ಕಲಬುರಗಿ: ಶಿಥಿಲಾವಸ್ಥೆಯಲ್ಲಿ ದಿಕ್ಸಂಗಾ(ಕೆ) ಸರ್ಕಾರಿ ಶಾಲೆ!

By Kannadaprabha News  |  First Published Jul 18, 2023, 7:56 AM IST

  ಅಫಜಲ್ಪುರ ತಾಲೂಕಿನಲ್ಲಿ ಸಾಕಷ್ಟುಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಅದರಲ್ಲೂ ದಿಕ್ಸಂಗಾ(ಕೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು ವಿದ್ಯಾರ್ಥಿಗಳು ಜೀವಭಯದಲ್ಲಿ ನಿತ್ಯ ಪಾಠ ಕೇಳುವಂತಾಗಿದೆ.


ಚವಡಾಪುರ (ಜು.18) :  ಅಫಜಲ್ಪುರ ತಾಲೂಕಿನಲ್ಲಿ ಸಾಕಷ್ಟುಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಅದರಲ್ಲೂ ದಿಕ್ಸಂಗಾ(ಕೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು ವಿದ್ಯಾರ್ಥಿಗಳು ಜೀವಭಯದಲ್ಲಿ ನಿತ್ಯ ಪಾಠ ಕೇಳುವಂತಾಗಿದೆ.

ದಿಕ್ಸಂಗಾ(ಕೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 270ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಶಾಲೆಯಲ್ಲಿ 9 ಕೋಣೆಗಳಿದ್ದು, ಎಲ್ಲಾ ಕೋಣೆಗಳು ಮಳೆಗಾಲದಲ್ಲಿ ಸೋರುತ್ತವೆ. ಅಲ್ಲದೆ ಮೇಲ್ಚಾವಣಿ ಪದರ ಉದುರಿ ಬೀಳುತ್ತಿದೆ. ಶಾಲಾ ಮಕ್ಕಳ ಮೇಲೆ ಬಿದ್ದರೆ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಕಟ್ಟಡ, ಮೇಲ್ಚಾವಣಿಗಳೆಲ್ಲ ಶಿಥಿಲಾವಸ್ಥೆಯಲ್ಲಿದ್ದರೂ ಕೂಡ ನಿತ್ಯ ಅದರ ಕೆಳಗೆ ಪಾಠ ಬೋಧನೆ ಮಾಡಲಾಗುತ್ತಿದೆ. ಇದು ಅಪಾಯಕ್ಕೆ ಆವ್ಹಾನ ಕೊಟ್ಟಂತಾಗುತ್ತಿದೆ.

Tap to resize

Latest Videos

undefined

 

ಸೋರುವ ಶಾಲೆ: ಛತ್ರಿ ಹಿಡಿದೇ ಪಾಠ ಕೇಳುವ ವಿದ್ಯಾರ್ಥಿಗಳು!

ಈ ಕುರಿತು ಎಸ್‌ಡಿಎಂಸಿ ಅಧ್ಯಕ್ಷ ಧರ್ಮರಾಜ್‌ ಟೊಣ್ಣೆ ಮಾತನಾಡಿ, ನಮ್ಮೂರಿನ ಸರ್ಕಾರಿ ಶಾಲೆ ಶಿಥಿಲಾವಸ್ಥೆಯಲ್ಲಿದೆ. ಮೇಲ್ಚಾವಣಿ ಕುಸಿದು ಬೀಳುತ್ತಿದೆ. ಶಾಲೆಯ ಸಮಸ್ಯೆ ಕುರಿತು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದೇವೆ. ಆದರೂ ಯಾರೊಬ್ಬರು ನಮ್ಮ ಶಾಲೆಯ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗ್ರಾಮದ ಪಾಲಕರು ಶಾಲೆಯ ಅಧೋಗತಿ ಕಂಡು ಶಾಲೆ ಕಟ್ಟಡ ಹೊಸದಾಗಿ ಆಗುವ ತನಕ ನಾವು ನಮ್ಮ ಮಕ್ಕಳಿಗೆ ಶಾಲೆಗೆ ಕಳಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಅರ್ಜುಣಗಿ ಶಾಲೆ ಮೇಲ್ಛಾವಣಿ ಕುಸಿದು ವಿದ್ಯಾರ್ಥಿ ತಲೆಗೆ ಗಾಯ!

ನಮ್ಮೂರಿನ ಸರ್ಕಾರಿ ಶಾಲೆ ಕಟ್ಟಡ ಮತ್ತು ಮೇಲ್ಚಾವಣಿ ಕುಸಿಯುವ ಹಂತ ತಲುಪಿದೆ. 270ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಎಲ್ಲರು ಜೀವಭಯದಲ್ಲಿದ್ದಾರೆ. ಯಾವಾಗ ಏನು ದುರ್ಘಟನೆ ಸಂಭವಿಸುತ್ತದೋ ಗೊತ್ತಿಲ್ಲ. ಶಾಲೆಯ ಕಟ್ಟಡ ದ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಾಸಕರ ಗಮನಕ್ಕೆ ತಂದಿದ್ದೇವೆ. ಆದರೂ ಪ್ರಯೋಜನವಾಗುತ್ತಿಲ್ಲ.

- ಇಮಾಮ್‌ ಪಟೇಲ್‌, ಪರಶುರಾಮ್‌ ಮ್ಯಾಕೇರಿ ಯುವ ಮುಖಂಡ

click me!