ಭಾರತ ಪಾಕ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: CA ಪರೀಕ್ಷೆ ಮುಂದೂಡಿದ ICAI

Published : May 09, 2025, 12:03 PM ISTUpdated : May 09, 2025, 12:21 PM IST
ಭಾರತ ಪಾಕ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ:  CA ಪರೀಕ್ಷೆ ಮುಂದೂಡಿದ ICAI

ಸಾರಾಂಶ

ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ, ICAI ಮೇ 9 ರಿಂದ 14 ರವರೆಗೆ ನಿಗದಿಯಾಗಿದ್ದ CA ಪರೀಕ್ಷೆಗಳನ್ನು ಮುಂದೂಡಿದೆ. ಪರಿಷ್ಕೃತ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ನವದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಸಂಸ್ಥೆಯು ಚಾರ್ಟರ್ಡ್ ಅಕೌಂಟೆಂಟ್ಸ್ ಫೈನಲ್, ಇಂಟರ್ಮೀಡಿಯೇಟ್ ಮತ್ತು ಪೋಸ್ಟ್ ಕ್ವಾಲಿಫಿಕೇಶನ್ ಕೋರ್ಸ್ ಪರೀಕ್ಷೆಗಳ ಉಳಿದ ಪತ್ರಿಕೆಗಳ ಪರೀಕ್ಷೆಯನ್ನು ಮುಂದೂಡಿದೆ. ಈ ಪರೀಕ್ಷೆಗಳು
ಮೇ 9 ರಿಂದ 14 ರವರೆಗೆ ನಿಗದಿಯಾಗಿದ್ದವು.

ICAI ಸಂಸ್ಥೆಯ ಪ್ರಮುಖ ಪ್ರಕಟಣೆಯಲ್ಲಿ ದೇಶದಲ್ಲಿನ ಉದ್ವಿಗ್ನ ಮತ್ತು ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಚಾರ್ಟರ್ಡ್ ಅಕೌಂಟೆಂಟ್ಸ್ ಫೈನಲ್, ಇಂಟರ್ಮೀಡಿಯೇಟ್ ಮತ್ತು ಪೋಸ್ಟ್ ಕ್ವಾಲಿಫಿಕೇಶನ್ ಕೋರ್ಸ್ ಪರೀಕ್ಷೆಗಳ (ಅಂತಾರಾಷ್ಟ್ರೀಯ ತೆರಿಗೆ ಮೌಲ್ಯಮಾಪನ ಪರೀಕ್ಷೆ (INTT AT)ಮೇ 2025 ರ ಉಳಿದ ಪತ್ರಿಕೆಗಳನ್ನು ಮೇ 9, 2025 ರಿಂದ ಮೇ 14, 2025 ರವರೆಗೆ ಮುಂದೂಡಲಾಗಿದೆ ಎಂದು ಸಾರ್ವಜನಿಕರಿಗೆ ತಿಳಿಸಿದೆ. ಮುಂದೂಡಲ್ಪಟ್ಟ ಪರೀಕ್ಷೆಗಳ ಪರಿಷ್ಕೃತ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಈ ಬಗ್ಗೆ ಸಿಎ ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್ www.icai.org ನ್ನೂ ಆಗಾಗ ಗಮನಿಸುತ್ತಿರುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ನಡುವೆ ಅಮೃತಸರದಲ್ಲಿರುವ ಶ್ರೀ ಗುರು ರಾಮ್ ದಾಸ್ ಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಭಾರಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಂದಿನ ಸೂಚನೆ ಬರುವವರೆಗೆ ವಿಮಾನ ನಿಲ್ದಾಣದ ಎಲ್ಲಾ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಭದ್ರತೆ ಇದೆ. ವಿಮಾನ ನಿಲ್ದಾಣದ ಸಿಬ್ಬಂದಿಗೆ ಮಾತ್ರ ಒಳಗೆ ಹೋಗಲು ಅವಕಾಶವಿದೆ. ಪೊಲೀಸರು ನಿರಂತರವಾಗಿ ಗಸ್ತು ತಿರುಗುತ್ತಿದ್ದಾರೆ. ಗ್ರಾಮಸ್ಥರಿಗೆ ಅನುಸರಿಸಬೇಕಾದ ಶಿಷ್ಟಾಚಾರಗಳ ಬಗ್ಗೆ  ಈಗಾಗಲೇ ತಿಳಿಸಲಾಗಿದೆ ಎಂದು ಅಮೃತಸರದ ಏರ್‌ಪೋರ್ಟ್‌ನ ಎಸಿಪಿ ಯಾದ್ವಿಂದರ್ ಸಿಂಗ್ ಹೇಳಿದ್ದಾರೆ.

ಗುರುವಾರ ರಾತ್ರಿ ನಿಯಂತ್ರಣ ರೇಖೆ (LoC) ಮತ್ತು ಅಂತರರಾಷ್ಟ್ರೀಯ ಗಡಿಗಳ (IB) ಉದ್ದಕ್ಕೂ ನಡೆದ ಬೃಹತ್ ಪ್ರಮಾಣದ ಕೌಂಟರ್-ಡ್ರೋನ್ ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ಸೇನೆಯು 50 ಕ್ಕೂ ಹೆಚ್ಚು ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ಸೇನಾ ಮೂಲಗಳು ದೃಢಪಡಿಸಿವೆ. ಹಾಗೆಯೇ ಅಮೃತಸರದ ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ಥಳೀಯ ಎಲ್ಲಾ ನಿವಾಸಿಗಳು ಮನೆಯೊಳಗೆ ಇರುವಂತೆ ಹಾಗೂ, ತಮ್ಮ ಮನೆಯ ದೀಪಗಳನ್ನು ಆಫ್ ಮಾಡಿ ಸುರಕ್ಷತೆಯಿಂದ ಇರುವಂತೆ  ಸೂಚಿಸಲಾಗಿದೆ. 

ಎಲ್ಲಾ ನಾಗರಿಕರು ಮನೆಯೊಳಗೆ ಮತ್ತು ಕಿಟಕಿಗಳಿಂದ ದೂರವಿರಲು ಹಾಗೂ ದೀಪಗಳನ್ನು ಆಫ್ ಮಾಡಲು ಮತ್ತು ಕಿಟಕಿ ಪರದೆಗಳನ್ನು ಎಳೆಯಲು ವಿನಂತಿಸಲಾಗಿದೆ. ಯಾರೋ ಭಯಪಡುವ ಅಗತ್ಯವಿಲ್ಲ. ಈಗ ಸೈರನ್ ಊದುತ್ತದೆ, ಮತ್ತು ಅದು ಸ್ಪಷ್ಟವಾದ ನಂತರ ನಾವು ಮತ್ತೆ ಸಂದೇಶವನ್ನು ರವಾನಿಸುತ್ತೇವೆ. ನಮ್ಮ ಸಶಸ್ತ್ರ ಪಡೆಗಳು ದೇಶ ರಕ್ಷಣೆಯ ಕರ್ತವ್ಯದಲ್ಲಿವೆ ಮತ್ತು ನಾವು ಮನೆಯೊಳಗೆ ಇರುವ ಮೂಲಕ ಅವರನ್ನು ಬೆಂಬಲಿಸಬೇಕಾಗಿದೆ. ಭಯಪಡುವ ಅಗತ್ಯವಿಲ್ಲ ಎಂದು ಅಮೃತಸರ DPRO ಹೇಳಿದ್ದಾರೆ. 

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ