6 ತಿಂಗಳವರೆಗೆ ಮಕ್ಕಳ ಮನೆಗೇ ಪಡಿತರ, ಯಾವ ರಾಜ್ಯದಲ್ಲಿ?

Suvarna News   | Asianet News
Published : Dec 31, 2020, 03:56 PM IST
6 ತಿಂಗಳವರೆಗೆ ಮಕ್ಕಳ ಮನೆಗೇ ಪಡಿತರ, ಯಾವ ರಾಜ್ಯದಲ್ಲಿ?

ಸಾರಾಂಶ

ಶೈಕ್ಷಣಿಕ ವಲಯದಲ್ಲಿ ವಿಶಿಷ್ಟ ಸಾಧನೆ ಮೂಲಕ ದಿಲ್ಲಿ ಸರ್ಕಾರ ಎಲ್ಲರ ಗಮನ ಸೆಳೆದಿದೆ. ಸರ್ಕಾರಿ ಶಾಲೆಗಳಿಗೆ ಸಮರ್ಪಕ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಮಾಡಿದ್ದಾರೆ. ಇದೀಗ ಅಲ್ಲಿನ ಸರಕಾರ ಶಾಲಾ ಮಕ್ಕಳಿಗೆ 6 ತಿಂಗಳವರೆಗೂ ರೇಷನ್  ಕಳುಹಿಸಿ ಕೊಡಲು ನಿರ್ಧರಿಸಿದೆ.

ಕೊರೊನಾದಿಂದಾಗಿ ಈ ವರ್ಷ ಮಕ್ಕಳು ಹೋಗಲಿಲ್ಲ. ಅವರ ಆಟ-ಪಾಠ ಎಲ್ಲವನ್ನೂ ವೈರಸ್‌ ಬಲಿಪಡೆದುಬಿಡ್ತು. ಕೊರೊನಾ ಇಳಿಮುಖವಾಗುತ್ತಿದೆ, ಶಾಲೆಗಳನ್ನ ಆರಂಭಿಸಬೇಕು ಅನ್ನೋವಷ್ಟಲ್ಲಿ ಈಗ ಬಂದಿರೋ ಬ್ರಿಟನ್‌ ವೈರಸ್‌ ಕೂಡ ಮತ್ತಷ್ಟು ದಿನ ಮಕ್ಕಳ ಕನಸ್ಸಿಗೆ ತಣ್ಣೀರೆರಚಿದೆ. ಹೀಗಾಗಿ ಇನ್ನು ಒಂದಷ್ಟು ತಿಂಗಳ ಕಾಲ ಮಕ್ಕಳು ಮನೆಗಳಲ್ಲೇ ಬಂಧಿಯಾಗಬೇಕಾಗುತ್ತೆ. ಇಂಥ ಸಂದರ್ಬದಲ್ಲೂ ಕೇಜ್ರಿವಾಲ್‌ ಸರ್ಕಾರ, ಮಕ್ಕಳಿಗಾಗಿ ವಿನೂತನ ಕಾರ್ಯವೊಂದನ್ನ ಮಾಡಿದೆ. ಮಕ್ಕಳ ಶಾಲೆಗೆ ಬರದಿದ್ದರೇನು, ಅವರ ಮನೆಗೆ ಪಡಿತರ ಕಿಟ್‌ ಒದಗಿಸಲು ಮುಂದಾಗಿದೆ.

ದೆಹಲಿ ಸರ್ಕಾರವು ತನ್ನ ಶಾಲೆಗಳ ವಿದ್ಯಾರ್ಥಿಗಳಿಗೆ ಮಿಡ್‌ ಡೇ ಮೀಲ್‌  ಯೋಜನೆಯಡಿ ಆರು ತಿಂಗಳ ಅವಧಿಗೆ ಪಡಿತರವನ್ನು ನೀಡೋದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಘೋಷಣೆ ಮಾಡಿದ್ದಾರೆ.

ವಿದ್ಯಾರ್ಥಿಗಳಿಗೆ ಕಾಲೇಜ್ ಮೆಂಟರ್‌ಶಿಪ್ ಆರಂಭಿಸಿದ ಆ್ಯಪಲ್ ಕಂಪನಿ!

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್‌ನಿಂದ ಶಾಲೆಗಳನ್ನು ನಿರಂತರವಾಗಿ ಮುಚ್ಚಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಳ್ಳಲಾಗಿದೆ. ʼಶಾಲೆಗಳನ್ನು ಮುಚ್ಚಿದಾಗ, ಮಧ್ಯಾಹ್ನದ ಊಟದ ಹಣವನ್ನು ಪೋಷಕರ ಖಾತೆಗಳಿಗೆ ಹಾಕಲು ನಾವು ನಿರ್ಧರಿಸಿದ್ದೇವೆ, ಆದರೆ ಈಗ, ನಾವು ಆರು ತಿಂಗಳವರೆಗೆ ಪಡಿತರ ಕಿಟ್‌ ನೀಡಲು ನಿರ್ಧರಿಸಿದ್ದೇವೆʼಎಂದು ಮಂಡವಾಲಿ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ನಡೆದ ಪಡಿತರ ವಿತರಣಾ ಕಾರ್ಯಕ್ರಮದಲ್ಲಿ  ಕೇಜ್ರಿವಾಲ್ ತಿಳಿಸಿದರು.

ಈ ಯೋಜನೆಯಡಿ ದೆಹಲಿ ಸರ್ಕಾರಿ ಶಾಲೆಗಳಲ್ಲಿ 1-8 ತರಗತಿಗಳ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಗೋಧಿ, ಅಕ್ಕಿ, ಬೇಳೆಕಾಳುಗಳು ಮತ್ತು ಎಣ್ಣೆ ಹೊಂದಿರುವ ಪಡಿತರ ಕಿಟ್‌ಗಳನ್ನು ನೀಡಲಾಗುವುದು.

ʼಮೊದಲು ನಾವು ಮಕ್ಕಳ ಪೋಷಕರ ಬ್ಯಾಂಕ್ ಖಾತೆಗಳಿಗೆ ಮಿಡ್‌ ಡೇ ಮಿಲ್‌ಗೆ ಅನುಗುಣವಾದ ಮೊತ್ತವನ್ನು ಒದಗಿಸಲು ಪ್ರಯತ್ನಿಸಿದ್ದೆವು. ಆದರೆ ಇಂದು, ನಾವು ಪೋಷಕರ ಕೋರಿಕೆಯ ಮೇರೆಗೆ ಪಡಿತರ ವಿತರಣೆಯನ್ನು ಪ್ರಾರಂಭಿಸುತ್ತಿದ್ದೇವೆ. 2020 ರ ಜುಲೈನಿಂದ ಡಿಸೆಂಬರ್ ವರೆಗೆ ಆರು ತಿಂಗಳ ಅವಧಿಗೆ ಪ್ರತಿ ವಿದ್ಯಾರ್ಥಿಗೆ ಸಮರ್ಪಕ ಪಡಿತರವನ್ನು ನೀಡಲಾಗುವುದು. ಇದರಿಂದ ಮಕ್ಕಳಿಗೆ ಪೌಷ್ಠಿಕಾಂಶವನ್ನು ಒದಗಿಸುವಲ್ಲಿ ಯಾವುದೇ ಕೊರತೆಯಾಗಲ್ಲʼ ಎಂದು ಕೇಜ್ರಿವಾಲ್‌ ಹೇಳಿದರು.

ಹಳ್ಳಿಯ ಒಂದೇ ಕುಟುಂಬದ ಮೂವರು ಸೋದರಿಯರಿಂದ ಇತಿಹಾಸ ಸೃಷ್ಟಿ, ಏನದು?

ʼಲಾಕ್ ಡೌನ್ ಸಮಯದಲ್ಲಿ ಎಲ್ಲರಿಗೂ ಆಹಾರವನ್ನು ಒದಗಿಸಲು ನಾವು ನಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದೆವು. ದೆಹಲಿ ಸರ್ಕಾರ, ಪ್ರತಿ ದಿನ 10 ಲಕ್ಷ ಜನರಿಗೆ ಆಹಾರವನ್ನು ಒದಗಿಸುತ್ತಿದ್ದು, ಕೇಂದ್ರ ಸರ್ಕಾರ ಮತ್ತು ಎಂಸಿಡಿ ಶಾಲೆಗಳು ಸೇರಿದಂತೆ ದೆಹಲಿಯಾದ್ಯಂತದ ಎಲ್ಲಾ ಶಾಲೆಗಳಲ್ಲಿ ಇದಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಜನರು ಆಹಾರಕ್ಕಾಗಿ ಬರುವುದನ್ನು ನಿಲ್ಲಿಸುವವರೆಗೂ ನಾವು ವಿತರಣೆಯನ್ನು ಮುಂದುವರಿಸುತ್ತೇವೆ ಅಂತಾ ಆಪ್‌ ಪಕ್ಷದ ಮುಖಂಡರೊಬ್ಬರು.

ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಲು ದೇಶಾದ್ಯಂತ ಶಾಲೆಗಳನ್ನು ಮಾರ್ಚ್‌ನಲ್ಲಿ ಮುಚ್ಚಲಾಗಿತ್ತು. ಬಳಿಕ  ಅಕ್ಟೋಬರ್ 15 ರಂದು ಕೆಲವು ರಾಜ್ಯಗಳಲ್ಲಿ ಶಾಲೆಗಳನ್ನು ಪುನಃ ತೆರೆಯಲಾಗಿದೆ. ಆದ್ರೆ ದೆಹಲಿ ಸರ್ಕಾರ ಮಾತ್ರ, ಕೊರೊನಾ ವ್ಯಾಕ್ಸಿನ್‌ ಸಿಗುವವರೆಗೂ ಶಾಲೆಗಳನ್ನು ಪುನರಾಂಭಿಸದಿರಲು ನಿರ್ಧರಿಸಿದೆ.

ಶಾಲೆಗಳನ್ನು ಮುಚ್ಚಿದ್ದರಿಂದ ಮಧ್ಯಾಹ್ನದ ಬಿಸಿಯೂಟ ಒದಗಿಸುವುದು ಒಂದು ಸವಾಲಾಗಿತ್ತು. ಹಣವನ್ನು ನೇರವಾಗಿ ವಿದ್ಯಾರ್ಥಿಗಳ ಖಾತೆಗಳಿಗೆ ವರ್ಗಾಯಿಸುವ ಪ್ರಯೋಗಕ್ಕೆ ಮುಂದಾಗಿದ್ದೆವು. ಆದರೆ ಖಾತೆಗಳಿಗೆ ಹಣ  ವರ್ಗಾಯಿಸುವುದಕ್ಕಿಂತ ಪಡಿತರವನ್ನು ವಿತರಿಸುವುದು ಉತ್ತಮ ಎಂಬ ಮುಖ್ಯಮಂತ್ರಿಯವರ ಆಲೋಚನೆಯಾಗಿತ್ತು. ಹೀಗಾಗಿ ನಾವು, ಈಗ ದೆಹಲಿಯ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಡಿತರ ಕಿಟ್‌ ಅನ್ನು ನೀಡುತ್ತಿದ್ದೇವೆʼಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದರು.

ಹೊಸ ವರ್ಷದಲ್ಲಿ ಅತಿ ಹೆಚ್ಚು ಸಂಭಾವನೆ ನೀಡುವ ಉದ್ಯೋಗಗಳಿವು

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ