ಪಠ್ಯದಿಂದ ಭಗತ್ ಸಿಂಗ್ Narayana Guru ಹೊರಗಿಟ್ಟಿರುವುದಕ್ಕೆ ಡಿಕೆಶಿ ಖಂಡನೆ

Published : May 20, 2022, 01:04 PM IST
 ಪಠ್ಯದಿಂದ ಭಗತ್ ಸಿಂಗ್ Narayana Guru ಹೊರಗಿಟ್ಟಿರುವುದಕ್ಕೆ ಡಿಕೆಶಿ ಖಂಡನೆ

ಸಾರಾಂಶ

ನಾರಾಯಣ ಗುರು ಮತ್ತು ಭಗತ್ ಸಿಂಗ್ ಅವರ ಪಠ್ಯವನ್ನು ಶಾಲಾ ಪಠ್ಯದಿಂದ ಹೊರಗಿಟ್ಟಿರುವ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಂಡನೆ ವ್ಯಕ್ತಪಡಿಸಿದ್ದಾರೆ.

ಮಂಗಳೂರು (ಮೇ.20): ಬ್ರಹ್ಮಶ್ರಿ ನಾರಾಯಣ ಗುರು (Narayana Guru) ಮತ್ತು ಭಗತ್ ಸಿಂಗ್ (Bhagat Singh ) ಅವರ ಪಠ್ಯವನ್ನು ಶಾಲಾ ಪಠ್ಯ ಪುಸ್ತಕದಿಂದ (School Text Book) ಹೊರಗಿಟ್ಟಿರುವ ಕುರಿತು ರಾಜ್ಯ ಸರ್ಕಾರವನ್ನು ಖಂಡಿಸಿರುವ ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ (KPCC chief DK Shivakumar) ಅವರು, ಇದು ರಾಜ್ಯದಲ್ಲಿ ‘ನಾಗ್ಪುರ ಶಿಕ್ಷಣ ನೀತಿ’ (Nagpur Education Policy) ಅನುಷ್ಠಾನದ ಪರಿಣಾಮವಾಗಿದೆ ಎಂದು ಗುರುವಾರ ಖಂಡನೆ ವ್ಯಕ್ತಪಡಿಸಿದ್ದಾರೆ.

ಬಿ.ಕೆ.ಹರಿಪ್ರಸಾದ್ (B K Hariprasad) ಅಭಿನಂದನಾ ಸಮಿತಿ ವತಿಯಿಂದ ಮಂಗಳೂರು ನಗರದ ಪುರಭವನದಲ್ಲಿ ಗುರುವಾರ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಬಿ.ಕೆ.ಹರಿಪ್ರಸಾದ್, ವಿಧಾನಸಭೆ ವಿಪಕ್ಷ ಉಪನಾಯಕರಾಗಿ ಆಯ್ಕೆಯಾದ ಯು.ಟಿ.ಖಾದರ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಡಿ.ಕೆ.ಶಿವಕುಮಾರ್ ಈ ಬಗ್ಗೆ ಮಾತನಾಡಿದರು.

15 ತಿಂಗಳಾದ್ರೂ ಫಲಿತಾಂಶವಿಲ್ಲ, ವಯಸ್ಸು ಮೀರುವ ಆತಂಕದಲ್ಲಿ ಕೆಎಎಸ್ ಆಕಾಂಕ್ಷಿಗಳು!

ನಾರಾಯಣ ಗುರುಗಳ ಸಿದ್ಧಾಂತವೇ ಕಾಂಗ್ರೆಸ್ ಸಿದ್ಧಾಂತ. ಗುರುಗಳನ್ನು ಪಠ್ಯದಿಂದ ಕಿತ್ತು ಹಾಕುವಂತಹ ವಿಚಾರ ಏನಿತ್ತು? ಭಗತ್ ಸಿಂಗ್ ವಿಚಾರಗಳನ್ನು ಯಾಕೆ ತೆಗೆದಿದ್ದೀರಿ? ಅವರನ್ನು ಸ್ಮರಿಸೋದು ಎಲ್ಲರ ಕರ್ತವ್ಯ. ಮುಂದಿನ ವರ್ಷ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ. ಈ ಎಲ್ಲಾ ಪಠ್ಯಗಳನ್ನು ಮರಳಿ ಯೂಟರ್ನ್ ಮಾಡಿಸಲಿದ್ದೇವೆಂದು ಭರವಸೆ ನೀಡಿದರು. 

ನಾರಾಯಣ ಗುರುಗಳ ಪಾಠ ಕಿತ್ತೆಸೆದಿದ್ದನ್ನು ವಿರೋಧಿಸಿ ಅದೇ ಸಮುದಾಯದ ಸಚಿವರಾದ ಸುನಿಲ್ ಕುಮಾರ್ (Energy Minister V Sunil Kumar) ಮತ್ತು ಕೋಟ ಶ್ರೀನಿವಾಸ ಪೂಜಾರಿ (Social Welfare Minister Kota Srinivas Poojary) ರಾಜೀನಾಮೆ ನೀಡಬೇಕಿತ್ತು. ತಮ್ಮ ಸಮಾಜದ ಪರವಾಗಿ ನಿಂತು ಏನಾದರೂ ಮಾಡಬಹುದಿತ್ತು. ಆದರೆ, ಅವರಿಗೆ ಅಧಿಕಾರ ಬೇಕೇ ಹೊರತು ಸಮಾಜ ಅಲ್ಲ ಎಂದು ಟೀಕಿಸಿದರು. ಬಿಜೆಪಿಯವರು  ಎನ್ಇಪಿ ತಂದರು. ಇದು ನ್ಯಾಷನಲ್ ಎಜ್ಯುಕೇಷನ್ ಪಾಲಿಸಿ ಅಲ್ಲ, ನಾಗ್ಪುರ ಎಜುಕೇಷನ್ ಪಾಲಿಸಿ ಎಂದೂ ಲೇವಡಿ ಮಾಡಿದರು. 

ಜೂನ್ ಮೂರನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ಇದೇ ವೇಲೆ ಮತಾಂತರ ತಡೆ ಕಾಯಿದೆ, ಗೋಹತ್ಯೆ ಕಾಯ್ದೆ ಹಾಗೂ ಇತರೆ ಕಾನೂನುಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಎಲ್ಲಾ ಕಾನೂನುಗಳು ಸಮುದಾಯಗಳ ನಡುವೆ ಒಡಕು ಮೂಡಿಸುವ ಉದ್ದೇಶದಿಂದ ಕೂಡಿವೆ. ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸಲು ಸರ್ಕಾರ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದರು.

ಹರಿಪ್ರಸಾದ್ ಮಾತನಾಡಿ, ಶೂದ್ರರು ಶಿಕ್ಷಣ ಪಡೆದು ಸ್ವಾವಲಂಬಿಗಳಾಗಬೇಕೆಂದು ತಾಕೀತು ಮಾಡಿದ ಕಾರಣ ನಾರಾಯಣ ಗುರು ಪಾಠವನ್ನು ಶಾಲಾ ಪಠ್ಯದಿಂದ ತೆಗೆದುಹಾಕಲಾಗಿದೆ ಎಂದು ಹೇಳಿದರು. 

SSLC Supplementary Exam 2022 ಜೂನ್ 27 ರಿಂದ ಪೂರಕ ಪರೀಕ್ಷೆ ಆರಂಭ

ನಾರಾಯಣ ಗುರುಗಳ ಸ್ತಬ್ಧಚಿತ್ರ ತೆಗೆದ ಬಿಜೆಪಿ ಸರ್ಕಾರ ಇದೀಗ ಗುರುಗಳ ಪಾಠವನ್ನೇ ತೆಗೆದಿದ್ದಾರೆ, ಹೆಡ್ಗೆವಾರ್ ಪಾಠ ಸೇರಿಸಲು ಗುರುಗಳ ಪಾಠ ತೆಗೆದಿದ್ದಾರೆ. ಗುರುಗಳ ಪಾಠ ಕೇಳಿ ಶೂದ್ರರೂ ಉನ್ನತಿ ಹೊಂದುತ್ತಾರೆಂದು ಈ ಪಠ್ಯ ತೆಗೆಯುವ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದರು. 

ಯುಟಿ ಖಾದರ್ ಮಾತನಾಡಿ, ದೇಶದಲ್ಲಿ ಬಿಜೆಪಿ ಆಡಳಿತದಲ್ಲಿ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದ ಜನರು ಭಯಭೀತರಾಗಿದ್ದಾರೆ. ಪ್ರಸ್ತುತ ಕೇಂದ್ರ ಮತ್ತು ರಾಜ್ಯದ ಸರ್ಕಾರವು ಮಹಾತ್ಮ ಗಾಂಧಿ ಮತ್ತು ಡಾ ಬಿ ಆರ್ ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

PREV
Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ