* ಹಿಜಾಬ್ ವಿವಾದದ ತೀರ್ಪು ಪ್ರಕಟಿಸಿದ ಕೋರ್ಟ್
* ಹಿಜಾಬ್ ತೀರ್ಪಿನ ಬಗ್ಗೆ ಸಿದ್ದಲಿಂಗ ಸ್ವಾಮಿಜಿ ಪ್ರತಿಕ್ರಿಯೆ
* ಉತ್ತಮ ವಾತಾವರಣ ನಿರ್ಮಾಣವಾಗಲಿ ಎಂದು ಆಶಿಸುವೆ ಎಂದ ಶ್ರೀಗಳು
ತುಮಕೂರು, (ಮಾ.15): ಹಿಜಾಬ್ ವಿವಾದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಹಿನ್ನೆಲೆಯಲ್ಲಿ ತುಮಕೂರಿನ ಸಿದ್ದಗಂಗಾ ಶ್ರೀ ಸಿದ್ದಲಿಂಗ ಸ್ವಾಮಿಜಿ ಹೇಳಿಕೆ ನೀಡಿದ್ದಾರೆ.
ಸಿದ್ದಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಗಳು, ಇವತ್ತು ಕರ್ನಾಟಕ ಉಚ್ಚ ನ್ಯಾಯಾಲಯ ಹಿಜಾಬ್ ವಿಚಾರದಲ್ಲಿ ಸುದೀರ್ಘವಾಗಿ ಚರ್ಚೆ, ವಾದ ವಿವಾದಗಳನ್ನು ಆಲಿಸಿದೆ. ಪೂರ್ಣ ಪೀಠ ಎಲ್ಲಾವನ್ನ ಕೂಡ ಕೂಲಂಕುಷವಾಗಿ ಅಧ್ಯಯನ ಮಾಡಿ ಇಂದು ತೀರ್ಪು ಪ್ರಕಟ ಮಾಡಿದೆ. ಸರ್ಕಾರ ಏನು ಆದೇಶ ಹೊರಡಿಸುತ್ತೋ ಆ ಕಾನೂನನ್ನ ಪಾಲನೆ ಮಾಡಬೇಕು. ಸಮವಸ್ತ್ರವನ್ನು ಕಡ್ಡಾಯವಾಗಿ ಎಲ್ಲರೂ ಕೂಡ ಧರಿಸಿಕೊಳ್ಳಬೇಕು ಎಂದರು.
Hijab Verdict ಕರ್ನಾಟಕ ಹೈಕೋರ್ಟ್ ಹಿಜಾಬ್ ನಿಷೇಧ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ!
ಅದು ಬಿಟ್ಟು ಬೇರೆ ಯಾವುದಕ್ಕೂ ಅವಕಾಶ ಇಲ್ಲ ಎಂದು ತೀರ್ಪು ಕೊಟ್ಟಿರುವಂತಹದ್ದು. ಪ್ರತಿಯೊಬ್ಬರು ಕೂಡ ಪಾಲನೆ ಮಾಡಬೇಕು. ನ್ಯಾಯಾಲಯದ ತೀರ್ಪು ಏನು ಬರುತ್ತೋ ಯಾರೇ ಆಗಿರಲಿ ಪಾಲನೆ ಮಾಡಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ. ಇಂದು ನ್ಯಾಯಾಲಯದ ಮೂರು ಜನ ಪೀಠ ಈ ಆದೇಶ ಮಾಡಿದೆ. ಯಾವುದಕ್ಕೂ ಅವಕಾಶ ನೀಡದೆ ಶಾಂತವಾತವರಣ ಕಾಪಾಡಿಕೊಳ್ಳುವುದು. ಪ್ರತಿಯೊಬ್ಬರು ಶಿಸ್ತು ನಿಯಮವನ್ನ ,ನಮ್ಮ ಕರ್ನಾಟಕದ ಸಂಸ್ಕೃತಿ ಪರಂಪರೆಯನ್ನ ಎತ್ತಿ ಹಿಡಿದಿದೆ ಎಂದು ತಿಳಿಸಿದರು.
ಶಾಂತಿ ವಾತಾವರಣವನ್ನ ಉಂಟು ಮಾಡುವ ಹಾಗೇ ಎಲ್ಲರೂ ಕೂಡ ನಡೆದುಕೊಳ್ಳಬೇಕು. ಮಕ್ಕಳ ಕಲಿಕೆ ಎಂದೂ ಹಿಂದುಳಿಯಬಾರದು. ಎಲ್ಲರೂ ಕೂಡ ಪ್ರೀತಿ ವಿಶ್ವಾಸ ಸಮಾನದಿಂದ ಬದುಕಬೇಕಾಗಿದೆ. ಇಂದಿನ ತೀರ್ಪು ಎಲ್ಲರೂ ಕೂಡ ಪಾಲನೆ ಮಾಡಿ. ಆ ಮೂಲಕ ಉತ್ತಮ ವಾತಾವರಣ ನಿರ್ಮಾ ಣವಾಗಲಿ ಎಂದು ಆಶಿಸುವೆ ಎಂದು ಹೇಳಿದರು.
ಹಿಜಾಬ್ ತೀರ್ಪು
ಹಿಜಾಬ್ ಆಗಿನ ಕಾಲಘಟ್ಟದಲ್ಲಿ ಇಸ್ಲಾಂಗೆ ಸೀಮಿತವಾಗಿರಲಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಗಾಗಿ ಹಿಜಾಬ್ ಬಳಸಲಾಗಿತ್ತು. ಇದು ಧರ್ಮಕ್ಕಿಂತ ಆಗ ಸಂಸ್ಕೃತಿಯ ಭಾಗವಾಗಿತ್ತು. ಇಸ್ಲಾಂ ಪ್ರಾರಂಭದ ವೇಳೆ ಮಹಿಳೆಯ ಸ್ಥಿತಿ ಹೀನವಾಗಿತ್ತು. ಹೀಗಾಗಿ ಹಿಜಾಬ್ ಧರಿಸಲು ಆಗ ಸೂಚಿಸಲಾಗಿತ್ತು. ಈಗಲೂ ಅದೇ ಪರಿಸ್ಥಿತಿ ಇದೆಯೇ? ಹೀಗೆಂದು ನಮ್ಮನ್ನೇ ಪ್ರಶ್ನಿಸಿಕೊಳ್ಳಬೇಕು. ಹೀಗೆಂದು ಮುಸ್ಲಿಂ ವಿದ್ವಾಂಸ ಯೂಸುಫ್ ಅಲಿ ವಿಶ್ಲೇಷಿಸಿದ್ದಾರೆ. ಧರ್ಮದಲ್ಲಿ ಹೇಳಿರುವುದೆಲ್ಲಾ ಕಡ್ಡಾಯವೆಂದು ಭಾವಿಸಬೇಕಿಲ್ಲ. 1400 ವರ್ಷ ಹಳೆಯ ತ್ರಿವಳಿ ತಲಾಖ್ ರದ್ದುಪಡಿಸಲಾಗಿದೆ. ಸುರಾದಲ್ಲಿರುವುದನ್ನು ವಿಶ್ಲೇಷಿಸಿ ಪ್ರಮಾಣಪತ್ರ ಸಲ್ಲಿಸಿಲ್ಲ. ಯಾವುದೇ ಮೌಲ್ವಿಯ ಪ್ರಮಾಣಪತ್ರ ಸಲ್ಲಿಸಿಲ್ಲ. ಹೀಗಾಗಿ ಹಿಜಾಬ್ ಇಸ್ಲಾಂನಲ್ಲಿ ಅತ್ಯಗತ್ಯ ಆಚರಣೆಯಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿ
ಕರ್ನಾಟಕ ಹೈಕೋರ್ಟ್ನ ತ್ರಿಸದಸ್ಯ ಪೀಠ ಇವತ್ತು(ಮಾರ್ಚ್ 15) ಮಹತ್ವದ ತೀರ್ಪು ಪ್ರಕಟಿಸಿದೆ. ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆದ್ರೆ ಈ ತೀರ್ಪನ್ನು ಪ್ರಶ್ನಿಸಿ ವಿದ್ಯಾರ್ಥಿನಿ ನಿಬಾ ನಾಜ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.