ಹೆಣ್ಣುಮಕ್ಕಳ ಶಿಕ್ಷಣಕ್ಕೆ ‘ಪ್ರಗತಿ’ ವಿದ್ಯಾರ್ಥಿ ವೇತನ!

By Suvarna News  |  First Published May 16, 2022, 6:30 PM IST

*120 ಬಾಲಕಿಯರಿಗೆ ಅವರ ಶಿಕ್ಷಣವನ್ನು ಮುಂದುವರಿಸಲು ವಿದ್ಯಾರ್ಥಿ ವೇತನ
* ಇದು 12ನೇ ತರಗತಿಯವರೆಗೆ ಪ್ರತಿ ಶೈಕ್ಷಣಿಕ ವರ್ಷಕ್ಕೆ ಶಿಕ್ಷಣ ಸಂಬಂಧಿತ ವೆಚ್ಚ ಒಳಗೊಂಡಿರುತ್ತದೆ
* ಹಲವು ವರ್ಷಗಳಿಂದ ಹಿಂದುಳಿದ ಸಮುದಾಯಗಳ ಉನ್ನತಿಗೆ ಡಿಪಿ ವರ್ಲ್ಡ್ ಸಾಥ್ ನೀಡುತ್ತಿದೆ


ಕೋವಿಡ್ ಇನ್ನೂ ಕಣ್ಮರೆಯಾಗಿಲ್ಲ.. ಕಂಡು ಕಾಣದಂತೆ ನಮ್ಮ ಸುತ್ತ ಸುಳಿದಾಡುತ್ತಲೇ ಇದೆ. ಈಗಾಗಲೇ ಕೋವಿಡ್ ನಿಂದಾಗಿ ನಮ್ಮ ಮಕ್ಕಳು ಶಿಕ್ಷಣ ಕಲಿಕೆಯಿಂದ ಸಾಕಷ್ಟು ವಂಚಿತರಾಗಿದ್ದಾರೆ. ಇನ್ನೇನು ಈ ವರ್ಷದಿಂದ ಯಥಾಸ್ಥಿತಿ ಬರುತ್ತೆ ಎಂಬ ಆಸೆ ಚಿಗುರೊಡೆದಿದೆ. ಆದ್ರೆ ಅದಾಗಲೇ ಸದ್ದಿಲ್ಲದೆ ಕೋವಿಡ್ ಮತ್ತೆ ಶುರು ಮಾಡಿದ್ದು, ಶಾಲಾ ಮಕ್ಕಳು ಮತ್ತು ಪೋಷಕರಿಗೆ ಟೆನ್ಷನ್ ತಂದಿಟ್ಟಿದೆ. ಇನ್ನು ಈ ಕೊರೊನಾ ಮಾರಿ ಈಗಾಗಲೇ ಸಾವಿರಾರು ಬಡ ಮಕ್ಕಳ ಶಿಕ್ಷಣವನ್ನು ಕಸಿದುಕೊಂಡಿದೆ. ಅದರಲ್ಲೂ ಬಡ ಹೆಣ್ಣು ಮಕ್ಕಳ ಭವಿಷ್ಯದ ಮೇಲೆ ಭಾರೀ ಪರಿಣಾಮ ಬೀರಿದೆ. ಅದೆಷ್ಟೋ ಹೆಣ್ಣುಮಕ್ಕಳು ಶಾಲೆ ತೊರೆದಿದ್ದಾರೆ. ಇಂತಹ ಬಡ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಸ್ಕಾಲರ್‌ಶಿಪ್ ನೀಡುವ ಅವರ ವಿದ್ಯಾಭ್ಯಾಸಕ್ಕೆ ನೆರವಾಗಲು ಡಿಪಿ ವರ್ಲ್ಡ್ (DP World) ಇನ್ನೋವೇಟಿವ್ ಫೈನಾನ್ಶಿಯಲ್ ಅಡ್ವೈಸರ್ಸ್ ಪ್ರೈವೇಟ್ ಲಿಮಿಟೆಡ್‌ ( Innovative Financial Advisors) ತೀರ್ಮಾನಿಸಿದೆ. DP World ಮತ್ತು Fiinovation , ಬಡ ಬಾಲಕಿಯರ ಶಿಕ್ಷಣಕ್ಕಾಗಿ  'ಪ್ರಗತಿ (Pragati)' ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಡಿಪಿ ವರ್ಲ್ಡ್ ಇನ್ನೋವೇಟಿವ್ ಫೈನಾನ್ಶಿಯಲ್ ಅಡ್ವೈಸರ್ಸ್ ಪ್ರೈವೇಟ್ ಲಿಮಿಟೆಡ್‌ನ ಲಾಭರಹಿತ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿದೆ.  ಫೈನೋವೇಶನ್ ಅನುಷ್ಠಾನಕ್ಕಾಗಿ ಪ್ರಗತಿ ಎಂಬ ಹೆಣ್ಣು ಮಕ್ಕಳ ಶಿಕ್ಷಣ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಗುಜರಾತ್‌ (Gujarat)ನ ಮುಂದ್ರಾದಲ್ಲಿ ಜಾರಿ ಮಾಡೋದಾಗಿ ಕಂಪನಿ ತಿಳಿಸಿದೆ..

ಪೆಟ್ರೋಲಿಯಂ ಇಂಜಿನಿಯರಿಂಗ್ ಓದಿದವರಿಗೆ ಉದ್ಯೋಗಾವಕಾಶಗಳು

Tap to resize

Latest Videos

ಉದ್ದೇಶಿತ ಪ್ರದೇಶದಲ್ಲಿ ವಾಸಿಸುವ 120 ಬಾಲಕಿಯರಿಗೆ ಅವರ ಶಿಕ್ಷಣವನ್ನು ಮುಂದುವರಿಸಲು ಅವಕಾಶವನ್ನು ನೀಡುವ ಜೊತೆಗೆ ವಿದ್ಯಾರ್ಥಿ ವೇತನವನ್ನು ನೀಡುವ ಗುರಿಯನ್ನು ಈ ಪ್ರಗತಿ ಯೋಜನೆ  ಹೊಂದಿದೆ. ಪ್ರಗತಿ ವಿದ್ಯಾರ್ಥಿವೇತನವು 2022-23, 23-24 ಮತ್ತು 24-25 ಶೈಕ್ಷಣಿಕ ವರ್ಷವಾದ 12 ನೇ ತರಗತಿಯವರೆಗೆ ಪ್ರತಿ ಶೈಕ್ಷಣಿಕ ವರ್ಷಕ್ಕೆ ಶಿಕ್ಷಣ ಸಂಬಂಧಿತ ವೆಚ್ಚಗಳನ್ನು ಒಳಗೊಂಡಿರುತ್ತದೆ ಎಂದು ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಡಿಪಿ ವರ್ಲ್ಡ್‌ನಲ್ಲಿ, ಪ್ರತಿಯೊಬ್ಬರೂ ಗುಣಮಟ್ಟದ ಶಿಕ್ಷಣಕ್ಕೆ ಪ್ರವೇಶವನ್ನು ಹೊಂದಿರಬೇಕು ಎಂದು ನಾವು ಬಲವಾಗಿ ನಂಬುತ್ತೇವೆ. ಸಾಂಕ್ರಾಮಿಕ ರೋಗದಿಂದಾಗಿ ದೀರ್ಘಕಾಲದ ಶಾಲಾ ಮುಚ್ಚುವಿಕೆಯು ಮಕ್ಕಳ ಶಿಕ್ಷಣದ ಪ್ರವೇಶ ಮತ್ತು ನಿರಂತರತೆಗೆ ಹೆಚ್ಚುವರಿ ತಡೆಯೊಡ್ಡಿದೆ. ನಮ್ಮ ಪ್ರಗತಿ ಸ್ಕಾಲರ್‌ಶಿಪ್ ಕಾರ್ಯಕ್ರಮದ ಮೂಲಕ ನಾವು ಹೆಣ್ಣುಮಕ್ಕಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಪ್ರೋತ್ಸಾಹಿಸಲು ಮತ್ತು ಪ್ರೇರೇಪಿಸಲು ಪ್ರಯತ್ನಿಸುತ್ತೇವೆ. ಅವರಿಗೆ ಮತ್ತು ಭಾರತವು ನಮ್ಮೆಲ್ಲರಿಗೂ ಉತ್ತಮ ಭವಿಷ್ಯವನ್ನು ರಚಿಸಲು ನೇರವಾಗಲು ಸಹಾಯ ಮಾಡುತ್ತಿದ್ದೇವೆ” ಎಂದು ಡಿಪಿ ವರ್ಲ್ಡ್ ಸಬ್‌ಕಾಂಟಿನೆಂಟ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ರಿಜ್ವಾನ್ ಸೂಮರ್ ಹೇಳಿದ್ದಾರೆ.

ಹರಿಯಾಣ ಸರ್ಕಾರದಿಂದ 3 ಲಕ್ಷ ಟ್ಯಾಬ್ ವಿತರಣೆ

 ಹಲವು ವರ್ಷಗಳಿಂದ ಹಿಂದುಳಿದ ಸಮುದಾಯಗಳ ಉನ್ನತಿಗೆ ಡಿಪಿ ವರ್ಲ್ಡ್ ಸಾಥ್ ನೀಡುತ್ತಿದೆ. ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವದ ಕುರಿತು ಸ್ಥಳೀಯ ಸಮುದಾಯಗಳಿಗೆ ಜಾಗೃತಿ ಮೂಡಿಸಲು ಉದ್ದೇಶಿತ ಪ್ರದೇಶಗಳಲ್ಲಿ ಜಾಗೃತಿ ಅಭಿಯಾನಗಳನ್ನು ನಡೆಸುವುದರ ಮೇಲೆ ಈ ಕಾರ್ಯಕ್ರಮವು ಗಮನಹರಿಸುತ್ತದೆ. ಯೋಜನೆಯು ಅದರ ಉದ್ದೇಶದೊಳಗೆ ಸುತ್ತುವರಿಯುತ್ತದೆ, ದೃಢವಾದ ಮತ್ತು ಬೆಂಬಲಿತ ಮಾರ್ಗದರ್ಶನ ಕಾರ್ಯವಿಧಾನವನ್ನು ರಚಿಸುತ್ತದೆ. ಕಲಿಕೆಯ ಘಟಕಗಳಾಗಿ ಕಾರ್ಯನಿರ್ವಹಿಸುವ ಮತ್ತು ಫಲಾನುಭವಿಗಳಿಗೆ ಪರಸ್ಪರ ಸಂವಹನ ನಡೆಸಲು ಅವಕಾಶವನ್ನು ನೀಡುವ ಗುಂಪುಗಳ ರಚನೆಯ ಮೂಲಕ ಇದನ್ನು ಸುಗಮಗೊಳಿಸಲಾಗುತ್ತದೆ.  ಈ ರೀತಿಯ ಸ್ಕಾಲರ್‌ಶಿಪ್‌ಗಳ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಿವೆ. ಕೋವಿಡ್ ಹಿನ್ನೆಲೆಯಲ್ಲಿ ಸಾಕಷ್ಟು ಪೋಷಕರು ಹಣಕಾಸು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಾಕಷ್ಟು ಪೋಷಕರಿಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಈ ರೀತಿಯ ವಿದ್ಯಾರ್ಥಿವೇತನಗಳು ಅಂಥ ಮಕ್ಕಳಿಗೆ ಸಾಷ್ಟು ನೆರವು ಒದಗಿಸಲಿವೆ. 

click me!