ಬೆಂಗಳೂರು ವಿವಿ ತರಗತಿಗೆ ಗೈರು ಹಾಜರಾಗಲು ವಿದ್ಯಾರ್ಥಿಗಳ ನಿರ್ಧಾರ

By Girish GoudarFirst Published Jul 11, 2023, 8:54 AM IST
Highlights

ಯಾವುದೇ ಕಾರಣಕ್ಕೂ ಇವತ್ತು ತರಗತಿಗೆ ಹಾಜರಾಗುವುದಿಲ್ಲ, ವಿವಿ ವಿರುದ್ಧ ಪ್ರತಿಭಟನೆ ಮಾಡ್ತೀವಿ ಅಂತ ಆಕ್ರೋಶವನ್ನ ಹೊರಹಾಕಿದ ವಿದ್ಯಾರ್ಥಿಗಳು.

ಬೆಂಗಳೂರು(ಜು.11):  ಬೆಂಗಳೂರು ವಿಶ್ವವಿದ್ಯಾಲಯದ ಸುಮಾರು 52 ವಿಭಾಗದ 3 ಸಾವಿರ ವಿದ್ಯಾರ್ಥಿಗಳು  ಇಂದು(ಮಂಗಳವಾರ) ಸ್ವಯಂ ಪ್ರೇರಿತರಾಗಿ ತರಗತಿಗೆ ಗೈರು ಹಾಜರಾಗಲು ನಿರ್ಧರಿಸಿದ್ದಾರೆ. ವಿವಿಗೆ ನ್ಯಾಕ್ ಎ ಡಬಲ್ ಪ್ಲಸ್ ಬಂದಿದ್ದರೂ ವಿದ್ಯಾರ್ಥಿಗಳಿಗೆ ಕೊಡಬೇಕಿದ್ದ ಮೂಲ ಸೌಕರ್ಯ ಕೊಡದೇ ವಿವಿ ಸತಾಯಿಸುತ್ತಿದೆ ಅಂತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಮೂಲ ಸೌಕರ್ಯಗಳಿಗೆ ಒತ್ತಾಯಿಸಿ ಸುಸ್ತಾಗಿದೆ ಎಂದು ವಿವಿ ವಿರುದ್ಧ ವಿದ್ಯಾರ್ಥಿಗಳ ಕಿಡಿ ಕಾರಿದ್ದಾರೆ. ಕೊಡಬೇಕಿರುವ ಮೂಲ ಸೌಕರ್ಯಗಳನ್ನ ಕೊಡದೇ ಬೆಂಗಳೂರು ವಿಶ್ವವಿದ್ಯಾಲಯದ ಸತಾತಿಯಿಸುತ್ತಿದೆ.  ಯಾವುದೇ ಕಾರಣಕ್ಕೂ ಇವತ್ತು ತರಗತಿಗೆ ಹಾಜರಾಗುವುದಿಲ್ಲ, ವಿವಿ ವಿರುದ್ಧ ಪ್ರತಿಭಟನೆ ಮಾಡ್ತೀವಿ ಅಂತ ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ. 

Latest Videos

ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ 75 ಎಕರೆ ಗುಳುಂ..!

ವಿಶ್ವವಿದ್ಯಾಲಯದ ಯಾವುದೇ ವಿಭಾಗದಲ್ಲಿಯೂ ಇಂದು ವಿದ್ಯಾರ್ಥಿಗಳು ಹಾಜರಾಗಲ್ಲ. ವಿಶ್ವವಿದ್ಯಾಲಯದ ವಿರುದ್ಧ ಸುಮಾರು 3 ಸಾವಿರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲಿದ್ದಾರೆ. 

 ವಿದ್ಯಾರ್ಥಿಗಳ 'ಮೂಲ' ಬೇಡಿಕೆಯೇನು?

 - ಗ್ರಂಥಾಲಯದಲ್ಲಿ ಉತ್ತಮ ಪುಸ್ತಕ
- ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉತ್ತಮ ಹಾಸ್ಟೆಲ್ ವ್ಯವಸ್ಥೆ  - ಸ್ಮಾರ್ಟ್ ಕ್ಲಾಸ್
- ಸ್ಕಿಲ್ ಡೆವೆಲಪ್ಮೇಂಟ್ ಕ್ಲಾಸ್
 -ಉತ್ತಮ ಲ್ಯಾಬ್
 -ಸ್ವಿಮ್ಮಿಂಗ್ ಪೂಲ್ ದುರಸ್ತಿ 
- ಕೋಚಿಂಗ್ ಕ್ಲಾಸ್ 
- 24/7 ಗ್ರಂಥಾಲಯ
- ಕುಡಿಯುವ ನೀರಿನ ವ್ಯವಸ್ಥೆ
- ಕ್ರಿಡೋಪಕರಣಗಳು 
- ದೈಹಿಕ ವ್ಯಾಯಾಮ ಶಾಲೆ
- ಉತ್ತಮ ಹೊರ ಕ್ರೀಡಾಂಗಣ
- ಉತ್ತಮ ಒಳ ಕ್ರೀಡಾಂಗಣ 
ಇನ್ನಿತರ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲಿದ್ದಾರೆ. 

click me!