ಶಿವಮೊಗ್ಗ (ಜು.04): ಎಸ್ ಎಸ್ ಎಲ್ ಸಿ ಪರೀಕ್ಷೆ ಯಾವುದೇ ಕಾರಣಕ್ಕೂ ನಡೆಸಬಾರದು ಎಂದು ಮತ್ತೆ ಎಂ.ಎಲ್.ಸಿ ಎಚ್ ವಿಶ್ವನಾಥ್ ಒತ್ತಾಯಿಸಿದ್ದಾರೆ.
ಮೈಸೂರಿನಲ್ಲಿಂದು ಮಾತನಾಡಿದ ಶಾಸಕ ವಿಶ್ವನಾಥ್ ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದು ಮಾಡಲು ಆಗ್ರಹಿಸಿದ್ದು, ಅಕ್ಷರ ಆರೋಗ್ಯ ಚೆನ್ನಾಗಿದ್ದರೆ ಆಡಳಿತ ಚೆನ್ನಾಗಿರುತ್ತದೆ. ಮಗುವಿನ ಆರೋಗ್ಯ ಸುರಕ್ಷತೆ ನಡತೆ ಪರಿಸರ ಇದನ್ನು ಶಿಕ್ಷಣ ಇಲಾಖೆ ಅರ್ಥ ಮಾಡಿಕೊಳ್ಳಬೇಕು ಎಂದರು.
undefined
ಗದಗ: ನೆಟ್‌ವರ್ಕ್ ಸಮಸ್ಯೆ, ಸರಿಯಾಗಿ ಪಾಠ ಕೇಳಲಾಗದೆ SSLC ವಿದ್ಯಾರ್ಥಿಗಳ ಪರದಾಟ .
ಮಗುವಿನ ಆರೋಗ್ಯ ಸುರಕ್ಷತೆ ಈಗ ಮುಖ್ಯ ನಂತರ ಶಿಕ್ಷಣ. ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ದೊಡ್ಡ ಅನಾಹುತವಾಗುತ್ತದೆ. ಪಿಯುಸಿ ಬೇಡ ಎಂದು ಹೇಳಲಾಗಿದೆ. ಶಿಕ್ಷಣ ಸಮಿತಿಯ ವರದಿ ಏನು ಹೇಳಿದೆ? ನೀವು ಆರೋಗ್ಯ ಇಲಾಖೆಯ ಸಲಹೆ ತೆಗೆದುಕೊಂಡಿದ್ದೀರಾ? ಇದು ಯಾವುದನ್ನು ನೀವು ತೆಗೆದುಕೊಂಡಿಲ್ಲ. ಪರೀಕ್ಷೆ ನಡೆಸುವುದು ಹುಡುಗಾಟನಾ. ದ್ವಿತೀಯ ಪಿಯುಸಿಗೆ ಪರೀಕ್ಷೆ ಇಲ್ಲ. ಆಗಿದ್ದರೆ ಅವರಿಗಿಂತ ಚಿಕ್ಕವರಾದ ಎಸ್ ಎಸ್ ಎಲ್ ಸಿ ಅವರಿಗೆ ಏಕೆ ಎಂದು ವಿಶ್ವನಾಥ್ ಹೇಳಿದರು.
ಬಹುತೇಕ ರಾಜ್ಯಗಳಲ್ಲಿ ಪರೀಕ್ಷೆ ಮಾಡುತ್ತಿಲ್ಲ. ಈ ಮಕ್ಕಳಿಗೆ ಇನ್ನೂ ಲಸಿಕೆ ಬಂದಿಲ್ಲ. ಪರೀಕ್ಷೆ ಬರೆಯಲು 8.5 ಲಕ್ಷ ಮಕ್ಕಳಿದ್ದಾರೆ. ಮೈಸೂರಿನಲ್ಲಿ 39 ಸಾವಿರ ಮಕ್ಕಳಿದ್ದಾರೆ.
ಪರೀಕ್ಷೆ ನಡೆಸುವಾಗ 4 ಜನ ಸಂಪರ್ಕಕ್ಕೆ ಬರುತ್ತಾರೆ. ಸುಮಾರು 32 ಲಕ್ಷ ಜನರು ಸೇರುತ್ತಾರೆ. ಈಗ ಎಲ್ಲಾ ಕಡೆ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಕೇಳುವ ಕಾಲ. ಮಕ್ಕಳ ಬಳಿ ಯಾವ ಸರ್ಟಿಫಿಕೇಟ್ ಕೇಳುತ್ತೀರಾ ಎಂದರು.
ಪಿಯುಸಿ ಪರೀಕ್ಷೆ ರದ್ದಾದ ಮೇಲೆ SSLC ಪರೀಕ್ಷೆ ಯಾಕೆ.? ಸಿದ್ದರಾಮಯ್ಯ ...
ಡೆಲ್ಟಾ ಆತಂಕ ಹೆಚ್ಚಾಗುತ್ತಿದೆ. ಆರೋಗ್ಯ ಸಚಿವರೇ ಇದನ್ನು ಒಪ್ಪಿಕೊಂಡಿದ್ದಾರೆ. ಈ ಸಂದರ್ಬದಲ್ಲಿ ಪರೀಕ್ಷೆ ಏಕೆ ? ಡೆಲ್ಟಾ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದೆ.
ವೈದ್ಯರು ಇದನ್ನೇ ಹೇಳುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಪರೀಕ್ಷೆ ಬೇಡ. ಎಂ.ಎಲ್.ಸಿ ಎಚ್ ವಿಶ್ವನಾಥ್ ಒತ್ತಾಯಿಸಿದರು