NEET ನಾಳೆಯಿಂದ (ಜ.12) ನೀಟ್​-ಪಿಜಿ ಕೌನ್ಸಿಲಿಂಗ್, ವಿದ್ಯಾರ್ಥಿಗಳೇ ಈ ದಾಖಲೆಗಳನ್ನ ಮರೆತು ಹೋಗದಿರಿ!

By Suvarna News  |  First Published Jan 11, 2022, 2:38 PM IST

* ನಾಳೆಯಿಂದ (ಜ.12)  ನೀಟ್​-ಪಿಜಿ ಕೌನ್ಸಿಲಿಂಗ್ ಆರಂಭ
* ಕೌನ್ಸಿಲಿಂಗ್ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವ
 * ಕೌನ್ಸಿಲಿಂಗ್​ಗೆ ಬೇಕಾಗುವ ದಾಖಲೆಗಳು ಇಲ್ಲಿವೆ


ನವದೆಹಲಿ, (ಜ.11): 2021-2022 ನೇ ಶೈಕ್ಷಣಿಕ ವರ್ಷದ ನೀಟ್​-ಪಿಜಿ (NEET-PG) ಕೌನ್ಸಿಲಿಂಗ್​ ನಾಳೆಯಿಂದ (ಜ.12) ಪ್ರಾರಂಭವಾಗಲಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ(Mansukh Mandaviya) ಮಾಹಿತಿ ನೀಡಿದ್ದಾರೆ.

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಕೌನ್ಸಿಲಿಂಗ್ ನಡೆಯಲಿದ್ದು, ವೈದ್ಯಕೀಯ ಕೌನ್ಸಿಲಿಂಗ್ ಸಮಿತಿ ಕೌನ್ಸಿಲಿಂಗ್ ನಡೆಸಲಿದೆ. ಇನ್ನು ನೀಟ್ ಪರೀಕ್ಷೆ ಬರೆದು  ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಲು ಸಿದ್ಧರಾಗಿಯಾಗಿದ್ದಾರೆ.

Tap to resize

Latest Videos

NEET-PG : ಜನವರಿ 12 ರಿಂದ ಕೌನ್ಸೆಲಿಂಗ್ ಪ್ರಾರಂಭ, ಆರೋಗ್ಯ ಸಚಿವರ ಘೋಷಣೆ!

ನೀಟ್ ಸ್ನಾತಕೋತ್ತರ ಕೌನ್ಸಿಲಿಂಗ್ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​​ ವಿಚಾರಣೆ ನಡೆಸುತ್ತಿತ್ತು. ಶುಕ್ರವಾರ ತೀರ್ಪು ಹೊರಹಾಕಿದ್ದ ಸುಪ್ರೀಂಕೋರ್ಟ್​, ಸದ್ಯ ಇರುವಂತೆ ಆಲ್​ ಇಂಡಿಯಾ ಕೋಟಾ ಸೀಟ್​​ಗಳಲ್ಲಿ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಶೇ.27 ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ (EWS) ಶೇ.10ರಂತೆ ಮೀಸಲಾತಿ ಇರಬೇಕು ಎಂದು ಹೇಳಿ, ನೀಟ್​ ಪಿಜಿ ಕೌನ್ಸಿಲಿಂಗ್​​ ಪ್ರಾರಂಭಕ್ಕೆ ಅನುವು ಮಾಡಿಕೊಟ್ಟಿತ್ತು. ಅದಾದ ಎರಡೇ ದಿನದಲ್ಲಿ ಆರೋಗ್ಯ ಸಚಿವರು ಟ್ವೀಟ್​ ಮಾಡಿ, ನೀಟ್​ ಪಿಜಿ ಕೌನ್ಸಿಲಿಂಗ್​​ ದಿನಾಂಕ ಘೋಷಣೆ ಮಾಡಿದ್ದರು.

ನೀಟ್​ ಪಿಜಿ ಕೌನ್ಸಿಲಿಂಗ್​​ನಲ್ಲಿ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ದೇಶಾದ್ಯಂತ ಹಲವು ರೆಸಿಡೆಂಟ್​ ವೈದ್ಯರು ಪ್ರತಿಭಟನೆ ನಡೆಸುದ್ದರು. ಇತ್ತೀಚೆಗಷ್ಟೇ ಆರೋಗ್ಯ ಇಲಾಖೆ ನೀಡಿದ ಭರವಸೆ ಮೇರೆಗೆ ಅವರು ಪ್ರತಿಭಟನೆ ಕೈಬಿಟ್ಟಿದ್ದರು.ಎಂಎ ಇದೀಗ ಕೌನ್ಸಿಲಿಂಗ್​ ದಿನಾಂಕ ಪ್ರಕಟವಾಗಿದ್ದು ಅವರಿಗೆ  ಅನುಕೂಲವಾಗಲಿದೆ. 

ಸುಪ್ರೀಂಕೋರ್ಟ್​ ಆದೇಶವನ್ನು ಗೌರವಿಸಲಾಗುತ್ತದೆ. ಜನವರಿ 12ರಿಂದ ಕೌನ್ಸಿಲಿಂಗ್ ನಡೆಸುವುದಾಗಿ ಆರೋಗ್ಯ ಸಚಿವಾಲಯ ರೆಸಿಡೆಂಟ್​ ವೈದ್ಯರಿಗೆ ಭರವಸೆ ನೀಡುತ್ತಿದೆ. ಈ ಮೂಲಕ ಕೊರೊನಾ ವಿರುದ್ಧ ಹೋರಾಟದಲ್ಲಿ ದೇಶಕ್ಕೆ ಇನ್ನಷ್ಟು ಶಕ್ತಿ ತುಂಬಲಾಗುವುದು ಎಂದು ತಿಳಿಸಿದ್ದಾರೆ. ಹಾಗೇ, ಕೌನ್ಸಿಲಿಂಗ್​​ ಎದುರಿಸಬೇಕಾದ  ಎಲ್ಲ ಅಭ್ಯರ್ಥಿಗಳಿಗೆ ಶುಭಾಶಯ ಎಂದು  ಸಚಿವ ಮನ್​ಸುಖ್​ ಮಾಂಡವಿಯಾ ಟ್ವೀಟ್ ಮಾಡಿದ್ದರು.

ಕೌನ್ಸಿಲಿಂಗ್​ಗೆ ಬೇಕಾಗುವ ದಾಖಲೆಗಳೇನು? 
ಪ್ರಸಕ್ತ ವರ್ಷ ನೀಟ್​ ಪಿಜಿ ಕೌನ್ಸಿಲಿಂಗ್, ಆನ್​ಲೈನ್ ವಿಧಾನದಲ್ಲಿ​ ನಾಲ್ಕು ಸುತ್ತುಗಳಲ್ಲಿ ನಡೆಯಲಿದೆ ಎಂದು ಈ ಹಿಂದೆಯೇ ವೈದ್ಯಕೀಯ ಕೌನ್ಸಿಲಿಂಗ್​ ಸಮಿತಿ (MCC) ಘೋಷಣೆ ಮಾಡಿದೆ.  ಇನ್ನು ನೀಟ್​ ಕೌನ್ಸಿಲಿಂಗ್​ಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕೆಲ ದಾಖಲೆಗಳು ಬೇಕಾಗುತ್ತದೆ, ಅವು ಈ ಕೆಳಗಿನಂತಿವೆ.
1) 2021 ನೀಟ್​ ಪರೀಕ್ಷೆಯ ಪ್ರವೇಶ ಪತ್ರ
2)2021ನೇ ನೀಟ್ ಪರೀಕ್ಷೆಯ ಫಲಿತಾಂಶ ಪಟ್ಟಿ, ಯಾವುದೇ ರ್ಯಾಂಕ್​ ಬಂದಿದ್ದರೆ ಅದರ ಕಾರ್ಡ್​ 
3)10ನೇ ತರಗತಿ ಪಾಸ್​ ಆಗಿರುವ ಪ್ರಮಾಣ ಪತ್ರ 
4)12ನೇ ತರಗತಿ ಉತ್ತೀರ್ಣವಾಗಿರುವ ಸರ್ಟಿಫಿಕೇಟ್​ 5)ಸರ್ಕಾರ ಮಾನ್ಯ ಮಾಡಿರುವ ಐಡಿ ಕಾರ್ಡ್​ 6)ಪಾಸ್​ಪೋರ್ಟ್​ ಸೈಝ್​ ಫೋಟೋ 7)ಎಂಬಿಬಿಎಸ್​, ಬಿಡಿಎಸ್​ ಅಂಕಪಟ್ಟಿ 
8)ಜಾತಿ ಪ್ರಮಾಣ ಪತ್ರ
9)ಇಂಟರ್ನ್​ಶಿಪ್​ ಲೆಟರ್​ 
10)ಎಂಸಿಐನಿಂದ ನೀಡಲಾದ ನೋಂದಣಿ ಸರ್ಟಿಫಿಕೇಟ್​.

ಅಖಿಲ ಭಾರತ ಕೋಟಾದಲ್ಲಿ ಇಡಬ್ಲ್ಯೂಎಸ್ ಕೋಟಾವನ್ನು ನಿರ್ಧರಿಸುವ ಮಾನದಂಡವನ್ನು ಮರುಪರಿಶೀಲಿಸುವ ಕೇಂದ್ರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ ನಂತರ ನೀಟ್ ಪಿಜಿ ಕೌನ್ಸೆಲಿಂಗ್ ವಿಳಂಬವಾಗಿತ್ತು. ಈ ಕುರಿತಂತೆ ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ​​(ಫೋರ್ಡಾ) ಬ್ಯಾನರ್ ಅಡಿಯಲ್ಲಿ ವಿವಿಧ ಆಸ್ಪತ್ರೆಗಳ  ವೈದ್ಯರು ಕೌನ್ಸೆಲಿಂಗ್ ನಲ್ಲಿ ವಿಳಂಬವನ್ನು ವಿರೋಧಿಸಿದ್ದರು.

NEET PG, UG Counselling: ಡಾಕ್ಟರ್‌ ಗಳಿಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್!
ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಫೋರ್ಡಾ) ಪ್ರತಿ ವರ್ಷ ಸರಿಸುಮಾರು 45,000 ಅಭ್ಯರ್ಥಿಗಳು NEET-PG ಮೂಲಕ ಸ್ನಾತಕೋತ್ತರ (PG) ವೈದ್ಯರಾಗಿ ಆಯ್ಕೆಯಾಗುತ್ತಾರೆ ಮತ್ತು ಕೌನ್ಸೆಲಿಂಗ್‌ನಲ್ಲಿ ವಿಳಂಬ ಮಾಡುವುದರಿಂದ 2021ರಲ್ಲಿ ಯಾವುದೇ ಕಿರಿಯ ವೈದ್ಯರನ್ನು ಸೇರಿಸಿಕೊಳ್ಳಲಾಗದ ಸ್ಥಿತಿಗೆ ತಲುಪುತ್ತೇವೆ ಎಂದು ಹೇಳಿತ್ತು.

click me!