ಮೇ 23ಕ್ಕೆ ಡಿಸಿಇಟಿ, ಎಂ.ಟೆಕ್ ಪ್ರವೇಶ ಪರೀಕ್ಷೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಹತ್ವದ ಮಾಹಿತಿ

Published : May 22, 2026, 03:34 PM IST
Entrance Exams

ಸಾರಾಂಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೇ 23 ರಂದು ಡಿಸಿಇಟಿ ಮತ್ತು ಎಂ.ಟೆಕ್/ಎಂಇ ಪ್ರವೇಶ ಪರೀಕ್ಷೆಗಳನ್ನು ನಡೆಸಲಿದೆ. ಈ ಪರೀಕ್ಷೆಗಳಿಗೆ ಒಟ್ಟು 33,000ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಲಿದ್ದು, ಬೆಂಗಳೂರು ಸೇರಿದಂತೆ 8 ಕೇಂದ್ರಗಳಲ್ಲಿ ಬಿಗಿ ಕ್ರಮಗಳೊಂದಿಗೆ ಪರೀಕ್ಷೆ ನಡೆಯಲಿದೆ.

ಬೆಂಗಳೂರು: ಎಂಜಿನಿಯರಿಂಗ್ ಕೋರ್ಸ್‌ 3ನೇ ಸೆಮಿಸ್ಟರ್ ಅಥವಾ 2ನೇ ವರ್ಷಕ್ಕೆ ಪ್ರವೇಶ ಕಲ್ಪಿಸುವ ಡಿ-ಸಿಇಟಿ ಹಾಗೂ ಎಂ.ಟೆಕ್/ಎಂಇ ಪ್ರವೇಶ ಪರೀಕ್ಷೆಗಳು ಮೇ 23ರಂದು ನಡೆಯಲಿದ್ದು, ಅಗತ್ಯ ಸಿದ್ಧತೆ ಹಾಗೂ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (karnataka examination authority) ತಿಳಿಸಿದೆ. ಎರಡೂ ಪರೀಕ್ಷೆಗಳು ಬೆಂಗಳೂರು, ಬಳ್ಳಾರಿ, ಬಾಗಲಕೋಟೆ, ದಾವಣಗೆರೆ, ಧಾರವಾಡ, ಕಲಬುರಗಿ, ಮೈಸೂರು ಮತ್ತು ತುಮಕೂರು ಕೇಂದ್ರಗಳಲ್ಲಿ ನಡೆಯಲಿವೆ. ಡಿಸಿಇಟಿ ಪರೀಕ್ಷೆಯನ್ನು 51 ಕೇಂದ್ರಗಳಲ್ಲಿ ಒಟ್ಟು 21,095 ಅಭ್ಯರ್ಥಿಗಳು ಹಾಗೂ ಎಂ.ಟೆಕ್ ಪರೀಕ್ಷೆಯನ್ನು 26 ಕೇಂದ್ರಗಳಲ್ಲಿ ಒಟ್ಟು 12,116 ಅಭ್ಯರ್ಥಿಗಳು ಬರೆಯಲಿದ್ದಾರೆ.

ಇದಲ್ಲದೆ ಹೊರನಾಡು, ಗಡಿನಾಡು ಅಭ್ಯರ್ಥಿಗಳಿಗೆ ಕಡ್ಡಾಯ ಕನ್ನಡ ಪರೀಕ್ಷೆ ಕೂಡ‌ ಬೆಂಗಳೂರಿನಲ್ಲಿ ಅಂದು ನಡೆಯಲಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರೀಕ್ಷೆ ಹೇಗೆ ನಡೆಯುತ್ತದೆ?

ಪರೀಕ್ಷೆಯು ಆಫ್‌ಲೈನ್ ಮೋಡ್‌ನಲ್ಲಿ ನಡೆಯುತ್ತದೆ. 3 ಗಂಟೆಗಳಲ್ಲಿ ಒಟ್ಟು 100 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಕರ್ನಾಟಕ ಡಿಸಿಇಟಿ (ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ)ಗೆ ಅರ್ಹತೆ ಪಡೆಯಲು, ಅಭ್ಯರ್ಥಿಗಳು ಸಾಮಾನ್ಯ ವರ್ಗದವರಿಗೆ ಅಂತಿಮ ವರ್ಷದಲ್ಲಿ (5 ನೇ ಮತ್ತು 6 ನೇ ಸೆಮಿಸ್ಟರ್‌ಗಳು) ಕನಿಷ್ಠ 45% ಒಟ್ಟು ಅಂಕಗಳೊಂದಿಗೆ ಎಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಡಿಪ್ಲೊಮಾ (ಅಥವಾ ತತ್ಸಮಾನ) ಉತ್ತೀರ್ಣರಾಗಿರಬೇಕು . ಎಸ್‌ಸಿ/ಎಸ್‌ಟಿ/ಒಬಿಸಿ (ಕರ್ನಾಟಕ) ಅಭ್ಯರ್ಥಿಗಳು ಕನಿಷ್ಠ 40% ಅಂಕಗಳನ್ನು ಪಡೆಯಬೇಕು.

PREV
Read more Articles on
click me!

Recommended Stories

SC ST ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: 8ನೇ ಕ್ಲಾಸ್‌ ಅಲ್ಲ, ಈಗ SSLC ವರೆಗೂ ಫ್ರೀ ಎಜುಕೇಶನ್, ಇದು ಖಾಸಗಿ ಶಾಲೆಗಳಿಗೂ ಅನ್ವಯಿಸುತ್ತಾ?
ಅಂಗನವಾಡಿ ಶಾಲೆ ಮಕ್ಕಳಿಗೆ ₹3000 ಕಿಟ್; ಪ್ರತಿ ಜಿಲ್ಲೆಯ 15 SSLC ಟಾಪರ್‌ಗಳಿಗೆ ಉಚಿತ ಶಿಕ್ಷಣ ಯೋಜನೆ!