ದಾವಣಗೆರೆ: ಎ.ವಿ.ಕೆ ಕಾಲೇಜ್‌ಲ್ಲಿ ದೇಸಿ ಕಲರವ

By Girish Goudar  |  First Published May 28, 2023, 1:00 AM IST

ನಮ್ಮ ನಾಡು ಹಲವಾರು ಧರ್ಮ, ಮತ, ಪಥ, ಭಾಷೆ, ಸಂಸ್ಕೃತಿ ಹೊಂದಿದೆ. ಅದರ ಪ್ರತಿರೂಪದ ಬಿಂಬವನ್ನು ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು  ರಂಗು - ರಂಗಿನ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಆ ಮೂಲಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿ ಅರಿತಿದ್ದಾರೆ ಎಂದ ಪ್ರೊ. ಕಮಲ ಸೊಪ್ಪಿನ್


ವರದಿ: ವರದರಾಜ್ 

ದಾವಣಗೆರೆ(ಮೇ.28): ಭಾರತ ಬಹು ಸಂಸ್ಕೃತಿಗಳ ನಾಡು. ವಿವಿಧತೆಯಲ್ಲಿ ಏಕತೆ ಕಾಣುವ ನೆಲ ನಮ್ಮದು. ಇಲ್ಲಿನ ಪಾರಂಪರಿಕ ದಿವ್ಯ ಸಂಸ್ಕೃತಿ ಆಧುನಿಕ ಜೀವನದ ಭರಾಟೆಯಲ್ಲಿ ರೂಪಾಂತರಗೊಳ್ಳುತ್ತಿದೆ. ಮೂಲ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮಹತ್ವದಾಗಿದೆ ಎಂದು ಎವಿಕೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಕಮಲ ಸೊಪ್ಪಿನ್ ಹೇಳಿದ್ದಾರೆ. 

Tap to resize

Latest Videos

undefined

ನಗರದ ಎ.ವಿ.ಕೆ ಮಹಿಳಾ ಕಾಲೇಜ್ ನಲ್ಲಿ ನಿನ್ನೆ(ಶನಿವಾರ) ಪಾರಂಪರಿಕ ಸಾಂಸ್ಕೃತಿಕ ದಿನಾಚರಣೆಯ ಪ್ರತಿರೂಪದ ಬಿಂಬವಾಗಿ ದೇಸಿ ಕಲರವ-2023ನ್ನು ಹಮ್ಮಿಕೊಳ್ಳಲಾಗಿತ್ತು. ದೇಸಿ ಕಲರವ-2023 ರ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಕಮಲ ಸೊಪ್ಪಿನ್ ಅವರು ನಮ್ಮ ನಾಡು ಹಲವಾರು ಧರ್ಮ, ಮತ, ಪಥ, ಭಾಷೆ, ಸಂಸ್ಕೃತಿ ಹೊಂದಿದೆ. ಅದರ ಪ್ರತಿರೂಪದ ಬಿಂಬವನ್ನು ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು  ರಂಗು - ರಂಗಿನ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಆ ಮೂಲಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿ ಅರಿತಿದ್ದಾರೆ ಎಂದರು.

ದಾವಣಗೆರೆ: ಅಲೆಮಾರಿಗಳ ಕುಂದುಕೊರತೆ ಆಲಿಸಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡ ಈ ದೇಸಿ ಕಲರವ ಕಾರ್ಯಕ್ರಮ ನೋಡಲು ಎರಡು ಕಣ್ಣು ಸಾಲದಾಗಿತ್ತು. ಸುಮಾರು ಎರಡು ಸಾವಿರ ವಿದ್ಯಾರ್ಥಿನಿಯರು ವಿವಿಧ ಸಂಸ್ಕೃತಿಗಳ ಉಡುಗೆ ತೊಡುಗೆಯಲ್ಲಿ ಕಾಣಿಸಿಕೊಂಡರು. ಕೊಡವ, ಕೂರ್ಗಿಸ್, ಲಂಬಾಣಿ, ಮರಾಠಿ, ಉತ್ತರ ಕರ್ನಾಟಕ, ಹೀಗೆ ವಿವಿಧ ವೇಷಭೂಷಣಗಳಲ್ಲಿ ಮಿಂಚಿದರು. 

ಈ ಸಡಗರದ ಜೊತೆಗೆ ಹಳ್ಳಿಯ ಜನಜೀವನದ ಬಿಂಬಿಸುವ ಗುಡಿಸಲು, ಬಾವಿ, ಜೋಕಾಲಿ, ದನದ ಕೊಟ್ಟಿಗೆ ಹೀಗೆ ವಿಧವಿಧವಾದ ಪ್ರತಿಕೃತಿಗಳನ್ನು ಅನಾವರಣಗೊಳಿಸಲಾಗಿತ್ತು. 

ಕ್ರಿಕೆಟ್‌ ಜಗತ್ತಿಗೆ ಬ್ಯಾಟ್‌ ತಯಾರಿಸಿ ಕೊಡುವ ವಿಶ್ವಕರ್ಮ ಕಾಯಕಯೋಗಿಗಳು

ವೇದಿಕೆ ಕಾರ್ಯಕ್ರಮದಲ್ಲಿ ದೇಸಿ ಸೊಗಡಿನ ಸುಮಾರು ಇಪ್ಪತ್ತಕ್ಕೂ ಹೆಚ್ಚು ನೃತ್ಯಗಳನ್ನು  ವಿದ್ಯಾರ್ಥಿನಿಯರು ಮಾಡಿ ನೋಡುಗರನ್ನು ಸೂರೆಗೊಂಡರು. ಅವರಿಗೆ ಕೈ ಜೋಡಿಸಿದ ಬೋಧಕ ಮತ್ತು ಬೋಧಕೇತರ ವರ್ಗದವರು ಜಾನಪದ ಗೀತೆ, ಜನಪದ ನೃತ್ಯ ಮಾಡಿ ವಿದ್ಯಾರ್ಥಿನಿಯರಿಗೆ ಮನರಂಜನೆ ನೀಡಿದರು. 

ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿದ್ದ ಎವಿಕೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರವಿ ಬಣಕಾರ ಅವರು ಇಂದು ನಿಮ್ಮಲ್ಲರ ಸಡಗರ ಸಂಭ್ರಮದಿಂದ ನಮ್ಮ ಸಂಸ್ಕೃತಿ ನಾಶ ಹೊಂದಿಲ್ಲ ಮತ್ತಷ್ಟು ಎತ್ತರಕ್ಕೆ ಬೆಳೆದಿದೆ ಎಂದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು IQAC ಕೋ ಆರ್ಡಿನೇಟರ್ ಆದ ಪ್ರೊ. ಆರ್. ಆರ್. ಶಿವಕುಮಾರ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಪ್ರೊ. ಆರ್.ಸಿ. ಗೌಡ, ಸಸ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಪ್ರಭಾವತಿ ಎಸ್ ಹೊರಡಿ, ಸಾಂಸ್ಕೃತಿಕ ಸಮಿತಿ ಸಂಯೋಜಕರಾದ ಡಾ. ಆರ್.ಜಿ ಕವಿತಾ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರಣಧೀರ, ಸಾಂಸ್ಕೃತಿಕ ಸಮಿತಿ ಸದಸ್ಯರಾದ ಡಾ. ಲೋಹಿತ್ ಎಚ್. ಎಂ., ಡಾ. ದಿವ್ಯಾ ಟಿ, ಡಾ. ನಾಗವೇಣಿ ಜೆ.ಜಿ., ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಸಂಗೀತ ಎಂ,(ಕಲಾ ವಿಭಾಗ) ಸ್ಮಿತ ಎಚ್. ಎಚ್ (ವಿಜ್ಞಾನ ವಿಭಾಗ), ಐಶ್ವರ್ಯ (ವಾಣಿಜ್ಯ ವಿಭಾಗ) ಉಪಸ್ಥಿತರಿದ್ದರು. 

click me!