ಡಿಜಿಟಲ್ ಮಾರ್ಕ್ಸ್ ಕಾರ್ಡ್ ಕೊಡ್ತೇವೆ ಎನ್ನುತ್ತಿರೋ ರಾಜ್ಯದ ವಿವಿಗಳು. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ ಅಂತ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದ ಎಸ್‌ಎಫ್‌ಐ ವಿದ್ಯಾರ್ಥಿ ಘಟಕದ ಮುಖಂಡ.
ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು(ಸೆ.15): ಪದವಿ ಮುಗಿಸಿದ ಪದವಿ ವಿದ್ಯಾರ್ಥಿಗಳಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಕಷ್ಟಪಟ್ಟು ಓದಿ ಪಾಸಾದ್ರೂ ಸಿಗ್ತಿಲ್ಲ ಮಾರ್ಕ್ಸ್ ಕಾರ್ಡ್. ಒಟ್ಟು ರಾಜ್ಯದ 18 ಲಕ್ಷ ವಿದ್ಯಾರ್ಥಿಗಳಿಗೆ ಭೌತಿಕವಾಗಿ ಅಂಕಪಟ್ಟಿ ಕೊಡಲು ರಾಜ್ಯ ವಿವಿಗಳು ಮೀನಾಮೇಷ ಎಣಿಸುತ್ತಿವೆ. ಇದರಿಂದ ಲಕ್ಷಾಂತರ ಪದವಿ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ.
undefined
ಹೌದು, ಪದವಿ ಮುಗಿಸಿದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ, ಸರ್ಕಾರಿ ಉದ್ಯೋಗಕ್ಕೆ ಸೇರಬೇಕು ಅಂದ್ರೆ ಒರಿಜಿನಲ್ ಮಾರ್ಕ್ಸ್ ಕಾರ್ಡ್ ಬೇಕು. ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗೂ ಒರಿಜಿನಲ್ ಅಂಕಪಟ್ಟಿ ಅತ್ಯವಶ್ಯಕ.
ಆದ್ರೆ ಡಿಜಿಟಲ್ ಮಾರ್ಕ್ಸ್ ಕಾರ್ಡ್ ಕೊಡ್ತೇವೆ ಎನ್ನುತ್ತಿರೋ ರಾಜ್ಯದ ವಿವಿಗಳು. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ ಅಂತ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಸ್ ಎಫ್ ಐ ವಿದ್ಯಾರ್ಥಿ ಘಟಕದ ಮುಖಂಡ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಹಿಜಾಬ್ ವಿವಾದ ಬಳಿಕ ಶಾಲೆಗಳಲ್ಲಿ ನಿಖಾಬ್ ನಿಷೇಧ, ಸೆ.30 ರಿಂದ ಈ ಮುಸ್ಲಿಂ ದೇಶದಲ್ಲಿ ಜಾರಿ!
ಇನ್ನೂ ರಾಜ್ಯದ 945 ಶಿಕ್ಷಣ ಸಂಸ್ಥೆಗಳಲ್ಲಿ 152 ಸಂಸ್ಥೆಗಳು NAD-ಡಿಜಿ ಲಾಕರ್ ಗೆ ನೋಂದಣಿ ಮಾಡಿಕೊಂಡಿದೆ.ಉಳಿದ 793 ನೋಂದಣಿಯೇ ಮಾಡಿಲ್ಲ. ಈ ಶಿಕ್ಷಣ ಸಂಸ್ಥೆಗಳಿಂದ ಓದಿದ ವಿದ್ಯಾರ್ಥಿಗಳ ಅಂಕಪಟ್ಟಿ ಪರಿಶೀಲನೆ ಮಾಡಲು ಕಷ್ಟವಾಗುತ್ತಿದೆ ಅಂತ ಕಾಲೇಜು ಆಡಳಿತ ಮಂಡಳಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇನ್ನೂ ವಿದ್ಯಾರ್ಥಿಗಳು ಹೊರ ದೇಶದಲ್ಲಿ ಓದಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಭೌತಿಕ ಅಂಕಪಟ್ಟಿ ಸಿಗದೆ ದೊಡ್ಡ ಸಮಸ್ಯೆಯಾಗಿದೆ. ಸಿಇಟಿ, ನೀಟ್ ಪರೀಕ್ಷೆ, ಉದ್ಯೋಗ ಪಡೆಯಲು ಭೌತಿಕ ಅಂಕಪಟ್ಟಿ ಬೇಕು.ವಿದ್ಯಾರ್ಥಿಗಳ ಸಮಸ್ಯೆ ಮನಗಂಡು ಹೈಕೋರ್ಟ್ ಕೂಡ ವಿಶ್ವವಿದ್ಯಾಲಯಗಳಿಗೆ ಭೌತಿಕ ಅಂಕಪಟ್ಟಿ ಕೊಡುವಂತೆ ಆದೇಶ ಹೊರಡಿಸಿದೆ ಅಂತ ವಿದ್ಯಾರ್ಥಿ ಮುಖಂಡ ವಾಸುದೇವ ರೆಡ್ಡಿ ಹೇಳಿದ್ದಾರೆ.
ಆದ್ರೆ ಡಿಜಿ ಲಾಕರ್ ಜೊತೆ ಹಾರ್ಡ್ ಕಾಪಿ ಕೊಡಲು ವಿವಿ ನಕಾರ ಮಾಡಿದೆ. ಅಲ್ಲದೆ ಹಾರ್ಡ್ ಕಾಪಿ ಮಾರ್ಕ್ಸ್ ಕಾರ್ಡ್ ಕೊಡಲು ಸತಾಯಿಸುತ್ತಿರುವ ವಿವಿಗಳು. ಅಂಕಪಟ್ಟಿ ಇದ್ರೆ ಮಾತ್ರ ಸಿಇಟಿ, ನೀಟ್ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ. ಆದ್ರೆ ಇತ್ತೀಚಿಗೆ ಕೆಇಎ, ಯುಪಿಎಸ್ ಸಿ ನೋಟಿಫಿಕೇಷನ್ ನಲ್ಲೂ ಹಾರ್ಡ್ ಕಾಪಿ ಅಂಕಪಟ್ಟಿ ಸಲ್ಲಿಸಲು ಕೇಳಲಾಗುತ್ತಿದೆ. ಕೂಡಲೇ ಇದಕ್ಕೆ ಸಂಬಂಧಪಟ್ಟ ಸಚಿವರು ಡಿಜಿ ಲಾಕರ್ ಜೊತೆಗೆ ಬೌತಿಕ ಅಂಕಪಟ್ಟಿ ನೀಡುವಂತೆ ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿವೆ.