SC ST ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: 8ನೇ ಕ್ಲಾಸ್‌ ಅಲ್ಲ, ಈಗ SSLC ವರೆಗೂ ಫ್ರೀ ಎಜುಕೇಶನ್, ಇದು ಖಾಸಗಿ ಶಾಲೆಗಳಿಗೂ ಅನ್ವಯಿಸುತ್ತಾ?

Kannadaprabha News   | Kannada Prabha
Published : May 22, 2026, 04:44 AM IST
RTE Free Education for SC ST Students Extended Up to Class 10

ಸಾರಾಂಶ

ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದೆ. ಈ ವಿದ್ಯಾರ್ಥಿಗಳು ಈವರೆಗೆ 8ನೇ ತರಗತಿವರೆಗೆ ಪಡೆಯುತ್ತಿದ್ದ ಉಚಿತ ಶಿಕ್ಷಣವನ್ನು ಇದೀಗ 10ನೇ ತರಗತಿಯವರೆಗೆ ವಿಸ್ತರಿಸಲಾಗಿದೆ.

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಖಾಸಗಿ ಶಾಲೆಗಳಲ್ಲಿ ಬಡ ಮಕ್ಕಳಿಗೆ ಮೀಸಲಾದ ಶೇ.25ರಷ್ಟು ಸೀಟುಗಳಿಗೆ ಪ್ರವೇಶ ಪಡೆದು ಓದುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು 10ನೇ ತರಗತಿ ವರೆಗೆ ಅದೇ ಶಾಲೆಯಲ್ಲಿ ಉಚಿತ ಶಿಕ್ಷಣ ಮುಂದುವರೆಸಲು ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ. 

ಆರ್‌ಟಿಇ ಕಾಯ್ದೆ ಜಾರಿಯಾದ ವರ್ಷದಿಂದ ಈವರೆಗೆ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಸೀಟುಗಳಿಗೆ ಪ್ರವೇಶ ಪಡೆದಿರುವ ಮಕ್ಕಳಿಗೆ 8ನೇ ತರಗತಿ ವರೆಗಿನ ಶಿಕ್ಷಣದ ಶುಲ್ಕವನ್ನು ಸರ್ಕಾರವೇ ಸಂಬಂಧಿಸಿದ ಶಾಲೆಗಳಿಗೆ ಮರು ಪಾವತಿಸುತ್ತಾ ಬಂದಿದೆ. ಇದೀಗ ಈ ಪೈಕಿ ಎಸ್ಸಿ, ಎಸ್ಟಿ ಸಮುದಾಯದ ಮಕ್ಕಳು ತಾವು 8ನೇ ತರಗತಿ ಮುಗಿದ ನಂತರವೂ ಅದೇ ಖಾಸಗಿ ಶಾಲೆಗಳಲ್ಲಿ 9 ಮತ್ತು 10ನೇ ತರಗತಿಯವರೆಗೆ ಉಚಿತ ಶಿಕ್ಷಣ ಮುಂದುವರಿಸಲು ಇಚ್ಛಿಸಿದರೆ ಆ ಎರಡು ವರ್ಷದ ಶುಲ್ಕವನ್ನೂ ಸರ್ಕಾರವೇ ಭರಿಸಲಿದೆ.

- ಆರ್‌ಟಿಐ ಅಡಿ ಖಾಸಗಿ ಶಾಲೆಗೆ ಸೇರಿರುವ ಮಕ್ಕಳು ಈವರೆಗೆ 8ನೇ ಕ್ಲಾಸ್‌ ವರೆಗೆ ಉಚಿತ ಶಿಕ್ಷಣ ಅವಕಾಶ । ಈಗ ಅಲ್ಲಿ ಎಸ್ಸೆಸ್ಸೆಲ್ಸಿ ವರೆಗೂ ಶಿಕ್ಷಣ ಪಡೆಯಲು ಅವಕಾಶ

ಈ ಸಂಬಂಧ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, 2025-26ನೇ ಸಾಲಿನಲ್ಲಿ ಆರ್‌ಟಿಇ ಅಡಿಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡಿದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಮಾತ್ರ ಇದು ಅನ್ವಯಿಸುತ್ತದೆ. ಪ್ರಸಕ್ತ 2026-27ನೇ ಸಾಲಿನಲ್ಲಿ 9ನೇ ತರಗತಿಗೆ ಹಾಗೂ ಮುಂದಿನ ಸಾಲಿನಲ್ಲಿ 10ನೇ ತರಗತಿಗೆ ಅದೇ ಶಾಲೆಗಳಲ್ಲಿ ಆರ್‌ಟಿಇ 12(1)(ಸಿ) ಅಡಿಯಲ್ಲಿ ಉಚಿತ ಶಿಕ್ಷಣ ಮುಂದುವರಿಯಲಿದೆ.

ಟಿಸಿ ಪಡೆದವರಿಗೂ ಅವಕಾಶ:

ಒಂದು ವೇಳೆ ಯಾವುದೇ ವಿದ್ಯಾರ್ಥಿಗಳು ಈಗಾಗಲೇ ಅದೇ ಶಾಲೆಯಲ್ಲಿ 9ನೇ ತರಗತಿಗೆ ದಾಖಲಾತಿ ಶುಲ್ಕ ಭರಿಸಿದ್ದರೆ, ಅದನ್ನು ಪೋಷಕರಿಗೆ ಹಿಂತಿರುಗಿಸಲಾಗುವುದು. ಒಂದು ವೇಳೆ ಟಿಸಿ ಪಡೆದಿರುವ ಮಕ್ಕಳ ಪೋಷಕರು ಒಪ್ಪಿದರೆ ಅದೇ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಎಲ್ಲ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಮೇಲ್ವಿಚಾರಣೆ ನಡೆಸುವಂತೆ ಇಲಾಖೆ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಅಂಗನವಾಡಿ ಶಾಲೆ ಮಕ್ಕಳಿಗೆ ₹3000 ಕಿಟ್; ಪ್ರತಿ ಜಿಲ್ಲೆಯ 15 SSLC ಟಾಪರ್‌ಗಳಿಗೆ ಉಚಿತ ಶಿಕ್ಷಣ ಯೋಜನೆ!
ಸರ್ಕಾರಿ ಶಾಲೆಗೆ ಮಗು ದಾಖಲಿಸಿದರೆ ₹1000 ಎಫ್‌ಡಿ; ಮುಖ್ಯೋಪಾಧ್ಯಾಯರಿಂದ ಹೊಸ ಯೋಜನೆ