Weekend Curfew in Shivamogga: ಆಡಳಿತ ಪಕ್ಷದ ಶಾಸಕರ ಕಾಲೇಜಲ್ಲೇ ಕೋವಿಡ್‌ ರೂಲ್ಸ್‌ ಬ್ರೇಕ್‌

By Suvarna News  |  First Published Jan 8, 2022, 12:18 PM IST

*  ಬಿಜೆಪಿ ಶಾಸಕ ಅಶೋಕ್ ನಾಯ್ಕಗೆ ಸೇರಿದ ಕಾಲೇಜು
*  ಶಿವಮೊಗ್ಗ ತಾಲೂಕಿನ ಚನ್ನಾಮುಂಭಾಪುರ ಗ್ರಾಮದ ಅಕ್ಷರ ಕಾಲೇಜಿನಲ್ಲಿ ನಡೆದ ಪಾಠ
*  ಸರ್ಕಾರದ ವತಿಯಿಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವಾಕ್ಸಿನೇಶನ್‌ಗೆ ಅವಕಾಶ 


ಶಿವಮೊಗ್ಗ(ಜ.08): ರಾಜ್ಯಾದ್ಯಂತ(Karnataka) ನಿನ್ನೆ ರಾತ್ರಿಯಿಂದ ವೀಕೆಂಡ್ ಕರ್ಫ್ಯೂ(Weekend Curfew) ಜಾರಿಯಲ್ಲಿದೆ. ಆದರೆ, ಶಿವಮೊಗ್ಗದಲ್ಲಿ(Shivamogga) ವೀಕೆಂಡ್ ಕರ್ಫ್ಯೂ ವೇಳೆ ಶಾಸಕ ಒಡೆತನದ ಕಾಲೇಜಿನಲ್ಲಿ ಮಾತ್ರ ತರಗತಿಗಳು ನಡೆಯುತ್ತಿವೆ. ಹೌದು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಕೆ.ಬಿ. ಅಶೋಕ್(KB Ashok) ನಾಯ್ಕ ಅವರಿಗೆ ಸೇರಿದ ಕಾಲೇಜಿನಲ್ಲಿ ತರಗತಿಗಳು ನಡೆದಿವೆ ಎಂದು ತಿಳಿದು ಬಂದಿದೆ. ಆಡಳಿತ ಪಕ್ಷದ ಶಾಸಕರ ಕಾಲೇಜಿನಲ್ಲಿ ಕೋವಿಡ್ ರೂಲ್ಸ್(Covid Rukes) ಬ್ರೇಕ್ ಮಾಡಲಾಗಿದೆ. ಶಿವಮೊಗ್ಗ ತಾಲೂಕಿನ ಚನ್ನಾಮುಂಭಾಪುರ ಗ್ರಾಮದ ಅಕ್ಷರ ಕಾಲೇಜಿನಲ್ಲಿ(College) ಪಾಠಗಳು ನಡೆದಿವೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳಿಗೆ(Students) ಪಾಠ ಮಾಡಲಾಗುತ್ತಿದೆ. 

ಇಂದು ಸರ್ಕಾರದ ವತಿಯಿಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವಾಕ್ಸಿನೇಶನ್‌ಗೆ(Vaccination) ಅವಕಾಶ ಕಲ್ಪಿಸಲಾಗಿದೆ. ಆದರೆ ವಾಕ್ಸಿನೇಶನ್ ನೆಪದಲ್ಲಿ ಕಾಲೇಜಿನಲ್ಲಿ ಪಾಠ ಮಾಡಲಾಗಿದೆ. ಪಾಠ ಮಾಡಿ, ನೋಟ್ಸ್ ಬರೆಸಿದ ಬಗ್ಗೆ ವಿದ್ಯಾರ್ಥಿಗಳು ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ(Asianet Suvarna News) ಮುಂದೆ ಒಪ್ಪಿಕೊಂಡಿದ್ದಾರೆ. ಶಿಕ್ಷಕರೂ ಸಹ ಪ್ರಾಕ್ಟಿಕಲ್ ನೋಟ್ಸ್ ಕೊಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

Tap to resize

Latest Videos

undefined

Weekend Curfew ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ, ಬೆಂಗ್ಳೂರಲ್ಲಿ 2 ವಾರ ಶಾಲಾ-ಕಾಲೇಜು ಬಂದ್

ಕೊರೋನಾ ಕೇಸ್‌ ಏರಿಕೆಯಾದರೆ 1-2 ವಾರದಲ್ಲಿ ಶಾಲೆ ಬಂದ್‌?

ರಾಜ್ಯದಲ್ಲಿ ಕೆಲ ವಾರಗಳಿಂದ ಕೋವಿಡ್‌ 19 ಮತ್ತು ಒಮಿಕ್ರೋನ್‌ (Omicron) ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು ಇದೇ ವೇಗದಲ್ಲಿ ಮುಂದುವರೆದರೆ ಒಂದೆರಡು ವಾರದಲ್ಲಿ ಶಾಲೆಗಳ (School) ಬಂದ್‌ ಮಾಡುವ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. 

ಉನ್ನತ ಮೂಲಗಳ ಪ್ರಕಾರ, ಶಾಲೆಗಳ ಬಂದ್‌ ನಿರ್ಧಾರ ಕೈಗೊಂಡರೂ ಒಮ್ಮೆಲೆ ರಾಜ್ಯಾದ್ಯಂತ ಶಾಲೆಗಳನ್ನು ಬಂದ್‌ ಮಾಡುವ ಸಾಧ್ಯತೆ ಬಹಳ ಕಡಿಮೆ. ಯಾವ್ಯಾವ ತಾಲೂಕುಗಳಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗಿವೆ ಹಾಗೂ ಹೆಚ್ಚಾಗುತ್ತಿವೆಯೋ ಅಂತಹ ತಾಲೂಕು ವ್ಯಾಪ್ತಿಯ ಶಾಲೆಗಳನ್ನು ಮೊದಲು ಬಂದ್‌ ಮಾಡಲಾಗುತ್ತದೆ.

ಮುಂದಿನ ಹಂತದಲ್ಲಿ ಸೋಂಕು ವ್ಯಾಪಿಸುತ್ತಾ ಹೋಗುವ ಇತರೆ ತಾಲೂಕುಗಳಲ್ಲಿ ಶಾಲೆ ಬಂದ್‌ ಮಾಡುತ್ತಾ ಹೋಗುವ ಚಿಂತನೆ ಸರ್ಕಾರದಲ್ಲಿದೆ. ಯಾವುದೇ ಪ್ರಕರಣಗಳು ವರದಿಯಾಗದ ತಾಲೂಕುಗಳಲ್ಲಿ ಶಾಲೆಗಳನ್ನು ಯಥಾವತ್ತಾಗಿ ನಡೆಸಲು ಕೂಡ ಲೆಕ್ಕಾಚಾರ ನಡೆಸಿದೆ. ಈ ಮಧ್ಯೆ, ಸರ್ಕಾರವೇನಾದರೂ ಏಕಾಏಕಿ ಲಾಕ್‌ಡೌನ್‌ (Lockdown) ನಿರ್ಧಾರಕ್ಕೆ ಬಂದರೆ ಇಡೀ ರಾಜ್ಯದಲ್ಲಿ ಶಾಲೆಗಳು ತಂತಾನೆ ಬಂದ್‌ ಆಗಲಿವೆ.

karnataka Schools Named Ambedkar: ರಾಜ್ಯದ ಶಾಲೆಗಳಿಗೆ ಡಾ. ಬಿಆರ್ ಅಂಬೇಡ್ಕರ್ ಹೆಸರು

ಶಾಲೆ ಬಂದ್‌ ಬಗ್ಗೆ ನಿರ್ಧಾರ ಕೈಗೊಳ್ಳುವುದಾದರೆ ಏಕಾಏಕಿ ಎಲ್ಲ ಶಾಲೆಗಳನ್ನು ಬಂದ್‌ ಮಾಡಬೇಡಿ. ತಾಲೂಕುಗಳನ್ನು ಘಟಕಗಳಾಗಿ ಪರಿಗಣಿಸಿ ಸೋಂಕು ಪ್ರಕರಣಗಳು ಹೆಚ್ಚಿರುವ ಅಥವಾ ಪಾಸಿಟಿವಿಟಿ ದರ ನಿಗದಿತ ಮಿತಿಗಿಂತ ಹೆಚ್ಚಿರುವ ತಾಲೂಕುಗಳಲ್ಲಿ ಶಾಲೆ ಬಂದ್‌ಗೆ ಕ್ರಮ ಕೈಗೊಂಡರೆ ಒಳ್ಳೆಯದು. ಇದರಿಂದ ಕೋವಿಡ್‌ ಪ್ರಕರಣಗಳಿಲ್ಲದ ಕಡೆಯಲ್ಲೂ ಶಾಲೆ ಬಂದ್‌ ಆಗಿ ಮಕ್ಕಳು ಕಲಿಕೆಯಿಂದ ವಂಚಿತರಾಗುವುದು ತಪ್ಪುತ್ತದೆ. 

ಕೋವಿಡ್‌ ಮೊದಲ ಹಾಗೂ ಎರಡನೇ ಅಲೆಯ ಅವಧಿಯಲ್ಲಿ ಸೋಂಕು ಇಲ್ಲದ ತಾಲೂಕುಗಳಲ್ಲೂ ಶಾಲೆ ಬಂದ್‌ ಮಾಡಿದ್ದರಿಂದ ಆ ಮಕ್ಕಳ ಕಲಿಕೆಗೂ ಸಮಸ್ಯೆಯಾಯಿತು. ಈ ರೀತಿಯ ತೀರ್ಮಾನ ಬೇಡ ಎಂದು ಖುದ್ದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ (BC Nagesh) ಅವರೇ ಸರ್ಕಾರ ಹಾಗೂ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಗೆ ಮನವಿ ಮಾಡಿದ್ದಾರೆ ಎಂದು ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿವೆ.
 

click me!