Pariksha Pe Charcha 2024: 'ಮಕ್ಕಳ ರಿಪೋರ್ಟ್‌ ಕಾರ್ಡ್‌, ನಿಮ್ಮ ವಿಸಿಟಿಂಗ್ ಕಾರ್ಡ್‌ ಅಲ್ಲ..' ಪೋಷಕರಿಗೆ ಮೋದಿ ಕಿವಿಮಾತು!

By Santosh Naik  |  First Published Jan 29, 2024, 5:47 PM IST

ಸೋಮವಾರ ನವದೆಹಲಿಯಲ್ಲಿ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಪೋಷಕರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.
 


ನವದೆಹಲಿ (ಜ.29): ಪರೀಕ್ಷೆಯ ಕುರಿತು ಚರ್ಚೆಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳಿಗೆ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲವೊಂದು ಸಲಹೆಗಳನ್ನು ನೀಡಿದರು. ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಮಕ್ಕಳಿಗೆ ಹಲವು ಗುರುಮಂತ್ರಗಳನ್ನು ನೀಡಿದರು. ಮಕ್ಕಳ ಸಾಧನೆ ಮತ್ತು ಅದರ ರಿಪೋರ್ಟ್ ಕಾರ್ಡ್ಅನ್ನು ವಿಸಿಟಿಂಗ್ ಕಾರ್ಡ್ ಮಾಡಿಕೊಳ್ಳಬೇಡಿ ಎಂದು ಪೋಷಕರಿಗೆ ಮನವಿ ಮಾಡಿದರು. ಸ್ಪರ್ಧೆ ಆರೋಗ್ಯಕರವಾಗಿರಬೇಕು, ಸ್ನೇಹಿತರ ಬಗ್ಗೆ ಅಸೂಯೆ ಪಡಬಾರದು ಎಂದು ಪ್ರಧಾನಿ ಮೋದಿ ಹೇಳಿದರು. ಯಾವ ವಿದ್ಯಾರ್ಥಿಯೂ ಕೂಡ ಇತರರ ಜೊತೆ ಸ್ಪರ್ಧೆಗೆ ಇಳಿಯಬಾರದು. ಆದರೆ, ತನ್ನೊಂದಿಗೆ ಅವರು ಸ್ಪರ್ಧೆ ಮಾಡಬೇಕು. ಯಾವ ವಿಚಾರದಲ್ಲಿ ಬಲಶಾಲಿಯಾಗಬೇಕು ಎನ್ನುವುದನ್ನು ಇದರಿಂದ ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಧಾನಿ ಹೇಳಿದ್ದಾರೆ. 

ಪರೀಕ್ಷೆಯ ಕುರಿತು ಚರ್ಚೆ ಕಾರ್ಯಕ್ರಮದಲ್ಲಿ ಮೋದಿ ಮಾತು
* ನಾನು ಪ್ರತಿ ಸವಾಲಿಗೆ ಸವಾಲು ಹಾಕುತ್ತೇನೆ, ಆಗ ಸವಾಲು ತಿಳಿಯಾಗುತ್ತದೆ. ಪರಿಸ್ಥಿತಿ ಸುಧಾರಿಸಲು ನಾನು ನಿದ್ರಿಸುವುದಿಲ್ಲ. ಪ್ರತಿ ಸವಾಲಿಗೂ ನನ್ನ ತಂತ್ರಗಳನ್ನು ರೂಪಿಸುತ್ತೇನೆ.
* ನಿಮ್ಮ ಮೊಬೈಲ್‌ನಲ್ಲಿ ಎಷ್ಟೇ ನಿಮ್ಮ ಫೇವರಿಟ್‌ ವಿಚಾರಗಳು ಬರುತ್ತಿರಬಹುದು. ಆದರೆ, ಅದಕ್ಕಾಗಿ ಒಂದಷ್ಟು ಸಮಯವನ್ನು ಫಿಕ್ಸ್‌ ಮಾಡುವುದು ಬಹಳ ಪ್ರಮುಖ.
* ಶಿಕ್ಷಕರು ಮಕ್ಕಳೊಂದಿಗೆ ಬೆರೆಯಬೇಕು. ತರಗತಿಯಲ್ಲಿ ನೀವು ಆರಾಮದಾಯಕ ವಾತಾವರಣವನ್ನು ಸೃಷ್ಟಿಸಬೇಕು ಇದರಿಂದ ಮಕ್ಕಳು ನಿಮ್ಮ ಬಗ್ಗೆ ಆಸಕ್ತಿ ವಹಿಸುತ್ತಾರೆ.
* ನಾವು ನಿರ್ಣಯ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ನಿರ್ಣಯ ಮಾಡದೇ ಇರುವುದು ತುಂಬಾ ಕೆಟ್ಟದು.
* ಬರವಣಿಗೆಯನ್ನು ಅಭ್ಯಾಸ ಮಾಡಿ. ಹೆಚ್ಚು ಬರೆಯುತ್ತಿದ್ದರೆ, ನೀವು ಜ್ಞಾನವನ್ನು ಹೆಚ್ಚು ವೇಗವಾಗಿ ಪಡೆದುಕೊಳ್ಳುತ್ತೀರಿ. ನಿಮ್ಮ ತಪ್ಪುಗಳನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಿ.
* ಶಿಕ್ಷಕರ ಕೆಲಸವೆಂದರೆ ಕೇವಲ ಕೆಲಸ ಮಾಡುವುದು ಅಥವಾ ಉದ್ಯೋಗವನ್ನು ಬದಲಾಯಿಸುವುದಷ್ಟೇ ಅಲ್ಲ. ಅವರ ಕೆಲಸ ಜೀವನದ ಮೌಲ್ಯ ಹೆಚ್ಚಿಸುವುದು. ಅಂತಹ ಶಿಕ್ಷಕರೇ ಬದಲಾವಣೆ ತರುತ್ತಾರೆ.
* ಈಗಿನ ವಿದ್ಯಾರ್ಥಿಗಳು ಹಿಂದೆಂದಿಗಿಂತಲೂ ಹೆಚ್ಚು ಆಧುನಿಕರಾಗಿದ್ದಾರೆ. ಈ ಕಾರ್ಯಕ್ರಮ ನನಗೂ ಪರೀಕ್ಷೆಯಂತಿದೆ.
* ಯಾವುದೇ ಮಗುವನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ. ಅದು ಅವನ/ಆಕೆಯ ಭವಿಷ್ಯಕ್ಕೆ ಹಾನಿಕಾರಕ. 
*ಕೆಲವು ಪೋಷಕರು ತಮ್ಮ ಮಗುವಿನ 'ರಿಪೋರ್ಟ್ ಕಾರ್ಡ್' ಅನ್ನು ತಮ್ಮ 'ವಿಸಿಟಿಂಗ್ ಕಾರ್ಡ್' ಎಂದು ಪರಿಗಣಿಸುತ್ತಾರೆ, ಇದು ಸರಿಯಲ್ಲ.
* ಸ್ಪರ್ಧೆ ಮತ್ತು ಸವಾಲುಗಳು ಜೀವನದಲ್ಲಿ ಸ್ಫೂರ್ತಿಯಾಗಿ ಕೆಲಸ ಮಾಡಬೇಕು. ಆದರೆ ಈ ಸ್ಪರ್ಧೆಯು ಆರೋಗ್ಯಕರವಾಗಿರಬೇಕು.

Tap to resize

Latest Videos

undefined

ನವದೆಹಲಿ ಐಟಿಪಿಓನ ಭಾರತ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಉಪಸ್ಥಿತರಿದ್ದರು. 2047 ರ ವೇಳೆಗೆ ಮೋದಿ ಅವರ  ನಾಯಕತ್ವದಲ್ಲಿ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಬದಲಾಗಲಿದೆ.ಇಂದು ಪರೀಕ್ಷಾ ಪೆ ಚರ್ಚಾ ಒಂದು ಸಾಮೂಹಿಕ ಚಳುವಳಿಯಾಗಿ ಮಾರ್ಪಟ್ಟಿದೆ. 

ಈ ಕಾರ್ಯಕ್ರಮವನ್ನು ಟೌನ್ ಹಾಲ್ ಮಾದರಿಯಲ್ಲಿ ಅಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಈ ಕಾರ್ಯಕ್ರಮದಲ್ಲಿ 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂವಾದ ನಡೆಸಿದರು. ವಾರ್ಷಿಕ ಕಾರ್ಯಕ್ರಮವಾಗಿರುವ ಪರೀಕ್ಷಾ ಪೆ ಚರ್ಚಾ, ವಾರ್ಷಿಕ ಪರೀಕ್ಷೆಯ ಆರಂಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಸಂವಾದ ಮತ್ತು ಮಾರ್ಗದರ್ಶನ ನೀಡುತ್ತಾರೆ. ಇದು ಮೋದಿ ಅವರ 'ಎಕ್ಸಾಮ್ ವಾರಿಯರ್ಸ್' ಎಂಬ ದೊಡ್ಡ ಆಂದೋಲನದ ಭಾಗವಾಗಿದೆ.

ಗಲಾಟೆ ಸಂಸದರಿಗೆ ಮೋದಿ ಚಾಟಿ: ನಿಯಮ ಉಲ್ಲಂಘಿಸುವ ಸಂಸದರಿಗೆ ಬೆಂಬಲ ಸರಿಯೇ? ವಿಪಕ್ಷಗಳಿಗೆ ಟಾಂಗ್

ಈ ಬಾರಿ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮಕ್ಕೆ 2.26 ಕೋಟಿ ನೋಂದಣಿಗಳು ಬಂದಿದ್ದವು. ಇದು ದೇಶದ ವಿದ್ಯಾರ್ಥಿಗಳಲ್ಲಿ ಇರುವ ಉತ್ಸಾಹವನ್ನು ತೋರಿಸುತ್ತದೆ ಎಂದು ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ. 7ನೇ ಆವೃತ್ತಿಯ ಪರೀಕ್ಷಾ ಪಡೆ ಚರ್ಚಾದ ನೋಂದಣಿ ಕಾರ್ಯಕ್ರಮ 2023ರ ಡಿಸೆಂಬರ್‌ 11 ರಂದು ಆರಂಭವಾಗಿ ಜನವರಿ 12ಕ್ಕೆ ಮುಕ್ತಾಯವಾಗಿತ್ತು.  ಅಧಿಕಾರಿಗಳ ಪ್ರಕಾರ, ಕಲಾ ಉತ್ಸವದ ವಿಜೇತರ ಜೊತೆಗೆ, ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಿಂದ ಇಬ್ಬರು ವಿದ್ಯಾರ್ಥಿಗಳು ಮತ್ತು ಒಬ್ಬ ಶಿಕ್ಷಕರನ್ನು ಆಹ್ವಾನಿಸಲಾಗಿದೆ. ಏಕಲವ್ಯ ಮಾದರಿ ವಸತಿ ಶಾಲೆಗಳ (ಇಎಂಆರ್‌ಎಸ್) ನೂರಾರು ವಿದ್ಯಾರ್ಥಿಗಳು ಸಹ ಮೊದಲ ಬಾರಿಗೆ ಇದರಲ್ಲಿ ಭಾಗವಹಿಸಿದ್ದರು.

ಪರೀಕ್ಷೆಗೆ ಮೋದಿ 'ಪಂಚ'ತಂತ್ರ: ಪರೀಕ್ಷಾ ಪೇ ಚರ್ಚಾದಲ್ಲಿ ಕಿವಿಮಾತು

click me!