ನೀಟ್ ದುರಂತ: ಮಗನ ಆಗಲಿಕೆ ಸಹಿಸಲಾಗದೇ ಅಪ್ಪನೂ ಸಾವಿಗೆ ಶರಣು

By Kannadaprabha News  |  First Published Aug 15, 2023, 9:35 AM IST

ವೈದ್ಯಕೀಯ ಪ್ರವೇಶಕ್ಕೆ ನಡೆಸಲಾಗುವ ನೀಟ್‌ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ ಜಗದೀಶ್ವರನ್‌ (19) ಎಂಬ ವಿದ್ಯಾರ್ಥಿಯೊಬ್ಬ ಶನಿವಾರ ತಮಿಳುನಾಡಿನ ರಾಜಧಾನಿ ಚೆನ್ನೈಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದರ ಬೆನ್ನಲ್ಲೇ ಮಗನ ಸಾವಿನ ದುಃಖ ತಡೆಯಲಾಗದೆ ತಂದೆ ಸೆಲ್ವಶೇಖರನ್‌ ಕೂಡಾ ಭಾನುವಾರ ಆತ್ಮಹತ್ಯೆಗೆ ಶರಣಾದ ಕರುಣಾಜನಕ ಘಟನೆ ನಡೆದಿದೆ.


ಚೆನ್ನೈ: ವೈದ್ಯಕೀಯ ಪ್ರವೇಶಕ್ಕೆ ನಡೆಸಲಾಗುವ ನೀಟ್‌ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ ಜಗದೀಶ್ವರನ್‌ (19) ಎಂಬ ವಿದ್ಯಾರ್ಥಿಯೊಬ್ಬ ಶನಿವಾರ ತಮಿಳುನಾಡಿನ ರಾಜಧಾನಿ ಚೆನ್ನೈಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದರ ಬೆನ್ನಲ್ಲೇ ಮಗನ ಸಾವಿನ ದುಃಖ ತಡೆಯಲಾಗದೆ ತಂದೆ ಸೆಲ್ವಶೇಖರನ್‌ ಕೂಡಾ ಭಾನುವಾರ ಆತ್ಮಹತ್ಯೆಗೆ ಶರಣಾದ ಕರುಣಾಜನಕ ಘಟನೆ ನಡೆದಿದೆ.

ಘಟನೆ ಕುರಿತು ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ವಿದ್ಯಾರ್ಥಿಗಳು ಆತ್ಮಹತ್ಯೆ ಚಿಂತನೆಗಳನ್ನು ಕೈಬಿಟ್ಟು ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಮತ್ತು ಜೀವನ ನಡೆಸುವುದನ್ನು ಕಲಿಯಬೇಕು ಎಂದು ಕರೆಕೊಟ್ಟಿದ್ದಾರೆ. ಅಲ್ಲದೆ ಶೀಘ್ರವೇ ರಾಜಕೀಯದಲ್ಲಿ ಆಗಲಿರುವ ಬದಲಾವಣೆಗಳು (ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ನಿರೀಕ್ಷೆಯಲ್ಲಿ) ನೀಟ್‌ ಅನ್ನು ತೆಗೆದು ಹಾಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ಪ್ರವೇಶಕ್ಕೆ ಸುಪ್ರೀಂಕೋರ್ಚ್‌ 2017ರಲ್ಲಿ ನೀಟ್‌ ಕಡ್ಡಾಯಗೊಳಿಸಿದ ಬಳಿಕ ತಮಿಳುನಾಡೊಂದರಲ್ಲೇ ಪರೀಕ್ಷೆ ಫೇಲಾಗಿ, ಇಲ್ಲವೇ ಪರೀಕ್ಷಾ ಶುಲ್ಕ ಭರಿಸಲಾಗದೆ ಅಥವಾ ಇನ್ನಿತರೆ ಕಾರಣಗಳಿಗಾಗಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  

Tap to resize

Latest Videos

undefined

ನಿರಾಶೆ: ದ್ವಿತೀಯ ಪಿಯುಸಿಯಲ್ಲಿ (2nd PUC) 500ಕ್ಕೆ 427 ಅಂಕಗಳನ್ನು ಪಡೆದಿದ್ದ ಜಗದೀಶ್ವರನ್‌ (Jagadishwaran) ಈ ವರ್ಷ ಎರಡನೇ ಬಾರಿ ನೀಟ್‌ ಪರೀಕ್ಷೆ ಬರೆದಿದ್ದ. ಆದರೆ ಈ ಬಾರಿಯೂ ಉತ್ತೀರ್ಣನಾಗುವಲ್ಲಿ ವಿಫಲನಾಗಿದ್ದ. ಆದರೂ ಧೈರ್ಯಗೆಡದ ಆತ ಮುಂದಿನ ಬಾರಿ ಮತ್ತೆ ಪರೀಕ್ಷೆ ಬರೆಯುವ ಛಲ ತೊಟ್ಟು ಫೋಟೋಗ್ರಾಫರ್‌ ಆಗಿರುವ ತಂದೆಗೆ ತರಬೇತಿ ಶುಲ್ಕ ರೆಡಿ ಮಾಡುವಂತೆ ಮನವಿ ಮಾಡಿದ್ದ.

ಪತಿ ತೀರಿಕೊಂಡ ದಿನವೇ, ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿದ ಮಹಿಳೆ

ಆದರೆ ಶನಿವಾರ ಸಂಜೆ ಸೆಲ್ವರಾಜನ್‌ (Selvarajan) ಕರೆ ಮಾಡಿದಾಗ ಜಗದೀಶ್ವರನ್‌ ಮೊಬೈಲ್‌ ಕರೆ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ನೇಹಿತರನ್ನು ಮನೆಗೆ ಕಳುಹಿಸಿ ನೋಡಿದಾಗ ಆತ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡುಬಂದಿದೆ. ಇದಾದ ಬಳಿಕ ಭಾನುವಾರ ಬೆಳಗ್ಗೆ ಪುತ್ರನ ಅಂತ್ಯಸಂಸ್ಕಾರ ಪ್ರಕ್ರಿಯೆಗಳನ್ನು ನಡೆಸಿದ್ದ ಸೆಲ್ವಶೇಖರನ್‌ ಭಾನುವಾರ ಸಂಜೆಯೇ ಮನೆಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ.

ತಮಿಳುನಾಡು ವಿರೋಧ:

ನೀಟ್‌ಗೂ ಮುನ್ನ ತಮಿಳ್ನಾಡಲ್ಲಿ ವೈದ್ಯಕೀಯ ಕೋರ್ಸ್‌ (Medical course) ಪ್ರವೇಶಕ್ಕೆ ಕೇವಲ ಪಿಯು ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತಿತ್ತು. ಆದರೆ 2017ರಲ್ಲಿ ಸ್ವತಃ ಸುಪ್ರೀಂಕೋರ್ಟ್ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ನೀಟ್‌ ಕಡ್ಡಾಯ ಎಂದು ತೀರ್ಪು ನೀಡಿತ್ತು. ಆದರೆ ನೀಟ್‌ ವ್ಯವಸ್ಥೆ ಕೇವಲ ಶ್ರೀಮಂತರರಿಗೆ, ಖಾಸಗಿ ಟ್ಯೂಷನ್‌ ಪಡೆಯಲು ಆರ್ಥಿಕವಾಗಿ ಸಾಮರ್ಥ್ಯವಿದ್ದವರಿಗೆ ಮಾತ್ರ ನೆರವಾಗುವ ರೀತಿಯಲ್ಲಿದೆ ಎಂಬುದು ತಮಿಳುನಾಡು ಸರ್ಕಾರದ (Tamilnadu Govt) ವಾದ. ಈ ಕಾರಣಕ್ಕಾಗಿಯೇ ನೀಟ್‌ ರದ್ದುಗೊಳಿಸುವ ಮಸೂದೆ ಅಂಗೀಕರಿಸಿ ರಾಷ್ಟ್ರಪತಿಗೆ ರವಾನಿಸಿದೆ. ಇತ್ತೀಚೆಗಷ್ಟೇ ರಾಜ್ಯಪಾಲ ಎನ್‌.ರವಿ (Tamilnadu Governor) ಅವರು ಯಾವುದೇ ಕಾರಣಕ್ಕೂ ತಾವು ನೀಟ್‌ ರದ್ದು ವಿಧೇಯಕಕ್ಕೆ ಸಹಿ ಹಾಕುವುದಿಲ್ಲ. ಇದು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಮಾರಕ. ಒಂದು ವೇಳೆ ಸಹಿ ಹಾಕುವ ಅನಿವಾರ್ಯತೆ ಬಂದರೆ, ಸಹಿ ಹಾಕುವ ಕಡೆಯ ವ್ಯಕ್ತಿ ನಾನಾಗಿರುತ್ತೇನೆ ಎಂದಿದ್ದರು. ಇದಕ್ಕೆ ಸಿಎಂ ಸ್ಟಾಲಿನ್‌ (CM Stalin) ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಸಲಿಂಗಿ ಎಂದು ಹೀಯಾಳಿಸ್ತಿದ್ದ ಸೀನಿಯರ್ಸ್‌: ಹಾಸ್ಟೆಲ್‌ ಬಾಲ್ಕನಿಯಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ

click me!