ಮಾತೃಭಾಷಾ ಶಿಕ್ಷಣ: ದಕ್ಷಿಣದಲ್ಲಿ ಕರ್ನಾಟಕವೇ ನಂಬರ್ 1!

By Kannadaprabha News  |  First Published Jul 4, 2021, 7:59 AM IST

* ದ.ಭಾರತದಲ್ಲಿಯೇ ಮಾತೃಭಾಷೆಯಲ್ಲಿ ಅತಿ ಹೆಚ್ಚು ಶಿಕ್ಷಣ

* ದೇಶದಲ್ಲಿ 26% ಮಕ್ಕಳಿಂದ ಇಂಗ್ಲಿಷ್‌ ಮೀಡಿಯಂ

* ಮಾತೃಭಾಷಾ ಶಿಕ್ಷಣ: ದಕ್ಷಿಣದಲ್ಲಿ ಕರ್ನಾಟಕ ನಂ.1 

* ಶೇ.53 ಮಕ್ಕಳು ಕನ್ನಡ ಮಾಧ್ಯಮದಲ್ಲೇ ಕಲಿಕೆ 


ನವದೆಹಲಿ(ಜು.04): ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಅತಿ ಹೆಚ್ಚು ಮಕ್ಕಳು ಮಾತೃಭಾಷೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಶೇ.53.5ರಷ್ಟುವಿದ್ಯಾರ್ಥಿಗಳು ಕನ್ನಡದಲ್ಲಿ ಕಲಿಯುತ್ತಿದ್ದರೆ, ಶೇ.42.2ರಷ್ಟುಮಕ್ಕಳು ಇಂಗ್ಲಿಷ್‌ನಲ್ಲಿ ಕಲಿಯುತ್ತಿದ್ದಾರೆ ಎಂದು ಯುಡಿಐಎಸ್‌ಇ (ಶಿಕ್ಷಣಕ್ಕಾಗಿ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ) ವರದಿ ಬಿಡುಗಡೆ ಮಾಡಿದೆ.

ಇನ್ನು ದಕ್ಷಿಣದ ಇತರ ರಾಜ್ಯಗಳ ಪೈಕಿ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಅತಿ ಕಡಿಮೆ ಸಂಖ್ಯೆಯ ಮಕ್ಕಳು ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ತಮಿಳುನಾಡು ಮತ್ತು ಕೇರಳದಲ್ಲೂ ಮಾತೃಭಾಷೆಗಿಂತ ಇಂಗ್ಲಿಷ್‌ ಭಾಷೆಯಲ್ಲಿ ಶಿಕ್ಷಣ ಪಡೆಯುವ ಮಕ್ಕಳ ಸಂಖ್ಯೆ ಹೆಚ್ಚಿದೆ ಎಂದು ತಿಳಿಸಿದೆ.

Tap to resize

Latest Videos

ಈ ನಡುವೆ ದೇಶದಲ್ಲಿ ಶೇ.26ರಷ್ಟುಮಕ್ಕಳು ಇಂಗ್ಲಿಷ್‌ ಭಾಷೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶೇ.42ರಷ್ಟುವಿದ್ಯಾರ್ಥಿಗಳು ಹಿಂದಿಯಲ್ಲಿ ಕಲಿಕೆ ಮಾಡುತ್ತಿದ್ದಾರೆ. ಪಂಜಾಬ್‌, ಹರಾರ‍ಯಣ, ದೆಹಲಿ, ಹಲವು ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತೃಭಾಷೆಗಿಂತ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ಪಡೆಯತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿದೆ ಎಂದು ತಿಳಿಸಿದೆ.

ಪ್ರಾಥಮಿಕ ಶಿಕ್ಷಣದಿಂದ 12ನೇ ತರಗತಿವರೆಗೆ ಶಿಕ್ಷಣ ಪಡೆಯುತ್ತಿರುವ 26.5 ಕೋಟಿ ಮಕ್ಕಳನ್ನು ಪರಿಗಣಿಸಿ ಈ ವರದಿ ಬಿಡುಗಡೆ ಮಾಡಲಾಗಿದೆ.

click me!