ಯುಕೆಜಿ ಮಕ್ಕಳಿಗೆ ಘಟಿಕೋತ್ಸವ: ಶಿಕ್ಷಣ ಸಂಸ್ಥೆಗಳಿಂದ ಹಣ ಸುಲಿಗೆಗೆ ಮತ್ತೊಂದು ಟ್ರಿಕ್ಸ್‌ ಎಂದು ಆಕ್ರೋಶ

Published : Feb 27, 2025, 05:32 PM ISTUpdated : Feb 28, 2025, 10:53 AM IST
ಯುಕೆಜಿ ಮಕ್ಕಳಿಗೆ ಘಟಿಕೋತ್ಸವ: ಶಿಕ್ಷಣ ಸಂಸ್ಥೆಗಳಿಂದ ಹಣ ಸುಲಿಗೆಗೆ ಮತ್ತೊಂದು ಟ್ರಿಕ್ಸ್‌ ಎಂದು ಆಕ್ರೋಶ

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ಈಗಿನ ಶಿಕ್ಷಣ ಹಾಗೂ ಆಗಿನ ಶಿಕ್ಷಣ ಎರಡನ್ನೂ ಹೋಲಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

ಶಿಕ್ಷಣದ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. 90 ದಶಕದಲ್ಲಿ  ಹುಟ್ಟಿದ ಮಕ್ಕಳ ಶಿಕ್ಷಣದ ವೆಚ್ಚಕ್ಕೂ ಈಗಿನ 2000 ದಶಕದಲ್ಲಿ ಹುಟ್ಟಿದ್ದ ಮಕ್ಕಳ ಶಿಕ್ಷಣದ ವೆಚ್ಚಕ್ಕೂ  ಅಜಗಜಾಂತರ ವ್ಯತ್ಯಾಸವಿದೆ. 90 ದಶಕದಲ್ಲಿ ಕೇವಲ ಕೆಲವು ಸಾವಿರ ರೂಪಾಯಿಗಳಲ್ಲಿ  ಸಂಪೂರ್ಣ ಉನ್ನತ ಶಿಕ್ಷಣವೇ ಮುಗಿದಿದ್ದರೆ, ಈಗ ಕೇವಲ ಎಲ್‌ಕೆಜಿ ಯುಕೆಜಿಯಲ್ಲಿ ಶಿಕ್ಷಣ ಪಡೆಯುವುದಕ್ಕೆ ಮಕ್ಕಳಿಗೆ ಸೀಟು ಕೊಡಲು ಹಲವು ಲಕ್ಷಗಳನ್ನು ವ್ಯಯಿಸಬೇಕಾದ ಸ್ಥಿತಿ ಇದೆ. ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಈಗಿನ ಶಿಕ್ಷಣ ಹಾಗೂ ಆಗಿನ ಶಿಕ್ಷಣ ಎರಡನ್ನೂ ಹೋಲಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

ನೇಬನ್ ನಜೀಬ್ ಎಂಬುವವರು ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಸಖತ್ ವೈರಲ್ ಆಗಿದೆ. ವೀಡಿಯೋ ಪೋಸ್ಟ್ ಮಾಡಿದ ಅವರು ನನ್ನ ಮಗನ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಮಗ ಇದು ಕೇವಲ ಟ್ರೈಲರ್ ಅಷ್ಟೇ ಸಿನಿಮಾ ಇನ್ನೂ ಬಾಕಿ ಇದೆ ಎಂದು ಬರೆದು ವೀಡಿಯೋ ಪೋಸ್ಟ್ ಮಾಡಿದ್ದಾರೆ. ವೀಡಿಯೋದ ಮೇಲೆ ಅವರು ನನ್ನ ಮಗನ ಯುಕೆಜಿ ಗ್ರಾಜುಯೇಷನ್ ಡೇ ವರ್ಸಸ್‌ ನನ್ನ ಗ್ರಾಜುಯೇಷನ್ ಡೇ ಎಂದು ಬರೆದು ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 

ವೀಡಿಯೋದಲ್ಲಿ ಏನಿದೆ ನೊಡಿ

ವೀಡಿಯೋದಲ್ಲಿ ಕಾಣಿಸುವಂತೆ ಮಗನ ಶಾಲೆಯಲ್ಲಿ ಕೇವಲ ಯುಕೆಜಿಗೆ ಘಟಿಕೋತ್ಸವಗಳನ್ನು ನಡೆಸಿದ್ದು, ಮಗ ಘಟಿಕೋತ್ಸವಕ್ಕೆ ಧರಿಸುವ ಕಪ್ಪು ಬಣ್ಣದ ಗವನ್ ಧರಿಸಿ ತಲೆ ಮೇಲೆ ಟೋಫಿ ಹಾಕಿಕೊಂಡಿದ್ದು, ತಂದೆಯ ಕೈ ಹಿಡಿದುಕೊಂಡು ವೇದಿಕೆಯ ಮೇಲೆ ಬಂದು ಸರ್ಟಿಫಿಕೇಟನ್ನು ಪಡೆಯುತ್ತಾನೆ. ವೀಡಿಯೋದ ಮೊದಲ ಭಾಗದಲ್ಲಿ ಮಗನ ಗ್ರಾಜುಯೇಷನ್ ಡೇ ಇದ್ದರೆ ಕೊನೆಯಲ್ಲಿ ಅಪ್ಪನ ಗ್ರಾಜುಯೇಷನ್ ಡೇ ಹೇಗಿದ್ದಿರಬಹುದು ಎಂದು ಕಲ್ಪಿಸಿ ತೋರಿಸಲಾಗಿದೆ. ಇದರಲ್ಲಿ ಸಿನಿಮಾದ ತುಣುಕೊಂದನ್ನು ಸಿಂಕ್ ಮಾಡಲಾಗಿದೆ. ಅದರಲ್ಲಿ  ಪ್ರಿನ್ಸಿಪಾಲ್ ಕಚೇರಿಯಲ್ಲಿ ಬ್ಯಾಗ್ ಹಿಡಿದು ನಿಂತಿರುವ ಇಬ್ಬರು ಹುಡುಗರು ಪ್ರಿನ್ಸಿಪಾಲ್ ಕೈನಿಂದ ಪದವಿ ಸರ್ಟಿಫಿಕೇಟ್ ಪಡೆಯುತ್ತಿದ್ದಾರೆ. ಅವರ ಸಂಭಾಷಣೆ ಹೀಗಿದೆ

ಫ್ರೊಫೆಸರ್: ಸರ್ಟಿಫಿಕೇಟ್, ಸರ್ಟಿಫೀಕೇಟ್,
ವಿದ್ಯಾರ್ಥಿಗಳು: ಸಾರ್ ಸಾರ್, ನನ್ನ ನೆನಪಿದೆಯಾ, ವೈಶಾಕ್ ಮುರಳಿ,
ಫ್ರೊಫೆಸರ್:  ಸರ್ಟಿಫಿಕೇಟ್ ನೀಡುತ್ತಾ ಹೋಗ್ರೋ..
ವಿದ್ಯಾರ್ಥಿಗಳು:  ಸಿಕ್ತಲ್ಲ, ಇನ್ನು ಬೇಗ ಜಾಗ ಖಾಲಿ ಮಾಡೋಣ.

ನೆಟ್ಟಿಗರ ಆಕ್ರೋಶ

ಈ ವೀಡಿಯೋ ನೋಡಿದ ನೆಟ್ಟಿಗರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅನೇಕರು ತಾವು ಡಿಗ್ರಿ ಮಾಸ್ಟರ್ಸ್‌ ಮುಗಿಸಿದ ನಂತರವೂ ಕೂಡ ಹೇಗೆ ಸರ್ಟಿಫಿಕೇಟ್ ಪಡೆದೆವು ಎಂಬುದನ್ನು ನೆನಪು ಮಾಡಿಕೊಂಡರೆ ಇನ್ನು ಕೆಲವರು ಈಗಿನ ಮಕ್ಕಳ ಎಲ್‌ಕೆಜಿ ಸ್ಕೂಲ್‌ಗೆ ತಗಲುವ ವೆಚ್ಚದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ನಾನು ಘಟಿಕೋತ್ಸವಕ್ಕೆ ಗೈರಾಗಿದ್ದರಿಂದಾಗಿ ನನ್ನ ಪಿಹೆಚ್‌ಡಿ ಡಿಗ್ರಿಯನ್ನು ಕೂಡ ಹೀಗೆ ಪಡೆದಿರಲಿಲ್ಲ ಎಂದು ನೆನಪು ಮಾಡಿಕೊಂಡಿದ್ದಾರೆ. ಈ ರೀತಿಯ ಡ್ರಾಮಾವನ್ನು ಎಲ್ಲಾ ಶಾಲೆಗಳು ಇತ್ತೀಚೆಗೆ ಮಾಡುತ್ತಿವೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಪಾರ್ಟ್ 2 ಸೇಮ್ ನಮ್ಮನ್ನೇ ಪ್ರತಿನಿಧಿಸಿದಂತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಅವರು ರೋಲ್ ಮಾಡಿ ಕೆಜಿ ತರಗತಿಯ ಸರ್ಟಿಫಿಕೇಟ್ ನೀಡಿದ್ದರು. ಇದನ್ನು ನೋಡಿದ ನನ್ನ ಮಗಳು ಅಮ್ಮ ನನ್ನ ಶಿಕ್ಷಣ ಕಂಪ್ಲೀಟ್ ಆಯ್ತಾ ಎಂದು ನಮ್ಮನ್ನು ಕೇಳಿದ್ದಳು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದು ಪೋಷಕರಿಂದ ಹಣ ವಸೂಲಿ ಮಾಡಲು ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಮತ್ತೊಂದು ಮೋಸ ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಈ  ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ

 

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ