* ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸಿ
* ಶಾಲೆಯಿಂದ ಮನೆಗೆ ಹೊರಟ ನಂತರವೂ ಎಲ್ಲರೂ ಎಚ್ಚರದಲ್ಲಿರಬೇಕು
* ಎಲ್ಲರಿಗೂ ಶುಭವಾಗಲಿ ಎಂದ ಮಾಜಿ ಸಚಿವ ಸುರೇಶ್ ಕುಮಾರ್
ಬೆಂಗಳೂರು(ಆ.24): ಧೈರ್ಯವಾಗಿ ಬನ್ನಿ, ಆನಂದದಿಂದ ಕಲಿಯಿರಿ, ಗೆಳೆಯರೊಂದಿಗೆ ಲವಲವಿಕೆಯಿಂದಿರಿ. ನಿಮ್ಮ ಶಾಲೆ-ಶಿಕ್ಷಕರು ನಿಮಗಾಗಿ ಎದುರು ನೋಡುತ್ತಿದ್ದಾರೆ. ಎಲ್ಲರಿಗೂ ಶುಭವಾಗಲಿ ಎಂದು ಶಾಸಕ ಎಸ್.ಸುರೇಶ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಸ್ಥೈರ್ಯ ತುಂಬಿದ್ದಾರೆ.
ಶಾಲೆ ಆರಂಭದ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜಾಜಿನಗರದ ಸಾಣೆ ಗುರುವನಹಳ್ಳಿ ಸರ್ಕಾರಿ ಶಾಲೆಗೆ ಸೋಮವಾರ ಬೆಳಿಗ್ಗೆ ಆಗಮಿಸಿ ಪುಸ್ತಕ, ಲೇಖನಿ ನೀಡಿ ಮಕ್ಕಳನ್ನು ಬರಮಾಡಿಕೊಂಡ ಶಾಸಕರು, ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸಿ. ಶಾಲೆಯಿಂದ ಮನೆಗೆ ಹೊರಟ ನಂತರವೂ ಎಲ್ಲರೂ ಎಚ್ಚರದಲ್ಲಿರಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಈ ವರ್ಷ ದಾಖಲಾಗುವ ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್
ಕೋವಿಡ್ ಇದ್ದರೂ ಹತ್ತನೇ ತರಗತಿಗೆ ನಾನು ಪರೀಕ್ಷೆ ನಡೆಸಿದ್ದು ಸಹ ಈಗ ಶಾಲೆ ಆರಂಭಕ್ಕೆ ಸ್ಫೂರ್ತಿ ಆಗಿರಬಹುದು. ಮತ್ತೆ ಯಾವುದೇ ಅಲೆ ಬಾಧಿಸದಿರಲಿ. ನಾನು ಸಚಿವನಾಗಿದ್ದಾಗ ಶಾಲೆ ಯಾವಾಗ ಆರಂಭವಾಗುತ್ತದೆ ಎಂದು ಅನೇಕ ಮಕ್ಕಳು, ಪೋಷಕರು ಕೇಳುತ್ತಿದ್ದರು. ಈಗ ಅದೆಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಾ ಇದ್ದೀನಿ ಎಂದು ಬೇಸರ ವ್ಯಕ್ತಪಡಿಸಿದರು.