ಕರ್ನಾಟಕ ಪಬ್ಲಿಕ್‌ ಶಾಲಾ ಮಕ್ಕಳಿಗೆ ಸ್ಕೂಲ್‌ ಬಸ್‌ ಭಾಗ್ಯ: ಶಿಕ್ಷಣ ಸಚಿವ ಮಧು ಬಂಗಾರಪ್ಪ

By Sathish Kumar KH  |  First Published Oct 21, 2023, 1:59 PM IST

ರಾಜ್ಯದ ಎಲ್ಲ ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೆ ಉಚಿತವಾಗಿ ಶಾಲಾ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.


ಕೊಪ್ಪಳ (ಅ.21): ರಾಜ್ಯಾದ್ಯಂತ ಶಿಕ್ಷಣ ಇಲಾಖೆಯಿಂದ ಈಗಾಗಲೇ ಆರಂಭಿಸಲಾಗಿರುವ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ (ಕೆಪಿಎಸ್‌) ಖಾಸಗಿ ಶಾಲೆಗಳ ಮಾದರಿಯಲ್ಲಿ ಸ್ಕೂಲ್‌ ಬಸ್‌ಗಳನ್ನು ನೀಡಲಾಗುವುದು. ಈ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ನಡೆದ ಪಿಯುಸಿ ಕಾಲೇಜು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂದಿನ 3 ವರ್ಷದಲ್ಲಿ 3000 ಕರ್ನಾಟಕ ಪಬ್ಲಿಕ್‌ ಶಾಲೆ (ಕೆಪಿಎಸ್) ಆರಂಭಿಸುತ್ತೇವೆ. ಜೊತೆಗೆ, ಈಗಾಗಲೇ ಆರಂಭಿಸಿರುವ ಮತ್ತು ಮುಂದೆ ಆರಂಭಿಸುವ ಕೆಪಿಎಸ್ ಶಾಲೆಗೆ ಉಚಿತ ಬಸ್ ಸೇವೆಯನ್ನು ಆರಂಭಿಸುತ್ತೇವೆ. ಈ ಮೂಲಕ ಪಬ್ಲಿಕ್‌ ಶಾಲೆಯ ಸುತ್ತಲಿನ ವಿದ್ಯಾರ್ಥಿಗಳು ಶಾಲೆಗೆ ಬರಲು ಅನುಕೂಲ ಆಗಲಿದೆ ಎಂದು ಮಾಹಿತಿ ನೀಡಿದರು.

Tap to resize

Latest Videos

undefined

ರೈತರಿಗೆ ಮಹತ್ವದ ಆದೇಶ: ಗ್ರಾಮ ನಕಾಶೆ ಡೌನ್ಲೋಡ್ ಮಾಡಿ ಜಮೀನಿನ ಬಂಡಿದಾರಿ, ಕಾಲುದಾರಿಗಳ ಒತ್ತುವರಿ ತೆರವುಗೊಳಿಸಿ

ಇನ್ನು ರಾಜಕೀಯವಾಗಿ ಮಾತನಾಡಿದ ಅವರುಯ ಕಿರಿಯರಾಗಿ ಅವರು ಸಚಿವ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಅವರು ಮತ್ತೆ ಸಚಿವರಾಗಲಿ, ಆಗ್ತಾರೆ. ಶಿಕ್ಷಕರಿಗೆ ಒಳ್ಳೆಯ ನಿರ್ಧಾರ ಮಾಡಿ, ನಿಮ್ಮನ್ನು ನೆರಳಿನಲ್ಲಿ ಕೂಡಿಸುತ್ತೇನೆ. ಶಿಕ್ಷಣ ಇಲಾಖೆ ಎಂದರೆ ಕಷ್ಟದ ಇಲಾಖೆ, ಶಿಕ್ಷಣದ ಸಮಸ್ಯೆ ಇರುವ ಇಲಾಖೆಯಾಗಿದೆ. ನಾನು ನಿಭಾಯಿಸುತ್ತೇನೆ ಎಂಬ ಕಾರಣಕ್ಕೆ ಕಷ್ಟದ ಕೆಲಸ ನೀಡಿದ್ದಾರೆ. ಈ ಕಷ್ಟದ ಕೆಲಸವನ್ನು ನಿಭಾಯಿಸುತ್ತೇನೆ. ಇಡೀ ದೇಶದಲ್ಲಿ ಮೊದಲು ಬಾರಿ ಮಾದರಿಯ ಗ್ಯಾರಂಟಿ ಯೋಜನೆ ಮಾಡಿದ್ದಾರೆ. ಹಂಪಿಯಲ್ಲಿ ಅವರ ತೊಡೆಯ ಮೇಲೆ ಕುಳಿತುಕೊಂಡಿದ್ದೆನು. ಈಗ ಕುಳಿತುಕೊಳ್ಳಲು ಆಗುವುದಿಲ್ಲ. ಆದರೆ ಬೇಕಿದ್ದರೆ ನಾನೇ ಕೂಡಿಸಿಕೊಳ್ಳುತ್ತೇನೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಮ್ಮ ಇಲಾಖೆಯ ಸಭೆ ಇತ್ತು. ಆದರೆ ನಾನು ರಾಯರಡ್ಡಿಯವರಿಗೆ ಮುಖ ತೋರಿಸಬೇಕೆಂದು ಹೇಳಿದೆ. ಸಿಎಂ ಸಹ ಹೋಗು ನನಗೆ ಮುಖ ತೋರಿಸದಿದ್ದರೂ ಚಿಂತೆ ಇಲ್ಲ ಎಂದರು. ನೂರಕ್ಕೆ ನೂರು ಈ ಭಾಗದ ಅಭ್ಯರ್ಥಿಗಳಿಗೆ ಕೆಲಸ ನೀಡುತ್ತೇವೆ. ನ್ಯಾಯಲಯದಲ್ಲಿ ತೀರ್ಪು ನೀಡಿದ ತಕ್ಷಣ ನೀಡುತ್ತೇನೆ. ಆದಷ್ಟು ಬೇಗನೆ ನಿಮ್ಮ ಪರವಾಗಿ ತೀರ್ಪು ಬರಲಿದೆ ಎಂದು ಅಭಯ ನೀಡಿದರು. ವಿಶ್ವಾಸವಿಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇನೆ ಎಂದ ಮಧು ಬಂಗಾರಪ್ಪ ಹೇಳಿದರು. 

click me!