Gadag; ಪ್ರವಾದಿ ಪೈಗಂಬರ ಕುರಿತು ಪ್ರಬಂಧ ಏರ್ಪಡಿಸಿದ್ದ ಟೀಚರ್ ಗೆ ಘೇರಾವ್

By Suvarna NewsFirst Published Sep 27, 2022, 5:59 PM IST
Highlights

ಗದಗ ತಾಲೂಕಿನ ನಾಗಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಮುಖ್ಯ ಶಿಕ್ಷಕ ಪ್ರವಾದಿ ಪೈಗಂಬರ ಕುರಿತು ಪ್ರಬಂಧ ಏರ್ಪಡಿಸಿದ್ದರು. ಹೀಗಾಗಿ  ಶಿಕ್ಷಕರಿಗೆ ಶ್ರೀರಾಮ ಸೇನೆ ಕಾರ್ಯಕರ್ತರು  ಘೇರಾವ್ ಹಾಕಿರೋ ಘಟನೆ ನಡೆದಿದೆ.

ಗದಗ (ಸೆ.27): ಪ್ರವಾದಿ ಪೈಗಂಬರ ಕುರಿತು ಪ್ರಬಂಧ ಏರ್ಪಡಿಸಿದ್ದ ಸರ್ಕಾರಿ ಶಾಲಾ ಶಿಕ್ಷಕರಿಗೆ ಶ್ರೀರಾಮ ಸೇನೆ ಕಾರ್ಯಕರ್ತರು  ಘೇರಾವ್ ಹಾಕಿರೋ ಘಟನೆ ನಡೆದಿದೆ. ಗದಗ ತಾಲೂಕಿನ ನಾಗಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಎಲ್ ಬಿಜಾಪುರ ಅವರು ಇತ್ತೀಚೆಗೆ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಏರ್ಪಿಡಿಸಿದ್ರು. ಪ್ರವಾದಿ ಮೊಹಮ್ಮದರ ಜೀವನ ಪರಿಚಯದ 'ಮೊಹಮ್ಮದ್ (ಸ) ಎಲ್ಲರಿಗಾಗಿ' ಎಂಬ ಪುಸ್ತಕವನ್ನ ಹಂಚಿ ಪ್ರಬಂಧ ಬರೆಯಲು ಸೂಚಿಸಿದ್ರು. ಪ್ರಬಂಧದಲ್ಲಿ ಅನೇಕ‌ ಆಕ್ಷೇಪಾರ್ಹ ಬರವಣಿಗೆ ಇವೆ, ಮಕ್ಕಳ ಮನಸ್ಸಲ್ಲಿ ಮತಾಂಧತೆ ಬಿತ್ತುವ ನಿಟ್ಟಿನಲ್ಲಿ‌ ಪ್ರಬಂಧ ಬರೆಯಲಾಗಿದೆ ಅಂತಾ ರಾಮ ಸೇನೆ ಆರೋಪಿಸಿದೆ.  ಗದಗ ಮೂಲದ ಜುನೇದ್ ಸಾಬ್ ಉಮಚಗಿ ಎಂಬಾತರ ಸೂಚನೆಯಂತೆ ಸ್ಪರ್ಧೆ ಆಯೋಜನೆ ಮಾಡ್ಲಾಗಿದೆ. ಶಾಲೆಗೆ ಆಗಮಿಸಿ ಮುಖ್ಯ ಶಿಕ್ಷಕರಿಗೆ ಮೊಹಮ್ಮದ್ (ಸ) ಎಲ್ಲರಿಗಾಗಿ, ಅಂತಿಮ ಪ್ರವಾದಿ ಮೊಹಮ್ಮದ್ ಎಂಬ ಎರಡು ಪುಸ್ತಕ ನೀಡಿ ಪ್ರಬಂಧ ಬರೆಯಲು ಹೇಳಿದ್ರು. ಉತ್ತಮ ಪ್ರಬಂಧಗಳಿಗೆ 5 ಸಾವಿರ ರೂಪಾಯಿ, 3 ಸಾವಿರ ರೂಪಾಯಿ, 2 ಸಾವಿರ ರೂಪಾಯಿ ಬಹುಮಾನ ನೀಡೋದಾಗಿ ಹೇಳಿದ್ರು. ಹೀಗಾಗಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಪ್ರಬಂಧ ಬರೆಯಲು ಹೇಳಿದ್ದ ಶಿಕ್ಷಕ ಬಿಜಾಪುರ ಸೂಚಿಸಿದ್ರು.

ಪುಸ್ತಕದಲ್ಲಿದೆ ಮತಾಂತರದ ಬಗ್ಗೆ ಉಲ್ಲೇಖ!
ಮೊಹಮ್ಮದ್ ಎಲ್ಲರಿಗಾಗಿ ಎಂಬ ಪುಸ್ತಕದ 14 ನೇ ಪುಟದಲ್ಲಿ ಮತಾಂತರದ ಬಗ್ಗೆ ವಿವರಿಸಲಾಗಿದೆ.. ಮದಿನಾ ವಾತಾವರಣದ ಬಗ್ಗೆ ಹೇಳಲಾಗಿದೆ.. ಮದಿನಾದಲ್ಲಿ ದೊಡ್ಡ ಸಂಖ್ಯೆಯ ಜನರು ಮುಸ್ಲಿಂ ಸಂಪ್ರದಾಯವನ್ನ ಒಪ್ಪಿಕೊಂಡರು ಎಂದು ನಮೂದಿಸಲಾಗಿದೆ.. ಅಲ್ಲದೇ ಇಸ್ಲಾಂ ಧರ್ಮದ ಪರಿಚಯವನ್ನೂ ಪುಸ್ತಕದಲ್ಲಿ ಮಾಡಲಾಗಿದೆ.. 

ಶಾಲೆಗೆ ನುಗ್ಗಿದ ಶ್ರೀರಾಮ ಸೇನೆ ಕಾರ್ಯಕರ್ತರಿಂದ ಧರಣಿ‌
ಮತಾಂತರ ಉದ್ದೇಶದಿಂದಲೇ ಸ್ಪರ್ಧೆ ಏರ್ಪಡಿಸಲಾಗಿದೆ ಅಂತಾ ಆರೋಪಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಧರಣಿ ನಡೆಸಿದ್ರು.. ಶಾಲೆ ಮುಖ್ಯ ಶಿಕ್ಷಕರ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದ್ರು.. ಮುಖ್ಯ ಶಿಕ್ಷಕನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ  ಶ್ರೀರಾಮ ಸೇನೆಯ ಕಾರ್ಯಕರ್ತರು, ಶಿಕ್ಷಕನನ್ನ ಅಮಾನತು ಮಾಡ್ಬೇಕು ಅಂತಾ ಆಗ್ರಹಿಸಿದ್ರು. ಅಲ್ದೆ, ಸ್ಥಳಕ್ಕೆ ಜಿಲ್ಲಾ ಪಂಚಾಯತ ಸಿಇಒ ಹಾಗೂ ಡಿಡಿಪಿಐ ಆಗಮನಕ್ಕೆ ಪಟ್ಟು ಹಿಡಿದಿದ್ರು.

ಪಿಯು ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಚಿಕ್ಕಮಗಳೂರು ಜಿಲ್ಲಾಧಿಕಾರಿ

ಶ್ರೀರಾಮ ಸೇನೆ ಕಾರ್ಯಕರ್ತರೊಂದಿಗೆ ಗ್ರಾಮಸ್ಥರ ಜಟಾಪಟಿ
ಊರಿನವರ ಗಮನಕ್ಕೆ ತರದೇ ಶಾಲೆಗೆ ನುಗ್ಗಿ ಪ್ರತಿಭಟನೆ ನಡೆಸಿದ ಶ್ರೀರಾಮ ಸೇನೆ ಕಾರ್ಯಕರ್ತರ ವಿರುದ್ಧ ಗ್ರಾಮಸ್ಥರು ಗರಂ ಆಗಿದ್ರು.. ಎಸ್ ಡಿಎಂಸಿ ಸದಸ್ಯರು ಹಾಗೂ ಕಾರ್ಯಕರ್ತರ ಮಧ್ಯ ಕೆಲಕಾಲ ಜಟಾಪಟಿ ನಡೀತು.

ಶಿಕ್ಷಕರ ನೇಮಕಾತಿ: ಅಧಿಕಾರಿಗಳ ಬಂಧನ

ಸರ್ಕಾರದ ಆದೇಶ ಇಲ್ದೆ, ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ಆಕ್ಷೇಪಾರ್ಹ ಸಾಹಿತ್ಯವನ್ನ ಮಕ್ಕಳಿಂದ ಬರೆಸಿ ಮುಖ್ಯ ಶಿಕ್ಷಕ ಪೇಚಿಗೆ ಸಿಲುಕಿದ್ದಾರೆ. ಅದೇನೇ ಇದ್ರೂ ಮಕ್ಕಳ ಕಲಿಕೆಯ ಮೇಲೆ ವ್ಯತರಿಕ್ತ ಪಡಿಣಾಮ ಬೀರಕೂಡದು ಅನ್ನೋದು ಗ್ರಾಮಸ್ಥರ, ಪ್ರಜ್ಞಾವಂತರ ಆಶಯ.

click me!