Coronavirus ರಾಜ್ಯದಲ್ಲಿ ಕೊರೋನಾ ಸ್ಫೋಟ, ಶಾಲೆ ಬಂದ್ ಮಾಡುವ ಸುದ್ದಿಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು

By Suvarna News  |  First Published Jan 11, 2022, 4:46 PM IST

* ಕರ್ನಾಟಕದಲ್ಲಿ ಕೊರೋನಾ ಮೂರನೇ ಅಲೆ ಅಬ್ಬರ
* ಅದರಲ್ಲೂ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು ಕೇಸ್ ಪತ್ತೆ
* ಶಾಲೆ ಬಂದ್ ಮಾಡುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು


ಬೆಂಗಳೂರು, (ಜ.11): ಕರ್ನಾಟಕದಲ್ಲೂ ಸಹ ಕೊರೋನಾ ಮೂರಲೇ ಅಲೆ(Corona Third Wave) ಜೋರಾಗುತ್ತಿದ್ದು, ದಿನದಿಂ ದಿನಕ್ಕೆ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. 

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣ ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕರುನಾಡಿನಲ್ಲಿ ಮತ್ತೆ ಲಾಕ್ ಡೌನ್ ಅಸ್ತ್ರ ಪ್ರಯೋಗಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಶಿಕ್ಷಣ(Education) ಸಂಸ್ಥೆಗಳಲ್ಲಿ ಕೊರೋನಾ9Coronavirus) ಸ್ಫೋಟವಾಗುತ್ತಿದೆ. 

Latest Videos

Covid 19 Spike: ಮತ್ತೆ 67 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಪತ್ತೆ

ಹೌದು..ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಲೆ, ಹಾಸ್ಟೆಲ್‌ಗಳಲ್ಲಿ ಹೆಚ್ಚಿನ ಸಂಖ್ಯೆ ಕೊರೋನಾ ಕೇಸ್ ಪತ್ತೆಯಾಗುತ್ತಿವೆ. ಇದರಿಂದ ಹಲವೆಡೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಲ್ಲದೇ ರಾಜ್ಯದಲ್ಲಿ ಶಾಲೆ ಬಂದ್ ಮಾಡುವ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.

ಇನ್ನು ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Education Minister BC Nagesh) ಪ್ರತಿಕ್ರಿಯಿಸಿದ್ದು, ಶಾಲೆಗಳಿಂದ ಕೋವಿಡ್ ಸೋಂಕು ಹರಡುತ್ತದೆ ಎಂದು ಎಲ್ಲೂ ಸಾಬೀತಾಗಿಲ್ಲ. ಹೀಗಾಗಿ ರಾಜ್ಯವ್ಯಾಪಿ ಶಾಲೆಗಳನ್ನು ಮುಚ್ಚುವ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದರು.
 
ಐದೇ ದಿನದಲ್ಲಿ 8,000 ಯುವಜನರಿಗೆ ಸೋಂಕು..
ಬೆಂಗಳೂರು ನಗರದಲ್ಲಿ(Bengaluru City) ಮಾತ್ರ ಕೋವಿಡ್ ಸೋಂಕು ಹೆಚ್ಚಿದೆ. ಹೀಗಾಗಿ ಇಲ್ಲಿ ಮಾತ್ರ ಶಾಲೆ(Schools) ಬಂದ್ ಮಾಡಿದ್ದೇವೆ. ಆದರೆ ರಾಜ್ಯದ ಇತರ ಭಾಗಗಳಲ್ಲಿ ಇದೇ ಪರಿಸ್ಥಿತಿ ಇಲ್ಲ.ಪಾಸಿಟಿವಿಟಿ ಹೆಚ್ಚಿರುವ ಜಿಲ್ಲೆಗಳಲ್ಲಿ ಭೌತಿಕ ತರಗತಿ ಸ್ಥಗಿತಗೊಳಿಸಿ ಆನ್‌ಲೈನ್ ತರಗತಿ ನಡೆಸುತ್ತೇವೆ ಎಂದು ಹೇಳಿದರು.

ತಾಲೂಕು ಮಟ್ಟದಲ್ಲಿ ಪಾಸಿಟಿವಿಟಿ ದರ ಹೆಚ್ಚಾದರೆ ಶಾಲೆಯನ್ನು ಮುಚ್ಚುವ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಶಾಲೆಗಳಿಂದ ಕೋವಿಡ್ ಹಬ್ಬುತ್ತದೆ ಎಂಬ ಬಗ್ಗೆ ಯಾವುದೇ ಅಧ್ಯಯನ ವರದಿ ಇಲ್ಲ ಎಂದು ತಿಳಿಸಿದರು.

ಯಾವುದಾದರೂ ಶಾಲೆಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡರೆ ಆ ಶಾಲೆಯನ್ನು ತಾತ್ಕಾಲಿಕವಾಗಿ ನಾಲ್ಕು ದಿನ ಮುಚ್ಚಬಹುದು. ಆದರೆ ಇಡಿ ರಾಜ್ಯದಲ್ಲಿ ಶಾಲಾ ತರಗತಿ ಬಂದ್ ಮಾಡುವ ಪರಿಸ್ಥಿತಿ ಸದ್ಯಕ್ಕೆ ಇಲ್ಲ. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಉತ್ಸುಕರಿದ್ದಾರೆ ಎಂದು ವಿವರಿಸಿದರು.

ಕೊರೋನಾ(Coronavirus) ಮಹಾಮಾರಿ ಭಯಾನಕವಾಗಿ ವಿಸ್ತರಣೆಯಾಗುತ್ತಿದ್ದು ರಾಜಧಾನಿ ಬೆಂಗಳೂರಿನಲ್ಲಿ(Bengaluru) ಸೋಂಕು ಸಮುದಾಯ ಹಂತ ಪ್ರವೇಶವಾಗಿದೆ. ಯುವಜನರಲ್ಲೇ(Youths) ಸೋಂಕು ಹೆಚ್ಚಾಗಿ ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ. ಪ್ರಸ್ತುತ ಬೆಂಗಳೂರಿನಲ್ಲಿ 32 ಸಾವಿರ ಸಕ್ರಿಯ ಪ್ರಕರಣಗಳು ಇದ್ದು, ಬಹುತೇಕ 20 ಸಾವಿರಕ್ಕೂ ಹೆಚ್ಚು ಮಂದಿ ಯುವಜನರೇ ಇದ್ದಾರೆ. ಆರೋಗ್ಯ ಇಲಾಖೆ(Department of Health) ಮಾಹಿತಿಯಂತೆ ನಿತ್ಯ ಸಾವಿರಕ್ಕೂ ಹೆಚ್ಚು ಮಂದಿ ಯುವಕರೇ ಸೋಂಕಿತರಾಗುತ್ತಿದ್ದಾರೆ.

ಜ.4ರಂದು 20ರಿಂದ 39 ವರ್ಷದೊಳಗಿನ 1048 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಜ.5ರಂದು 1918 ಮಂದಿ, ಜ.6ರಂದು 3200 ಜನರಲ್ಲಿ ಸೋಂಕು ದೃಢಪಟ್ಟಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹಿರಿಯ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Deltacron: ಕೋವಿಡ್‌ನ ಮತ್ತೊಂದು ರೂಪಾಂತರಿ ಪತ್ತೆ: ಬಂತು ಹೊಸ ತಳಿ ಡೆಲ್ಟಾಕ್ರೋನ್‌..!

ಜ.1ರಿಂದ ಈವರೆಗೆ ನಿರಂತರವಾಗಿ ಸೋಂಕು ಏರುಗತಿಯಲ್ಲೇ ಸಾಗಿದೆ. ಡಿ.31ರಂದು 810, ಜ.1ಕ್ಕೆ 923, ಜ.2ಕ್ಕೆ 1041, ಜ.3ಕ್ಕೆ 2053, ಜ.4ರಂದು 3605, ಜ.5ಕ್ಕೆ 4323, ಜ.6ರಂದು 6812 ಮತ್ತು ಜ.7ಕ್ಕೆ 7113 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ವಿಪರಾರ‍ಯಸವೆಂದರೆ ಎರಡನೇ ಅಲೆಯಂತೆ ಈ ಬಾರಿಯೂ ಯುವಕರೇ ಹೆಚ್ಚು ಸೋಂಕಿತರಾಗುತ್ತಿದ್ದಾರೆ. ಕೇವಲ ಐದು ದಿನಗಳಲ್ಲಿ ಬರೋಬ್ಬರಿ 8 ಸಾವಿರ ಯುವಜನರಲ್ಲಿ ಸೋಂಕು ಪತ್ತೆಯಾಗಿದೆ. ಯಾವುದೇ ಅನಾರೋಗ್ಯ ಹಿನ್ನೆಲೆ ಇಲ್ಲದಿದ್ದರೂ ಸೋಂಕಿತರಾಗುತ್ತಿರುವುದು ಆರೋಗ್ಯಾಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.

click me!