'ಪಠ್ಯಪುಸ್ತಕಕ್ಕೆ ನನ್ನ ಲೇಖನ ಸೇರಿಸಬೇಡಿ 'ಎನ್ನುವ ಸಾಹಿತಿ ದೇವನೂರು ಮಹಾದೇವ ಅವರ ಅಭಿಪ್ರಾಯವನ್ನು ಪಠ್ಯ ಪುಸ್ತಕ ಸಮಿತಿ ಗೌರವಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
ವರದಿ: ಡೆಲ್ಲಿ ಮಂಜು
ನವದೆಹಲಿ (ಮೇ.26): 'ಪಠ್ಯಪುಸ್ತಕಕ್ಕೆ ನನ್ನ ಲೇಖನ ಸೇರಿಸಬೇಡಿ 'ಎನ್ನುವ ಸಾಹಿತಿ ದೇವನೂರು ಮಹಾದೇವ ಅವರ ಅಭಿಪ್ರಾಯವನ್ನು ಪಠ್ಯ ಪುಸ್ತಕ ಸಮಿತಿ ಗೌರವಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಪಠ್ಯ ಬೇಕೇಬೇಕು ಎನ್ನುವ ಒತ್ತಾಯವಿಲ್ಲ. ಅಲ್ಲದೇ ಕಂಟೆಂಟ್ ಮೇಲೆ ಕಾಮೆಂಟ್ ಮಾಡಬೇಕು ಹೊರತು ಪಠ್ಯ ಹೊರ ಬರುವುದಕ್ಕೆ ಮುಂಚೆ ಜನಿವಾರವೋ, ಉಡುದಾರವೋ, ಶಿವದಾರವೋ ಎಂದು ನೋಡುವುದು ತಪ್ಪು. ಪೂರ್ವಾಗ್ರಹ ಪೀಡಿತ ಮನಸ್ಸುಗಳು ಹೀಗೆ ಮಾಡುತ್ತಿವೆ. ಜಾತಿಗಳನ್ನು ಎತ್ತಿಕಟ್ಟುವ ಹುನ್ನಾರ ನಡೆಯುತ್ತಿದೆ ಎಂದರು.
ಇನ್ನು ಕೆಲವರು ಮೊಘಲ್ ಆಸ್ಥಾನದಲ್ಲಿದ್ದೇವೆ ಎಂಬ ಮನಸ್ಥಿತಿಯಲ್ಲಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅವರು ವಿಲ ವಿಲ ಅಂತಾ ಒದ್ದಾಡುತ್ತಿದ್ದಾರೆ. ಅಲ್ಲದೇ ಮೆಕಾಲೆ ಗುಲಾಮಗಿರಿಯಿಂದ ಅವರು ಹೊರ ಬರಬೇಕಿದೆ ಎಂದು ಬುದ್ದಿಜೀವಿಗಳ ವಿರುದ್ದ ರವಿ ಗುಟುರು ಹಾಕಿದರು. ಈ ಹಿಂದೆಯೂ ಪುಸ್ತಕಗಳಲ್ಲಿ ಮೊಘಲರನ್ನು ವೈಭವಿಕರಣ ಮಾಡುವ ಕೆಲಸ ಮಾಡಿದ್ರು. ನಮ್ಮ ದೇಶದ ಶಿವಾಜಿಯ ಬಗ್ಗೆ ಹೆಚ್ಚು ಹೇಳಲೇ ಇಲ್ಲ. ಭಾರತೀಯತೆಯನ್ನು ಎತ್ತಿಹಿಡಿಯುವ ಕೆಲಸ ಮಾಡಿರಲಿಲ್ಲ. 70 ವರ್ಷಗಳ ಅವರ ಆಡಳಿತಕ್ಕೆ ಪೆಟ್ಟು ಬಿದಿದ್ದೆ. ಹೀಗಾಗಿ ಕೆಲವರು ವಿಲ ವಿಲ ಎಂದು ಒದ್ದಾಡುತ್ತಿದ್ದಾರೆ ಎಂದರು.
Textbook Controversy: ಪಠ್ಯ ಪರಿಷ್ಕರಣೆಗೆ ಹೆಚ್ಚಾಗುತ್ತಿದೆ ವಿರೋಧದ ಕೂಗು!
ಅಧ್ಯಯನ ನಡೆಯಲಿ: ಸಾವಿರಾರು ದೇವಸ್ಥಾನಗಳನ್ನು ಒಡೆದು ಮಸೀದಿ ಕಟ್ಟಿರುವುದು ವಾಸ್ತವ ಸತ್ಯ. ನಾನು ಈಗಲೂ ಸವಾಲು ಹಾಕುತ್ತೇನೆ, ಶ್ರೀರಂಗಪಟ್ಟಣ ಜಾಮೀಯ ಮಸೀದಿಯ ಬಗ್ಗೆ ಪುರಾತತ್ವ ಇಲಾಖೆಯಿಂದ ಅಧ್ಯಯನ ಮಾಡಿಸಲಿ. ಆಗ ಟಿಪ್ಪು ಸುಲ್ತಾನ್ ನಿಜ ಬಣ್ಣ ಬಯಲಾಗುತ್ತಿದೆ. ಈ ನೆಲದ ಕಾನೂನು ಅಂತಿಮ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಟಾಂಗ್ ಕೊಟ್ಟರು. ಇನ್ನು ತಾಂಬೂಲ ಪ್ರಶ್ನೆ ನಂಬಿಕೆ ಇರುವವರು ಕೇಳಿದ್ದಾರೆ. ಬೇರೆಯವರ ನಂಬಿಕೆ ನಾವು ಹೇಗೆ ಪ್ರಶ್ನೆ ಮಾಡಲು ಸಾಧ್ಯ. ಅಂತಿಮವಾಗಿ ಕಾನೂನು ಅಡಿಯಲ್ಲಿ ವಿವಾದ ಇತ್ಯರ್ಥವಾಗಲಿದೆ.
ಪಠ್ಯ ಪರಿಷ್ಕರಣೆ ವಿವಾದ: ತಮ್ಮ ಪಠ್ಯವನ್ನೂ ಸಹ ಕೈಬಿಡಿ ಎಂದ ಸಾಹಿತಿ ದೇವನೂರು ಮಹಾದೇವ
ಹಿಡಿಯಾಗಿ ಸಿಗುವ ಓಟಿಗಾಗಿ ಕೆಲವರು ಜೊಲ್ಲು ಸುರಿಸಿಕೊಂಡು ಹೋಗ್ತಾರೆ. ಸತ್ಯ ಗೊತ್ತಿದ್ದರೂ ಓಟಿಗಾಗಿ ರಾಜಕೀಯ ಮಾಡುತ್ತಾರೆ. ನಾವು ಓಟಿಗಾಗಿ ರಾಜಕೀಯ ಮಾಡಿಲ್ಲ. ಬಿಜೆಪಿಯವರು ನಾಲ್ಕು ತಲೆ ಮಾರುಗಳಿಂದ ಇದೇ ವಿಚಾರಗಳ ಮೇಲೆ ಹೋರಾಟ ಮಾಡಿದ್ದೇವೆ ಎಂದು ಹೇಳಿದರು. ಅಧಿಕಾರಕ್ಕಾಗಿ ಹೋಮ ಆವನ ಮಾಡುತ್ತಾರೆ. ಅವ್ರ ನಂಬಿಕೆಯನ್ನು ಪ್ರಶ್ನೆ ಮಾಡೊಕೆ ನಾವು ಯಾರು? ಅಂಥ ಪರೋಕ್ಷವಾಗಿ ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು.