ಗುಜರಾತ್‌ನ ವಡೋದರದಲ್ಲಿ ಶಾಲೆಯೊಂದು ನರ್ಸರಿ ಮಕ್ಕಳಿಗೆ ಮಸೀದಿಗೆ ಪ್ರವಾಸ ಯೋಜನೆ ಹಾಕಿಕೊಂಡಿದ್ದು, ಇದು ಪೋಷಕರಿಗೆ ತಿಳಿದು ವಿವಾದಕ್ಕೀಡಾಗುತ್ತಿದ್ದಂತೆ ತನ್ನ ಪ್ರವಾಸ ಯೋಜನೆಯನ್ನು ರದ್ದುಪಡಿಸಿದೆ
ವಡೋದರಾ: ಗುಜರಾತ್‌ನ ವಡೋದರದಲ್ಲಿ ಶಾಲೆಯೊಂದು ನರ್ಸರಿ ಮಕ್ಕಳಿಗೆ ಮಸೀದಿಗೆ ಪ್ರವಾಸ ಯೋಜನೆ ಹಾಕಿಕೊಂಡಿದ್ದು, ಇದು ಪೋಷಕರಿಗೆ ತಿಳಿದು ವಿವಾದಕ್ಕೀಡಾಗುತ್ತಿದ್ದಂತೆ ತನ್ನ ಪ್ರವಾಸ ಯೋಜನೆಯನ್ನು ರದ್ದುಪಡಿಸಿದೆ. ಗುಜರಾತ್‌ನ ವಡೋದರಾ ಜಿಲ್ಲೆಯ ಕಲಾಲಿಯಲ್ಲಿರುವ ದೆಹಲಿ ಪಬ್ಲಿಕ್ ಶಾಲೆ ತನ್ನ ನರ್ಸರಿ ಮಕ್ಕಳಿಗೆ ಈ ಪ್ರವಾಸ ಯೋಜನೆಯನ್ನು ಹಮ್ಮಿಕೊಂಡಿತ್ತು. ಭಜರಂಗದಳ ಕಾರ್ಯಕರ್ತರು ಕೂಡ ಈ ಪ್ರವಾಸಕ್ಕೆ ವಿರೋಧ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ. ಈ ಹಿಂದೆ ಮಕ್ಕಳನ್ನು ದೇವಸ್ಥಾನಕ್ಕೆ ಪ್ರವಾಸ ಕರೆದುಕೊಂಡು ಹೋಗಲಾಗಿತ್ತು. ಆದೇ ರೀತಿ ಈಗ ಮಸೀದಿಗೆ ಕರೆದುಕೊಂಡು ಹೋಗಲು ಯೋಜನೆ ರೂಪಿಸಲಾಗಿದೆ ಇದರಲ್ಲಿ ತಪ್ಪೇನು ಇಲ್ಲ. ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಮಸೀದಿಗೆ ಕಳುಹಿಸಲು ಒಪ್ಪಿಗೆ ನೀಡಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಪೋಷಕರೊಬ್ಬರು ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಹೆಸರು ಹೇಳಲಿಚ್ಛಿಸದ ಪೋಷಕರೊಬ್ಬರು ಬಜರಂಗದಳದ ಕಾರ್ಯಕರ್ತರನ್ನು ಮೂಲಭೂತವಾದಿ ಗುಂಪು ಎಂದು ದೂರಿದ್ದು, ತಮ್ಮ ಮಗುವಿಗೆ ಮಸೀದಿಗೆ ಹೋಗಲು ಸಾಧ್ಯವಾಗದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಈ ಮೊದಲು ಮಕ್ಕಳನ್ನು ಚರ್ಚ್‌ಗೆ ಕರೆದೊಯ್ಯಲಾಗಿತ್ತು ಮತ್ತು ಆ ದೈವಿಕ ಸ್ಥಳದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲಾಗಿತ್ತು ಎಂದು ಅವರು ದೂರಿದ್ದಾರೆ. ನನ್ನ ಮಗು ಮಸೀದಿ ವೀಕ್ಷಣೆಗೆ ತುಂಬ ಉತ್ಸುಕವಾಗಿತ್ತು. ನಾವು ಮಸೀದಿಯ ಬಗ್ಗೆ ಮಕ್ಕಳಿಗೆ ವಿವರಿಸಿದ್ದೆವು. ಆದರೆ ಅವರು ಅದನ್ನು ಮುಖತಃ ನೋಡಿರಲಿಲ್ಲ ಎಂದು ಮತ್ತೊಂದು ಮಗುವಿನ ತಾಯಿ ಹೇಳಿದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಬೆಂಗಳೂರು: ವಿಜಯನಗರ ಮಸೀದಿಗೆ ಬಿಬಿಎಂಪಿ ನೋಟಿಸ್; ಮುಸ್ಲಿಮ್ ಮುಖಂಡರಿಂದ ಆಕ್ರೋಶ
ಆದರೆ ಎಲ್ಲಾ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಲು ಮಹಿಳೆಯರಿಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಶಿಶುವಿಹಾರದ ವಿದ್ಯಾರ್ಥಿಗಳನ್ನು ಮಸೀದಿಗೆ ಕರೆದೊಯ್ಯಲಾಗಿದೆಯೇ ಮತ್ತು ಹೆಣ್ಣು ಮಗು ಎಲ್ಲಿಗೆ ಹೋಗಲು ಉತ್ಸುಕವಾಗಿತ್ತು ಎಂಬುದು ಸ್ಪಷ್ಟವಾಗಿಲ್ಲ ಎಂದು ಮಾಧ್ಯಮ ವರದಿ ಮಾಡಿದೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಸಂಯೋಜಕ ಕೇತನ್ ತ್ರಿವೇದಿ, ಶಾಲೆಯು ಮಸೀದಿಗೆ ಭೇಟಿ ನೀಡಲು ಆಗಸ್ಟ್ 5ರ ಶುಕ್ರವಾರವನ್ನು ಆಯ್ಕೆ ಮಾಡಿತ್ತು. ಮತ್ತು ಈ ಮಕ್ಕಳನ್ನು ಜುಮ್ಮಾ ನಮಾಜ್‌ನ ಭಾಗವಾಗಬೇಕೆಂದು ಅವರು ಬಯಸಿರಬೇಕು ಎಂದು ಶಂಕಿಸಿದ್ದಾರೆ. ಮಕ್ಕಳಿಗೆ ಸ್ಫೂರ್ತಿ ನೀಡಬೇಕಾದರೆ ಶಾಲಾ ಆಡಳಿತ ಮಂಡಳಿ ಮಕ್ಕಳನ್ನು ಆಸ್ಪತ್ರೆಗಳು, ಸೇನಾ ಶಿಬಿರಗಳಿಗೆ ಕರೆದೊಯ್ಯಬಹುದಿತ್ತು. ಇದರಿಂದ ಅವರು ವೈದ್ಯರು, ಸೈನಿಕರಾಗಲು ಸ್ಫೂರ್ತಿ ಪಡೆಯುತ್ತಾರೆ. ಅವರನ್ನು ಮಸೀದಿಗೆ ಏಕೆ ಕರೆದೊಯ್ಯಬೇಕು? ಮಕ್ಕಳನ್ನು ಮಸೀದಿಗೆ ಕರೆದೊಯ್ಯುತ್ತಾರೆಯೇ ಎಂಬುದನ್ನು ನೋಡಲು ವಿಎಚ್‌ಪಿ ಶುಕ್ರವಾರ ಜಾಗರಣೆ ನಡೆಸಲಿದೆ ಎಂದು ಅವರು ಹೇಳಿದರು.
ಬಳ್ಳಾರಿಗೂ ಕಾಲಿಟ್ಟ ಧರ್ಮ ದಂಗಲ್: ಮಸೀದಿ, ಮಂದಿರಗಳಲ್ಲಿ ಮೈಕ್ ಬಳಸಲು ಅನುಮತಿ ಕಡ್ಡಾಯ
ಈ ರೀತಿಯ ಫೀಲ್ಡ್ ಟ್ರಿಪ್‌ಗಳು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಇದು ಶೈಕ್ಷಣಿಕ ಪ್ರವಾಸಕ್ಕಿಂತ ಸ್ಟಂಟ್‌ನಂತೆ ತೋರುತ್ತದೆ ಎಂದು ವಿಎಚ್‌ಪಿ ಶಾಲಾ ಅಧಿಕಾರಿಗಳಿಗೆ ಹೇಳಿದೆ ಎಂದು ತ್ರಿವೇದಿ ಹೇಳಿದರು. ಶಾಲೆಯು ಶಿಕ್ಷಣಕ್ಕೆ ಒತ್ತು ನೀಡಬೇಕೇ ಹೊರತು ಧರ್ಮಕ್ಕಲ್ಲ ಎಂದು ಅವರು ಹೇಳಿದರು. ಮಕ್ಕಳು ದೇಶದ ಭವಿಷ್ಯ ಮತ್ತು ಅವರ ಮನಸ್ಸು ಅಭಿವೃದ್ಧಿ ಹೊಂದುವಂತಹ ಸ್ಥಳಕ್ಕೆ ಅವರನ್ನು ಕರೆದೊಯ್ಯಬೇಕು. ಆದರೆ ಹೀಗೆ ಕರೆದೊಯ್ಯುವುದರಿಂದ ಮುಸ್ಲಿಮರು ಏನು ಮಾಡುತ್ತಾರೆ, ಕ್ರಿಶ್ಚಿಯನ್ನರು ಏನು ಮಾಡುತ್ತಾರೆ ಎಂಬಂತಹ ಧರ್ಮದ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತಾರೆ ಬದಲಾಗಿ ಅವರನ್ನು ಪೊಲೀಸ್ ಠಾಣೆಗಳಿಗೆ ಅಥವಾ ಸೇನಾ ಶಿಬಿರಗಳಿಗೆ ಏಕೆ ಕರೆದೊಯ್ಯಬಾರದು ಎಂದು ಅವರು ಕೇಳಿದರು.
ಕೆಲ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ ನಂತರ, ಬಜರಂಗದಳದ ಕಾರ್ಯಕರ್ತರು ಶಾಲೆಯ ಹೊರಗೆ ರಾಮ್ ಧುನ್ ಘೋಷಣೆ ಮಾಡಲು ಪ್ರಾರಂಭಿಸಿದರು. ಇದಾದ ನಂತರ ಶಾಲೆಯು ಆಗಸ್ಟ್ ತಿಂಗಳ ಎಲ್ಲಾ ಕ್ಷೇತ್ರ ಪ್ರವಾಸಗಳನ್ನು ರದ್ದುಗೊಳಿಸಿದೆ.