ಕೆಲವೇ ದಿನಗಳಲ್ಲಿ ತಮ್ಮ ತಪ್ಪು ಅರ್ಥೈಯಿಸಿಕೊಂಡು ಶಾಲೆಗೆ ಬರ್ತಾರೆ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

By Suvarna NewsFirst Published Mar 16, 2022, 8:11 PM IST
Highlights

ಹೈಕೋರ್ಟ್ ತೀರ್ಪಿನಿಂದಾಗಿ ವಿದ್ಯಾರ್ಥಿನಿಯರಿಗೆ ಅಸಮಾಧಾನವಾಗಿದ್ದು, ತಮ್ಮ ತಪ್ಪು ಅರ್ಥೈಸಿಕೊಂಡು ಶಾಲೆಗೆ ಬರ್ತಾರೆ ಎಂದು  ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರು(ಮಾ.16): ಹೈಕೋರ್ಟ್ ತೀರ್ಪಿನಿಂದಾಗಿ ವಿದ್ಯಾರ್ಥಿನಿಯರಿಗೆ ಅಸಮಾಧಾನ ಉಂಟಾಗಿರುತ್ತದೆ. ತಮ್ಮ ತಪ್ಪು ಅರ್ಥೈಸಿಕೊಂಡು ಶಾಲೆಗೆ ಬರ್ತಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Education Minister BC Nagesh) ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ಕೋರ್ಟ್ ಗೆ ಹೋದವರಿಗೆ ನಿನ್ನೆ ತೀರ್ಪು ಬಂದಿದೆ. ಅವರ ಪರವಾಗಿ ತೀರ್ಪು ಬಂದಿಲ್ಲ. ಹೀಗಾಗಿ ಅಸಮಾಧಾನ ಆಗಿರುತ್ತೆ. ಮುಂದೆ ಕೆಲವೇ ದಿನಗಳಲ್ಲಿ ತಮ್ಮ ತಪ್ಪು ಅರ್ಥೈಯಿಸಿಕೊಂಡು ಶಾಲೆಗೆ ಬರ್ತಾರೆ. ಮೊದಲಿನಂತೆ ಸ್ಕೂಲ್ ಯೂನಿಫಾರಂ ಹಾಕಿಕೊಂಡು ಶಾಲೆಗೆ ಆಗಮಿಸುತ್ತಾರೆ ಎಂದು ಹೇಳಿದರು.

Latest Videos

ವಿದ್ಯಾರ್ಥಿಗಳ ಹಿಂದೆ ಕಾಣದ ಕೈಗಳ ಕೈವಾಡ ಇರುವ ವಿಚಾರದ ಕುರಿತು ಹೈಕೋರ್ಟ್ ಉಲ್ಲೇಖಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಗೃಹ ಇಲಾಖೆ ವ್ಯಾಪ್ತಿಗ ಬರುತ್ತೆ. ಅವರು ತನಿಖೆ ಮಾಡಿದಾಗ ಎಲ್ಲವೂ ಗೊತ್ತಾಗುತ್ತೆ ಎಂದು ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದರು.

KARNATAKA APEX BANK RECRUITMENT 2022: ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ ನೇಮಕಾತಿ 

ಸಮವಸ್ತ್ರ ಕುರಿತ ಗೊಂದಲಗಳಿಗೆ ಹಿಜಾಬ್ ತೀರ್ಪಿನಿಂದ ತಿದ್ದುಪಡಿ: ಶಾಲೆ - ಕಾಲೇಜುಗಳಲ್ಲಿ ಹಿಜಾಬ್ (Hijab) ನಿಷೇಧ ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ (High court) ತೀರ್ಪು ಎತ್ತಿ ಹಿಡಿದಿದೆ. ಹಿಜಾಬ್ ಅನ್ನುವುದು ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಹೈಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ (B.C Nagesh) ಹೇಳಿದ್ದಾರೆ.

ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ವಿಚಾರವಾಗಿ ಕರ್ನಾಟಕ ಹೈಕೋರ್ಟ್‌ (Karnataka High court) ನೀಡಿರುವ ಐತಿಹಾಸಿಕ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಈ ನೆಲ ಹಾಗೂ ನೆಲದ ಕಾನೂನು ಅಂತಿಮ ಎಂದು ಹೇಳಿದ್ದಾರೆ.

 

ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ವಿಚಾರವಾಗಿ ಕರ್ನಾಟಕ ಹೈ ಕೋರ್ಟ್‌ನ ಐತಿಹಾಸಿಕ ತೀರ್ಪನ್ನು ಸ್ವಾಗತಿಸುತ್ತೇನೆ.
ಈ ನೆಲ, ನೆಲದ ಕಾನೂನು ಅಂತಿಮ.

I welcome Landmark judgement of Hon'ble Karnataka High Court on School/College uniform Rules.
It reiterated that the law of the land is above everything.

— B.C Nagesh (@BCNagesh_bjp)

ಸಮವಸ್ತ್ರ ವಿಚಾರದಲ್ಲಿ ಹೈಕೋರ್ಟ್ ಸ್ಪಷ್ಟತೆ ನೀಡಿದೆ. ಶಿಕ್ಷಣ ನೀತಿಯಲ್ಲಿ ಸಮವಸ್ತ್ರ ಕುರಿತು ಇದ್ದಂತಹ ಗೊಂದಲಗಳನ್ನು ಈ ತೀರ್ಪಿನ ಆಧಾರದ ಮೇಲೆ ತಿದ್ದುಪಡಿ ಮಾಡುವ ಮೂಲಕ ಸರಿಪಡಿಸಲಾಗುವುದು ಎಂದು ಬಿ.ಸಿ. ನಾಗೇಶ್ ಹೇಳಿದರು.

ವೈದ್ಯಕೀಯ ಕೋರ್ಸ್ ಶುಲ್ಕ ಕಡಿತಗೊಳಿಸಲು ಚಿಂತನೆ: ಡಾ.ಕೆ.ಸುಧಾಕರ್ 

ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕನ್ನು ಎತ್ತಿಹಿಡಿದಿದೆ-ಗೃಹ ಸಚಿವರು: ಹೆಣ್ಣುಮಕ್ಕಳಿಗೆ ಸಿಗಬೇಕಾದ ಶಿಕ್ಷಣವೆಂಬ ಮೂಲಭೂತ ಹಕ್ಕನ್ನು ಹಿಜಾಬ್ ವಿವಾದ ಕುರಿತು ಇಂದು ಹೈಕೋರ್ಟ್ ನೀಡಿರುವ ತೀರ್ಪು ಎತ್ತಿಹಿಡಿದಿದೆ.ಐತಿಹಾಸಿಕ ತೀರ್ಮಾನವನ್ನು ಹೈಕೋರ್ಟ್ ನೀಡಿದೆ. ಸರ್ಕಾರ ರೂಪಿಸಿದ ನಿಯಮದ ಪರವಾಗಿ ತೀರ್ಪು ಬಂದಿದೆ. ಹೆಣ್ಮಕ್ಕಳ ಶಿಕ್ಷಣ ಪಡೆಯುವ ಹಕ್ಕನ್ನು ಕೋರ್ಟ್ ಎತ್ತಿ ಹಿಡಿದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ನಮಗೆ ಈ ತೀರ್ಪು ಸಂತೋಷ ಕೊಟ್ಟಿದೆ. ‌ನ್ಯಾಯಾಲಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.‌ ಈ ತೀರ್ಪನ್ನು ದೇಶ, ವಿದೇಶಗಳು ಗಮನಿಸುತ್ತಿದ್ದವು. ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಯಾವುದೇ ಧರ್ಮದ ಮತಾಂಧತೆ ಬೆಳೆಸಿಕೊಳ್ಳದೆ ಶಾಲೆಗಳಲ್ಲಿ ನಾವು ಅಣ್ಣ ತಮ್ಮಂದಿರು ಅಕ್ಕ ತಂಗಿಯರು ಹಾಗೂ ವಿಶೇಷವಾಗಿ ಭಾರತ ಮಾತೆಯ ಮಕ್ಕಳು ಎಂದು ಸಂಸ್ಕಾರದಿಂದರಬೇಕು ಎಂದು ಹೇಳಿದ್ದಾರೆ.

click me!