Karnataka Folklore University ಹಿಂದಿನ ಅಧ್ಯಯನ ಭವಿಷ್ಯದ ಅಭಿವೃದ್ಧಿಗೆ ಕೀಲಿ ಕೈ: ರಾಜ್ಯಪಾಲ ಗೆಹ್ಲೋಟ್

By Gowthami K  |  First Published Dec 1, 2022, 6:05 PM IST

ಸಂಶೋಧನೆಯ ಮೂಲಕ ಸಾಂಪ್ರದಾಯಿಕ ಕಲೆಗಳು ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ಕಂಡುಹಿಡಿಯುವುದು ಮತ್ತು ಅವುಗಳ ಆಧಾರವಾಗಿರುವ ನಿರ್ದಿಷ್ಟ ಕಲೆಗಳ ಕೌಶಲ್ಯಗಳನ್ನು ಪ್ರಸಾರ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಕರ್ನಾಟಕ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿಪ್ರಾಯಪಟ್ಟರು.


ಹಾವೇರಿ(ಡಿ.1): ಸಂಶೋಧನೆಯ ಮೂಲಕ ಸಾಂಪ್ರದಾಯಿಕ ಕಲೆಗಳು ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ಕಂಡುಹಿಡಿಯುವುದು ಮತ್ತು ಅವುಗಳ ಆಧಾರವಾಗಿರುವ ನಿರ್ದಿಷ್ಟ ಕಲೆಗಳ ಕೌಶಲ್ಯಗಳನ್ನು ಪ್ರಸಾರ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಕರ್ನಾಟಕ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೋಟಗೋಡಿ 6 ಮತ್ತು 7ನೇ ಘಟಿಕೋತ್ಸವದಲ್ಲಿ ರಾಜಭವನದಿಂದ ವರ್ಚುವಲ್ ಮೂಲಕ ಭಾಗವಹಿಸಿ ಅವರು ಮಾತನಾಡಿದರು. ಹಿಂದಿನ ಅಧ್ಯಯನವು ಭವಿಷ್ಯದ ಅಭಿವೃದ್ಧಿಗೆ ಕೀಲಿ ಕೈ. ವಿಶ್ವವಿದ್ಯಾನಿಲಯವೂ ಈ ನಿಟ್ಟಿನಲ್ಲಿ ಸಕ್ರಿಯ ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದು ತಿಳಿಸಿದರು. 

ಕರ್ನಾಟಕದ ಸಂಸ್ಕೃತಿಯು ಪ್ರಪಂಚದ ಅತ್ಯಂತ ಪ್ರಾಚೀನ. ಕರ್ನಾಟಕದ ಪರಂಪರೆಯನ್ನು ವಾಸ್ತುಶಿಲ್ಪ, ಸಂಗೀತ, ಸಾಹಿತ್ಯ, ನೃತ್ಯ ಮತ್ತು ಕರಕುಶಲ ಕಲೆಗಳು ಇತ್ಯಾದಿಗಳ ಮೂಲಕ ತಿಳಿಯಬಹುದು ಮತ್ತು ಗುರುತಿಸಬಹುದು. ಕರ್ನಾಟಕ ರಾಜ್ಯದ ಶ್ರೀಮಂತ ಇತಿಹಾಸ ಮತ್ತು ಪರಂಪರೆ, ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಉಳಿಸುವ ಮತ್ತು ಅಭಿವೃದ್ಧಿಪಡಿಸುವ ಉದ್ದೇಶದಿಂದ ಮತ್ತು ಕನ್ನಡ ಜಾನಪದವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ 2011 ರಲ್ಲಿ ರಾಜ್ಯ ಸರ್ಕಾರವು ಗೊಟಗೋಡಿಯಲ್ಲಿ ವಿಶ್ವದ ಮೊದಲ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಮತ್ತು ವೈಜ್ಞಾನಿಕ ತತ್ವಗಳ ಮೇಲೆ ಜಾನಪದವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು. 

Tap to resize

Latest Videos

undefined

ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯವು ಇಂದಿನ ಅಗತ್ಯಗಳಿಗೆ ಅನುಗುಣವಾಗಿ ಸ್ಥಳೀಯ ಸಾಂಪ್ರದಾಯಿಕ ಜ್ಞಾನದ ವಿಕಾಸದ ಅಧ್ಯಯನಕ್ಕೆ ಬದ್ಧವಾಗಿರುವ ವಿಶಿಷ್ಟವಾದ ಶೈಕ್ಷಣಿಕ ಶೈಲಿಯನ್ನು ಅಳವಡಿಸಿಕೊಂಡಿದೆ. ಇದು ಜಾನಪದ ವಿದ್ಯಾರ್ಥಿಗಳಿಗೆ ಸುಧಾರಿತ ಬೋಧನೆ, ಕಲಿಕೆ ಮತ್ತು ಸಂಶೋಧನಾ ಅವಕಾಶಗಳನ್ನು ಒದಗಿಸುವ ಏಕೈಕ ವಿಶ್ವವಿದ್ಯಾಲಯವಾಗಿದೆ. ಅಲ್ಪಾವಧಿಯಲ್ಲಿಯೇ, ಈ ವಿಶ್ವವಿದ್ಯಾನಿಲಯವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದೆ ಮತ್ತು ವಿವಿಧ ಚಟುವಟಿಕೆಗಳಲ್ಲಿ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ ಎಂದು ತಿಳಿಸಿದರು. 

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಸಂಸ್ಕೃತಿಯನ್ನು ಅಧ್ಯಯನ ಮಾಡಲು ಅವಕಾಶಗಳನ್ನು ಒದಗಿಸುವಲ್ಲಿ ಈ ವಿಶ್ವವಿದ್ಯಾನಿಲಯವು ದೇಶದಲ್ಲಿ ಹೊಸ ಆಯಾಮವನ್ನು ಸ್ಥಾಪಿಸುತ್ತದೆ ಹಾಗೂ ಹೊಸ ಶಿಕ್ಷಣ ನೀತಿಯ ಆಧಾರದ ಮೇಲೆ ಕರ್ನಾಟಕದ ಎಲ್ಲಾ ಇತರ ಸಾಂಸ್ಕೃತಿಕ ಪ್ರಕಾರಗಳಲ್ಲಿ ಸಂಸ್ಕೃತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಕೆಲಸ ಮಾಡುತ್ತದೆ ಎಂಬ ಭರವಸೆ ಇದೆ ಎಂದರು. 

ಅತಿಥಿ ಉಪನ್ಯಾಸಕರ ಹಿತ ಕಾಯಲು ಬದ್ಧ: ಸಚಿವ ಅಶ್ವತ್ಥ ನಾರಾಯಣ

ಇಂದು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ಸನ್ಮಾನ್ಯ ಶ್ರೀ ಕೆ.ಸಿ. ನಾಗರಾಜ್, ಶ್ರೀ ಜೀವನ್ ರಾಮ್ ಸೂಳ್ಯ, ಶ್ರೀ ಟಿ. ಶಿವರಾಮ್ ಶೆಟ್ಟಿ ಮತ್ತು ಶ್ರೀ ವೆಂಕಪ್ಪ ಅಂಬಾ, ಶ್ರೀ ಯಶವಂತ ಸರದೇಶಪಾಂಡೆ ಮತ್ತು ಶ್ರೀ ಬಸವರಾಜ ಎಂ ಕೆಂಚಗೇರಿ ಅವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇವರ ಈ ಕೊಡುಗೆ ಸಮಾಜಕ್ಕಾಗಿ ನಿರಂತರವಾಗಿರಲಿ ಎಂದು ಆಶಿಸುತ್ತಾ, ಯುವ ಪೀಳಿಗೆಗೆ ಇವರು ಸ್ಫೂರ್ತಿ ಎಂದು ಹೇಳಿದರು. 
ಘಟಿಕೋತ್ಸವವು ಪದವಿಯನ್ನು ಪಡೆಯುವ ಮೂಲಕ ಔಪಚಾರಿಕ ಶಿಕ್ಷಣವನ್ನು ಪೂರ್ಣಗೊಳಿಸುವುದನ್ನು ಗುರುತಿಸುತ್ತದೆ, ಆದರೆ ಜೀವನದ ಮುಂದಿನ ಹಂತದ ಆರಂಭವನ್ನು ಸೂಚಿಸುತ್ತದೆ. ಈ ವಿಶ್ವವಿದ್ಯಾನಿಲಯದಿಂದ ಪಡೆದ ಗುಣಮಟ್ಟದ ಶಿಕ್ಷಣ ಮತ್ತು ಬಲವಾದ ನೈತಿಕ ಅಡಿಪಾಯವು ವಿದ್ಯಾರ್ಥಿಗಳ ವೃತ್ತಿಜೀವನವನ್ನು ಯಶಸ್ವಿಯಾಗಿಸುತ್ತದೆ ಮತ್ತು ಜೀವನದ ಹಾದಿಯಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಪಿಯುಗೆ ಬಹು ಆಯ್ಕೆ ಪ್ರಶ್ನೆ ಮಾದರಿ ಜಾರಿಗೆ ಸರಕಾರದ ಚಿಂತನೆ 

ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳು ಶಿಕ್ಷಣ, ಕೌಶಲ್ಯ ಮತ್ತು ನೈತಿಕ ಮೌಲ್ಯಗಳನ್ನು ಜೋಡಿಸುವ ಮೂಲಕ ನವ ಭಾರತ, ಶ್ರೇಷ್ಠ ಭಾರತ, ಆತ್ಮನಿರ್ಭರ ಭಾರತ ಮಾಡಲು ಬದ್ಧರಾಗಿದ್ದಾರೆ. ಅತ್ಯುತ್ತಮ ಭಾರತ, ಸ್ವಾವಲಂಬಿ ಭಾರತ ಮಾಡುವಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಡಾ. ಮೋಹನ್ ಆಳ್ವಾ, ಕುಲಪತಿ ಪ್ರೊ. ಟಿ.ಎಂ.ಭಾಸ್ಕರ್, ಕುಲಸಚಿವರು, ಸಿಂಡಿಕೇಟ್ ಸದಸ್ಯರು ಸೇರಿದಂತೆ ಮುಂತಾದ ಗಣ್ಯರು ಭಾಗವಹಿಸಿದ್ದರು.

click me!