ಸರ್ಕಾರಿ ಶಾಲೆಗಳಲ್ಲಿ 15 ದಿನಗಳಿಗಿಂತ ಹೆಚ್ಚು ಗೈರು ಹಾಜರಾದ ಕಾರಣಕ್ಕಾಗಿ ಬಿಹಾರ ಸರ್ಕಾರ 20 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳ ಹೆಸರುಗಳನ್ನು ದಾಖಲಾತಿಯಿಂದ ಕೈಬಿಟ್ಟ ವಿಷಯ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಪಟನಾ: ಸರ್ಕಾರಿ ಶಾಲೆಗಳಲ್ಲಿ 15 ದಿನಗಳಿಗಿಂತ ಹೆಚ್ಚು ಗೈರು ಹಾಜರಾದ ಕಾರಣಕ್ಕಾಗಿ ಬಿಹಾರ ಸರ್ಕಾರ 20 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳ ಹೆಸರುಗಳನ್ನು ದಾಖಲಾತಿಯಿಂದ ಕೈಬಿಟ್ಟ ವಿಷಯ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar)ನೇತೃತ್ವದ ಸರ್ಕಾರದ ರಾಜ್ಯ ಶಿಕ್ಷಣ ಇಲಾಖೆಯ ಕ್ರಮ ಸ್ವತಃ ಮಿತ್ರ ಪಕ್ಷಗಳು ಹಾಗೂ ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಏನಿದು ವಿವಾದ?: ರಾಜ್ಯದ 75000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ (government schools) ಪೈಕಿ ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಗೈರು ಹಾಜರಿ ಪ್ರಮಾಣ ಶೇ.50ಕ್ಕಿಂತ ಹೆಚ್ಚಿದೆ. ಹೀಗಾಗಿ 15 ದಿನಕ್ಕಿಂತ ಹೆಚ್ಚು ದಿನ ಸತತವಾಗಿ ಗೈರಾದವರ ಹೆಸರು ರದ್ದು ಮಾಡಿ ಎಂದು ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದರು. ಅದರಂತೆ ಇದೀಗ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಹೆಸರು ಕೈಬಿಡಲಾಗಿದೆ. ಇದರಲ್ಲಿ ಈ ಬಾರಿ 10 ಮತ್ತು 12 ತರಗತಿಯ ಅಂತಿಮ ಪರೀಕ್ಷೆಗೆ ಕೂರುವ 2.66 ಲಕ್ಷ ವಿದ್ಯಾರ್ಥಿಗಳು ಸೇರಿದ್ದಾರೆ.
undefined
ಅನುಮಾನ:
ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳ ಸಮವಸ್ತ್ರ (uniforms) ಮತ್ತು ಪುಸ್ತಕ ಖರೀದಿ ಮತ್ತಿತರೆ ವೆಚ್ಚದ ಹಣವನ್ನು ಸರ್ಕಾರ, ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರ ಜಮ ಮಾಡುತ್ತದೆ. ಹೀಗಾಗಿ ಹಣದ ಉದ್ದೇಶದಿಂದ ಸರ್ಕಾರಿ ಶಾಲೆಯಲ್ಲಿ ಹೆಸರು ನೊಂದಾಯಿಸುವ ವಿದ್ಯಾರ್ಥಿಗಳು ಬಳಿಕ ಖಾಸಗಿ ಶಾಲೆಗೆ ಸೇರಿ ಅಲ್ಲಿ ವಿದ್ಯಾಭ್ಯಾಶ ಮಾಡುತ್ತಿದ್ಧಾರೆ. ಕೆಲ ವಿದ್ಯಾರ್ಥಿಗಳು ನೆರೆಯ ರಾಜ್ಯದಲ್ಲೂ ಸೇರ್ಪಡೆಯಾಗಿದ್ದಾರೆ ಎಂಬುದು ಸರ್ಕಾರದ ಅನುಮಾನ.
ಹೀಗಾಗಿ ಗೈರಾದ ಮಕ್ಕಳ ಹೆಸರು ರದ್ದು ಮಾಡಿ, ಅಂಥ ವಿದ್ಯಾರ್ಥಿಗಳು ಖಾಸಗಿ ಶಾಲೆಯಲ್ಲಿ ಓದುತ್ತಿದ್ದರೆ ಅವರನ್ನು ಪಟ್ಟಿ ಮಾಡಿ, ಬೇರೆ ಕಾರಣಕ್ಕೆ ಮಕ್ಕಳು ಸತತವಾಗಿ ಗೈರಾಗುವ ಮಕ್ಕಳ ಪೋಷಕರ ಭೇಟಿ ಮಾಡಿ ಮಕ್ಕಳನ್ನು ಶಾಲೆಗೆ ಕರೆತನ್ನಿ ಎಂದು ಶಿಕ್ಷಣ ಇಲಾಖೆ (education department) ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಅದರನ್ವಯ ಇದೀಗ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಜಾ ಮಾಡಲಾಗಿದೆ.
ಸರ್ಕಾರದ ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಸಿಪಿಐಎಂ ಶಾಸಕ ಸಂದೀಪ್ ಸೌರವ್(Sandeep Sourav), ವಿಪಕ್ಷ ನಾಯಕ ವಿಜಯ್ ಕುಮಾರ್ ಸಿನ್ಹಾ, ಶಿಕ್ಷಣ ಇಲಾಖೆ ಶೇ 100 ಹಾಜರಾತಿ ಹೇಗೆ ಬಯಸುತ್ತದೆ? ವಿಷಯಗಳ ಬೋಧಿಸಲು ಶಿಕ್ಷಕರಿಲ್ಲ, ಸೂಕ್ತ ಮೂಲಸೌಲಭ್ಯಗಳಿಲ್ಲ, ಮೊದಲು ಅವುಗಳನ್ನು ಸರಿಪಡಿಸಿ ಎಂದು ಹೇಳಿದ್ದಾರೆ.