ವಿಪರೀತ ಮಳೆಯಿಂದ ಸರ್ಕಾರಿ ಶಾಲಾ ಕೊಠಡಿಗಳು ಬಿರುಕು ಬಿಟ್ಟಿದ್ದು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಇದುವರೆಗೆ ದುರಸ್ತಿ ಕಾರ್ಯವಾಗದೆ ಶಿಕ್ಷಕರು ಮನೆಯಲ್ಲೇ ಪಾಠ ಮಾಡುತ್ತಿದ್ದಾರೆ
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜು.21} : ಕಳೆದ ಮೂರ್ನಾಲ್ಕು ತಿಂಗಳುಗಳಿಂದಲೂ ಸ್ವಲ್ಪ ಮಳೆ ಬಂದ್ರೆ ಸಾಕು ಈ ಶಾಲೆಯ ಸ್ಥಿತಿ ಹೇಳ ತೀರದು. ಇಲ್ಲಿನ ಅವ್ಯವಸ್ಥೆ ಕುರಿತು ಎಷ್ಟೇ ಬಾರಿ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸ್ತಾರೆ ಗ್ರಾಮಸ್ಥರು. ಅಷ್ಟಕ್ಕೂ ಆ ಶಾಲೆಯಲ್ಲಿ ಆಗ್ತಿರೋ ಸಮಸ್ಯೆಯಾದ್ರು ಏನು ಅನ್ನೋದ್ರ ಕಂಪ್ಲೀಟ್ ವರದಿ ಇಲ್ಲಿದೆ ನೋಡಿ..
undefined
ಎಲ್ಲೆಂದರಲ್ಲೇ ಬಿರುಕು(crack) ಬಿಟ್ಟಿರುವ ಸರ್ಕಾರಿ ಶಾಲೆ (government School)ಯ ಕೊಠಡಿಗಳು. ಮತ್ತೆ ಅಕಾಶವೇ ಕಾಣುವ ರೀತಿ ಹೊಡೆದು ಹೋಗಿರೋ ಕೊಠಡಿಯ ಹಂಚುಗಳು. ಮತ್ತೊಂದೆಡೆ ನಮ್ಮ ಶಾಲೆಯ ದುಸ್ಥಿತಿ ಸರಿಪಡಿಸಿ ಎಂದು ಆಕ್ರೋಶ ವ್ಯಕ್ತಪಡಿಸಿರುವ ಊರಿನ ಗ್ರಾಮಸ್ಥರು. ಇಂತಹ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ(Chitradurga) ಜಿಲ್ಲೆ ಹೊಳಲ್ಕೆರೆ(Holalkere) ತಾಲ್ಲೂಕಿನ ಚಿತ್ರಹಳ್ಳಿ(Chitrahalli) ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಸುಮಾರು ನೂರಾರು ವರ್ಷಗಳ ಇತಿಹಾಸ(History) ಈ ಶಾಲೆಗಿದೆ. ಆದ್ರೆ ಕಳೆದ ಮೂರ್ನಾಲ್ಕು ತಿಂಗಳುಗಳಿಂದಲೂ ಅಲ್ಪ ಸ್ವಲ್ಪ ಮಳೆ ಬಂದ್ರೆ ಸಾಕು ಇಡೀ ಶಾಲೆಯೇ ಮಳೆಗೆ ಸೋರುವುದು, ಎಂಚುಗಳೆಲ್ಲಾ ಕೆಳಗೆ ಬೀಳುವುದು ಆಗುತ್ತದೆ. ಅಲ್ಲದೇ ಶಾಲೆಯಲ್ಲಿರುವ ನಾಲ್ಕು ಕೊಠಡಿಗಳಲ್ಲಿಯೂ ಗೋಡೆಗಳು ಬಿರುಕು ಬಿಟ್ಟಿರುವಂತದ್ದು. ಇನ್ನೂ ಈ ಕುರಿತು ಅನೇಕ ಬಾರಿ ಅಧಿಕಾರಿಗಳ() ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನ ಆಗ್ತಿಲ್ಲ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸೋದಕ್ಕೆ ಜನ ಹಿಂದೇಟು ಹಾಕ್ತಾರೆ. ಅಂತದ್ರಲ್ಲಿ ಈ ಶಾಲೆಯಲ್ಲಿ ನೂರಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡ್ತಿದ್ದಾರೆ. ಆದ್ರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ತಿರುಗಿ ನೋಡದೇ ಇರವುದು ದುರಂತ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ಸರ್ಕಾರಿ ಶಾಲೆ ಮಕ್ಕಳಿಗೆ ಈ ಸಲ ಬ್ರ್ಯಾಂಡೆಡ್ ಶೂ ಇಲ್ಲ: ಸಚಿವ ಬಿ.ಸಿ.ನಾಗೇಶ್
ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಹೊಳಲ್ಕೆರೆ BEO ಅವರನ್ನೇ ವಿಚಾರಿಸಿದ್ರೆ, ತಾಲ್ಲೂಕಿನಲ್ಲಿ ಕಳೆದ ಸ್ವಲ್ಪ ದಿನಗಳಿಂದ ಮಳೆ ಬಂದ ಕಾರಣ ತಾಲ್ಲೂಕಿನಲ್ಲಿ ನಾಲ್ಕೈದು ಶಾಲೆಗಳಲ್ಲಿ ಸ್ವಲ್ಪ ಮಟ್ಟಿಗೆ ದುರಸ್ತಿ ಆಗಿದೆ. ಚಿತ್ರಹಳ್ಳಿ ಶಾಲೆಯಲ್ಲಿಯೂ ಕೊಠಡಿ ಬಿರುಕು ಬಿಟ್ಟು ಅವ್ಯವಸ್ಥೆ ಆಗಿರೋದು ಗಮನಕ್ಕೆ ಬಂದಿದೆ. ಆದ್ದರಿಂದ ಕೂಡಲೇ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಅದೇ ಗ್ರಾಮದಲ್ಲಿ ಖಾಲಿ ಇರುವ ಒಂದು ಮನೆಯಲ್ಲಿ ಪಾಠ ಮಾಡಲು ವ್ಯವಸ್ಥೆ ಮಾಡಲಾಗಿದೆ. ಆ ಕೊಠಡಿಯ ದುರಸ್ತಿ ಆಗುವವರೆಗೂ ಅಲ್ಲಿನ SDMC ಸದಸ್ಯರು ಹಾಗು ಶಿಕ್ಷಕರು ಸೇರಿ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗಬಾರದು ಎಂದು ಬೇರೆ ಒಂದು ಮನೆಯಲ್ಲಿ ತರಗತಿ ನಡೆಸಲಾಗ್ತಿದೆ. ಕೂಡಲೇ ಶಾಲೆಯಲ್ಲಿರುವ ಕೊಠಡಿಯ ದುರಸ್ತಿ ಕಾರ್ಯವನ್ನು ಬೇಗನೇ ಮುಗಿಸಿ ಮಕ್ಕಳಿಗೆ ಶಾಲಾ ಕೊಠಡಿಯಲ್ಲಿಯೇ ಕ್ಲಾಸ್ ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಮಕ್ಕಳು ಹೊರಹೋದ ಅರ್ಧ ತಾಸಲ್ಲಿ ಸರ್ಕಾರಿ ಶಾಲೆ ಚಾವಣಿ ಪದರ ಕುಸಿತ!
ಒಟ್ಟಾರೆ ಅಧಿಕಾರಿಗಳು ಕೇವಲ ಭರವಸೆ ಕೊಟ್ಟು ಸುಮ್ಮನೆ ಕೂರೋದು ಸಮಂಜಸವಲ್ಲ. ಕೂಡಲೇ ಆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಕ್ಕಳಿಗೆ ಹಾಗೂ ಅವರ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗದ ರೀತಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.