ಬಿಕಾಂ ಪದವಿ ಪರೀಕ್ಷೆಯಲ್ಲಿ ಮಹಾ ಎಡವಟ್ಟು; ಪ್ರಶ್ನೆ ಪತ್ರಿಕೆ ಬಿಟ್ಟು ಮಾದರಿ ಉತ್ತರ ಪತ್ರಿಕೆ ವಿತರಣೆ

By Sathish Kumar KH  |  First Published Aug 6, 2024, 4:55 PM IST

ದಾವಣಗೆರೆ ವಿಶ್ವ ವಿದ್ಯಾಲಯದ ಬಿಕಾಂ ಪದವಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಬದಲು ಉತ್ತರ ಪತ್ರಿಕೆ ನೀಡಿ ಎಡವಟ್ಟು ಮಾಡಿಕೊಳ್ಳಲಾಗಿದೆ.


ದಾವಣಗೆರೆ (ಆ.06): ದಾವಣಗೆರೆ ವಿಶ್ವ ವಿದ್ಯಾಲಯದಲ್ಲಿ ನಡೆದ ಪದವಿ ವಿದ್ಯಾರ್ಥಿಗಳ ಬಿಕಾಂ 6ನೇ ಸೆಮಿಸ್ಟರ್ ಪರೀಕ್ಷೆಯ ವೇಳೆ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ವಿತರಣೆ ಮಾಡುವುದು ಬಿಟ್ಟು, ಪ್ರಶ್ನೆ ಪತ್ರಿಕೆಗೆ ಸಿದ್ಧಪಡಿಸಲಾಗಿದ್ದ ಮಾದರಿ ಉತ್ತರ ಪತ್ರಿಕೆಗಳನ್ನು ವಿತರಣೆ ಮಾಡಲಾಗಿದೆ.

ಹೌದು, ಪ್ರಶ್ನೆ ಪತ್ರಿಕೆ ಬದಲು ಉತ್ತರ ಪತ್ರಿಕೆಯನ್ನು ನೀಡಿದ ಘಟನೆ ದಾವಣಗೆರೆ ವಿಶ್ವ ವಿದ್ಯಾಲಯದಲ್ಲಿ ನಡೆದಿದೆ. ದಾವಣಗೆರೆ ವಿಶ್ವ ವಿದ್ಯಾಲಯದಲ್ಲಿ ಮಂಗಳವಾರ ನಡೆಯುತ್ತಿದ್ದ ಬಿಕಾಂ  ಪರೀಕ್ಷೆಯಲ್ಲಿ ಯಡವಟ್ಟು ಸಂಭವಿಸಿದೆ. ಪರೀಕ್ಷೆ ಬರೆಯಲು ಸಿದ್ಧರಾಗಿ ಬಂದಿದ್ದ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಕೊಡುವ ಬದಲು ಮಾದರಿ  ಉತ್ತರ ಪತ್ರಿಕೆಯನ್ನು ನೀಡಲಾಗಿದೆ. ಹೀಗಾಗಿ, ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಬಿಕಾಂ 6ನೇ ಸೆಮಿಸ್ಟರ್‌ನ ಇ- ಕಾಮರ್ಸ್ ವಿಷಯದ ಪೇಪರ್‌ನ ಪರೀಕ್ ಯಲ್ಲಿ ಗೊಂದಲ ಸೃಷ್ಟಿಯಾಗಿದೆ.

Tap to resize

Latest Videos

undefined

ಇನ್ನು ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆಗಳನ್ನು ನೀಡಿ ಅವರು ರಿಜಿಸ್ಟರ್ ನಂಬರ್ ನಮೂದಿಸಿ ಪ್ರಶ್ನೆ ಪತ್ರಕೆಗಾಗಿ ಕಾಯುತ್ತಿದ್ದಾರೆ. ಈ ವೇಳೆ ವಾರ್ನಿಂಗ್ ಬೆಲ್ ಆದ ತಕ್ಷಣವೇ ಪ್ರಶ್ನೆ ಪತ್ರಿಕೆಯ ಬಂಡಲ್‌ಗೆ ನಾಲ್ಕು ವಿದ್ಯಾರ್ಥಿಗಳಿಂದ ಸಹಿ ಮಾಡಿಸಿ ಅದನ್ನು ಸೀಲ್ ಓಪೆನ್ ಮಾಡಿ ಪ್ರಶ್ನೆ ಪತ್ರಿಕೆಗಳನ್ನು ಹಂಚುವ ರೀತಿಯಲ್ಲಿಯೇ ಹಂಚಿಕೆ ಮಾಡಿದ್ದಾರೆ. ಇನ್ನು ಪರೀಕ್ಷೆ ಬರೆಯುವ ಗಂಟೆ ಬಾರಿಸುತ್ತಿದ್ದಂತೆ ಪ್ರಶ್ನೆ ಪತ್ರಿಕೆ ಓಪನ್ ಮಾಡಿದ ವಿದ್ಯಾರ್ಥಿಗಳಿಗೆ ಶಾಕ್ ಆಗಿದೆ. ಇಲ್ಲಿ ಪ್ರಶ್ನೆ ಪತ್ರಿಕೆಯ ಬದಲು ಮಾದರಿ ಉತ್ತರ ಪತ್ರಿಕೆಯನ್ನು ನೀಡಲಾಗಿದೆ ಎಂಬುದು ತಿಳಿದು ಬಂದಿದೆ.

ಮಗಳನ್ನು ಮದುವೆ ಮಾಡಿ ಗಂಡನ ಜೊತೆಗೆ ಕಳಿಸಿದರೆ, ಮಾವ ನಿನ್ನ ಮಗಳ ಶವ ತಗೊಂಡೋಗು ಎಂದ ಅಳಿಮಯ್ಯ!

ಮಾದರಿ ಉತ್ತರ ಪತ್ರಿಕೆ ಎಂದರೇನು?
ಪ್ರತಿ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಪದವಿ ತರಗತಿಗಳ ಪರೀಕ್ಷೆಗೆ ನುರಿತ ಕೆಲವು ಪ್ರಾಧ್ಯಾಪಕರಿಂದ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಲಾಗುತ್ತದೆ. ಜೊತೆಗೆ, ಈ ಪ್ರಶ್ನೆ ಪತ್ರಿಕೆಗಳಿಗೆ ಮಾದರಿ ಉತ್ತರ ಪತ್ರಿಕೆಯನ್ನೂ ಸಿದ್ಧಪಡಿಸಿ ನೀಡಲಾಗುತ್ತದೆ. ಎಲ್ಲ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ಪರಿಶೀಲನೆ ಮಾಡುವ ವಿಶ್ವವಿದ್ಯಾನಿಲಯದ ತಂಡವು ಅದರಲ್ಲಿ ಒಂದು ಪ್ರಶ್ನೆ ಪತ್ರಿಕೆ ಅಂತಿಮಗೊಳಿಸಿ ಮುದ್ರಣಕ್ಕೆ ಕಳುಹಿಸುತ್ತದೆ. ಜೊತೆಗೆ, ಪರೀಕ್ಷೆ ಮುಗಿದಾಕ್ಷಣ ಮೌಲ್ಯಮಾಪನ ಮಾಡುವುದಕ್ಕೆ ಅನುಕೂಲ ಆಗುವಂತೆ ಮಾದರಿ ಉತ್ತರ ಪತ್ರಿಕೆಯನ್ನು ಸಿದ್ಧಪಡಿಸಲಾಗಿರುತ್ತದೆ. ಆದರೆ, ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪ್ರಶ್ನೆ ಪತ್ರಿಕೆ ನೀಡುವ ಬದಲು ಮಾದರಿ ಉತ್ತರ ಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ನೀಡಿ ಯಡವಟ್ಟು ಮಾಡಿಕೊಂಡಿದೆ.

ಕೊಪ್ಪಳ ಗವಿಮಠದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪಾನಿಪುರಿ ವ್ಯವಸ್ಥೆ ಮಾಡಿದ ಶ್ರೀಗಳು!

ಇನ್ನು ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ 60 ಕಾಲೇಜುಗಳ ಪೈಕಿ 15 ಕಾಲೇಜುಗಳ ಪರೀಕ್ಷೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಈ ಗೊಂದಲದಿಂದ ತಕ್ಷಣ ಎಚ್ಚೆತ್ತ ದಾವಣಗೆರೆ ವಿಶ್ವ ವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವ ರಮೇಶ್ ಅವರು ಬಿಕಾಂ ಒಂದು ವಿಷಯದ ಪರೀಕ್ಷೆಯನ್ನು ನಿಲ್ಲಿಸುವಂತೆ ಆದೇಶ ಹೊರಡಿಸಿದ್ದಾರೆ. ನಂತರ ವಿದ್ಯಾರ್ಥಿಗಳಿಗೆ ಶೀಘ್ರವೇ ಮುಂದಿನ ದಿನಾಂಕದಲ್ಲಿ ಪರೀಕ್ಷಾ ದಿನಾಂಕವನ್ನು ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.

click me!