ಸ್ಪೆಲ್ಲಿಂಗ್ ಬಿ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಫೈಜಾನ್ ಝಾಕಿಗೆ ಜಯ, 'ಎಕ್ಲೇರ್ಸಿಸ್ಮಾಂಟ್..' ಸ್ಪೆಲ್ಲಿಂಗ್‌ ನಿಮಗೆ ಗೊತ್ತಾ?

Published : May 31, 2025, 10:08 AM ISTUpdated : May 31, 2025, 10:10 AM IST
faizan Zaki

ಸಾರಾಂಶ

100ನೇ ಸ್ಕಿಪ್ಸ್ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾರತ ಮೂಲದ ಫೈಜಾನ್ ಝಾಕಿ 'eclaircissement' ಪದದ ಸರಿಯಾದ ಸ್ಪೆಲ್ಲಿಂಗ್ ಹೇಳಿ ವಿಜೇತರಾಗಿದ್ದಾರೆ. 42 ಲಕ್ಷ ರೂಪಾಯಿ ನಗದು ಬಹುಮಾನ ಸೇರಿದಂತೆ ಹಲವು ಬಹುಮಾನಗಳನ್ನು ಪಡೆದಿದ್ದಾರೆ.

ನ್ಯೂಯಾರ್ಕ್ (ಮೇ.31): ಇಲ್ಲಿ ನಡೆದ 100ನೇ ಸ್ಕಿಪ್ಸ್ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾರತ ಮೂಲದ ಫೈಜಾನ್ ಝಾಕಿ (13) éclaircisse ment ಎಂಬ ಪದದ ಅಕ್ಷರಗಳನ್ನು ಸರಿಯಾಗಿ ಹೇಳಿ ವಿಜೇತ ರಾಗಿದ್ದಾರೆ. 2ನೇ ಸ್ಥಾನ ವನ್ನು ಭಾರತ ಮೂಲದವರೇ ಆದ ಸರ್ವಜ್ಞ ಕದಂ ಪಡೆದಿದ್ದಾರೆ.

ಅಮೆರಿಕದ ಡಲ್ಲಾಸ್‌ನಲ್ಲಿ ವಾಸ ಮಾಡುತ್ತಿರುವ ಝಾಕಿ, 21ನೇ ಸುತ್ತಿನಲ್ಲಿ 'ಅಸ್ಪಷ್ಟವಾದ ದ್ದನ್ನು ತೆರವುಗೊಳಿಸುವುದು ಅಥವಾ ಜ್ಞಾನೋದಯ' ಎಂಬ ಅರ್ಥ ಬರುವ éclaircisse ment ಪದದಲ್ಲಿರುವ ಅಕ್ಷರಗಳನ್ನು ಸರಿಯಾಗಿ ಹೇಳಿ 8 ಸ್ಪರ್ಧಿಗಳನ್ನು ಹಿಂದಿಕ್ಕಿ 1ನೇ ಸ್ಥಾನ ಪಡೆದಿದ್ದಾರೆ. 42 ಲಕ್ಷ ರೂಪಾಯಿ ನಗದು, ಪದಕ ಮತ್ತು ಟ್ರೋಫಿಯನ್ನು ಇವರು ಪಡೆಯಲಿದ್ದಾರೆ. ಜತೆಗೆ, ಬೀ ನಿಘಂಟು ಪಾಲುದಾರ ಮೆರಿಯಮ್‌ನಿಂದ 2 ಲಕ್ಷ ರು. ಉಡುಗೊರೆ ಮತ್ತು ಗ್ರಂಥಾಲಯದ ಸದಸ್ಯತ್ವ ಸಿಗಲಿದೆ.

 

ಎಕ್ಲೇರ್ಸಿಸ್ಮಾಂಟ್‌ ಸ್ಪೆಲ್ಲಿಂಗ್‌ ಹೇಳಿದ ಝಾಕಿ

ಸಿ ಎಂ ರೈಸ್ ಮಿಡಲ್ ಸ್ಕೂಲ್‌ನಲ್ಲಿ 7 ನೇ ತರಗತಿಯ ವಿದ್ಯಾರ್ಥಿಯಾಗಿರುವ ಝಾಕಿ, 2024 ರಲ್ಲಿ ಮತ್ತೊಬ್ಬ ಭಾರತೀಯ-ಅಮೆರಿಕನ್ ಬ್ರೂಹತ್ ಸೋಮ ಅವರ ಸ್ಪೆಲ್-ಆಫ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀಯಲ್ಲಿ ಝಾಕಿ ಭಾಗವಹಿಸುತ್ತಿರುವುದು ಇದು ನಾಲ್ಕನೇ ಬಾರಿಯಾಗಿದೆ. "ಎಕ್ಲೇರ್ಸಿಸ್ಮಾಂಟ್‌" ಅನ್ನು ಸರಿಯಾಗಿ ಉಚ್ಚರಿಸಿದಾಗ ಝಾಕಿ 21 ನೇ ಸುತ್ತಿನಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಗಳಿಸಿದರು. ಗುರುವಾರ ರಾತ್ರಿ ಅವರು ಎಂಟು ಇತರ ಸಾಧನೆ ಮಾಡಿದ ಸ್ಪೆಲರ್‌ಗಳನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ಗೆದ್ದರು.

ರಾಷ್ಟ್ರೀಯ ಚಾಂಪಿಯನ್‌ಶಿಪ್‌ನ ಫೈನಲ್‌ ಅದ್ಭುತವಾಗಿತ್ತು. ಈ ವರ್ಷದ ಬೀ ಗೆಲ್ಲುವ ಅವಕಾಶವನ್ನು ಹದಿನೆಂಟನೇ ಸುತ್ತಿನಲ್ಲಿ ಝಾಕಿ ಪಡೆದುಕೊಂಡಿದ್ದರು. ಈ ವೇಳೆ ಇಬ್ಬರು ಫೈನಲಿಸ್ಟ್‌ಗಳ ತಪ್ಪುಗಳ ನಂತರ ಝಾಕಿ ಅವಕಾಶ ಪಡೆದುಕೊಂಡಿತ್ತು. ಕೊನೆಯ ಸುತ್ತಿನಲ್ಲಿ, ಮೂವರು ಉಳಿದಿರುವಾಗ, ಸರ್ವಜ್ಞ ಕದಮ್ ಮತ್ತು ಸರ್ವ್ ಧಾರವಾಣೆ ಸ್ಪೆಲ್ಲಿಂಗ್‌ ಅನ್ನು ತಪ್ಪಾಗಿ ಹೇಳಿದರು.

18ನೇ ಸುತ್ತಿನಲ್ಲಿ ತಪ್ಪಿದ್ದ ಗೆಲುವು

ಇದು ಝಾಕಿ ಪಾಲಿಗೆ ಎದುರಾದ ಮೊದಲ ದೊಡ್ಡ ಅವಕಾಶವಾಗಿತ್ತು. ಆದರೆ ಸರಿಯಾದ ವಿವರಣೆಯನ್ನು ನೀಡುವ ಮೊದಲು ತನ್ನ ಪದವನ್ನು ಉಚ್ಚರಿಸಲು ಆತುರಪಟ್ಟು ಮೊದಲ ಅಕ್ಷರವನ್ನೇ ತಪ್ಪಾಗಿ ಹೇಳಿದ್ದ. “ಕಾಮೆಲಿನಾ” ಎಂಬ ಪದವು ನಿರೂಪಕನ ಬಾಯಿಂದ ಹೊರಡುವ ಮೊದಲೇ, ಝಾಕಿ ಆತುರಪಟ್ಟು “k-a-m ——” ಎಂದು ಸ್ಪೆಲ್ಲಿಂಗ್‌ ಹೇಳಲು ಆರಂಭಿಸಿದ್ದ. ತಮ್ಮ ತಪ್ಪು ತಕ್ಷಣವೇ ಗೊತ್ತಾದರೂ ಆ ವೇಳೆ ಅದು ಬಹಳ ತಡವಾಗಿತ್ತು.

ಎಕ್ಲೇರ್ಸಿಸ್ಮೆಂಟ್ ಪದದ ಸ್ಪೆಲ್ಲಿಂಗ್‌ಅನ್ನು ಸರಿಯಾಗಿ ಹೇಳಿದ ಬಳಿಕ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ' ಏನು ಹೇಳಬೇಕೆಂದೇ ನನಗೆ ತೋಚುತ್ತಿಲ್ಲ. ನಾನು ಬಹಳ ಸಂತಸಗೊಂಡಿದ್ದೇನೆ' ಎಂದರು. ಹೈದರಾಬಾದ್‌ನಲ್ಲಿರುವ ತಮ್ಮ ಮನೆಯಿಂದಲೇ ಸ್ಪರ್ಧೆಯನ್ನು ವೀಕ್ಷಿಸುತ್ತಿದ್ದ ಝಾಕಿಯ ಪೋಷಕರು ಮತ್ತು ಅವನ ಅಜ್ಜಿಯರನ್ನು ಸಂಘಟಕರು ಅಭಿನಂದಿಸಿದರು.

"ನಾನು ಅದನ್ನು ವರ್ಣಿಸಲು ಸಾಧ್ಯವಿಲ್ಲ" ಎಂದು ಝಾಕಿ ಗೆಲುವಿನ ಬಳಿಕ ಹೇಳಿದ್ದಾರೆ. ಇ ಡಬ್ಲ್ಯೂ ಸ್ಕ್ರಿಪ್ಸ್ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಆಡಮ್ ಸಿಮ್ಸನ್ ಚಾಂಪಿಯನ್‌ಶಿಪ್ ಟ್ರೋಫಿಯನ್ನು ಪ್ರದಾನ ಮಾಡಿದರು.

ಇಲ್ಲಿಯವರೆಗೂ 30 ಅಮೆರಿಕನ್‌ ಭಾರತೀಯರ ಗೆಲುವು

ಒಂದು ವರ್ಷದ ಹಿಂದೆ ಎರಡನೇ ಸ್ಥಾನ ಪಡೆದ ನಂತರ ಬೀ ಇತಿಹಾಸದಲ್ಲಿ ಗೆದ್ದ ಐದನೇ ಸ್ಪೆಲರ್ ಝಾಕಿ. ಅವರು 2023 ರಲ್ಲಿ 21 ನೇ ಸ್ಥಾನ ಮತ್ತು 2019 ರಲ್ಲಿ 370 ನೇ ಸ್ಥಾನ ಪಡೆದುಕೊಂಡಿದ್ದರು. ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀಯ ಝಾಕಿ ಸೇರಿದಂತೆ ಹಿಂದಿನ 36 ಚಾಂಪಿಯನ್‌ಗಳಲ್ಲಿ ಮೂವತ್ತು ಮಂದಿ ಭಾರತೀಯ ಅಮೆರಿಕನ್ನರು. ನೂಪುರ್ ಲಾಲಾ 1999 ರಲ್ಲಿ ಸ್ಪರ್ಧೆಯನ್ನು ಗೆದ್ದ ಮೊದಲ ಭಾರತೀಯ-ಅಮೆರಿಕನ್ ಆಗಿದ್ದರು.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ