ನಾಳೆಯಿಂದ ವೈದ್ಯಕೀಯ ಪದವಿ‌ ಕೋರ್ಸುಗಳಿಗೆ ಯುಜಿ ನೀಟ್ ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆ

By Sathish Kumar KH  |  First Published Sep 13, 2023, 7:43 PM IST

ಕರ್ನಾಟಕ ನೀಟ್‌ ಯುಜಿ 2023 ಕೌನ್ಸೆಲಿಂಗ್ ಮಾಪ್ ಅಪ್ ರೌಂಡ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಸೆ.14ರಿಂದ ಸೆ.20ರವರೆಗೆ ನಡೆಯಲಿದೆ.


ಬೆಂಗಳೂರು (ಸೆ.13): ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕರ್ನಾಟಕ ನೀಟ್‌ ಯುಜಿ 2023 ಕೌನ್ಸೆಲಿಂಗ್ ಮಾಪ್ ಅಪ್ ರೌಂಡ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ನಾಳೆಯಿಂದ (ಸೆ.14) ಮೆಡಿಕಲ್‌ ಪದವಿ ಕೋರ್ಸ್‌ಗಳ ಯುಜಿ ನೀಟ್‌ ಮಾಪ್‌ ಅಪ್‌ ಮೂಲಕ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ. ಪೂರ್ಣ ವೇಳಾಪಟ್ಟಿಯನ್ನು ಅಭ್ಯರ್ಥಿಗಳು ಕೆಇಎ ಅಧಿಕೃತ ಸೈಟ್ kea.kar.nic.in ನಲ್ಲಿ ಪರಿಶೀಲಿಸಬಹುದು. ಸೆ.14ರಿಂದ ಸೆ.20ರವರೆಗೆ ಆನ್‌ಲೈನ್‌ನಲ್ಲಿ ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆ ಮಾಡಲಾಗುತ್ತದೆ.

ರಾಜ್ಯದಲ್ಲಿ ಈವರೆಗಿನ ಸೀಟು ಹಂಚಿಕೆಯ ನಂತರ ಉಳಿದಿರುವ 1,213 ಮೆಡಿಕಲ್ ಸೀಟುಗಳಿಗೆ ಮಾತ್ರ ಈ ಪ್ರಕ್ರಿಯೆ ನಡೆಯಲಿದೆ. ಈ  ಪೈಕಿ ಕೇವಲ 12 ಸರ್ಕಾರಿ ಸೀಟುಗಳಾಗಿದ್ದು, 446 ಖಾಸಗಿ ಕಾಲೇಜುಗಳ ಸೀಟುಗಳಾಗಿವೆ. ಉಳಿದಂತೆ ಮಿಕ್ಕ 755 ಸೀಟುಗಳು  ಮ್ಯಾನೇಜ್ಮೆಂಟ್/ಎನ್‌ಆರ್‌ಐ ಕೋಟಾದ ಸೀಟುಗಳಾಗಿವೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೈದ್ಯಕೀಯ ಕೋರ್ಸುಗಳಿಗೆ ಈಗಾಗಲೇ ಮೊದಲ ಸುತ್ತಿನ‌ ಸೀಟು ಹಂಚಿಕೆ ಹಾಗೂ ಯುಜಿನೀಟ್-2023 ರ ಅಡಿಯಲ್ಲಿ 2ನೇ ಸುತ್ತಿನ‌ ಸೀಟು ಹಂಚಿಕೆ ಮಾಡಿದೆ. ಈ ಹಂತಗಳಲ್ಲಿ ಸೀಟು ಪಡೆದುಕೊಂಡಿರುವವರು ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆಯಲ್ಲಿ‌ ಪಾಲ್ಗೊಳ್ಳುವಂತಿಲ್ಲ.

Tap to resize

Latest Videos

undefined

ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್: ಈ ಒಂದು ದಾಖಲೆಯಿದ್ದರೆ ಸಾಕು!

ಯಾರು ನೀಟ್‌ ಮಾಪ್‌ನಲ್ಲಿ ಭಾಗವಹಿಸುವಂತಿಲ್ಲ: ಇನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ದಂತ ವೈದ್ಯಕೀಯ ಸೀಟು ಪಡೆದುಕೊಂಡಿರುವವರು ಕೇವಲ ವೈದ್ಯಕೀಯ ಪದವಿ ಸೀಟು ಪಡೆಯಲು ಅವಕಾಶವಿರುತ್ತದೆ. ಮೊದಲ ಅಥವಾ ಎರಡನೇ ಸುತ್ತಿನಲ್ಲಿ ಸೀಟು ಪಡೆದುಕೊಂಡು ಈಗಾಗಲೇ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಮುಗಿಸಿರುವವರು ಹಾಗೂ ಅಖಿಲ ಭಾರತ ಮಟ್ಟದ ಮಾಪ್ ಅಪ್ ಸುತ್ತಿನಲ್ಲಿ ವೈದ್ಯಕೀಯ ಸೀಟು ಪಡೆದು ಕೊಂಡಿರುವವರು ಜೊತೆಗೆ, ಪ್ರಾಧಿಕಾರ ನಡೆಸುವ ಮಾಪ್ ಅಪ್ ಸೀಟು ಹಂಚಿಕೆಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ತಿಳಿಸಲಾಗಿದೆ.

ಎಲ್ಲ ವಿದ್ಯಾರ್ಥಿಗಳಿಗೆ 1 ಲಕ್ಷ ರೂ. ಮುಂಜಾಗ್ರತಾ ಶುಲ್ಕ ಕಡ್ಡಾಯ: ಮೆಡಿಕಲ್‌ ಯುಜಿ ನೀಟ್‌ ಮಾಪ್ ಅಪ್ ಸುತ್ತಿನಲ್ಲಿ ಪಾಲ್ಗೊಳ್ಳಲು ಎಲ್ಲ ವಿದ್ಯಾರ್ಥಿಗಳು 1 ಲಕ್ಷ ರೂಪಾಯಿ ಮುಂಜಾಗ್ರತಾ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ. ಈ ಶುಲ್ಕ ಎಲ್ಲ ವರ್ಗದ ಅಭ್ಯರ್ಥಿಗಳಿಗೂ ಅನ್ವಯವಾಗಲಿದೆ. ಮಾಪ್ ಅಪ್ ಸುತ್ತಿನಲ್ಲಿ ಸೀಟು ಪಡೆದುಕೊಂಡ ನಂತರ ಅಭ್ಯರ್ಥಿಗಳು ನಿರ್ದಿಷ್ಟ ಕಾಲೇಜಿನಲ್ಲಿ ಪ್ರವೇಶ ಪಡೆಯಲು ವಿಫಲರಾದರೆ, ಅವರ ಮುಂಜಾಗ್ರತಾ ಶುಲ್ಕವನ್ನು ಹಿಂದಿರುಗಿಸುವುದಿಲ್ಲ. ಬದಲಿಗೆ ಅಂಥವರು ಪ್ರಾಧಿಕಾರದ ನಿಯಮಗಳಂತೆ ಇಡೀ ವರ್ಷದ ಶುಲ್ಕವನ್ನು ಭರಿಸಬೇಕಾಗುತ್ತದೆ.

ತಂದೆ ಆಸೆ ಈಡೇರಿಸಲು ಎಂಬಿಬಿಎಸ್ ಬಿಟ್ಟು ಐಎಎಸ್ ಅಧಿಕಾರಿಯಾದ ಮಗಳು

ಬದಲಿ ಕೋರ್ಸ್‌ಗಳಿಗೆ ಪಾವತಿಸಿದ ಶುಲ್ಕ ಹೊಂದಾಣಿಕೆ ಮಾಡುವಂತಿಲ್ಲ:  ಇನ್ನು ಪ್ರಾಧಿಕಾರದಲ್ಲಿ‌ ಬೇರೆ ಕೋರ್ಸುಗಳಿಗೆ ಕಟ್ಟಿರಬಹುದಾದ ಶುಲ್ಕವನ್ನು ಇದಕ್ಕೆ ಹೊಂದಿಸಲು ಅವಕಾಶವಿರುವುದಿಲ್ಲ. ಮುಂಜಾಗ್ರತಾ ಶುಲ್ಕ ಕಟ್ಟಿದ ನಂತರ ಅರ್ಹ ಅಭ್ಯರ್ಥಿಗಳು ಹೊಸದಾಗಿ ತಮ್ಮ‌ ಆಪ್ಶನ್ ನಮೂದಿಸಲು ಅವಕಾಶ ನೀಡಲಾಗುತ್ತದೆ. ಹಿಂದಿನ ಸುತ್ತುಗಳಲ್ಲಿ ನಮೂದಿಸಿರುವ ಆಯ್ಕೆಗಳನ್ನು ಪರಿಗಣಿಸುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ.

click me!