ಒಡಿಶಾದಲ್ಲೂ ಸರ್ಕಾರಿ ಶಾಲೆ ಬಂದ್, ಆದೇಶ ರದ್ದುಗೊಳಿಸಿದ ಹೈಕೋರ್ಟ್
ಕರ್ನಾಟಕದಲ್ಲಂತೆ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಮುಚ್ಚುವ ಇಲ್ಲವೇ ಸಮೀಪದ ಶಾಲೆಗಳ ಜತೆ ವಿಲೀನಗೊಳಿಸುವ ಸಂಬಂಧ ಒಡಿಶಾ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಸರ್ಕಾರದ ಈ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು ಮತ್ತು ಹೈಕೋರ್ಟ್ ಮೊರೆ ಹೋಗಲಾಗಿತ್ತು. ಅಲ್ಲಿನ ಕೋರ್ಟ್ ಸರ್ಕಾರದ ಆದೇಶವನ್ನು ರದ್ದುಗೊಳಿಸಿ, ಶಾಲೆಗಳನ್ನು ಮುಚ್ಚಬಾರದು ಎಂದು ಹೇಳಿದೆ.
ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನ ಮುಚ್ಚಬೇಕು, ಸಮೀಪದ ಶಾಲೆಗಳಲ್ಲಿ ವಿಲೀನಗೊಳಿಸಬೇಕೆಂಬ ಒಡಿಶಾ ಸರ್ಕಾರದ ಆದೇಶವನ್ನು ಒರಿಸ್ಸಾ ಹೈಕೋರ್ಟ್ ರದ್ದುಪಡಿಸಿದೆ. ಒಟ್ಟು ಸುಮಾರು 8,000 ಪ್ರಾಥಮಿಕ ಶಾಲೆಗಳನ್ನ ಮುಚ್ಚಲು ಒಡಿಶಾ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಆ ಶಾಲೆಗಳನ್ನ ಬಂದ್ ಮಾಡಿ ಉತ್ತಮ ಮೂಲಭೂತ ಸೌಲಭ್ಯವುಳ್ಳ ಸಮೀಪದ ಕೆಲವು ಶಾಲೆಗಳೊಂದಿಗೆ ವಿಲೀನಗೊಳಿಸುವುದಾಗಿ ಆದೇಶ ಹೊರಡಿಸಿತ್ತು.
ಗಣಿತದಲ್ಲಿ ಎಕ್ಸ್‌ಪರ್ಟಾ? ಆರ್ಯಭಟ ಸ್ಪರ್ಧೆಯಲ್ಲಿ ಭಾಗವಹಿಸಿ, 1.5 ಲಕ್ಷ ರೂ. ಗೆಲ್ಲಿ
ಸರ್ಕಾರದ ಆದೇಶವನ್ನ ಪ್ರಶ್ನಿಸಿ ಹೈಕೋರ್ಟ್‌ಗೆ ೧೭೦ ರಿಟ್ ಅರ್ಜಿಗಳು ಸಲ್ಲಿಕೆಯಾಗಿದ್ದವು. ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ. ಬಿ.ಆರ್. ಸರಂಗಿ ಅವರು, ಮಾರ್ಚ್ ೧೧, ೨೦೨೦ರ ಸರ್ಕಾರ ಅಧಿಸೂಚನೆಯನ್ನ ರದ್ದುಗೊಳಿಸಿ ತೀರ್ಪು ಪ್ರಕಟಿಸಿದ್ದಾರೆ. ಈಗಾಗಲೇ ವಿಲೀನಗೊಂಡಿರುವ ಶಾಲೆಗಳನ್ನ ಈ ಹಿಂದಿನ ಸ್ಥಿತಿಗೆ ತರುವುದರ ಜೊತೆಗೆ ಶಾಲೆಗಳಿಗೆ ಅಗತ್ಯವಿರುವ ಮೂಲ ಸೌಕರ್ಯ ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಈಗಾಗಲೇ ಶಿಕ್ಷಣ ಇಲಾಖೆಯು ಕನಿಷ್ಠ 7,772 ಶಾಲೆಗಳ ವಿಲೀನವನ್ನು ಪ್ರಾರಂಭಿಸಿತ್ತು, ಅದರಲ್ಲಿ 1,724 ಶಾಲೆಗಳು 25 ಕ್ಕಿಂತ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿದ್ದರೆ ಮತ್ತು 6,048 ಶಾಲೆಗಳು 20 ಕ್ಕಿಂತ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿವೆ. ಆದಾಗ್ಯೂ, ಕಳಪೆ ದಾಖಲಾತಿಯ ಕಾರಣ ನೀಡಿ ಸರ್ಕಾರ, 14,000 ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚುವ ಹಾಗೂ ವಿಲೀನಗೊಳಿಸುವ ಯೋಜನೆ ರೂಪಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.
ಶಾಲೆಗಳ ವಿಲೀನದಿಂದಾಗಿ ಪ್ರತಿ ವಿದ್ಯಾರ್ಥಿಗೆ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ, ಒಂದು ಬಾರಿ 3,000 ರೂ. ಮತ್ತು ತಿಂಗಳಿಗೆ 600 ರೂ. ಸಹಾಯ ಧನ ಸಿಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಸಚಿವ ಸಮೀರ್ ರಂಜನ್ ದಾಶ್ ಕಳೆದ ವರ್ಷ ವಿಧಾನಸಭೆಯಲ್ಲಿ ತಿಳಿಸಿದ್ದರು.
ಜವಾಹರ ನವೋದಯ ವಿದ್ಯಾಲಯ ಸೆಲೆಕ್ಷನ್ ಟೆಸ್ಟ್ ಮುಂದೂಡಿಕೆ
ಶಾಲೆಗಳನ್ನು ವಿಲೀನಗೊಳಿಸುವ ಸರ್ಕಾರದ ಕ್ರಮಕ್ಕೆ ವಿರೋಧ ಪಕ್ಷಗಳಷ್ಟೇ ಅಲ್ಲ, ಪೋಷಕರ ಸಂಘದಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಶಾಲೆಗಳನ್ನು ಮುಚ್ಚುವುದು ಮತ್ತು ವಿಲೀನಗೊಳಿಸುವುದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನಾನುಕೂಲತೆ ಉಂಟಾಗುತ್ತದೆ. ಹೊಸ ಶಾಲೆಗಳಿಗೆ ಹೋಗಬೇಕಂದ್ರೆ ಮಕ್ಕಳು ಬಹಳ ದೂರ ಪ್ರಯಾಣಿಸಬೇಕಾಗುತ್ತದೆ ಅನ್ನೋದು ಅವರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ಹಲವು ಪೋಷಕರ ಸಂಘಗಳು ಸರ್ಕಾರದ ಆದೇಶ ಪ್ರಶ್ನಿಸಿ ಒಡಿಶಾ ಹೈಕೋರ್ಟ್ ಮೊರೆ ಹೋಗಿದ್ದವು.. ಸುದೀರ್ಘವಾಗಿ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್, ಇದೀಗ ಸರ್ಕಾರ ಆದೇಶವನ್ನ ರದ್ದುಗೊಳಿಸಿದೆ. ಈ ಮೂಲಕ ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ನಡೆಸಿದ ಹೋರಾಟಕ್ಕೆ ದಿಗ್ವಿಜಯ ಸಿಕ್ಕಂತಾಗಿದೆ.
ಈ ಹಿಂದೆ ಕರ್ನಾಟಕದಲ್ಲೂ ಇದೇ ರೀತಿ ನಿರ್ಧಾರ ಕೈಗೊಳ್ಳಲಾಗಿತ್ತು. ಕಡಿಮೆ ಇರುವ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಸಮೀಪದ ಶಾಲೆಗಳೊಂದಿಗೆ ವಿಲೀನಗೊಳಿಸುವ ಇಲ್ಲವೇ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.
ಅಂದು ಕೂಡ ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಅಕ್ರೋಶ ಕೇಳಿ ಬಂದಿತ್ತು. ಕನ್ನಡ ಶಾಲೆಗಳನ್ನು ಮುಚ್ಚುವುದರಿಂದ ಭಾಷೆಯ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದರು. ಸರ್ಕಾರದ ಈ ವಿರುದ್ಧ ಹೋರಾಟವು ನಡೆದಿತ್ತು. ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಏನೂ ಉಪಯೋಗವಾಗಿರಲಿಲ್ಲ.
ರಾಜ್ಯ ಸರ್ಕಾರವು ತನ್ನ ನಿರ್ಧಾರದಂತೆ ಹಲವು ಶಾಲೆಗಳನ್ನು ವಿಲೀನ ಮಾಡಿ, ಮೂಲ ಶಾಲೆಗಳನ್ನು ರದ್ದು ಮಾಡಿದ ಪ್ರಕರಣಗಳಿವೆ. ಈಗಲೂ ಕನ್ನಡ ಶಾಲೆಗಳನ್ನು ಬಂದ್ ಮಾಡಬಾರದು ಎಂಬ ಬೇಡಿಕೆ ಕನ್ನಡಪರ ಚಿಂತಕರು, ಹೋರಾಟಗಾರರಿಂದಲೂ ಕೇಳಿ ಬರುತ್ತಲೇ ಇದೆ ಎಂಬುದನ್ನು ನೀವಿಲ್ಲ ಗಮನಿಸಬಹುದು.
51 ಲಕ್ಷ ರೂ. ವಿದ್ಯಾರ್ಥಿ ವೇತನ; ಶ್ರೀನಗರದ ವಿದ್ಯಾರ್ಥಿನಿಗೆ ಬಂಪರ್