ಮಹಿಳೆಯರನ್ನ ಸ್ವಾವಲಂಭಿಯಾಗಿಸುವ ನಿಟ್ಟಿನಲ್ಲಿ ಗುಮ್ಮಟನಗರಿ ವಿಜಯಪುರದಲ್ಲಿ ಅಕ್ಕಮಹಾದೇವಿ ಮಹಿಳಾ ವಿ.ವಿ ಸ್ಥಾಪನೆಯಾಗಿದೆ. ಇಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿನಿಯರು ಸ್ವಾವಲಂಭಿಯಾಗಿ ತಮ್ಮ ಕಾಲ ಮೇಲೆ ತಾವು ನಿಲ್ಲಲು ಬೇಕಾದ ತರಬೇತಿಗಳನ್ನು ಸಹ ವಿವಿಯಲ್ಲಿ ಕೊಡುತ್ತಿರೋದು ವಿಶೇಷ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಮೇ.26): ಮಹಿಳೆಯರನ್ನ ಸ್ವಾವಲಂಭಿಯಾಗಿಸುವ ನಿಟ್ಟಿನಲ್ಲಿ ಗುಮ್ಮಟನಗರಿ ವಿಜಯಪುರದಲ್ಲಿ ಅಕ್ಕಮಹಾದೇವಿ ಮಹಿಳಾ ವಿ.ವಿ ಸ್ಥಾಪನೆಯಾಗಿದೆ. ಇಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿನಿಯರು ಸ್ವಾವಲಂಭಿಯಾಗಿ ತಮ್ಮ ಕಾಲ ಮೇಲೆ ತಾವು ನಿಲ್ಲಲು ಬೇಕಾದ ತರಬೇತಿಗಳನ್ನು ಸಹ ವಿವಿಯಲ್ಲಿ ಕೊಡುತ್ತಿರೋದು ವಿಶೇಷ. ಅದ್ರಲ್ಲು ಈಗ ವಿವಿಯ ಪತ್ರಿಕೋಧ್ಯಮ ವಿಭಾಗದಲ್ಲಿ ಹೊಸ ಪ್ರಯೋಗವೊಂದು ನಡೆದಿದೆ.
ಮಹಿಳಾ ವಿವಿ ವಿದ್ಯಾರ್ಥಿನಿಯರಿಗೆ ಡ್ರೋನ್ ಟ್ರೈನಿಂಗ್: ಕರ್ನಾಟಕ ರಾಜ್ಯ ಮಹಿಳಾ ವಿವಿಯಲ್ಲಿ ಹೊಸ ಪ್ರಯೋಗವೊಂದು ನಡೆಯುತ್ತಿದೆ. ವಿದ್ಯಾರ್ಥಿನಿಯರಿಗೆ ಡ್ರೋನ್ ಟ್ರೈನಿಂಗ್ ನೀಡುವ ಮೂಲ ವಿಭಿನ್ನ ಪ್ರಯತ್ನಕ್ಕೆ ವಿವಿ ಕೈಹಾಕಿದೆ. ವಿವಿಯ ಪತ್ರಿಕೋಧ್ಯಮ ವಿಭಾಗದ ವಿದ್ಯಾರ್ಥಿನಿಯರಿಗೆ ಡ್ರೋನ್ ಆಫರೇಟಿಂಗ್ ಟ್ರೈನಿಂಗ್ ನೀಡಲಾಗ್ತಿದೆ. ಡ್ರೋನ್ ಮೂಲಕ ದೃಶ್ಯಗಳನ್ನ ಸೆರೆಹಿಡಿಯೋದು ಹೇಗೆ? ಆಫರೇಟಿಂಗ್ ಹೇಗೆ ಮಾಡ್ಬೇಕು ಅನ್ನೋದರ ಬಗ್ಗೆ ವಿಶೇಷ ತರಬೇತಿ ನೀಡಲಾಗ್ತಿದೆ. ಮಹಿಳಾ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಓಂಕಾರ್ ಕಾಕಡೆ ಮುಂದೆ ನಿಂತು ತಮ್ಮ ವಿದ್ಯಾರ್ಥಿನಿಯರಿಗೆ ಟ್ರೈನಿಂಗ್ ಕೊಡಿಸುತ್ತಿದ್ದಾರೆ..
Vijayapura ಸರ್ಕಾರಿ ಆಸ್ಪತ್ರೆಯಲ್ಲಿ ತುಂಬು ಗರ್ಭಿಣಿ ನರಳಾಟ!
ಡ್ರೋನ್ ಆಫರೇಟ್ ಮಾಡೊವರೆಗು ತರಬೇತಿ: ವಿವಿಯಲ್ಲಿ ಪತ್ರಿಕೋದ್ಯಮದ ವಿಭಾಗದ 21 ವಿದ್ಯಾರ್ಥಿನಿಯರಿಗಾಗಿ ಡ್ರೋನ್ ಟ್ರೈನಿಂಗ್ ನಡೆಯುತ್ತಿದೆ. ಒಂದು ವಾರಗಳ ಕಾಲ ಈ ತರಬೇತಿ ನಡೆಯಲಿದೆ. 3 ರಿಂದ 4 ವಿದ್ಯಾರ್ಥಿನಿಯರ ಬ್ಯಾಚ್ ಮಾಡಿ ಡ್ರೋನ್ ತರಬೇತಿ ನೀಡಲಾಗ್ತಿದೆ. ವಿಶೇಷ ಅಂದ್ರೆ ವಿದ್ಯಾರ್ಥಿನಿಯರು ಸಂಪೂರ್ಣವಾಗಿ ಡ್ರೋನ್ ಆಪರೇಟಿಂಗ್ ಕಲಿಯೋವರೆಗು ಅವರಿಗೆ ತರಬೇತಿ ನೀಡಲಾಗ್ತಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್ ಜೊತೆಗೆ ಮಾತನಾಡಿದ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಓಂಕಾರ್ ಕಾಕಡೆ ವಿದ್ಯಾರ್ಥಿನಿಯರ ಕೈಗೆ ಡ್ರೋನ್ ನೀಡಲಾಗುತ್ತೆ. ಅವರು ಖುದ್ದಾಗಿ ಡ್ರೋನ್ ಆಫರೇಟ್ ಮಾಡುವುದನ್ನ ಕಲಿಯೋವರೆಗು ತರಬೇತಿ ನೀಡಲಾಗುತ್ತೆ ಎಂದಿದ್ದಾರೆ.
ಡ್ರೋನ್ ಆಪರೇಟಿಂಗ್ ಸುಲಭವಲ್ಲ: ಡ್ರೋನ್ ವಿಡಿಯೋಗಳನ್ನ ನೋಡೋದೆ ಒಂದು ಅಂದ. ಮದುವೆ, ದೊಡ್ಡ ಸಮಾರಂಭಗಳಲ್ಲಿ ಈ ಡ್ರೋನ್ ಕ್ಯಾಮರಾದ್ದೆ ದರ್ಬಾರು. ರಾಜಕೀಯ ಸಭೆ, ಬಹಿರಂಗ ಸಮಾವೇಶಗಳಲ್ಲಿ ಡ್ರೋನ್ ಕ್ಯಾಮರಾ ಇರಲೇಬೇಕು ಎನ್ನುವಂತಾಗಿದೆ. ಇತ್ತೀಚೆಗೆ ದೃಶ್ಯ ಮಾಧ್ಯಮಗಳು ಸಹ ಡ್ರೋನ್ ಬಳಸಿ ವಿಶೇಷ ದೃಶ್ಯಾವಳಿಗಳನ್ನ ಸೆರೆ ಹಿಡಿಯುತ್ವೆ. ಆದ್ರೆ ಡ್ರೋನ್ ಮೂಲಕ ದೃಶ್ಯಗಳನ್ನ ಸೆರೆ ಹಿಡಿಯುವುದು ಎಂದರೆ ಸುಲಭದ ಮಾತಲ್ಲ. ಅದಕ್ಕಾಗಿಯೇ ಪ್ರಾಪರ್ ಟ್ರೈನಿಂಗ್‌ನ ಅವಶ್ಯಕತೆ ಇರುತ್ತೆ. ತರಬೇತಿ ಪಡೆದವರು, ಎಕ್ಸಪರ್ಟ್ಗಳು ಮಾತ್ರ ಡ್ರೋನ್ ಆಫರೇಟ್ ಮಾಡೋದು. ಹೀಗಾಗಿ ಡ್ರೋನ್ ಆಪ್‌ರೇಟ್ ಪತ್ರಿಕೋದ್ಯಮದ ವಿದ್ಯಾರ್ಥಿನಿಯರಿಗೆ ಗೊತ್ತಿರಬೇಕು ಎನ್ನುವ ಕಾರಣಕ್ಕೆ ವಿವಿ ಪತ್ರಿಕೋಧ್ಯಮದ ವಿಭಾಗದ ಮುಖ್ಯಸ್ಥ ಓಂಕಾರ್ ಕಾಕಡೆ ಕಾರ್ಯದಲ್ಲಿ ತೊಡಗಿದ್ದಾರೆ.
ಡ್ರೋನ್ ಬಳಸಿ ಸದ್ದು ಮಾಡಿದ್ದ ಏಷ್ಯಾನೆಟ್ ಸುವರ್ಣ ನ್ಯೂಸ್: ಪ್ರವಾಹ ಉಂಟಾದ ಸಂದರ್ಭದಲ್ಲಿ, ಕಳೆದ ಕೋವಿಡ್ ಹಿನ್ನೆಲೆ ಲಾಕ್ ಡೌನ್ ಆದ ಸಂದರ್ಭದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಕೂಡ ಡ್ರೋನ್ ಬಳಸಿ ದೃಶ್ಯಗಳನ್ನ ಸೆರೆ ಹಿಡಿದು ವೀಕ್ಷಕರಿಗೆ ಸುದ್ದಿಗಳನ್ನ ಉಣಬಡಿಸಿತ್ತು. ಕೃಷ್ಣಾ-ಭೀಮಾ ನದಿಗಳಿಗೆ ಪ್ರವಾಹ ಉಂಟಾಗಿದ್ದಾಗ ಡ್ರೋನ್ ದೃಶ್ಯಗಳ ಮೂಲಕ ಸುದ್ದಿ ಮಾಡಿ ಸದ್ದು ಮಾಡಿತ್ತು. ಡ್ರೋನ್ ಮೂಲಕ ಪ್ರವಾಹದ ರೌದ್ರನರ್ತನದ ಸಾಕ್ಷಾತ್ ದರ್ಶನ ಮಾಡಿಸಿತ್ತು. ಕೋವಿಡ್ ನಿಂದಾಗಿ ಲಾಕ್‌ಡೌನ್ ಆದಾಗಲು ವಿಜಯಪುರ ನಗರದಲ್ಲಿ ಜನಜೀವನ ಹೇಗಿದೆ ಅನ್ನೋದನ್ನ ಡ್ರೋನ್ ಮೂಲಕವೇ ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಚ್ಚಿಟ್ಟಿತ್ತು.
Vijayapura ಮಕ್ಕಳ ಮಾರಾಟ ಜಾಲ ಸಕ್ರಿಯ, ಮತ್ತೆ ಮುನ್ನಲೆಗೆ ಜಯಮಾಲಾ ಕೇಸ್
ಹೊಸ-ಹೊಸ ಪ್ರಯೋಗಗಳಿಗೆ ಕೈಹಾಕುವ ಓಂಕಾರ್ ಕಾಕಡೆ: ಅಕ್ಕಮಹಾದೇವಿ ಮಹಿಳಾ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿರೋ ಓಂಕಾರ್ ಕಾಕಡೆ ಒಂದಿಲ್ಲೊಂದು ಹೊಸ ಪ್ರಯೋಗಗಳಿಗೆ ಕೈಹಾಕುತ್ತಲೆ ಇರ್ತಾರೆ. ಪತ್ರಿಕೋದ್ಯಮ ವಿದ್ಯಾರ್ಥಿನಿಯರಿಗೆ ಮಿಡಿಯಾದಲ್ಲೆ ಕೆಲಸ ಮಾಡ್ತಿರೋ ಅನುಭವ ಸಿಗಲಿ ಅನ್ನೋ ಕಾರಣಕ್ಕೆ ಕ್ಲಾಸ್ ರೂಂನ್ನೆ ಮಿಡಿಯಾ ಹೌಸ್ ಆಗಿ ನಿರ್ಮಾಣ ಮಾಡಿದ್ದಾರೆ. ಕ್ಲಾಸ್‌ನಲ್ಲಿ ಕಲಿಯುತ್ತಿದ್ದೇವೆ ಎನ್ನುವುದಕ್ಕಿಂತ ಹೆಚ್ಚಾಗಿ ಒಂದು ಮಿಡಿಯಾದಲ್ಲಿ ಕೆಲಸ ಮಾಡ್ತಿದ್ದೇವೆ ಎನ್ನುವ ಅನುಭವ ತಮ್ಮ ವಿದ್ಯಾರ್ಥಿನಿಯರಿಗೆ ಸಿಗಲಿ ಅನ್ನೋದು ಓಂಕಾರ್ ಕಾಕಡೆಯವರ ಕಾನ್ಸೆಪ್ಟ್ ಆಗಿದೆ. ಇನ್ನು ಹೊಸ ಟ್ರೆಂಡ್‌ಗೆ ತಕ್ಕಂತೆ ಕಲಿಕೆ ವಿಧಾನವನ್ನ ಬದಲಿಸಿರುವ ಇವರು ಡಿಜಿಟಲ್ ಮಿಡಿಯಾ ವರ್ಕಶಾಪ್, ಡೆಟಾ ಜರ್ನಲಿಜಂ, ಸುದ್ದಿ ಬರವಣಿಗೆಯಲ್ಲಿನ ಶೈಲಿಗಳನ್ನ ಮಾರ್ಪಾಡುಗೊಳಿಸಿ ತರಬೇತಿ ನೀಡ್ತಿದ್ದಾರೆ ಅನ್ನೋದು ವಿಶೇಷ.