ಎಂ ಎಸ್ ಧೋನಿ ಶಾಲೆಗೆ ಶಾಕ್ ಕೊಟ್ಟ ಶಿಕ್ಷಣ ಇಲಾಖೆ...!

By Naveen Kodase  |  First Published Feb 4, 2023, 4:42 PM IST

ರಾಜ್ಯ ಪಠ್ಯಕ್ರಮದಡಿ ಅನುಮತಿ ಪಡೆದಿದ್ದ ಎಂಎಸ್ ದೋನಿ ಶಾಲೆ
ಸಿಬಿಎಸ್ಇ ಹಾಗೂ ಇತರೆ ಪಠ್ಯ ಬೋಧನೆ ಹಿನ್ನಲೆ ಎಂಎಸ್ ದೋನಿ ಶಾಲೆಗೆ ನೋಟಿಸ್
ಆರ್ಕಿಡ್ ಶಾಲೆಗಳ ಜೊತೆ ಎಂಎಸ್ ದೋನಿ ಶಾಲೆಗೂ ಶಾಕ್


ಬೆಂಗಳೂರು(ಫೆ.04): ರಾಜ್ಯ  ಪಠ್ಯಕ್ರಮದಡಿ ಅನುಮತಿ ಪಡೆದು ಸಿಬಿಎಸ್ಇ ಹಾಗೂ ಇತರೆ ಪಠ್ಯ ಬೋಧನೆ ಮಾಡಿದ ಹಿನ್ನೆಲೆಯಲ್ಲಿ ಎಂ ಎಸ್ ಧೋನಿ ಶಾಲೆಗೆ ರಾಜ್ಯ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ. ಇದೀಗ ಆರ್ಕಿಡ್‌ ಶಾಲೆಗಳ ಜತೆಗೆ ಎಂ ಎಸ್ ಧೋನಿ ಶಾಲೆಗೂ ಶಾಕ್‌ ನೀಡಲಾಗಿದೆ. 

ಇಲ್ಲಿನ ಸಿಂಗಸಂದ್ರದಲ್ಲಿ ಕಳೆದ ವರ್ಷವಷ್ಟೇ ಅಂದರೆ 2021-22ರಲ್ಲಿ ಶಾಲೆ ಆರಂಭವಾಗಿತ್ತು. ಎಂ ಎಸ್ ಧೋನಿ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿವರೆಗೆ ಬೋಧನೆ ಮಾಡಲಾಗುತ್ತಿತ್ತು. ಇದೀಗ ಅನಧಿಕೃತ ಪಠ್ಯ ಬೋಧನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಧೋನಿ ಶಾಲೆಗೆ ನೋಟಿಸ್ ನೀಡಲಾಗಿದೆ. ಪ್ರಸಕ್ತ ವರ್ಷ ಧೋನಿ ಶಾಲೆಯಲ್ಲಿ ಒಟ್ಟು 248 ಮಕ್ಕಳು ದಾಖಲಾತಿ ಪಡೆದಿದ್ದರು. ಇದೀಗ ಧೋನಿ ಶಾಲೆ ಸೇರಿದಂತೆ ಬೆಂಗಳೂರಿನ 8 ಶಾಲೆಗಳಿಗೆ ನೋಟಿಸ್ ನೀಡಲಾಗಿದೆ.

Tap to resize

Latest Videos

ಸಿಬಿಎಸ್ ಇ ಶಾಲೆ ಅಂತಾ ಪೋಷಕರಿಂದ ಲಕ್ಷ ಲಕ್ಷ ಸುಲಿಗೆ ಮಾಡಿ ವಂಚನೆ ಹಿನ್ನಲೆ, ಬೆಂಗಳೂರಿನ 8 ಆರ್ಕಿಡ್ ಶಾಲೆಗೆಗಳಿಗೆ ನೋಟಿಸ್ ನೀಡಲಾಗಿದೆ. ಮೈಸೂರು ರಸ್ತೆ, ನಾಗರಭಾವಿ, ಪಣತೂರು, ಹೊಮ್ಮದೇವನಹಳ್ಳಿ ಹರಳೂರು, ಮಹಾಲಕ್ಷ್ಮಿ ಲೇಔಟ್, ಬೆಂಗಳೂರು ಉತ್ತರ ಜಿಲ್ಲೆಯ ಹೋನ್ನೆನಹಳ್ಳಿಯಲ್ಲಿರು ಆರ್ಕಿಡ್ ಶಾಲೆ ಹಾಗೂ ಹೊರಮಾವು ಭಾಗದಲ್ಲಿರು ಆರ್ಕಿಡ್ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ಈ ಎಲ್ಲಾ ಶಾಲೆಗಳ ಜತೆಗೆ ಖ್ಯಾತ ಕ್ರಿಕೆಟಿಗ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ದೋನಿ ಶಾಲೆಗೂ ಶಿಕ್ಷಣ ಇಲಾಖೆ ಶಾಕ್ ನೀಡಲಾಗಿದೆ. 

click me!