಂಡ್ ಆಗಲೇ ನಾಳೆಗೆ ಹಳತು. ಅಷ್ಟೇ ವೇಗದಲ್ಲಿ ಡಿಸೈನರ್ ಕೂಡ ಯೋಚಿಸಬೇಕಾಗುತ್ತದೆ. 

ಯಾವುದೋ ಕಾರಣದಿಂದ ಕೆಲವರಿಗೆ ಓದು ತಲೆಗೆ ಹತ್ತುವುದಿಲ್ಲ. ಅಂಥವರು ಎದೆಗುಂದದೇ ಆರಾಗಿ  ಈ ಇಂಟೀರಿಯರ್ ಡಿಸೈನ್ ಕೋರ್ಸ್ ಮಾಡಿ, ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸಬಹುದು. 

ಅಮೆಜಾನ್‌ನಿಂದ ನೆರವು, ಬಡ ಮಕ್ಕಳ ಮುಖದಲ್ಲಿ ಮಂದಹಾಸ

click me!